ಜಾಮೀನು ಸಿಕ್ಕಿ ಮೂರು ದಿನ ಕಳೆದರೂ ನಟಿ ರಾಗಿಣಿಗಿಲ್ಲ ಬಿಡುಗಡೆ ಭಾಗ್ಯ; ಇನ್ನು 2 ದಿನ ಜೈಲೇ ಗತಿ

ನಾಳೆ ಭಾನುವಾರ ಆಗಿರುವುದರಿಂದ ಇನ್ನೂ ಎರಡು ದಿನ ನಟಿ ರಾಗಿಣಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕಿದೆ. ಜಾಮೀನು ಸಿಕ್ಕಿ ಮೂರು ದಿನ ಕಳೆದರು ನಟಿ ರಾಗಿಣಿಗೆ ಬಿಡುಗಡೆ ಭಾಗ್ಯ ಇನ್ನೂ ಸಿಕ್ಕಿಲ್ಲ. ಸೋಮವಾರ ರಾಗಿಣಿ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ.

ನಟಿ ರಾಗಿಣಿ.

ನಟಿ ರಾಗಿಣಿ.

 • Share this:
  ಬೆಂಗಳೂರು; ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟಿ ರಾಗಿಣಿ ಬರೋಬ್ಬರಿ‌ 140 ದಿನಗಳಿಗೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದಾರೆ. ಸುದೀರ್ಘ ಕಾನೂನು ಹೋರಾಟದ ಬಳಿಕ ಸುಪ್ರೀಂ ಕೋರ್ಟ್​ನಲ್ಲಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಾಮೀನು ಸಿಕ್ಕರೂ ಅವರಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಇಲ್ಲದಂತೆ ಆಗಿದೆ. ರಾಗಿಣಿ ಅವರಿಗೆ ಜಾಮೀನು ಸಿಕ್ಕಿ ಮೂರು ದಿನಗಳಾದರೂ ಬಿಡುಗಡೆ ಭಾಗ್ಯ ಇನ್ನೂ ದಕ್ಕಿಲ್ಲ. ಕಳೆದ ಗುರುವಾರ ಸುಪ್ರೀಂಕೋರ್ಟ್​ ನಿಂದ ರಾಗಿಣಿ ಅವರಿಗೆ ಜಾಮೀನು ಸಿಕ್ಕಿತ್ತು.

  ನಿನ್ನೆ ಮಧ್ಯಾಹ್ನದ ಬಳಿಕ ಸುಪ್ರೀಂಕೋರ್ಟ್ ಆದೇಶ ಪ್ರತಿ ಪಡೆದು ದೆಹಲಿಯಿಂದ ವಕೀಲರು ಬೆಂಗಳೂರಿಗೆ ಬಂದಿದ್ದರು. ಇಂದು ಎನ್​ಡಿಪಿಎಸ್ ಕೋರ್ಟ್​ನಲ್ಲಿ ಸುಪ್ರೀಂ ಕೋರ್ಟ್ ಆದೇಶ ಪ್ರತಿಯನ್ನು ವಕೀಲರು ಹಾಜರುಪಡಿಸಿದರು. ಆದರೆ ಇಂದು ರಾಗಿಣಿಗೆ ಜಾಮೀನು ಮಂಜೂರು ಮಾಡಲು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ. 3 ಲಕ್ಷ ಬಾಂಡ್, ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಹಾಗೂ 15 ದಿನಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಿ ಸಹಿ ಹಾಕಬೇಕು ಎಂಬಿತ್ಯಾದಿ ಷರತ್ತುಗಳು ವಿಧಿಸಲಾಗಿದೆ. ಈ  ಷರತ್ತುಗಳನ್ನು ಪೂರೈಸಲು ರಾಗಿಣಿ ಪರ ವಕೀಲರು ಸಮಯಾವಕಾಶ ಕೇಳಿದ್ದಾರೆ.

  ಇದನ್ನು ಓದಿ: ಖಾಸಗಿ ಶಾಲಾ ಶುಲ್ಕ ಭರಿಸಲು 3 ಹಂತದ ಸೂತ್ರ ಶಿಫಾರಸು, ಶೀಘ್ರವೇ ಮೊದಲನೇ ಸೂತ್ರ ಪ್ರಕಟ; ಸಚಿವ ಸುರೇಶ್ ಕುಮಾರ್

  ನಾಳೆ ಭಾನುವಾರ ಆಗಿರುವುದರಿಂದ ಇನ್ನೂ ಎರಡು ದಿನ ನಟಿ ರಾಗಿಣಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕಿದೆ. ಜಾಮೀನು ಸಿಕ್ಕಿ ಮೂರು ದಿನ ಕಳೆದರು ನಟಿ ರಾಗಿಣಿಗೆ ಬಿಡುಗಡೆ ಭಾಗ್ಯ ಇನ್ನೂ ಸಿಕ್ಕಿಲ್ಲ. ಸೋಮವಾರ ರಾಗಿಣಿ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು ಇದೇ ಪ್ರಕರಣದಲ್ಲಿ ಮತ್ತೋರ್ವ ನಟಿ ಸಂಜನಾ ಗಲ್ರಾಣಿ ಅವರು ಸಹ ಬಂಧಿತರಾಗಿದ್ದರು. ಅವರು ಈ ಮೊದಲೇ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
  Published by:HR Ramesh
  First published: