news18-kannada Updated:September 8, 2020, 9:57 PM IST
ಸಂಜನಾ, ರಾಗಿಣಿ
ಬೆಂಗಳೂರು(ಸೆ.09): ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನಟಿ ರಾಗಿಣಿ ಬೆನ್ನಲ್ಲೀಗ ಚಿತ್ರ ನಟಿ ಸಂಜನಾರನ್ನು ಬಂಧಿಸಿದ್ದಾರೆ. ಈ ಇಬ್ಬರು ನಟಿಯರನ್ನು ಈಗಾಗಲೇ ಕೋರ್ಟ್ ವಿಚಾರಣೆಗಾಗಿ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಹೀಗಾಗಿ ವಿಚಾರಣೆ ಬಳಿಕ ಇಬ್ಬರನ್ನು ಸಿಸಿಬಿ ಪೊಲೀಸರು ಒಂದೇ ಕಡೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ರಾತ್ರಿ ಉಳಿಯಲು ಕರೆದೊಯ್ಯುತ್ತಿದ್ದಾರೆ. ಇಷ್ಟು ದಿನ ಕೇವಲ ರಾಗಿಣಿ ಮಾತ್ರ ಈ ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಈಗ ಇವರ ಜತೆಗೆ ನಟಿ ಸಂಜನಾ ಕೂಡ ಇಲ್ಲೇ ವಾಸ್ತವ್ಯ ಮಾಡಬೇಕಾಗಿದೆ. ಇಬ್ಬರು ಸದ್ಯ ದುಶ್ಮನ್ಗಳು ಆಗಿದ್ದು, ಸಿಸಿಬಿ ಪೊಲೀಸರಿಗೆ ಭಾರೀ ತಲೆನೋವಾಗಿ ಪರಿಣಮಿಸಿದ್ದಾರೆ.
ನಟಿ ರಾಗಿಣಿ ಮತ್ತು ಸಂಜನಾರಿಗೆ ಐದು ಹಾಸಿಗೆಗಳಿರುವ ಕೊಠಡಿಯಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಇಬ್ಬರ ಭದ್ರತೆಗಾಗಿ ಮೂವರು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ರಾಗಿಣಿ ಮತ್ತು ಸಂಜನಾಗೆ ಕೊನೆಯ ಬೆಡ್ಗಳು ಸಿಗಲಿವೆ. ಮಧ್ಯದ ಮೂರು ಬೆಡ್ಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಆರಂಭದಿಂದಲೂ ರಾಗಿಣಿ ಮತ್ತು ಸಂಜನಾ ನಡುವೆ ವೈರತ್ವ ಇದೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೋದಿಲ್ಲ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗಿದೆ. ಈಗಾಗಲೇ ಇಬ್ಬರು ಪೊಲೀಸರ ಬಳಿ ಜಗಳ ಆಡುವ ರೀತಿ ವರ್ತಿಸಿದ್ಧಾರೆ. ಒಂದು ವೇಳೆ ರಾತ್ರಿ ವೇಳೆ ಕಿತ್ತಾಡಿಕೊಂಡರೆ ಏನ್ ಕಥೆ? ಎಂದು ಪೊಲೀಸರು ಹೀಗೆ ಭದ್ರತೆ ನಿಯೋಜಿಸಿದ್ದಾರೆ ಎಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ
ಈಗಾಗಲೇ ರಾಗಿಣಿ ಬಿಟ್ರೆ ನನ್ನ ಕುತ್ತಿಗೆ ಹಿಸುಕಿ ಸಾಯಿಸ್ತಾಳೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಹೀಗೆ ಮಾಡಲಾಗಿದೆ.
Published by:
Ganesh Nachikethu
First published:
September 8, 2020, 9:50 PM IST