Ramya: ಬೆಂಗಳೂರಿನಲ್ಲಿ ಮಳೆಯಿಂದಾದ ಅವಾಂತರಕ್ಕೆ ನಟಿ ರಮ್ಯಾ ಕಿಡಿ, ಇವರಿಗೆ ನನ್ನ ಮತ ಎಂದ ಮೋಹಕ ತಾರೆ!

ಬೆಂಗಳೂರಿನಲ್ಲಿ ಮಳೆಯಿಂದಾದ ಅವಾಂತರದ ಬಗ್ಗೆ ನಟಿ ರಮ್ಯಾ ಕಿಡಿಕಾರಿದ್ದಾರೆ. ನೀರು ತುಂಬಿರೋ ರಸ್ತೆಯಲ್ಲಿ ಬೈಕ್ ಸವಾರನೊಬ್ಬ ಒದ್ದಾಡುತ್ತಾ ಸಂಚರಿಸ್ತಿರೋ ಫೋಟೋವನ್ನು ಹಾಕಿ ನಟಿ ಆಕ್ರೋಶ ಹೊರಹಾಕಿದ್ದಾರೆ. ಇದು ಸ್ಮಾರ್ಟ್ ಸಿಟಿ ಅಂತಾ ವ್ಯಂಗ್ಯ ಮಾಡಿದ್ದಾರೆ. ಇದೇ ವೇಳೆ ತನ್ನ ಮತ ಯಾರಿಗೆ ಅನ್ನೋದನ್ನು ಹೇಳಿದ್ದಾರೆ.

ನಟಿ ರಮ್ಯಾ

ನಟಿ ರಮ್ಯಾ

  • Share this:
ಬೆಂಗಳೂರಿನಲ್ಲಿ ಸಂಜೆ ಮಳೆ ಭಾರೀ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಕಳೆದ ರಾತ್ರಿ ಸುರಿದ ಮಳೆ ಇಡೀ ಬೆಂಗಳೂರನ್ನೇ (Bengaluru) ತೊಯ್ದು ತೊಪ್ಪೆಯಾಗಿಸಿದೆ. ಈಗಲೂ ಭಾರೀ ಮಳೆಯಾಗುತ್ತಿದೆ (Heavy Rain). ಮತ್ತಿಕೆರೆ, ಕಾರ್ಪೊರೇಷನ್, ಯಶವಂತಪುರ, ಬಿಇಎಲ್ ಸರ್ಕಲ್, ಗೊರಗುಂಟೆಪಾಳ್ಯ ಸೇರಿದಂತೆ ಹಲವೆಡೆ ಮಳೆ ಆರಂಭವಾಗಿದೆ. ತಗ್ಗುಪ್ರದೇಶದಲ್ಲಿರುವ ಜನರಿಗೆ ಹಾಗೂ ರಾಜಕಾಲುವೆ ಪಕ್ಕದಲ್ಲಿರುವ ಜನರಿಗೆ ಮತ್ತೆ ಆತಂಕ ಶುರುವಾಗಿದೆ. ಅದರಲ್ಲೂ ಐಟಿ ಬಿಟಿ ಏರಿಯಾವಾದ (IT BT Area) ಮಹದೇವಪುರ ಹಾಗೂ ಬೊಮ್ಮನಳ್ಳಿ, ಎಕೋಸ್ಪೇಸ್ ಕಡೆ ಪರಿಸ್ಥಿತಿ ಹೇಳತೀರದಾಗಿದೆ. ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಬೆಂಗಳೂರಿನಲ್ಲಿ ಮಳೆಯಿಂದಾದ ಅವ್ಯವಸ್ಥೆ ಬಗ್ಗೆ ನಟಿ ರಮ್ಯಾ (Actress Ramya) ಕಿಡಿಕಾರಿದ್ದಾರೆ. ಫೋಟೋ (Photo) ಒಂದನ್ನು ಶೇರ್ ಮಾಡಿ ಇದು ಸ್ಮಾರ್ಟ್ ಸಿಟಿ ಅಂತಾ ವ್ಯಂಗ್ಯವಾಡಿದ್ದಾರೆ.

ನಟಿ ರಮ್ಯಾ ಈಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಇದ್ದಾರೆ. ಅವ್ಯವಸ್ಥೆ, ಸಮಸ್ಯೆಯ ಬಗ್ಗೆ ಧ್ವನಿ ಎತ್ತುತ್ತಿರುತ್ತಾರೆ. ಶ್ವಾನಗಳ ಮೇಲೂ ಅಮಾನವೀಯವಾಗಿ ವರ್ತಿಸಿದಾಗಲೂ ನಟಿ ರಮ್ಯಾ ಕಿಡಿಕಾರಿದ್ದರು. ಈಗ ಬೆಂಗಳೂರಿನಲ್ಲಿ ಮಳೆಗೆ ಸಮಸ್ಯೆಗಳು ಉದ್ಭವಿಸಿದ್ದು ಸರ್ಕಾರದ ವಿರುದ್ಧ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಫೋಟೋ ಟ್ಯಾಗ್ ಮಾಡಿ ನಟಿ ರಮ್ಯಾ ಆಕ್ರೋಶ
ಬೆಂಗಳೂರಿನಲ್ಲಿ ಮಳೆಯಿಂದಾದ ಅವಾಂತರದ ಬಗ್ಗೆ ನಟಿ ರಮ್ಯಾ ಕಿಡಿಕಾರಿದ್ದಾರೆ. ನೀರು ತುಂಬಿರೋ ರಸ್ತೆಯಲ್ಲಿ ಬೈಕ್ ಸವಾರನೊಬ್ಬ ಒದ್ದಾಡುತ್ತಾ ಸಂಚರಿಸ್ತಿರೋ ಫೋಟೋವನ್ನು ಹಾಕಿ ನಟಿ ಆಕ್ರೋಶ ಹೊರಹಾಕಿದ್ದಾರೆ. ಇದು ಸ್ಮಾರ್ಟ್ ಸಿಟಿ ಅಂತಾ ವ್ಯಂಗ್ಯ ಮಾಡಿದ್ದಾರೆ.

