• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಡ್ರಗ್ಸ್​​ ಕೇಸ್​​: ಸಿಕ್ಕಿ ಬೀಳುವ ಭಯದಿಂದ ಸಾಕ್ಷಿ ನಾಶ ಮಾಡಿದ್ರಾ ನಟಿ ಸಂಜನಾ?

ಡ್ರಗ್ಸ್​​ ಕೇಸ್​​: ಸಿಕ್ಕಿ ಬೀಳುವ ಭಯದಿಂದ ಸಾಕ್ಷಿ ನಾಶ ಮಾಡಿದ್ರಾ ನಟಿ ಸಂಜನಾ?

ಸಂಜನಾ ಗಲ್ರಾನಿ

ಸಂಜನಾ ಗಲ್ರಾನಿ

ಮೊಬೈಲ್​​ನ ಎಲ್ಲಾ ಮೆಸೇಜ್​​ಗಳನ್ನ ಡಿಲೀಟ್ ಮಾಡಿದ್ದು, ಇದನ್ನು ರಿಟ್ರೀವ್ ಮಾಡೋದಿಕ್ಕೆ ಸಾಧ್ಯವಿಲ್ಲ ಎನ್ನಲಾಗಿದೆ. ಸಂಜನಾ ಐ ಫೋನ್ 11 ಪ್ರೋ ಮೊಬೈಲ್ ಬಳಸ್ತಿರೋದು. ಈ ಮೊಬೈಲ್​​ನಲ್ಲಿ ಮೆಸೇಜ್, ವೀಡಿಯೋಸ್ ಡಿಲೀಟ್ ಮಾಡಿದ್ರೆ ರಿಟ್ರೀವ್ ಮಾಡೋದಕ್ಕೆ ಕಷ್ಟವಾಗುತ್ತೆ ಎಂದೇಳಲಾಗುತ್ತಿದೆ.

ಮುಂದೆ ಓದಿ ...
  • Share this:

ಬೆಂಗಳೂರು(ಸೆ.09): ಸ್ಯಾಂಡಲ್​​ವುಡ್ ಡ್ರಗ್ಸ್ ಡೀಲ್ ಪ್ರಕರಣ ಸಂಬಂಧ ಸಿಸಿಬಿ ತನಿಖೆ ಚುರುಕುಗೊಳಿಸಿದೆ. ಈ ನಡುವೆ ನಟಿ ಸಂಜನ ಖತರ್ನಾಕ್ ಐಡಿಯಾ ಬೆಳಕಿಗೆ ಬಂದಿದೆ. ಪೊಲೀಸ್ರು ಚಾಪೆ ಕೆಳಗೆ ತೂರಿದ್ರೆ,  ರಂಗೋಲಿ ಕೆಳಗೆ ತೂರಿದ ನಟಿ ಏನ್ ಮಾಡಿದ್ದಾರೆ ಎಂದು ಗೊತ್ತಾದರೆ ಆಶ್ಚರ್ಯವಾಗುತ್ತದೆ. ಡ್ರಗ್ ಡೀಲ್​​ನಿಂದ ತಪ್ಪಿಸಿಕೊಳ್ಳಲು ನಟಿ ಸಂಜನ ಸಿಕ್ಕಿ ಬೀಳುವ ಭಯದಿಂದ ಸಾಕ್ಷಿ ನಾಶ ಮಾಡಿದ್ದಾರೆ‌‌‌ ಎನ್ನಲಾಗಿದೆ. ಮೊಬೈಲ್​​ನ ಎಲ್ಲಾ ಮೆಸೇಜ್​​ಗಳನ್ನ ಡಿಲೀಟ್ ಮಾಡಿದ್ದು, ಇದನ್ನು ರಿಟ್ರೀವ್ ಮಾಡೋದಿಕ್ಕೆ ಸಾಧ್ಯವಿಲ್ಲ ಎನ್ನಲಾಗಿದೆ. ಸಂಜನಾ ಐ ಫೋನ್ 11 ಪ್ರೋ ಮೊಬೈಲ್ ಬಳಸ್ತಿರೋದು. ಈ ಮೊಬೈಲ್​​ನಲ್ಲಿ ಮೆಸೇಜ್,  ವೀಡಿಯೋಸ್ ಡಿಲೀಟ್ ಮಾಡಿದ್ರೆ ರಿಟ್ರೀವ್ ಮಾಡೋದಕ್ಕೆ ಕಷ್ಟವಾಗುತ್ತೆ ಎಂದೇಳಲಾಗುತ್ತಿದೆ.


ಹೌದು, ಈ ಹಿಂದೆ ಡಿಜೆ ಹಳ್ಳಿ ಗಲಾಟೆ ಸಂಬಂಧ ಮಾಜಿ ಮೇಯರ್ ಸಂಪತ್ ರಾಜ್ ಐಪೋನ್ 10 ಮೊಬೈಲ್​​ನನ್ನ  ಅಧಿಕಾರಿಗಳು ಸೀಜ್ ಮಾಡಿದ್ರು. ಬೆಂಗಳೂರಿನ ಟೆಕ್ನಿಕಲ್ ಸೆಲ್​ನಲ್ಲಿ ರಿಟ್ರೀವ್ ಆಗದೆ ಹೊರ ರಾಜ್ಯಕ್ಕೆ ಕಳಿಸಲಾಗಿತ್ತು. ಆದ್ರೀಗ ಸಂಜನಾ ಬಳಸ್ತಿರೋ ಐಪೋನ್ 11 ಪ್ರೋ ನ್ಯೂ ಮಾಡೆಲ್ ಆಗಿದೆ. ಹೀಗಾಗಿ ಬೆಂಗಳೂರಿನ ಟೆಕ್ನಿಕಲ್ ಸೆಲ್​​ನಲ್ಲಿ ಹೊಸ ತಂತ್ರಜ್ಞಾನ ಇನ್ನು ಅಪಡೇಟ್ ಆಗಿಲ್ಲ.. ಆದ್ರಿಂದ ಸಂಜನಾ ಮೊಬೈಲ್ ಸಹ ಹೊರ ರಾಜ್ಯಕ್ಕೆ ಕಳಿಸೋ ಸಾಧ್ಯತೆ ಇದೆ ಎನ್ನಲಾಗಿದೆ.


ಸ್ಯಾಂಡಲ್​ವುಡ್​​ ಡ್ರಗ್ಸ್​ ಪ್ರಕರಣದಲ್ಲಿ ಬಂಧನವಾಗಿರುವ ನಟಿ ಸಂಜನಾರನ್ನು 5 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈಗಷ್ಟೇ ಸಿಸಿಬಿ ಪೊಲೀಸರು ನಟಿ ಸಂಜನಾರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 8ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದರು. ಈ ವೇಳೆ ಸಿಸಿಬಿ ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಧೀಶರು ವಿಚಾರಣೆ ನಡೆಸಿದರು. ಬಳಿಕ 5 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.


ನಟಿ ರಾಗಿಣಿ ಬೆನ್ನಲ್ಲೀಗ ಸ್ಯಾಂಡಲ್​ವುಡ್​ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಗಲ್ರಾನಿ ಅವರನ್ನು ಬಂಧಿಸಿದ್ದಾರೆ. ಡ್ರಗ್ಸ್ ದಂಧೆ ಸಂಬಂಧ ರಾಹುಲ್ ಶೆಟ್ಟಿ ಎಂಬುವವರನ್ನು ಸಿಸಿಬಿ ಬಂಧಿಸಿದ್ದರು. ಈ ವೇಳೆ ಸಂಜನಾ ಬಗ್ಗೆ ಪೊಲೀಸರ ರಾಹುಲ್ ಶೆಟ್ಟಿ ಬಾಯಿಬಿಟ್ಟಿದ್ದ. ರಾಹುಲ್ ಜೊತೆ ಹಲವು ಪಾರ್ಟಿಗಳಲ್ಲಿ ಸಹ ಸಂಜನಾ ಕಾಣಿಸಿಕೊಳ್ಳುತ್ತಿದ್ದರು ಎನ್ನಲಾಗಿತ್ತು. ಹೀಗಾಗಿ ಸಂಜನಾರನ್ನು ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ: Sanjjanaa Galrani: ನಟಿ ಸಂಜನಾ 5 ದಿನ ಸಿಸಿಬಿ ಪೊಲೀಸರ ವಶಕ್ಕೆ - ಕೋರ್ಟ್​ ಆದೇಶ


ಇಂದು ಬೆಳಿಗ್ಗೆಯೇ ಸಂಜನಾರನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ಸತತ ವಿಚಾರಣೆ ಬಳಿಕ ಸಿಸಿಬಿ ಅಧಿಕಾರಿಗಳು ಸಂಜನಾರ ಮೊಬೈಲ್​​ ಈಗ ವಶಕ್ಕೆ ಪಡೆಯಲಾಗಿದೆ.

top videos
    First published: