ವಿಶ್ವಪ್ರಸಿದ್ದ ಹಂಪಿ ಉತ್ಸವದಲ್ಲಿ ಯಶ್ ಹವಾ; ಕೆಜಿಎಫ್ ಡೈಲಾಗ್, ಹಂಪಿ ಬಗ್ಗೆ ಯಶ್‌ ಹೇಳಿದ್ದೇನು?

ರಾಕಿಂಗ್ ಸ್ಟಾರ್ ಕೆಜಿಎಫ್ ಸಿನಿಮಾದ ಡೈಲಾಗ್ ಹೊಡೆದು ಪ್ರೇಕ್ಷಕರನ್ನ ರಂಚಿಸಿದ್ರು. ನಾನು ಮೈಸೂರಿನವರು. ಹಂಪಿಯಲ್ಲಿರುವ ನೀವು ಪುಣ್ಯವಂತರು. ನಮ್ಮ ಸಂಸ್ಕೃತಿ ಉಳಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯವೆಂದು ಪ್ರೇಕ್ಷಕರಿಗೆ ನಟ ಯಶ್ ಸಲ

news18-kannada
Updated:January 11, 2020, 6:07 PM IST
ವಿಶ್ವಪ್ರಸಿದ್ದ ಹಂಪಿ ಉತ್ಸವದಲ್ಲಿ ಯಶ್ ಹವಾ; ಕೆಜಿಎಫ್ ಡೈಲಾಗ್, ಹಂಪಿ ಬಗ್ಗೆ ಯಶ್‌ ಹೇಳಿದ್ದೇನು?
ಹಂಪಿ ಉತ್ಸವದಲ್ಲಿ ನಟ ಯಶ್​​ ಅವರನ್ನು ಸನ್ಮಾನಿಸಲಾಯಿತು
  • Share this:
ಬಳ್ಳಾರಿ(ಜ.11) : ವಿಶ್ವವಿಖ್ಯಾತ ಹಂಪಿಯಲ್ಲಿ ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂದಿನಂತೆ ಮನೆ ಮಾತಾದವು. ಪ್ರಾಣೇಶ್ ಮತ್ತು ಅವರ ತಂಡ ನಡೆಸಿಕೊಟ್ಟ ಕಾಮಿಡಿ ಕಲರವ ಜನರ ಕಚಗುಳಿ ಇರಿಸಿತು. ಇದೆಲ್ಲದಕ್ಕೂ ಮುಖ್ಯವಾಗಿ ಕಾರ್ಯಕ್ರಮದ ಕೇಂದ್ರ ಬಿಂದು ರಾಕಿಂಗ್ ಸ್ಟಾರ್ ಯಶ್ ಆಗಮನ ಪ್ರೇಕ್ಷಕರ ಮನೆಸೂರೆಗೊಂಡಿತು. ಕೆಜಿಎಫ್ ಸಿನಿಮಾದ ಡೈಲಾಗ್ ಗೆ ರಾಕಿ ಬಾಯ್ ಅಭಿಮಾನಿಗಳು ಹುಚ್ಚೆದ್ದು ಕುಣಿದರು.

ವಿಶ್ವವಿಖ್ಯಾತ ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವದ ಮೊದಲ ದಿನವಾದ ನಿನ್ನೆ ಉತ್ಸವ ರಂಗೇರಿತ್ತು.ಕಲಾವಿದರ ನೃತ್ಯ ಗಾಯನಕ್ಕೆ ಪ್ರೇಕ್ಷಕರು ಫೀದಾ ಆಗಿದ್ರು. ರಾಜಾಹುಲಿ ಸಿಎಂ ಬಿಎಸ್ ಯಡಿಯೂರಪ್ಪ ನವರು ಹಂಪಿ ಉತ್ಸವ ಉದ್ಘಾಟನೆ ಬಳಿಕ ಮತ್ತೊಬ್ಬ ರಾಜಾಹುಲಿ ರಾಕಿಂಗ್ ಸ್ಟಾರ್ ಹಂಪಿ ಉತ್ಸವ ವೇದಿಕೆಗೆ ಎಂಟ್ರಿ ಕೊಟ್ರು. ಯಶ್ ವೇದಿಕೆ ಮೇಲೆ ಬರುತ್ತಿದ್ದಂತಿಯೇ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ರು. ಸಿಳ್ಳೆ, ಚಪ್ಪಾಳೆ ಮೂಲಕ ಅಭಿಮಾನಿಗಳು ತನ್ನ ನೆಚ್ಚಿನ ನಾಯಕ ಯಶ್ ಗೆ ಸ್ವಾಗತಿಸಿದರು.

