ನಟಿ ಸಂಯುಕ್ತ ಹೆಗಡೆ ಪ್ರಕರಣ; ರಾಜಕೀಯ ಒತ್ತಡದಿಂದಾಗಿ ಪೊಲೀಸರು ನನ್ನನ್ನು ಬಂಧಿಸಿದ್ದಾರೆ ಎಂದ ಕವಿತಾ ರೆಡ್ಡಿ

ಸೌಮ್ಯ ರೆಡ್ಡಿ ನನ್ನ ವಿರುದ್ಧವಾಗಿ ಟ್ವೀಟ್ ಮಾಡಿದ್ದಾರೆ ಅಂತ  ಅಂದುಕೊಳ್ಳುವುದಿಲ್ಲ. ಘಟನೆ ಕುರಿತು ತಪ್ಪು ಅಂತ ಟ್ವೀಟ್ ಮಾಡಿದ್ದಾರೆ ಅಷ್ಟೇ. ನಾನು ಕಾನೂನಿಗೆ ಗೌರವ ಕೊಡುವ ಮಹಿಳೆ. ಒಟ್ಟಾರೆ ಪ್ರಕರಣದಲ್ಲಿ ಎಲ್ಲವೂ ಮುಗಿದುಹೋಗಿತ್ತು . ಆದರೆ, ಪೋಲೀಸರು ಮತ್ತೆ ಏಕೆ ಪ್ರಕರಣವನ್ನು ಕೈಗೆತ್ತಿಕೊಂಡರು? ನನ್ನನ್ನು ಏಕೆ ಬಂಧಿಸಿದರು ಎಂದು ನನಗೆ ತಿಳಿಯುತ್ತಿಲ್ಲ ಎಂದು ಕವಿತಾ ರೆಡ್ಡಿ ತಿಳಿಸಿದ್ದಾರೆ.

news18-kannada
Updated:September 8, 2020, 9:49 PM IST
ನಟಿ ಸಂಯುಕ್ತ ಹೆಗಡೆ ಪ್ರಕರಣ; ರಾಜಕೀಯ ಒತ್ತಡದಿಂದಾಗಿ ಪೊಲೀಸರು ನನ್ನನ್ನು ಬಂಧಿಸಿದ್ದಾರೆ ಎಂದ ಕವಿತಾ ರೆಡ್ಡಿ
ಸಂಯುಕ್ತಾ ಹೆಗಡೆ ಹಾಗೂ ಕವಿತಾ ರೆಡ್ಡಿ.
  • Share this:
ಬೆಂಗಳೂರು (ಸೆಪ್ಟೆಂಬರ್‌ 08); ನಟಿ ಸಂಯುಕ್ತ ಹೆಗಡೆ ವಿರುದ್ಧ ಪಾರ್ಕ್‌‌ನಲ್ಲಿ ನೈತಿಕ ಪೊಲೀಸ್‌ಗಿರಿ ಪ್ರದರ್ಶನ ಮಾಡಿದ್ದು ತಪ್ಪು. ಈ ಕುರಿತು ನಾನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿಯೇ ಕ್ಷಮೆ ಯಾಚಿಸಿದ್ದೇನೆ. ಈ ಮೂಲಕ ಎಲ್ಲವೂ ಬಗೆಹರಿದಿತ್ತು. ಆದರೂ, ಪೊಲೀಸರು ತಮ್ಮ ಮೇಲಿನ ರಾಜಕೀಯ ಒತ್ತಡದಿಂದಾಗಿ ನನ್ನನ್ನು ಬಂಧಿಸಿದ್ದಾರೆ ಎಂದು ಕವಿತಾ ರೆಡ್ಡಿ ಆರೋಪಿಸಿದ್ದಾರೆ. ನಟಿ ಸಂಯುಕ್ತಾ ಹೆಗಡೆ ಸೆಪ್ಟೆಂಬರ್‌ 6 ರಂದು  ಬೆಂಗಳೂರಿನ ಅಗರ ಉದ್ಯಾನದಲ್ಲಿ ತಮ್ಮ ಸ್ನೇಹಿತೆಯರೊಂದಿಗೆ ಸ್ಪೋರ್ಟ್ಸ್​ ಉಡುಗೆಯಲ್ಲಿ ವರ್ಕೌಟ್​ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ, "ನಂಗಾನಾಚ್ ನೀನು, ನೀವೆಲ್ಲ ಡ್ರಗ್ಗಿಸ್, ಡಿ ಗ್ರೇಡ್ ಆಕ್ಟರ್' ಎಂದು ಸಂಯುಕ್ತಾ ಹೆಗಡೆಗೆ ಕವಿತಾ ರೆಡ್ಡಿ ನಿಂದಿಸಿದ್ದು ವಿಡಿಯೋದಲ್ಲಿ ಕಂಡು ಬಂದಿದೆ. ನಂತರ ಪೋಸ್ಟ್ ಹಾಕಿದ್ದ ಕವಿತಾ ರೆಡ್ಡಿ, ನಾನು ಟ್ರೋಲ್​ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಂಯುಕ್ತ ವಿಡಿಯೋ ಮಾಡಿರುವುದರಲ್ಲೇ ಅವರದ್ದು ಚೀಪ್​ ಮೆಂಟಾಲಿಟಿ ಎಂಬುದು ಗೊತ್ತಾಗುತ್ತದೆ" ಎಂದು ಬರೆದುಕೊಂಡಿದ್ದರು.

ಆದರೆ, ಕವಿತಾ ರೆಡ್ಡಿ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಹುತೇಕರು ಸಂಯಕ್ತ ಹೆಗಡೆಯನ್ನು ಬೆಂಬಲಿಸಿ ಟ್ವೀಟ್​ ಮಾಡುತ್ತಿದ್ದು, ಕವಿತಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಂದೋಲನ ಕೂಡ ಶುರುವಾಗಿತ್ತು. ಇದರ ಬೆನ್ನಿಗೆ ನಟಿ ಸಂಯುಕ್ತ ಹೆಗಡೆ ಕಾಂಗ್ರೆಸ್‌ ನಾಯಕಿ ಕವಿತಾ ರೆಡ್ಡಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ತಾವು ಮಾಡಿದ ತಪ್ಪಿನ ಅರಿವಾಗಿದ್ದ ಕವಿತಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಘಟನೆ ಸಂಬಂಧ ಸಂಯುಕ್ತ ಹೆಗಡೆ ಅವರ ಬಳಿ ಕ್ಷಮೆ ಕೇಳಿದ್ದರು. ಆದರೂ ಇಂದು ಅವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ : ಸಮುದ್ರದ ನಡುವೆ 36 ಗಂಟೆಗಳ ಕಾಲ ಏಕಾಂಗಿಯಾಗಿ ಕಳೆದು ವಿಸ್ಮಯಕಾರಿಯಾಗಿ ಜೀವ ಉಳಿಸಿಕೊಂಡ ಮೀನುಗಾರ!

ಈ ಕುರಿತು ನ್ಯೂಸ್‌ 18 ಜೊತೆಗೆ ಮಾತನಾಡಿರುವ ಕವಿತಾ ರೆಡ್ಡಿ, "ನನ್ನ ವಿರುದ್ಧವಾಗಿ ಕಾಣದ ಕೈಗಳು ಪಿತೂರಿ ನಡೆಸುತ್ತಿದ್ದಾರೆ ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಸ್ಥಳೀಯವಾಗಿ ರಾಜಕೀಯದಲ್ಲಿ ಬೆಳೆಯಬಾರದು ಎಂದು ನನ್ನನ್ನ ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ರಾಮಲಿಂಗ ರೆಡ್ಡಿ , ಸೌಮ್ಯ ರೆಡ್ಡಿ ನನ್ನ ವಿರುದ್ದ ಕೆಲಸ ಮಾಡಿಲ್ಲ. ಆದರೆ, ಬೇರೆ ಯಾರು ನನ್ನ ವಿರುದ್ಧವಾಗಿ ಕೆಲಸ ಮಾಡ್ತಾಯಿದ್ದಾರೆ ಗೊತ್ತಿಲ್ಲ.

ಸೌಮ್ಯ ರೆಡ್ಡಿ ನನ್ನ ವಿರುದ್ಧವಾಗಿ ಟ್ವೀಟ್ ಮಾಡಿದ್ದಾರೆ ಅಂತ  ಅಂದುಕೊಳ್ಳುವುದಿಲ್ಲ. ಘಟನೆ ಕುರಿತು ತಪ್ಪು ಅಂತ ಟ್ವೀಟ್ ಮಾಡಿದ್ದಾರೆ ಅಷ್ಟೇ. ನಾನು ಕಾನೂನಿಗೆ ಗೌರವ ಕೊಡುವ ಮಹಿಳೆ. ಒಟ್ಟಾರೆ ಪ್ರಕರಣದಲ್ಲಿ ಎಲ್ಲವೂ ಮುಗಿದುಹೋಗಿತ್ತು . ಆದರೆ, ಪೋಲೀಸರು ಮತ್ತೆ ಏಕೆ ಪ್ರಕರಣವನ್ನು ಕೈಗೆತ್ತಿಕೊಂಡರು? ನನ್ನನ್ನು ಏಕೆ ಬಂಧಿಸಿದರು ಎಂದು ನನಗೆ ತಿಳಿಯುತ್ತಿಲ್ಲ" ಎಂದು ತಿಳಿಸಿದ್ದಾರೆ.
Published by: MAshok Kumar
First published: September 8, 2020, 9:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading