• Home
  • »
  • News
  • »
  • state
  • »
  • Rapido ಚಾಲಕನ ವಿರುದ್ಧ ನಟಿಯಿಂದ ಸುಳ್ಳು ದೂರು ದಾಖಲು; ಡಿಸಿಪಿ ಸ್ಪಷ್ಟನೆ

Rapido ಚಾಲಕನ ವಿರುದ್ಧ ನಟಿಯಿಂದ ಸುಳ್ಳು ದೂರು ದಾಖಲು; ಡಿಸಿಪಿ ಸ್ಪಷ್ಟನೆ

ಹೆಣ್ಣೂರು ಪೊಲೀಸ್ ಠಾಣೆ

ಹೆಣ್ಣೂರು ಪೊಲೀಸ್ ಠಾಣೆ

ಮಹಿಳೆ ಮಾಡಿದ ಆರೋಪಗಳಲ್ಲಿ ಸತ್ಯ ಕಂಡುಬರದ ಹಿನ್ನೆಲೆ ಆರೋಪಿಯನ್ನು ಬಂಧಿಸಿಲ್ಲ. ಇದರಿಂದ ಮಹಿಳೆ ಪೊಲೀಸರ ಮೇಲೆ ಆರೋಪ ಮಾಡುತ್ತಿರಬಹುದು. ಸದ್ಯ ಸಂಬಂಧಪಟ್ಟ ಎಸಿಪಿ ಅವರಿಗೆ ತನಿಖೆಯ ಮೇಲ್ವಿಚಾರಣೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

  • News18 Kannada
  • Last Updated :
  • Bangalore, India
  • Share this:

ರಾಪಿಡೋ ಚಾಲಕನ (Rapido Driver) ವಿರುದ್ಧ ನಟಿ ಕಂ ಮಾಡೆಲ್ (Actress) ದಾಖಲಿಸಿದ್ದು ಸುಳ್ಳು ದೂರು ಎಂದು ಡಿಸಿಪಿ ಭೀಮಾ ಶಂಕರ್ ಗುಳೇದ್ (DCP Bhimashankar Huled) ಹೇಳಿದ್ದಾರೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ (Hennuru Police Station)ನಟಿ ದೂರು ದಾಖಲಿಸಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಪಿ ಭೀಮಾ ಶಂಕರ್ ಗುಳೇದ್, ದೂರು ದಾಖಲಿಸಿದ್ದ ಮಹಿಳೆ rapido ಚಾಲಕ ತನಗೆ ಲೈಂಗಿಕ ಕಿರುಕುಳ (Sexual Harassment) ನೀಡಿದ್ದಾನೆ ಎಂದು ಆರೋಪಿಸಿದ್ದರು. ಮಹಿಳೆ ನೀಡಿದ ದೂರಿನ  ಅನ್ವಯ ಎಫ್​ಐಆರ್ (FIR) ಸಹ ದಾಖಲು ಮಾಡಿಕೊಳ್ಳಲಾಗಿತ್ತು. ಪೊಲೀಸರು ತನಿಖೆ ಆರಂಭಿಸಿದಾಗ ಮಹಿಳೆ rapido ಬೈಕ್ ಬುಕ್  (rapido Bike booking) ಮಾಡಿ ನಂತರ ಕ್ಯಾನ್ಸಲ್ ಮಾಡಿರುತ್ತಾಳೆ. ಇನ್ನು ಮಹಿಳೆ ಆರೋಪ ಮಾಡಿರುವ ವ್ಯಕ್ತಿ ಆಕೆಯ ಬಳಿ ಬಂದಿರೋದ್ದಕ್ಕೆ ಯಾವುದೇ ಪುರಾವೆಗಳು ನಮಗೆ ಲಭ್ಯವಾಗಿಲ್ಲ. ಆ ವ್ಯಕ್ತಿ ಅಲ್ಲಿ ಹೋಗದಿರೋದಕ್ಕೆ ಇದೊಂದು ಸುಳ್ಳು ದೂರು ಎಂಬುವುದು ಪ್ರಾಥಮಿಕ ತನಿಖೆಯಲ್ಲಿ (Police Investigation) ತಿಳಿದು ಬಂದಿದೆ.


ದೂರು ಕೊಟ್ಟಾಗ ಸುಳ್ಳೋ ಅಥವಾ ಸತ್ಯ ಅನ್ನೋದು ನನಗೆ ಗೊತ್ತಿರಲ್ಲ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ನಂತರವೇ ನಮಗೆ ಪ್ರಕರಣದ ಸತ್ಯಾಂಶ ಗೊತ್ತಾಗುತ್ತದೆ. ಇಂತಹ ಗಂಭೀರವಾದ ಆರೋಪಗಳನ್ನು ಮಾಡಿ ದೂರು ಕೊಟ್ಟಾಗ ಕಂಪ್ಲೇಂಟ್ ರಿಜಿಸ್ಟರ್ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.


ತನಿಖೆಯ ಮೇಲ್ವಿಚಾರಣೆ ನಡೆಸಲು ಸೂಚನೆ


ಮಹಿಳೆ ಮಾಡಿದ ಆರೋಪಗಳಲ್ಲಿ ಸತ್ಯ ಕಂಡುಬರದ ಹಿನ್ನೆಲೆ ಆರೋಪಿಯನ್ನು ಬಂಧಿಸಿಲ್ಲ. ಇದರಿಂದ ಮಹಿಳೆ ಪೊಲೀಸರ ಮೇಲೆ ಆರೋಪ ಮಾಡುತ್ತಿರಬಹುದು. ಸದ್ಯ ಸಂಬಂಧಪಟ್ಟ ಎಸಿಪಿ ಅವರಿಗೆ ತನಿಖೆಯ ಮೇಲ್ವಿಚಾರಣೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.


ಬಿ ರಿಪೋರ್ಟ್​ ಸಲ್ಲಿಕೆ ಮಾಡಲಾಗುವುದು


ಮಹಿಳೆ ಯಾವ ಕಾರಣಕ್ಕೆ ವ್ಯಕ್ತಿಯ ಮೇಲೆ ಆರೋಪ ಮಾಡಿದ್ದಾರೆ ಎಂಬುವುದು ಗೊತ್ತಿಲ್ಲ. ನಾವು ಬಿ ರಿಪೋರ್ಟ್​ ಸಲ್ಲಿಕೆ ಮಾಡಿದ ಬಳಿಕ ಅದು ನ್ಯಾಯಾಲಯದ ಪರಿಧಿಗೆ ಬಿಟ್ಟ ವಿಚಾರ. ಒಬ್ಬ ವ್ಯಕ್ತಿಯ ವಿರುದ್ಧ ಸುಳ್ಳು ದೂರು ದಾಖಲು ಮಾಡಿದವರ ವಿರುದ್ಧ ಯಾವ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತೆ ಎಂದು ಹೇಳಿದರು.


ಯಾರು ಈ ದೂರುದಾರ ನಟಿ?


ದೂರುದಾರೆ ನಟಿ ಬೆಂಗಳೂರಿನ ಕೆಆರ್ ಪುರಂ ಹೂಡಿಯ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದು, ಜಕ್ಕೂರಿನಲ್ಲಿ ಡಬ್ಬಿಂಗ್ ಆರ್ಟಿಸ್ಟ್​ ಆಗಿ ಕೆಲಸ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ:  Suicide: ಹೆಂಡತಿ ದುಡ್ಡಿನಾಸೆಗೆ ಹೆಣವಾದ ಗಂಡ! ಬೆಂಗಳೂರಲ್ಲಿ ಪತ್ನಿ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ


ಮಹಿಳೆ ನೀಡಿದ ದೂರಿನಲ್ಲಿ ಏನಿತ್ತು?


ದಿನಾಂಕ 30/10/2022ರಂದು ರಾತ್ರಿ 10.30ಕ್ಕೆ ಹೆಣ್ಣೂರು ಸರ್ವಿಸ್ ರಸ್ತೆಯ ಗಣೇಶ ಟೆಂಪಲ್ ಹತ್ತಿರದ ಬಿಬಿಎಂಪಿ ಸಾರ್ವಜನಿಕ ಶೌಚಾಲಯದ ಮುಂದೆ ನಿಂತುಕೊಂಡು ಜಕ್ಕೂರಿನಿಂದ ಬಾಬುಸಾಪಾಳ್ಯಕ್ಕೆ ಹೋಗಲು rapido ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಕೆಎ 51 ಹೆಚ್ 5965 ಸಂಖ್ಯೆ ಬೈಕ್ ಬುಕ್ ಆಗಿದ್ದು, ಮಂಜುನಾಥ್ ತಿಪ್ಪೇಸ್ವಾಮಿ ಎಂಬ ಚಾಲಕ ಬಂದು ನಟಿಯನ್ನು ಪಿಕ್ ಮಾಡಿಕೊಂಡಿದ್ದಾನೆ.


ಆದ್ರೆ ಬೈಕ್ ಚಾಲಕ ಮಾರ್ಗ ಮಧ್ಯೆ ನಟಿಯ ಎದೆ ಹತ್ತಿರ ಮತ್ತು ತೊಡೆ ಸಮೀಪ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ.


ಇದನ್ನೂ ಓದಿ:  Hubballi: ಹಣೆಮಣೆ ಏರಿದ 75ರ ತಾತ-66ರ ಅಜ್ಜಿ; ಇದು ಮಾಜಿ ಮೇಯರ್ ಮ್ಯಾರೇಜ್​ ಸ್ಟೋರಿ


ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ನಟಿ


ಬೈಕ್ ಚಾಲಕ ಮಂಜುನಾಥ್ ತಿಪ್ಪೇಸ್ವಾಮಿ ಮತ್ತು Rapido ಟ್ಯಾಕ್ಸಿ ಕಂಪನಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Published by:Mahmadrafik K
First published: