RIP Puneeth Rajkumar; ನಮ್ಮ ಹೃದಯಗಳಲ್ಲಿ ಅಪ್ಪು ನಗ್ತಾರೆ: ಕಣ್ಣೀರು ಹಾಕುತ್ತಲೇ ತೆರಳಿದ ನಟ ಸೂರ್ಯ

ಇದು ದೇವರು ಮಾಡಿದ ಅನ್ಯಾಯ,  ಅಪ್ಪು ಅಗಲಿಕೆ ಸಹಿಸಲಾಗದು. ಅಣ್ಣಾವ್ರು ನನಗೆ ಮಾದರಿಯಾಗಿದರು. ನನಗೆ ನಾಲ್ಕು ತಿಂಗಳು ಇದ್ದಾಗ, ಅಪ್ಪುಗೆ ಏಳು ತಿಂಗಳು. ನಮ್ಮ ಹಳೆಯ ಫೋಟೋಗಳಲ್ಲಿ ಅಪ್ಪು ಯಾವಾಗಲೂ ನಗುತ್ತಿದ್ದರು. ಈಗ ನಮ್ಮ ಹೃದಯಗಳಲ್ಲಿ ಅಪ್ಪು ನಗುತ್ತಾರೆ. ಎಲ್ಲ ಕನ್ನಡಿಗರಿಗೂ ನಾನು ಏನು ಹೇಳಬೇಕೋ ತೋಚುತ್ತಿಲ್ಲ

ನಟ ಸೂರ್ಯ

ನಟ ಸೂರ್ಯ

  • Share this:
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Rajkumar) ನಿಧನದ ಸುದ್ದಿಯನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಎರಡು ದಿನಗಳಿಂದ ಅಪ್ಪು ಸಮಾಧಿ ಸ್ಥಳಕ್ಕೆ ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿದೆ, ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಅಭಿಮಾನಿಗಳು ಅಪ್ಪು ಸಮಾಧಿಗೆ ತೆರಳಿ ನಮನ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದ ಹಲವು ಕಲಾವಿದರು ಸಮಾಧಿಯತ್ತ ಆಗಮಿಸುತ್ತಿದ್ದಾರೆ. ಇಂದು ಅಪ್ಪು ಸಮಾಧಿ ಬಳಿ ಆಗಮಿಸಿದ ನಟ ಸೂರ್ಯ (Actor Suriya), ಇನ್ಮುಂದೆ ಅಪ್ಪು ನಮ್ಮ ಎಲ್ಲರ ಹೃದಯದಲ್ಲಿ ಇರುತ್ತಾರೆ ಎಂದು ಹೇಳುತ್ತಾ ಕಣ್ಣೀರು ಹಾಕುತ್ತಲೇ ಹೊರಟರು.

ಏನು ಹೇಳಬೇಕು ತೋಚುತ್ತಿಲ್ಲ ಎಂದು ಕಣ್ಣೀರಿಟ್ಟ ಸೂರ್ಯ

ಇದು ದೇವರು ಮಾಡಿದ ಅನ್ಯಾಯ,  ಅಪ್ಪು ಅಗಲಿಕೆ ಸಹಿಸಲಾಗದು. ಅಣ್ಣಾವ್ರು ನನಗೆ ಮಾದರಿಯಾಗಿದರು. ನನಗೆ ನಾಲ್ಕು ತಿಂಗಳು ಇದ್ದಾಗ, ಅಪ್ಪುಗೆ ಏಳು ತಿಂಗಳು. ನಮ್ಮ ಹಳೆಯ ಫೋಟೋಗಳಲ್ಲಿ ಅಪ್ಪು ಯಾವಾಗಲೂ ನಗುತ್ತಿದ್ದರು. ಈಗ ನಮ್ಮ ಹೃದಯಗಳಲ್ಲಿ ಅಪ್ಪು ನಗುತ್ತಾರೆ. ಎಲ್ಲ ಕನ್ನಡಿಗರಿಗೂ ನಾನು ಏನು ಹೇಳಬೇಕೋ ತೋಚುತ್ತಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ಮತ್ತು ಧೈರ್ಯ ನೀಡಲಿ ಎಂದು ಕಣ್ಣೀರು ಹಾಕಿದರು. ಸಮಾಧಿ ಸ್ಥಳದಿಂದ ನೇರವಾಗಿ ಪುನೀತ್ ನಿವಾಸಕ್ಕೆ ತೆರಳಿದ ಸೂರ್ಯ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಅಪ್ಪು ಕುಟುಂಬಕ್ಕೆ ಸಾಂತ್ವಾನ ಹೇಳಿದ ರಾಜೇಂದ್ರ ಪ್ರಸಾದ್

ಪುನೀತ್ ರಾಜಕುಮಾರ್ ನನಗೆ ಸ್ವಂತ ಸಹೋದರನ ಸಮ.  ಅವರ ನಿಧನ ನನಗೆ ಜೀರ್ಣೀಸಿಕೊಳ್ಳಲು ಆಗಿಲ್ಲ. ಅವರು ಒಳ್ಳೆಯ ದೊಡ್ಡ ಸೂಪರ್ ಸ್ಟಾರ್ ಎಂಬುದು ಎಲ್ಲರಿಗೂ ಗೊತ್ತು.  ಅಪ್ಪು ನಿಧನದಿಂದ ತೆಲುಗು ಸಿನಿಮಾ ರಂಗಕ್ಕೆ ಸಾಕಷ್ಟು ನೋವಾಗಿದೆ. ಅಪ್ಪು ಮೃತಪಟ್ಟ ದಿನ ಅಭಿಮಾನಿಗಳು ಹೆಚ್ಚಾಗಿದ್ರು,ಅದಕ್ಕೆ ಬರಲಿಲ್ಲ ಎಂದು ಹಿರಿಯ ನಟ ರಾಜೇಂದ್ರ ಪ್ರಸಾದ್ ಭಾವುಕರಾದರು.

