ಬಿಜೆಪಿಗೆ ಕೈ ಕೊಟ್ಟರೇ ತುಪ್ಪದ ಬೆಡಗಿ ರಾಗಿಣಿ?; ಕಮಲ ಪಕ್ಷ ಸೇರ್ಪಡೆಯ ಸುದ್ದಿಗೋಷ್ಠಿ ರದ್ದಾಗಿದ್ದು ಏಕೆ?

ಇದೇ ವೇಳೆ ರಾಗಿಣಿ ಅವರನ್ನು ಕಾಂಗ್ರೆಸ್​ನವರು ಸೆಳೆದಿದ್ದಾರೆ ಎನ್ನುವ ಊಹಾಪೋಹಗಳು ಕೂಡ ಕೇಳಿಬರುತ್ತಿವೆ. ಒಂದು ಗಂಟೆ ಕಾದರೂ ರಾಗಿಣಿ ದ್ವಿವೇದಿ ಸ್ಥಳಕ್ಕೆ ಬರಲಿಲ್ಲ. ಇವರು ಬರುತ್ತಾರೆ ಎಂದು ಶಾಸಕ ಅಶ್ವತ್ಥ್​ ನಾರಾಯಣ್ ಮತ್ತು ವಕ್ತಾರೆ ಮಾಳವಿಕಾ ಒಂದು ಗಂಟೆ ಕಾದು ನಂತರ ಹೊರನಡೆದರು.

HR Ramesh | news18
Updated:April 14, 2019, 5:00 PM IST
ಬಿಜೆಪಿಗೆ ಕೈ ಕೊಟ್ಟರೇ ತುಪ್ಪದ ಬೆಡಗಿ ರಾಗಿಣಿ?; ಕಮಲ ಪಕ್ಷ ಸೇರ್ಪಡೆಯ ಸುದ್ದಿಗೋಷ್ಠಿ ರದ್ದಾಗಿದ್ದು ಏಕೆ?
ರಾಗಿಣಿ ದ್ವಿವೇದಿ
HR Ramesh | news18
Updated: April 14, 2019, 5:00 PM IST
ಬೆಂಗಳೂರು: ತುಪ್ಪದ ಬೆಡಗಿ ರಾಗಿಣಿ ಇಂದು ನಡೆಯಬೇಕಿದ್ದ ಬಿಜೆಪಿ ಸೇರ್ಪಡೆ ಸುದ್ದಿಗೋಷ್ಠಿ ದಿಢೀರನೇ ರದ್ದಾಗುವ ಮೂಲಕ ಕುತೂಹಲದ ಜೊತೆಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನಟಿ ರಾಗಿಣಿ ದ್ವಿವೇದಿ ಬಿಜೆಪಿ ಸೇರ್ಪಡೆಯ ಸುದ್ದಿಗೋಷ್ಠಿ ಇಂದು ಆಯೋಜನೆಯಾಗಿದ್ದು, ಆದರೆ, ಈ ಸುದ್ದಿಗೋಷ್ಠಿಗೆ ಪಕ್ಷದ ಮುಖ್ಯಸ್ಥರು ಸೇರಿದಂತೆ ಸ್ವತಃ ರಾಗಿಣಿ ಅವರೇ ಬಾರದಿದ್ದುದ್ದರಿಂದ ಸುದ್ದಿಗೋಷ್ಠಿಯನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ಕೇಳಲು ರಾಗಿಣಿ ಅವರಿಗೆ ಕರೆ ಮಾಡಿದರೂ ಅವರು ಪ್ರತಿಕ್ರಿಯಿ ಸಿಗಲಿಲ್ಲ.

ಸುದ್ದಿಗೋಷ್ಠಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಹಾಗೂ ಅರವಿಂದ್​ ಲಿಂಬಾವಳಿ ಆಗಮಿಸಬೇಕಿತ್ತು. ಆದರೆ, ಇಬ್ಬರೂ ನಾಯಕರು ಸುದ್ದಿಗೋಷ್ಠಿಗೆ ಹಾಜರಾಗಲಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ಸೇರ್ಪಡೆ ಕಾರ್ಯಕ್ರಮ ರದ್ದಾಗಿದೆ. ನಮ್ಮ ನಾಯಕರಾದ ಅರವಿಂದ ಲಿಂಬಾವಳಿ ತುರ್ತಾಗಿ ಚಾಮರಾಜನಗರ ಪ್ರವಾಸ ಕೈಗೊಂಡಿದ್ದಾರೆ. ಮುರಳೀಧರ್ ರಾವ್ ಕೂಡ ಲಭ್ಯರಿಲ್ಲ. ಹಾಗಾಗಿ ಇವತ್ತಿನ ಸೇರ್ಪಡೆ ಕಾರ್ಯಕ್ರಮ ರದ್ದಾಗಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಹೇಳಿಕೆ ನೀಡಿದರು.

ಇದನ್ನು ಓದಿ: ‘ನಿಖಿಲ್​ ಎಲ್ಲಿದ್ದೀಯಪ್ಪ’ ಎಂದರೆ ‘ನಮ್ಮ ಹೃದಯದಲ್ಲಿ ಅನ್ನಿ’ ಎಂದು ಯುವಕರಿಗೆ ಹೇಳಿಕೊಟ್ಟ ಸಿಎಂ ಎಚ್.ಡಿ.ಕುಮಾರಸ್ವಾಮಿ

ಇದೇ ವೇಳೆ ರಾಗಿಣಿ ಅವರನ್ನು ಕಾಂಗ್ರೆಸ್​ನವರು ಸೆಳೆದಿದ್ದಾರೆ ಎನ್ನುವ ಊಹಾಪೋಹಗಳು ಕೂಡ ಕೇಳಿಬರುತ್ತಿವೆ. ಒಂದು ಗಂಟೆ ಕಾದರೂ ರಾಗಿಣಿ ದ್ವಿವೇದಿ ಸ್ಥಳಕ್ಕೆ ಬರಲಿಲ್ಲ. ಇವರು ಬರುತ್ತಾರೆ ಎಂದು ಶಾಸಕ ಅಶ್ವತ್ಥ್​ ನಾರಾಯಣ್ ಮತ್ತು ವಕ್ತಾರೆ ಮಾಳವಿಕಾ ಒಂದು ಗಂಟೆ ಕಾದು ನಂತರ ಹೊರನಡೆದರು.

First published:April 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...