ಈ ವೇಳೆ ರಾಕಿಂಗ್ ಸ್ಟಾರ್ ಕೆಜಿಎಫ್ ಸಿನಿಮಾದ ಡೈಲಾಗ್ ಹೊಡೆದು ಪ್ರೇಕ್ಷಕರನ್ನ ರಂಜಿಸಿದ್ರು. ನಾನು ಮೈಸೂರಿನವರು. ಹಂಪಿಯಲ್ಲಿರುವ ನೀವು ಪುಣ್ಯವಂತರು. ನಮ್ಮ ಸಂಸ್ಕೃತಿ ಉಳಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯವೆಂದು ಪ್ರೇಕ್ಷಕರಿಗೆ ನಟ ಯಶ್ ಸಲಹೆ ನೀಡಿದರು.

ಇನ್ನು ಹಂಪಿ ಉತ್ಸವದ ಮೊದಲ ದಿನ ಪ್ರಮುಖ ವೇದಿಕೆ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಖ್ಯಾತ ಕೊಳಗುವಾದಕ ಪ್ರವೀಣ್ ಗೋಡ್ಖಿಂಡಿಯ ಕೊಳಲುವಾದನಕ್ಕೆ ಜನರು ತಲೆದೂಗಿದರು. ಇದಕ್ಕೂ ಮುಂಚೆ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ಬಸವರಾಜ್ ಬೆಣ್ಣೆ ಸೇರಿದಂತೆ ಹಲವು ಕಾಮಿಡಿ ಕಲಾವಿದರ ಹಾಸ್ಯದ ಚಟಾಕಿಗಳು ಪ್ರೇಕ್ಷಕರನ್ನ ನಗುವಿನ ಕಡಲಲ್ಲಿ ತೇಲಿಸಿದರು.

ಇದನ್ನೂ ಓದಿ : ಕಾಂಗ್ರೆಸ್ ಮನೆ ಕೊಟ್ಟರೆ, ಬಿಜೆಪಿ ಅದನ್ನು ಕಿತ್ತುಕೊಳ್ಳೋ ಕೆಲಸ ಮಾಡ್ತಿದೆ ; ಈಶ್ವರ್ ಖಂಡ್ರೆ ಕಿಡಿ

ಕಾರ್ಯಕ್ರಮದಲ್ಲಿ ಕೊನೆಯಲ್ಲಿ ವೇದಿಕೆಗೆ ಎಂಟ್ರಿಕೊಟ್ಟ ಸಂಗೀತ ನಿರ್ದೇಶಕ ಮನೋಮೂರ್ತಿ ನೇತೃತ್ವದ ತಂಡ ಹಾಡುಗಳಿಗೆ ಪ್ರೇಕ್ಷಕರು ಫುಲ್ ಫೀದಾ ಆಗಿದ್ರು. ಅಲ್ಲದೇ ಕಲಾರಸಿಕರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಹಂಪಿ ಉತ್ಸವಕ್ಕೆ ಈಗ ಜನಸಾಗರವೇ ಹರಿಬರುತ್ತಿದ್ದು, ಉತ್ಸವಕ್ಕೆ ಕಳೆ ಬಂದಿದೆ.

ಗತವೈಭದ ನಾಡಿನಲ್ಲಿ ಈಗ ಕಲಾವಿದರಿಂದ ರಂಗಿನ ಸಾಂಸ್ಕೃತಿಕ ಲೋಕವೇ ಸೃಷ್ಟಿಯಾಗುತ್ತಿದೆ. ಹಂಪಿ ಉತ್ಸವದ ಪ್ರತಿಯೊಂದ ಕಾರ್ಯಕ್ರಮಗಳು ನೋಡುಗರ ಕಣ್ಣಿಗೆ ಕಟ್ಟುವಂತಿವೆ. ಅದೇ ಏನೇ ಇರಲೀ ವಿಶ್ವವಿಖ್ಯಾತ ಹಂಪಿಯಲ್ಲೀಗ ಕಲಾರಸಿಕರಿಗೆ ರಸದೌತಣ.
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