ಇದನ್ನೂ ಓದಿ:  Basavashree Award : ನಟ ಪುನೀತ್​ ರಾಜ್​ ಕುಮಾರ್​ಗೆ ಬಸವಶ್ರೀ ಪ್ರಶಸ್ತಿ ಘೋಷಣೆ

25 ಲಕ್ಷ ಜನ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅದರಲ್ಲಿ ಗೊತ್ತಾಗುತ್ತೆ ಅವರು ಎಂತಹ ಅಧ್ಭುತ ವ್ಯಕ್ತಿ ಎಂಬುದು ಗೊತ್ತಾಗುತ್ತೆ ಎಂದರು.  ನನ್ನ ಸ್ವಂತ ತಮ್ಮ ಹೋಗಿರುವ ಫೀಲ್ ಆಗುತ್ತಿದೆ. ಕಂಠೀರವದಲ್ಲಿ ಶೂಟಿಂಗ್ ಮಾಡುವಾಗ ರಾಘಣ್ಣ ಮಗನ ಮದುವೆಗೆ ಆಮಂತ್ರಣ ನೀಡಿದ್ರು ಎಂದು ರಾಜೇಂದ್ರ ಪ್ರಸಾದ್ ಹೇಳಿದರು.

ಅಪ್ಪು ಅಗಲಿಕೆ ನೋವಲ್ಲಿ 10 ಅಭಿಮಾನಿಗಳ ಸಾವು

ಅಪ್ಪು ಅಗಲಿಕೆಯ ನೋವನ್ನು ಸಹಿಸಿಕೊಳ್ಳಲಾಗದೇ ರಾಜ್ಯದಲ್ಲಿ ಒಟ್ಟು 10  ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 6 ಮಂದಿ ಹೃದಯಾಘಾತದಿಂದ ಕೊನೆಯಿಸಿರೆಳೆದಿದ್ದಾರೆ. ಮಂಡ್ಯದಲ್ಲಿ ಇಬ್ಬರು ಅಭಿಮಾನಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.  ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ಕೆ.ಎಂ.ರಾಜೇಶ್ (50) ಪುನೀತ್ ನಿಧನದ ಬಳಿಕ ಸರಿಯಾಗಿ ಊಟ ಸೇವಿಸದೇ ಅಸ್ವಸ್ಥರಾಗಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ  ರಾಜೇಶ್​​ ಮೃತಪಟ್ಟಿದ್ದರು. ಇನ್ನೂ ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದ ಮತ್ತೊಬ್ಬಅಪ್ಪು ಅಭಿಮಾನಿ ವೈ.ಎಸ್.ಸುರೇಶ್ ಹೃದಯಾಘಾತದಿಂದ ಮೃತಪಟ್ಟಿದ್ದರು.

ಇದನ್ನೂ ಓದಿ:  RIP Puneeth Rajkumar: ಆತ್ಮಹತ್ಯೆ ನಿರ್ಧಾರ ಮಾಡದಂತೆ ಅಭಿಮಾನಿಗಳಲ್ಲಿ ಶಿವಣ್ಣ, ರಾಘಣ್ಣ ಮನವಿ

ಅಭಿಮಾನಿಗಳಲ್ಲಿ ಶಿವಣ್ಣ ಮನವಿ

ನಾವು ನೋವಿನಲ್ಲಿ ಇದ್ದೇವೆ ಪುನೀತ್ ಗೆ ಕೆಟ್ಟ ಹೆಸರು ತರಬೇಡಿ. ಒಬ್ಬರ ಹಿಂದೆ ಒಬ್ಬರು ಹೋದ್ರೆ ಭೂಮಿ ಮೇಲೆ ಯಾರು ಇರಲ್ಲ.. ಸಣ್ಣ ಮಕ್ಕಳಿಗೆ ಇದನ್ನೇ ಹೇಳಿಕೊಡ್ತೀರ. ನಿಮ್ಮ ಪಾದಕ್ಕೆ ನಮಸ್ಕರಿಸುತ್ತೇನೆ, ದುಡುಕಿನ ನಿರ್ಧಾರ ಮಾಡಬೇಡಿ. ಯಾರೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಶಿವಣ್ಣ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

ಕಂಠೀರವ ಸ್ಟುಡಿಯೋಗೆ ಸಾರ್ವಜನಿಕರ ಪ್ರವೇಶಕಕ್ಕೆ ಅನುಮತಿ ಕಲ್ಪಿಸಲಾಗಿದೆ. ಜನರು ಸಾಲಿನಲ್ಲಿ ಬಂದು ನೆಚ್ಚಿನ ನಟನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
Published by:Mahmadrafik K
First published: