ಮಂಡ್ಯ ಜನರ ವಿರೋಧಕ್ಕೆ ರಮ್ಯಾ ಪಲಾಯನ?; ರಾತ್ರೋರಾತ್ರಿ ಬಾಡಿಗೆ ಮನೆ ಖಾಲಿ ಮಾಡಿದ ಮಾಜಿ ಸಂಸದೆ!

ಚುನಾವಣೆ ಮುಗಿದ ಮೇಲೆ ರಮ್ಯಾ ಮಂಡ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ನಿನ್ನೆ ತಡರಾತ್ರಿ ಏಕಾಏಕಿ ಎರಡು ಲಾರಿಗಳಲ್ಲಿ ಮನೆಯಲ್ಲಿದ್ದ ಸಾಮಾನು ಸರಂಜಾಮುಗಳು ರವಾನೆ ಆಗಿವೆ.

ರಮ್ಯಾ

ರಮ್ಯಾ

  • News18
  • Last Updated :
  • Share this:
ಮಂಡ್ಯ (ಡಿ.03): ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ರಾಜಕೀಯ ಬದುಕಿಗೆ ಬೆನ್ನೆಲುಬಾಗಿ ನಿಂತಿದ್ದು ಅಂಬರೀಶ್​. ಆದರೆ, ಅಂಬರೀಶ್​ ನಿಧನರಾದಾಗ ಅವರನ್ನು ಕೊನೆಯಬಾರಿಗೆ ನೋಡಿ ಹೋಗಲೂ ರಮ್ಯಾ ಬರಲಿಲ್ಲ. ಇದೇ ಕಾರಣಕ್ಕೆ ಮಂಡ್ಯದ ಜನರು ರಮ್ಯಾ ವಿರುದ್ಧ ತಿರುಗಿ ಬಿದ್ದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಆಂದೋಲವನ್ನೇ ಆರಂಭಿಸಿದ್ದರು. ಇದಾದ ಬೆನ್ನಲ್ಲೇ ರಮ್ಯಾ ಮಂಡ್ಯದಲ್ಲಿರುವ ಬಾಡಿಗೆ ಮನೆ ಖಾಲಿ ಮಾಡಿದ್ದಾರೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಮಂಡ್ಯದಲ್ಲೇ ಇದ್ದು, ಪ್ರಚಾರ ಕಾರ್ಯ ನಡೆಸಲು ರಮ್ಯಾ ಇಲ್ಲಿನ ವಿದ್ಯಾನಗರದಲ್ಲಿ ಬಾಡಿಗೆ ಮನೆ ಮಾಡಿದ್ದರು. ಚುನಾವಣೆ ಮುಗಿದ ಮೇಲೆ ಅವರು ಮಂಡ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ನಿನ್ನೆ ತಡರಾತ್ರಿ ಏಕಾಏಕಿ ಎರಡು ಲಾರಿಗಳಲ್ಲಿ ಮನೆಯಲ್ಲಿದ್ದ ಸಾಮಾನು ಸರಂಜಾಮುಗಳು ರವಾನೆ ಆಗಿವೆ. ಅವರು ಮನೆ ಖಾಲಿ ಮಾಡಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಅಂಬರೀಶ್ ಅಂತ್ಯಕ್ರಿಯೆಗೆ ನಟಿ ರಮ್ಯಾ ಯಾಕೆ ಬರಲಿಲ್ಲ? ಕೆರಳಿದ ಅಭಿಮಾನಿಗಳು

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಮ್ಯಾಗೆ ಅಂಬರೀಶ್​ ಸಹಕಾರ ನೀಡಿದ್ದರು. ಅವರ ಬೆಂಬಲದೊಂದಿಗೆ ರಮ್ಯಾ ಸಂಸದೆಯಾಗಿದ್ದರು. ಎರಡನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ ರಮ್ಯಾ ಸೋತಿದ್ದರು. ಅಂಬರೀಶ್​ ನನಗೆ ಬೆಂಬಲ ನೀಡದ್ದಕ್ಕೆ ನಾನು ಸೋತೆ ಎಂದು ರಮ್ಯಾ ಆರೋಪಿಸಿದ್ದರು. ಇದರಿಂದ ಅಂಬಿ-ರಮ್ಯಾ ನಡುವೆ ಅಂತರ ಬೆಳೆಯುತ್ತಾ ಹೋಯಿತು. ‘ರೆಬೆಲ್​ ಸ್ಟಾರ್’​ ನಿಧನರಾದಾಗ ಅಂಬರೀಶ್​ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು. ದ್ವೇಷ ಮರೆತು ರಮ್ಯಾ ಸಂತಾಪ ಸೂಚಿಸಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅಂಬಿ ಅಂತಿಮ ದರ್ಶನಕ್ಕೆ ರಮ್ಯಾ ಆಗಮಿಸಲೇ ಇಲ್ಲ. ಹಾಗಾಗಿ ಎಲ್ಲರೂ ಜಿಲ್ಲೆಯಲ್ಲಿ ರಮ್ಯಾ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ರಮ್ಯ ಮನೆಗೆ ಪೊಲೀಸ್ ಭದ್ರತೆ ಕೂಡ ನೀಡಿದ್ದರು. ಕಾಲಿಗೆ ತೊಂದರೆ ಆಗಿದ್ದರಿಂದ ನಾನು ಬಂದಿಲ್ಲ ಎನ್ನುವ ಸ್ಪಷ್ಟನೆ ಸಿಕ್ಕಿತ್ತು. ಆದಾಗ್ಯೂ, ಜನರ ಪಾಲಿಗೆ ಸತ್ತಳೆಂದು‌ ರಮ್ಯಾ ತಿಥಿ ಕಾರ್ಡ್ ಮಾಡಿಸಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ರಮ್ಯಾ ಹೆದರಿದರಾ ಎನ್ನುವ ಅನುಮಾನ ಮೂಡಿದೆ.

ಇದನ್ನೂ ಓದಿ: ಅಂಬಿ ಅಂತ್ಯಸಂಸ್ಕಾರಕ್ಕೆ ರಮ್ಯಾ ಬರದಿರಲು 'ಕುಂಟು'ವ ನೆಪವೇ ಕಾರಣ!

First published: