ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾ , ಭಾರತ ಸೇರಿ ವಿದೇಶಗಳಲ್ಲಿ ತೆರೆಕಂಡಿದ್ದು, ಮೊದಲ ದಿನವೇ ರಾಕೀ ಬಾಯ್ ಗೆ ಪ್ರೇಕ್ಷಕರು ಸಲಾಂ ಹೊಡೆದಿದ್ದಾರೆ. ವಿಶ್ವದಾದ್ಯಂತ ರಿಲೀಸ್ (Release) ಆಗಿರೋ ಚಿತ್ರ ಕೋಲಾರದ ಕೆಜಿಎಫ್ ನಗರದಲ್ಲೇ ತೆರೆಕಂಡಿಲ್ಲ. ಕೆಜಿಎಫ್ನಲ್ಲೇ ಅರ್ಧ ಭಾಗದ ಶೂಟಿಂಗ್ ಮಾಡಲಾಗಿದೆ. ಕೆಜಿಎಫ್ನಲ್ಲಿ ಚಿತ್ರ ಬಿಡುಗಡೆ ಆಗದಿರೋದು ಅಲ್ಲಿನ ಯಶ್ ಅಭಿಮಾನಿಗಳಿಗೆ (Fans) ಬೇಸರ ಮೂಡಿಸಿದೆ. ಆದ್ರೆ ಕೆಜಿಎಫ್ ನಗರದಲ್ಲೇ (KGF City) ಯಾಕೆ ಫಿಲಂ ರಿಲೀಸ್ ಆಗಿಲ್ಲ ಅನ್ನೋದೆ ಅಭಿಮಾನಿಗಳ ಪ್ರಶ್ನೆಯಾಗಿದೆ.
ಕೆಜಿಎಫ್ ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ
ಚಿತ್ರದ ಮೇಕಿಂಗ್, ಎಫೆಕ್ಟ್, ಡೈಲಾಗ್ಸ್, ಆ್ಯಕ್ಷನ್ ಹಾಲಿವುಡ್ ರೇಂಜ್ ನಲ್ಲಿದೆ ಎಂದು ಅಭಿಮಾನಿಗಳು ಚಿತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಕೋಲಾರ ಜಿಲ್ಲೆಯ ಚಿನ್ನದ ಗಣಿ ಪ್ರದೇಶವಾದ ಕೆ.ಜಿ.ಎಪ್ ಹೆಸರಿನಲ್ಲೆ ಚಿತ್ರದ ಎರಡೂ ಭಾಗಗಳನ್ನು ಚಿತ್ರೀಕರಣ ಮಾಡಿದ್ದು, ಕೆಜಿಎಫ್ ನ ಮೊದಲ ಭಾಗದಂತೆ ಎರಡನೇ ಭಾಗವೂ ಭರ್ಜರಿಯಾಗಿ ತೆರೆಕಂಡಿದೆ, ಕೆಜಿಎಫ್ ನ ಚಿನ್ನದಗಣಿಯ ಸೈನೆಡ್ ಗುಡ್ಡದಲ್ಲಿ ಕೆಜಿಎಪ್ ಸಿನಿಮಾ ಶೇಕಡಾ 50 ರಷ್ಟು ಚಿತ್ರೀಕರಣ ಆಗಿದ್ದು,
ಉಳಿದ ಭಾಗ ಹೈದ್ರಾಬಾದ್ ಹಾಗು ಮೈಸೂರಿನಲ್ಲಿ ಚಿತ್ರೀಕರಿಸಲಾಗಿದೆ, ಆದರೆ ಕೆಜಿಎಪ್ ಹೆಸರು ಕೇಳುತ್ತಿದ್ದಂತೆ ದೇಶ, ವಿದೇಶಗಳಲ್ಲು ಚಿನ್ನದ ಗಣಿ ಪ್ರದೇಶ ಎಂಬ ಹೆಗ್ಗಳಿಕೆಯನ್ನ ಕೋಲಾರ ಜಿಲ್ಲೆ ಹೊಂದಿದೆ, ಚಿತ್ರದಲ್ಲಿ ಚಿನ್ನದ ವಹಿವಾಟು ಕುರಿತು ಕಥೆ ಎಣಿದಿರುವ ನಿರ್ದೇಶಕರು, ಚಿನ್ನದಗಣಿ ಪ್ರದೇಶವನ್ನೆ ಚಿತ್ರದ ಪ್ರಮುಖ ಭಾಗವಾಗಿಸಿದ್ದಾರೆ
ಇದನ್ನೂ ಓದಿ: ಬುಕ್ ಮೈ ಶೋ -IMDB ಗಳಲ್ಲಿಯೂ KGF 2 ಹವಾ, ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಲಿದ್ದಾನಾ ರಾಕಿಬಾಯ್?
ಕೆಜಿಎಫ್ ನಗರದಲ್ಲೇ ತೆರೆಕಾಣದ ಕೆಜಿಎಫ್ ಚಾಪ್ಟರ್ 2 ಸಿನಿಮಾ
ಕೆಜಿಎಫ್ ಸಿನಿಮಾ ಮೊದಲ ಭಾಗ ಕೆಜಿಎಫ್ ನಗರದ ಒಲಂಪಿಯಾ ಥಿಯೇಟರ್ ನಲ್ಲಿ ತೆರೆಕಂಡು ಭರ್ಜರಿ ಪ್ರದರ್ಶನ ಕಂಡಿತ್ತು, ಆದರೆ ಇದೇ ಥಿಯೇಟರ್ ನಲ್ಲೀಗ ತಮಿಳಿನ ಸ್ಟಾಕ್ ನಟ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ, ಆದರೆ ಇದೇ ಥಿಯೇಟರ್ ಮಾಲೀಕ ಸಂತೋಷ್, ಕೆಜಿಎಪ್ ಚಾಪ್ಟರ್ 2 ಸಿನಿಮಾ ಬಿಡುಗಡೆಗೆ ಪ್ರಯತ್ನಿಸಿದ್ದಾರೆ, ಆದರೆ ಕೋಲಾರದ ಬಂಗಾರಪೇಟೆ ನಗರದ ಬಾಲಚಂದರ್ ಸಿನಿಮಾ ಥಿಯೇಟರ್ ಮಾಲೀಕರು, 30 ಲಕ್ಷ ಹಣ ನೀಡಿ ಸಿನಿಮಾ ಪಡೆದುಕೊಂಡಿದ್ದು, ಅದರ ಜೊತೆಗೆ ಕೆಜಿಎಫ್ ನಗರದಲ್ಲಿ ಸಿನಿಮಾ ಪ್ರದರ್ಶನ ಹಕ್ಕನ್ನ ಯಾವುದೇ ಥಿಯೇಟರ್ ಗೂ ನೀಡಬಾರದು ಎಂಬ ಷರತ್ತನ್ನ, ವಿತರಕರ ಬಳಿ, ಸಿನಿಮಾ ಥಿಯೇಟರ್ ನವರು ಹೇಳಿದ್ದಾರೆಂದು ಕೆಜಿಎಪ್ ನಗರದ ಒಲಂಪಿಯಾ ಥಿಯೇಟರ್ ಮಾಲೀಕ ಸಂತೋಷ್ ಆರೋಪಿಸಿದ್ದಾರೆ,
ಇದನ್ನೂ ಓದಿ: ಇಂದು ರಾಜ್ಯಾದ್ಯಂತ KGF 2 ಅಬ್ಬರ ಶುರು, 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ರಾಕಿ ಬಾಯ್ ಆರ್ಭಟ
ದೂರವಾಣಿ ಮೂಲಕ ಸಂಪರ್ಕಕ್ಕೆ ಸಿಗ್ತಿಲ್ಲ ಮಾಲೀಕರು
ಈ ಬಗ್ಗೆ ಪ್ರಶ್ನೆ ಮಾಡಲು ಬಂಗಾರಪೇಟೆಯ ಬಾಲಚಂದರ್ ಥಿಯೇಟರ್ ಮಾಲೀಕರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದರು ಸ್ಪಂದನೆ ನೀಡುತ್ತಿಲ್ಲ, ಅಧಿಕ ಲಾಭಕ್ಕಾಗಿ ಕೆಜಿಎಫ್ ನಗರದ ಪಕ್ಕದಲ್ಲೆ ಇರುವ ಬಂಗಾರಪೇಟೆ ಥಿಯೇಟರ್ ನವರು ಹೀಗೆ ಮಾಡಿದ್ದಾರೆಂದು ಒಲಂಪಿಯಾ ಥಿಯೇಟರ್ ನವರು ಆರೋಪಿಸಿದ್ದಾರೆ, ಇದೀಗ ಮೊದಲ ದಿನ ಕೆಜಿಎಫ್ ಸಿನಿಮಾ ಪ್ರದರ್ಶನ ಕಾಣದೆ ಅಭಿಮಾನಿಗಳು ಬಂಗಾರಪೇಟೆ ನಗರಕ್ಕೆ ಹೋಗಿ ಸಿನಿಮಾ ನೋಡುವಂತಾಗಿದ್ದು, ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ,
ಮುಂದೆಯು ಚಿತ್ರ ಪ್ರದರ್ಶನ ಆಗುವ ಬಗ್ಗೆ ಒಲಂಪಿಯಾ ಥಿಯೇಟರ್ ಮಾಲೀಕರು ಖಚಿತ ಮಾಹಿತಿ ತಿಳಿಸಿಲ್ಲ, ಮೊದಲು ವಿತರಕರು 30 ಲಕ್ಷ ರೂಪಾಯಿ ಹಣ ಕೇಳಿದ್ದು, ಇದು ತುಂಬಾ ದೊಡ್ಡ ಮೊತ್ತ ಹೀಗಾದರೆ ಸಿನಿಮಾ ಕೊಂಡು ಥಿಯೇಟರ್ ನಡೆಸುವುದು ಕಷ್ಟಕರ, ಕಡಿಮೆ ಬೆಲೆಗೆ ನೀಡಿದರು ಸಿನಿಮಾ ಪ್ರದರ್ಶನ ಮಾಡುತ್ತೇವೆ ಎಂದು ಥಿಯೇಟರ್ ಮಾಲೀಕ ಸಂತೋಶ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