ಅಕ್ರಮ ಕಟ್ಟಡ ಕೆಡವೋರಿಗೆ ನನ್ನ ಮತ ಎಂದ ರಮ್ಯಾ
ಇನ್ನು ರಮ್ಯಾ ತನ್ನ ಮತ ಯಾರಿಗೆ ಅಂತಾನೂ ಹೇಳಿದ್ದಾರೆ. ಬೆಂಗಳೂರಿನಲ್ಲಿ ಅಕ್ರಮ ಕಟ್ಟಡ ಕೆಡವೋರಿಗೆ ನನ್ನ ಮತ ಅಂತಾ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಯಾಕೆಂದರೆ ಬೆಂಗಳೂರಿನಲ್ಲಿ ಅಕ್ರಮ ಕಟ್ಟಡದಿಂದಲೇ ಅವಾಂತರ ಜಾಸ್ತಿಯಾಗಿದೆ. ಒತ್ತುವರಿಯಿಂದಲೇ ನೀರು ನಿಂತು ಪರದಾಡುವಂತಾಗಿದೆ.

ಇದನ್ನೂ ಓದಿ: ಮುಳುಗಿದ ಬೆಂಗಳೂರು ನಗರದ ಮತ್ತಷ್ಟು ಚಿತ್ರಗಳನ್ನು ನೋಡಿ

ಬೆಂಗಳೂರಿನಲ್ಲಿ ಮತ್ತೆ ಶುರುವಾದ ಭಾರೀ ಮಳೆ
ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ಇನ್ನೂ ಚೇತರಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಇದರ ನಡುವೆ ಈಗ ಮತ್ತೆ ಬೆಂಗಳೂರಿನಲ್ಲಿ ಭಾರೀ ಮಳೆ ಶುರುವಾಗಿದೆ. ಅದರಲ್ಲೂ ಆಫೀಸ್ ಬಿಡೋ ಟೈಮ್ ಆಗಿರೋದ್ರಿಂದ ವಾಹನ ಸವಾರರಿಗೆ ಕಿರಿಕಿರಿ ಆಗಿದೆ. ಮಳೆಯಲ್ಲಿ ಸಿಲುಕಿ ವಾಹನ ಸವಾರರು ಪರದಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಸಂಜೆ ಆಗ್ತಿದ್ದಂತೆ ಮತ್ತೆ ಮಳೆ ಆರಂಭವಾಗಿದೆ. ಪ್ರಮುಖ ಏರಿಯಾಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಾರ್ಪೋರೇಷನ್, ವಿಧಾನಸೌಧ, ಲಾಲ್ ಬಾಗ್, ಟೌನ್ ಹಾಲ್, ಮಾರ್ಕೆಟ್ ಸುತ್ತಲೂ ಮಳೆಯಾಗ್ತಿದೆ. ವಾಹನ ಸವಾರರು ಮಳೆಗೆ ಪರದಾಡುತ್ತಿದ್ದಾರೆ.

ಮಳೆ ಹಿನ್ನೆಲೆ ಸಿಎಂ ಬೊಮ್ಮಾಯಿ ತುರ್ತು ಸಭೆ
ಬೆಂಗಳೂರಿನಲ್ಲಿ ಮಳೆಯಿಂದಾಗಿ ಅವಾಂತರ ಹಿನ್ನೆಲೆ ಬೆಂಗಳೂರು ಸಚಿವರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸ್ತಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಭೆ ಮಾಡ್ತಿದ್ದಾರೆ. ಸಭೆಯಲ್ಲಿ ಸಚಿವ ವಿ. ಸೋಮಣ್ಣ, ಆರ್. ಅಶೋಕ್, ಬೈರತಿ ಬಸವರಾಜ್, ಬಿಬಿಎಂಪಿ ಕಮಿಷನರ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಶುರುವಾದ ಭಾರೀ ಮಳೆ, 2 ಗಂಟೆ ನಿರಂತರ ಸುರಿದ್ರೆ ಅನಾಹುತ ಫಿಕ್ಸ್

ಅಧಿಕ ಹೊತ್ತು ಭಾರೀ ಮಳೆ ಸುರಿದರೆ ಅನಾಹುತ ಫಿಕ್ಸ್
ನಿನ್ನೆಯ ಮಳೆಗೆ ಬೆಂಗಳೂರು ಚೇತರಿಸಿಕೊಂಡಿಲ್ಲ. ಈ ಮತ್ತೆ ಮಳೆಯಾಗ್ತಿದ್ದು ಇದೇ ರೀತಿ ಇಂದು ಕೂಡ ಮಳೆ ಸುರಿದರೇ ಅನಾಹುತ ಆಗೋದ್ರಲ್ಲಿ ಅನುಮಾನವಿಲ್ಲ. ಮತ್ತೆ ಜನ, ವಾಹನ ಸವಾರರು ಒದ್ದಾಡಬೇಕಾದಂತು ಸತ್ಯ.

ಮಳೆ ಕಡಿಮೆಯಾದ್ರೆ ಸಾಕು ಅಂತಿರೋ ಜನರಿಗೆ ಹವಾಮಾನ ಇಲಾಖೆ ಶಾಕಿಂಗ್ ನ್ಯೂಸ್ ನೀಡಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
Published by:Thara Kemmara
First published: