ಒಂದು ಕಡೆ ಜಾಮೀನು ದೊರೆಯುತ್ತಿಲ್ಲ ಎಂಬ ಹತಾಶೆ ಮನೋಭಾವ. ಜೈಲುವಾಸ ಸಾಕು ಸಾಕು ಎನ್ನಿಸುವಷ್ಟು ಬೇಸರವಾಗಿದೆ. ಇದರ ನಡುವೆ ಇಡಿ ವಿಚಾರಣೆ ಇಬ್ಬರು ನಟಿಯರನ್ನು ಹೈರಾಣಾಗಿಸಿದೆ. ಸಿಸಿಬಿ ವಿಚಾರಣೆಯಿಂದಲೇ ಸಾಕಾಗಿ ಹೋಗಿದ್ದ ನಟಿಯರು ಜೈಲಿನಲ್ಲಾದರೂ ಯಾವುದೇ ವಿಚಾರಣೆ ಇಲ್ಲದೆ ನೆಮ್ಮದಿಯಿಂದಿರಬಹುದು ಎಂದುಕೊಂಡಿದ್ದ ಇವರಿಗೆ ಇಡಿ ಶಾಕ್ ನೀಡಿದೆ.
ಆನೇಕಲ್(ಸೆ.27): ನಶೆ ನಟಿಯರಿಗೆ ಯಾಕೋ ಸದ್ಯಕ್ಕೆ ನಸೀಬು ಕೈಗೂಡುವಂತೆ ಕಾಣುತ್ತಿಲ್ಲ. ದಿನ ಕಳೆದಂತೆಲ್ಲ ಜೈಲೂಟವೇ ಗತಿ ಎನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ನಟಿಯರಾದ ರಾಗಿಣಿ ಮತ್ತು ಸಂಜನಾ ಹತಾಷೆಯಿಂದ ಕಂಗಲಾಗಿ ಹೋಗಿದ್ದಾರೆ ಎನ್ನುತ್ತಿವೆ ಜೈಲಿನ ಆಪ್ತ ಮೂಲಗಳು. ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ವಾಸನೆ ಪ್ರಾರಂಭದಲ್ಲಿಯೇ ನಟಿಯರಾದ ರಾಗಿಣಿ ಮತ್ತು ಸಂಜನಾ ಮೂಗಿಗೆ ಬಡಿದಿತ್ತು. ಇದರ ಬಗ್ಗೆ ಸುಳಿವು ಪಡೆದಿದ್ದ ಸಿಸಿಬಿ ನಶೆ ನಂಟು ಅಧಾರದ ಮೇಲೆ ಇಬ್ಬರು ನಟಿಯರನ್ನು ಒಂದು ವಾರಗಳ ಕಾಲ ತೀವ್ರ ವಿಚಾರಣೆ ನಡೆಸಿತ್ತು. ಮಾತ್ರವಲ್ಲದೆ ಹಲವು ಪರೀಕ್ಷೆಗಳನ್ನು ನಡೆಸಿ ಸುಸ್ತು ಹೊಡೆಸಿದ್ದರು. ಅದಾಗಲೇ ಇಬ್ಬರು ನಟಿಯರಿಗೆ ಡ್ರಗ್ ನಶೆ ಇಳಿದು ಗಿರಕಿ ಹೊಡೆಯುವಂತಾಗಿತ್ತು. ಇನ್ನೇನು ಸಿಸಿಬಿ ವಿಚಾರಣೆ ಮುಗಿಯಿತು, ಸಿಸಿಬಿ ಕಸ್ಟಡಿ ಅಂತ್ಯವಾಗ್ತಿದಂತೆ ಜಾಮೀನು ದೊರೆಯುತ್ತದೆ ಎಂದುಕೊಂಡಿದ್ದ ನಟಿಮಣಿಯರಿಗೆ ಕೋರ್ಟ್ ಶಾಕ್ ನೀಡಿ ಪರಪ್ಪನ ಅಗ್ರಹಾರ ಜೈಲಿಗಟ್ಟಿತ್ತು. ಅದಾಗಲೇ ಸಿಸಿಬಿ ತೀವ್ರ ತರದ ವಿಚಾರಣೆಯಿಂದ ಬೆದರಿ ಬೆಂಡಾಗಿದ್ದ ನಟಿಮಣಿಯರು ಜೈಲೂಟ ಫಿಕ್ಸ್ ಆಗ್ತಿದಂತೆ ಮತ್ತಷ್ಟು ಕುಗ್ಗಿ ಹೋಗಿದ್ದರು.
ಆಗಿದ್ದಾಯ್ತು ಒಂದೆರಡು ದಿನ ಜೈಲು ವಾಸದ ಬಳಿಕ ಜಾಮೀನು ಸಿಗಬಹುದು. ಜೈಲಿನಿಂದ ಹೋರ ಹೋಗಿಬಿಡಬಹುದು ಎಂದುಕೊಂಡಿದ್ದ ರಾಗಿಣಿ ಮತ್ತು ಸಂಜನಾ ಇಲ್ಲಿಯವರೆಗೆ ಜೈಲು ವಾಸದಿಂದ ಮುಕ್ತಿ ಸಿಕ್ಕಿಲ್ಲ. ಸಿಗುವ ಸಾಧ್ಯತೆಗಳು ಸದ್ಯಕ್ಕಂತು ಗೋಚರವಾಗುತ್ತಿಲ್ಲ. ಬರೋಬ್ಬರಿ 13 ದಿನಗಳ ಜೈಲುವಾಸ ನಶೆ ನಟಿಯರ ಬದುಕನ್ನು ಹೈರಾಣಾಗಿಸಿದೆ. ಸಿನಿಮಾ ಹಂಗಾಮ, ಹೈ ಪ್ರೋಫೈಲ್ ಲೈಪ್, ಪಾರ್ಟಿ ಮೋಜು ಮಸ್ತಿ ಅಂತಾ ಕಾಲ ಕಳೆಯುತ್ತಿದ್ದ ನಟಿಮಣಿಯರು ಒಪ್ಪೊತ್ತಿನ ಕೂಳಿಗು ನಾಲ್ಕು ಗೋಡೆ ಮದ್ಯೆ ಕಾಯಬೇಕಿದೆ. ಕೊಳೆಯಬೇಕಿದೆ. ಜೊತೆಗೆ ಒಬ್ಬ ಸಾಮಾನ್ಯ ವಿಚಾರಣಾದೀನ ಆರೋಪಿಯಂತೆ ದಿನ ದೂಡಬೇಕಿದೆ. ಇದು ನಟಿಯರ ಮನಸ್ಸಿನ ಮೇಲೆ ಗಾಡವಾದ ಪ್ರಭಾವ ಬೀರಿದೆ.
ಒಂದು ಕಡೆ ಜಾಮೀನು ದೊರೆಯುತ್ತಿಲ್ಲ ಎಂಬ ಹತಾಶೆ ಮನೋಭಾವ. ಜೈಲುವಾಸ ಸಾಕು ಸಾಕು ಎನ್ನಿಸುವಷ್ಟು ಬೇಸರವಾಗಿದೆ. ಇದರ ನಡುವೆ ಇಡಿ ವಿಚಾರಣೆ ಇಬ್ಬರು ನಟಿಯರನ್ನು ಹೈರಾಣಾಗಿಸಿದೆ. ಸಿಸಿಬಿ ವಿಚಾರಣೆಯಿಂದಲೇ ಸಾಕಾಗಿ ಹೋಗಿದ್ದ ನಟಿಯರು ಜೈಲಿನಲ್ಲಾದರೂ ಯಾವುದೇ ವಿಚಾರಣೆ ಇಲ್ಲದೆ ನೆಮ್ಮದಿಯಿಂದಿರಬಹುದು ಎಂದುಕೊಂಡಿದ್ದ ಇವರಿಗೆ ಇಡಿ ಶಾಕ್ ನೀಡಿದೆ. ಕಳೆದ ಎರಡು ದಿನಗಳಿಂದ ಸತತ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಐಷಾರಾಮಿ ಜೀವನ, ಆದಾಯ ಮೀರಿ ಆಸ್ತಿ ಗಳಿಕೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದರು. ಇಂದು ವಿರಾಮ ನೀಡಿದ್ದು, ನಾಳೆ ಮತ್ತೆ ಮುಂದುವರಿಸುವ ಸಾಧ್ಯತೆ ಇದೆ ಎಂದು ಜೈಲಿನ ಉನ್ನತ ಮೂಲಗಳ ತಿಳಿಸಿವೆ.
ಒಟ್ನಲ್ಲಿ ಜಾಮೀನು ನಿರಾಕರಣೆ ಮತ್ತು ಇಡಿ ಡ್ರಿಲ್ನಿಂದಾಗಿ ಇಬ್ಬರು ನಟಿಯರು ಬೇಸತ್ತಿದ್ದಾರೆ ಎನ್ನಲಾಗಿದೆ. ನಾಳೆ ಮತ್ತೆ ಇಡಿ ಅಧಿಕಾರಿಗಳು ರಾಗಿಣಿ, ಸಂಜನಾ ಸೇರಿದಂತೆ ಇತರ ಆರೋಪಿಗಳ ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ಜೊತೆಗೆ ನಾಳೆ ರಾಗಿಣಿ ಸಂಜನಾ ಜಾಮೀನು ಅರ್ಜಿ ವಿಚಾರಣೆ ಸಹ ನ್ಯಾಯಾಲಯದ ಮುಂದೆ ಬರಲಿದ್ದು, ಆರೋಪಿಗಳಾದ ರಾಗಿಣಿ ಮತ್ತು ಸಂಜನಾಗೆ ಜೈಲಿನಿಂದ ಮುಕ್ತಿ ದೊರಕಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.
Published by:Ganesh Nachikethu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