Ramya Tweet: ಎಲ್ಲರಿಗೂ ಒಂದೇ ನಿಯಮ ಜಾರಿ ಆಗುತ್ತಾ? ಒತ್ತುವರಿದಾರರ ಪಟ್ಟಿ ಜೊತೆಗೆ ರಮ್ಯಾ ಟ್ವೀಟ್

ಎಲ್ಲರಿಗೂ ಒಂದೇ ನಿಯಮ ಜಾರಿ ಆಗುತ್ತಾ ಎಂದು ಕೇಳಿ ರಮ್ಯಾ ಬೇಸರ ಹೊರಹಾಕಿದ್ದಾರೆ. ಇದರ ಜೊತೆಗೆ ಒತ್ತುವರಿದಾರರ ಪಟ್ಟಿಯನ್ನು ಸಹ ಶೇರ್ ಮಾಡಿಕೊಂಡಿದ್ದಾರೆ.

ರಮ್ಯಾ

ರಮ್ಯಾ

  • Share this:
ಬೆಂಗಳೂರು ಪ್ರವಾಹದಿಂದ (Bengaluru Flood) ಎಚ್ಚೆತ್ತಿರುವ ಬಿಬಿಎಂಪಿ (BBMP) ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ (Rajakaluve Encroachment) ನಡೆಸುತ್ತಿದೆ. ಇಂದು ಎರಡನೇ ದಿನದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡಿರುವವರ ಪಟ್ಟಿ ಬಹಿರಂಗವಾಗಿದೆ. ಈ ಸಂಬಂಧ ಮಾಜಿ ಸಂಸದೆ, ನಟಿ ರಮ್ಯಾ (Former MP, Actress Ramya) ಟ್ವೀಟ್ ಮಾಡಿ, ಕಾನೂನು ರೂಪಿಸುವವರೇ ಕಾನೂನು ಮುರಿದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಎಲ್ಲರಿಗೂ ಒಂದೇ ನಿಯಮ ಜಾರಿ ಆಗುತ್ತಾ ಎಂದು ಕೇಳಿ ರಮ್ಯಾ ಬೇಸರ ಹೊರಹಾಕಿದ್ದಾರೆ. ಇದರ ಜೊತೆಗೆ ಒತ್ತುವರಿದಾರರ ಪಟ್ಟಿಯನ್ನು ಸಹ ಶೇರ್ ಮಾಡಿಕೊಂಡಿದ್ದಾರೆ.

ಕಾನೂನು ರೂಪಿಸುವವರೇ ಕಾನೂನು ಭಂಗ ಮಾಡುತ್ತಿರೋದು ನಾಚಿಕೆಗೇಡಿನ ಸಂಗತಿ. ಈ ಲಿಸ್ಟ್​ನಲ್ಲಿ ಬೆಂಗಳೂರಿನ ಪ್ರಮುಖ ಬಿಲ್ಡರ್​ಗಳ ಹೆಸರುಗಳಿವೆ. ನನಗೆ ವಿಶ್ವಾಸ ಇದೆ, ಎಲ್ಲರ ವಿರುದ್ಧ ಒಂದೇ ರೀತಿಯ ಕಾನೂನು ಕ್ರಮ ಆಗುವಂತೆ ಕರ್ನಾಟಕ ಮುಖ್ಯಮಂತ್ರಿ ನೋಡಿಕೊಳ್ತಾರೆ ಎಂಬ ವಿಶ್ವಾಸವಿದೆ ಎಂದು ರಮ್ಯಾ ಹೇಳಿದ್ದಾರೆ.

ಒತ್ತುವರಿ ತೆರವು ವಿಚಾರದಲ್ಲಿ ಬಿಜೆಪಿ v/s ಬಿಜೆಪಿ!

ಐಟಿ ಕಂಪನಿಗಳಿಂದ ಒತ್ತುವರಿ ಆಗಿದೆ ಎಂದು ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಆದರೆ ಅರವಿಂದ್ ಲಿಂಬಾವಳಿ, ಒತ್ತುವರಿ ಮಾಡಿರೋದು ಐಟಿ ಕಂಪನಿಗಳಲ್ಲ ಬಿಲ್ಡರ್ಸ್ ಎಂದು ಹೇಳಿದ್ದಾರೆ. ಅಶೋಕ್ ತಪ್ಪು ಹೇಳಿಕೆ ನೀಡಿದ್ದಾರೆ. ಕಂಪನಿಗಳಿಗೆ ಕಟ್ಟಡ ಕಟ್ಟಿಕೊಟ್ಟಿರೋದು ಬಿಲ್ಡರ್ಸ್‌. ಶೀಘ್ರದಲ್ಲಿಯೇ ತೆರವು ಮಾಡಿಸುತ್ತೇವೆ ಎಂದಿದ್ದಾರೆ.

ಒತ್ತುವರಿ ತೆರವು ಮಾಡಿರುವ ಪ್ರತಿಷ್ಠಿತ ಕಂಪನಿಗಳ ಪಟ್ಟಿ ಹೀಗಿದೆ

ಬಾಗ್ಮನೆ ಟೆಕ್ ಪಾರ್ಕ್- ಮಹದೇವಪುರ, ಪೂರ್ವ ಪ್ಯಾರಡೈಸ್- ಮಹದೇವಪುರ,  RBD ಗ್ರೂಪ್ -ದೊಡ್ಡಕನ್ನಹಳ್ಳಿ, ವಿಪ್ರೋ  ದೊಡ್ಡಕನ್ನಹಳ್ಳಿ, ಎಕೋ ಸ್ಪೇಸ್- ಬೆಳ್ಳಂದೂರು, ಗೋಪಾಲನ್ ಮಾಲ್- ಬೆಳ್ಳಂದೂರು, ಗೋಪಾಲನ್ ಮಾಲ್-ಹೂಡಿ, ದಿಯಾ ಸ್ಕೂಲ್- ಹೂಡಿ, ಗೋಪಾಲನ್ ಮಾಲ್- ಹೂಡಿ & ಸೊನ್ನೆಹಳ್ಳಿ, ಆದರ್ಶ ಗ್ರೂಪ್-R ನಾರಾಯಣಪುರ

ಕೊಲಂಬಿಯಾ ಏಷ್ಯಾ ಆಸ್ಪತ್ರೆ-ರಾಮಗೊಂಡನಹಳ್ಳಿ, ನ್ಯೂ ಹಾರಿಜನ್-ಕಾಲೇಜ್ ಕಾಡುಬೆಸನಹಳ್ಳಿ, ಆದರ್ಶ ರಿಟ್ರೀಟ್-ದೇವರಬೆಸನಹಳ್ಳಿ, ಎಫ್ಸಿಲಾನ್ & ದಿವ್ಯಶ್ರೀ ಟೆಕ್‌ಪಾರ್ಕ್ –ಯಮಲೂರು, ಪ್ರೆಸ್ಟೀಜ್ & ಸಲಾರ್ಪುರಿಯಾ-ಮಾರತ್‌ಹಳ್ಳಿ, ನಲಪ್ಪಾಡ್ & ಗ್ರೂಪ್- ಚಲಘಟ್ಟ

ಇಂದು ಎಲ್ಲೆಲ್ಲಿ ಒತ್ತುವರಿ?

ಮಹದೇವಪುರ ವ್ಯಾಪ್ತಿಯಲ್ಲಿ ಚೆಲ್ಲಘಟ್ಟ, ಚಿನ್ನಪ್ಪನಹಳ್ಳಿ, ಬಸವಣ್ಣನಗರ, ಸ್ಪೈಸಿ ಗಾರ್ಡನ್, ಎಸ್.ಆರ್ ಲೇಔಟ್, ಕೇಂಬ್ರಿಡ್ಜ್ ಕಾಲೇಜು ಆವರಣ, ಸಾಯಿ ಕಣ್ಣಿನ ಆಸ್ಪತ್ರೆಯ ಕಾಂಪೌಂಡ್, ರಾಘವ ಸೂಪರ್ ಮಾರ್ಕೆಟ್ ಎದುರು, ಚೆಲ್ಲಘಟ್ಟ ವ್ಯಾಪ್ತಿಯ ಪ್ರೆಸ್ಟೀಜ್​ನ ಕಾಂಪೌಂಡ್, ಹೂಡಿ ಬಳಿ ಗೋಪಾಲನ್ ಶಾಲೆ, ಮಹಾವೀರ್ ಅಪಾರ್ಟ್​ಮೆಂಟ್​ನ ಕಾಂಪೌಂಡ್, ಸ್ಪೈಸಿ ಗಾರ್ಡನ್ ಬಳಿ 4 ಕಾಂಪೌಂಡ್, ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ ನೀರುಗಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ: Yellamma Temple: ಬೇಡಿದ ವರ ನೀಡುವ ತಾಯಿ ಯಲ್ಲಮ್ಮ; ಎಲ್ಲಿದೆ ದೇವಸ್ಥಾನ?

ಬೆಂಗಳೂರಿನ ಮಹಾದೇವಪುರದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಉಂಟಾಗಿತ್ತು. ಆದ್ದರಿಂದ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವಿಗೆ ಕಾರ್ಯಾಚರಣೆ ನಡೆಸ್ತಿದ್ದಾರೆ.  ಬಸವಣ್ಣ ನಗರದಲ್ಲಿರುವ ಮಹಾವೀರ್ ರೀಗಲ್ ಅಪಾರ್ಟ್​ಮೆಂಟ್​ ಬಳಿ ಕಾರ್ಯಾಚರಣೆ ನಡೆಯಿತು. ಆದ್ರೆ ಬಿಬಿಎಂಪಿ ಕಾರ್ಯಚರಣೆಗೆ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ರು.

ಸ್ಥಳೀಯರ ಕಣ್ಣೀರು

150 ಮನೆಗಳಿರುವ ಮಹಾವೀರ್ ರೀಗಲ್ ಅಪಾರ್ಟ್‌ಮೆಂಟ್​ನ 24 ಅಡಿ ಜಾಗವನ್ನು ಡೆಮಾಲಿಷನ್‌ ಮಾಡಲು ಗುರುತು ಹಾಕಲಾಗಿದೆ. ಅಪಾರ್ಟ್ಮೆಂಟ್‌ನ ಕಾಂಪೌಂಡ್ ಕೆಡವಲಾಗ್ತಿದೆ. ಆದ್ದರಿಂದ ಕಾರ್ಯಾಚರಣೆ ನಡೆಸದಂತೆ ನಿವಾಸಿಗಳು ಕಣ್ಣೀರು ಹಾಕಿದರು.

ಇದನ್ನೂ ಓದಿ:  Mandya Politics: ಮಂಡ್ಯ ರಾಜಕೀಯದಲ್ಲಿ ಸಂಚಲನ; ಇಬ್ಬರು ಹಾಲಿ, ಓರ್ವ ಮಾಜಿ ಶಾಸಕನಿಗೆ ಶುರುವಾಯ್ತು ಢವ ಢವ!

ಮಹಾದೇವಪುರಲ್ಲಿರೋ ಗೋಪಾಲನ್ ಕಾಲೇಜು ಕ್ರೀಡಾಂಗಣದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಗೋಪಾಲನ್ ಕಾಲೇಜಿನವರೂ ಕೂಡಾ ಏಳೂವರೆ ಮೀಟರ್ ರಾಜಕಾಲುವೆ ಒತ್ತುವರಿ ಮಾಡಿದ್ದಾರೆ ಎಂದು ಒತ್ತುವರಿ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ
Published by:Mahmadrafik K
First published: