ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ; ಯಾರೇ ಆದರೂ ಕಾನೂನು ಕ್ರಮ ಜರುಗಿಸುತ್ತೇವೆ; ರವಿಕಾಂತೇಗೌಡ

ಇಂದು ಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಬೆಂಗಳೂರಿನ ವಸಂತ ನಗರ ಬಳಿಯ ರೈಲ್ವೆ ಪೋಲ್​ಗೆ ಜಾಗ್ವಾರ್ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಸ್ಯಾಂಡಲ್​ವುಡ್​ ನಟಿ ಶರ್ಮಿಳಾ ಮಾಂಡ್ರೆ ಜೊತೆಗೆ ಆಕೆಯ ಸ್ನೇಹಿತರು ಇದ್ದರು. ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಸಣ್ಣ-ಪುಟ್ಟ ಗಾಯಗಳಾಗಿವೆ.

ನಟಿ ಶರ್ಮಿಳಾ ಮಾಂಡ್ರೆ.

ನಟಿ ಶರ್ಮಿಳಾ ಮಾಂಡ್ರೆ.

 • Share this:
  ಬೆಂಗಳೂರು: ಇಂದು ಬೆಳಗಿನ ‌ಜಾವ ಮೂರು ಗಂಟೆ ವೇಳೆಗೆ ಜಾಗ್ವಾರ್ ಕಾರು ಆಕ್ಸಿಡೆಂಟ್ ಆಗಿದೆ. ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಕಾರಿನ ಬಳಿ ಯಾರು ಇರಲಿಲ್ಲ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರಿ ಹೇಳಿದ್ದಾರೆ.

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ ಸಂಬಂಧ ಮಾತನಾಡಿದ ರವಿಕಾಂತೇಗೌಡ ಅವರು, ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಲೋಕೇಶ್ ವಸಂತ, ಶರ್ಮಿಳಾ ಮಾಂಡ್ರೆ ಆಸ್ಪತ್ರೆ ಚಿಕಿತ್ಸೆ ಪಡೆದಿರುವುದು ಗೊತ್ತಾಗಿದೆ. ಪೊಲೀಸರ ಬಳಿ ಜಯನಗರದಲ್ಲಿ ಅಪಘಾತ ಆಗಿದೆ ಅಂತಾ ಸುಳ್ಳು ಹೇಳಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎನ್​ಡಿಎಂಎ (ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ) ಕಾಯ್ದೆ ಆಡಿ ಪ್ರಕರಣ ದಾಖಲಿಸಲಾಗಿದೆ.

  ಸದ್ಯದ ಮಾಹಿತಿ ಪ್ರಕಾರ ಜಾಲಿ ರೈಡ್​ಗೆ ಬಂದಿದ್ದಾರೆ ಎಂಬುದು ಗೊತ್ತಾಗಿದೆ. ಮೆಡಿಕಲ್ ಸಂಬಂಧ ಪಾಸ್ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ. ‌ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಯಾರೇ ಆಗಲಿ ಕಾನೂನು ಎಲ್ಲರಿಗೂ ಒಂದೇ. ಲಾಕ್ ಡೌನ್ ಆಗಿದ್ರೂ ರ್ಯಾಶ್ ಡ್ರೈವಿಂಗ್ ಮಾಡಿದ್ದಾರೆ. ಚಿಕಿತ್ಸೆ ಬಳಿಕ ವಶಕ್ಕೆ ಪಡೆದು ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.

  ಇದನ್ನು ಓದಿ: ಭಾರತದಲ್ಲಿ ಮುಂದುವರೆದ ಕೊರೋನಾ ದಾಳಿ; 68ಕ್ಕೇರಿದ ಸಾವಿನ ಸಂಖ್ಯೆ, ಒಟ್ಟು 2902 ಪ್ರಕರಣಗಳು ದಾಖಲು

  ಇಂದು ಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಬೆಂಗಳೂರಿನ ವಸಂತ ನಗರ ಬಳಿಯ ರೈಲ್ವೆ ಪೋಲ್​ಗೆ ಜಾಗ್ವಾರ್ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಸ್ಯಾಂಡಲ್​ವುಡ್​ ನಟಿ ಶರ್ಮಿಳಾ ಮಾಂಡ್ರೆ ಜೊತೆಗೆ ಆಕೆಯ ಸ್ನೇಹಿತರು ಇದ್ದರು. ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಸಣ್ಣ-ಪುಟ್ಟ ಗಾಯಗಳಾಗಿವೆ. ಮತ್ತು ಮತ್ತೋರ್ವ ಸ್ನೇಹಿತನ ಕೈಗೆ ಪೆಟ್ಟು ಬಿದ್ದಿದೆ. ಘಟನೆ ಬಳಿಕ ಇಬ್ಬರೂ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.  
  First published: