ಹಾವೂ ಸಾಯಬಾರದು, ಕೋಲೂ ಮುರಿಯಬಾರದು: ಸುಪ್ರೀಂ ತೀರ್ಪಿಗೆ ಪ್ರಕಾಶ್ ರಾಜ್​ ಮಾರ್ಮಿಕ ಪ್ರತಿಕ್ರಿಯೆ

SC Verdict on Disqualified MLAs; ಸುಪ್ರೀಂ ಕೋರ್ಟ್​ನ ಈ ತೀರ್ಪಿನ ಕುರಿತು ಮಾರ್ಮಿಕವಾಗಿ ಟ್ವೀಟ್​ ಮಾಡಿರುವ ನಟ, ರಾಜಕಾರಣಿ ಪ್ರಕಾಶ್​ ರಾಜ್​, ಇದು ಹಾವು ಸಾಯಬಾರದು, ಕೋಲು ಮುರಿಯಬಾರದು ಎನ್ನುವಂತಿದೆ ಎಂದಿದ್ದಾರೆ.

ಪ್ರಕಾಶ್ ರೈ

ಪ್ರಕಾಶ್ ರೈ

  • Share this:
ಬೆಂಗಳೂರು (ನ. 13): 15 ನೇ ಲೋಕಸಭಾ ಅವಧಿಗೆ ಶಾಸಕರು ಸ್ಪರ್ಧಿಸುವಂತಿಲ್ಲ ಎಂದು ಅವರ ತೀರ್ಪು ನೀಡಿ ರಾಜೀನಾಮೆ ನೀಡಿದ 17 ಶಾಸಕರನ್ನು ಅನರ್ಹತೆಗೊಳಿಸಿ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಆದೇಶ ನೀಡಿದ್ದರು. ಈ ತೀರ್ಮಾನ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಅನರ್ಹ ಶಾಸಕರು ನಿಟ್ಟುಸಿರುವ ಬಿಡುವಂತೆ ತೀರ್ಪು ಹೊರ ಬಂದಿದೆ. ಅನರ್ಹತೆಯನ್ನು ಎತ್ತಿ ಹಿಡಿದರು, ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪು ನೀಡುವ ಮೂಲಕ ಸುಪ್ರೀಂ ಕೋರ್ಟ್​ ಅನರ್ಹರ ರಾಜಕೀಯ ಭವಿಷ್ಯಕ್ಕೆ ಮತ್ತೊಂದು ಅವಕಾಶ ನೀಡಿದೆ. 

ಸುಪ್ರೀಂ ಕೋರ್ಟ್​ನ ಈ ತೀರ್ಪಿನ ಕುರಿತು ಮಾರ್ಮಿಕವಾಗಿ ಟ್ವೀಟ್​ ಮಾಡಿರುವ ನಟ, ರಾಜಕಾರಣಿ ಪ್ರಕಾಶ್​ ರಾಜ್​, ಇದು ಹಾವು ಸಾಯಬಾರದು, ಕೋಲು ಮುರಿಯಬಾರದು ಎನ್ನುವಂತಿದೆ ಎಂದಿದ್ದಾರೆ.ಇತ್ತ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಂತೆಯೂ ಇರಬೇಕು. ಅತ್ತ ಅನರ್ಹರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ನೀಡಬೇಕು ಎಂಬಂತೆ ತೀರ್ಪು ಪ್ರಕಟವಾಗುವ ಮೂಲಕ ಅನರ್ಹರಿಗೆ ತೃಪ್ತಿಯಾಗುವ ತೀರ್ಪು ಹೊರಬಿದ್ದಿದೆ. 136 ದಿನಗಳ ಕಾಲ ತಮ್ಮ ಅನರ್ಹತೆ ಪ್ರಶ್ನಿಸಿ ಚಾತಕ ಪಕ್ಷಿಯಂತೆ ಕಾದ ಅನರ್ಹರಿಗೆ ಇದು ಎಲ್ಲವೂ ಒಳ್ಳೆಯದೇ ಆಗಿದೆ ಎಂದು ತಮ್ಮ ಟ್ವೀಟ್​ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ತೀರ್ಪು ಸ್ವಾಗತಿಸುತ್ತೇವೆ; ಸಂಜೆಯೊಳಗೆ ಮುಂದಿನ ನಡೆ ಕುರಿತು ನಿರ್ಧಾರ; ಅನರ್ಹ ಶಾಸಕರು

ಸುಪ್ರೀಂಕೋರ್ಟ್​ ತೀರ್ಪಿನ ಆದೇಶದಂತೆ ಈಗ ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸುತ್ತಾರೆ. ಆದರೆ, ಅವರಿಗೆ ಸರಿಯಾಗಿ ಪಾಠ ಹೇಳಬೇಕಾಗಿರುವುದು. ಮತದಾರರು. ತಮ್ಮ ಲಾಭಾಕ್ಕಾಗಿ ತಮ್ಮನ್ನು ಗೆಲ್ಲಿಸಿದ ಜನರನ್ನು ಮರೆತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸಕರಿಗೆ ಈಗ ಮತ್ತೊಂದು ಅವಕಾಶ ತೊರೆದಿದೆ. ಆದರೆ, ಈ ಅವಕಾಶದಲ್ಲಿ ಅವರು ಮಾಡಿದ ತಪ್ಪನ್ನು ಜನರು ಎಚ್ಚರಿಸಬೇಕು. ಜನರ ತೆರಿಗೆ ಹಣವನ್ನು ಉಪಚುನಾವಣೆ ಹೆಸರಿನಲ್ಲಿ ಫೋಲು ಮಾಡುವ, ಅಸ್ಥಿರ ರಾಜಕೀಯ ವ್ಯವಸ್ಥೆ ನಿರ್ಮಾಣ ಮಾಡುವ ಶಾಸಕರಿಗೆ ತಕ್ಕ ಪಾಠ ಕಲಿಸುವ ಜವಾಬ್ದಾರಿ ಜನರ ಮೇಲಿದೆ. ಮತದಾರರು ಅವರು ಜನ್ಮ ಜನ್ಮಕ್ಕೂ ಮರೆಯದೇ ಇರುವಂತಹ ತೀರ್ಪು ನೀಡಿ ತಮ್ಮ ಹೊಣೆ ನಿರ್ವಹಿಸಬೇಕು ಎಂದು ಮತದಾರರಲ್ಲಿ ವಿನಂತಿ ಮಾಡಿದ್ದಾರೆ.
First published: