ರಾಯಚೂರು: ನಟ ಸುದೀಪ್ (Kichcha Sudeepa) ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇವತ್ತು ರಾಯಚೂರಿನ (Raichuru) ದೇವದುರ್ಗಕ್ಕೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಾಗ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಹೆಲಿಪ್ಯಾಡ್ಗೆ ನುಗ್ಗಿದ್ದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಣ ಮಾಡಲು ಪೊಲೀಸರು ಹಾಗೂ ಅರೆಸೇನಾಪಡೆ ಲಾಠಿ ಬೀಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ (Manvi City) ನಟ ಸುದೀಪ್ ಅವರು ರೋಡ್ ಶೋವನ್ನು (Roadshow) ಸಮಯದ ಅಭಾವ ಹಿನ್ನೆಲೆ ಬೇಗ ಮುಕ್ತಾಯ ಗೊಳಿಸಿ ಮಸ್ಕಿ ಕ್ಷೇತ್ರಕ್ಕೆ ತೆರಳಿದರು. ಈ ವೇಳೆ ಮಾತನಾಡಿದ ಅವರು, ನಮ್ಮನ್ನ ಇಲ್ಲಿ ಕರೆದುಕೊಂಡು ಬಂದಾಗ ನಮಗೆ ಗೊತ್ತಾಗುತ್ತಿದೆ, ಎನ್ರಿ ಈ ಜನ. ಎಲ್ಲ ಕಡೆ ಹೋಗ್ತಿದಿನಿ, ಎಲ್ಲಡೆ ಒಂದು ಕೊರತೆ ಇದೆ, ಅದನ್ನ ನೀವು ಈಡೇರಿಸಿ ಎಂದು ಅಭ್ಯರ್ಥಿಗಳಿಗೆ ಮನವಿ ಮಾಡಿದರು.
ಫಸ್ಟ್ ಒಳ್ಳೆ ಕೆಲಸ ಮಾಡ್ತಿನಿ ಅಂತ ಮಾತು ಕೊಡಿ
ಅಲ್ಲದೆ, ಸಿಎಂ ಬೊಮ್ಮಾಯಿ ಪರ, ಬಿವಿ ನಾಯಕ್ ಹಾಗೂ ಯಡಿಯೂರಪ್ಪನವರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಫಸ್ಟ್ ಒಳ್ಳೆ ಕೆಲಸ ಮಾಡ್ತಿನಿ ಅಂತ ಮಾತು ಕೊಡಿ ಎಂದು ಬಿಜೆಪಿ ಅಭ್ಯರ್ಥಿ ಬಿವಿ ನಾಯಕ್ ಗೆ ಸುದೀಪ್ ಹೇಳಿದರು. ಆಗ ನಾನು ನಿಮ್ಮ ಮೇಲೆ ಪ್ರಮಾಣ ಮಾಡುತ್ತೇನೆ. ನಿಮ್ಮ ಸೇವೆ ಮಾಡುತ್ತೀನಿ ಅಂತ ಜನರಿಗೆ ಬಿವಿ ನಾಯಕ್ ಮಾತುಕೊಟ್ಟರು. ನಿಮ್ಮಲ್ಲೊಂದೇ ಮನವಿ ನೀವು ಗೆದ್ದ ಮೇಲೆ, ನನ್ನ ಸ್ನೇಹಿತರನ್ನು, ಅಭಿಮಾನಿಗಳನ್ನು ಮರೆಯಬೇಡಿ. ಅವರು ಕೆಲಸ ಮಾಡದೇ ಇದ್ದರೇ ನನಗೆ ಹೇಳಿ, ನಾನು ಕೆಲಸ ಮಾಡಿಸುತ್ತೇನೆ ಎಂದು ಸುದೀಪ್ ಅಶ್ವಾಸನೆ ನೀಡಿದರು.
ಇಷ್ಟು ಅಭಿಮಾನಿಗಳನ್ನು ಹೊಂದಿರೋದಕ್ಕೆ ಹೆಮ್ಮೆಯಿದೆ. ಕಲಾವಿದ ಆಗಿದ್ದಕ್ಕೆ ಇಷ್ಟು ಅಭಿಮಾನಿ ದಂಡೇ ಬಂದಿದೆ. ಗೆದ್ದೇ ಗೆಲ್ಲುವೇ ಒಂದು ದಿನ, ಗೆಲಲೇ ಬೇಕು ಒಂದು ದಿನ. ನಾವು ಗೆದ್ದರೆ ನಮ್ಮನ್ನ ಯಾರೂ ಉದುರಿಸೋಕೆ ಆಗಲ್ಲ ಎಂದು ಸಿನಿಮಾ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದರು.
ಇದನ್ನೂ ಓದಿ: 2023 Karnataka Elections: ಬೆಂಗಳೂರಿನಲ್ಲಿ ಬಿಜೆಪಿ ಸ್ಟ್ರಾಟಜಿ ಸ್ವಲ್ಪ ಬದಲು, ಮೋದಿ ರೋಡ್ ಶೋ 2 ದಿನಕ್ಕೆ ವಿಸ್ತರಣೆ
JDS ಬ್ಯಾನರ್ ಹರಿದ ಫ್ಯಾನ್ಸ್
ಇತ್ತ, ದೇವದುರ್ಗದಲ್ಲಿ ಸುದೀಪ್ ರೋಡ್ ಶೋ ವೇಳೆ ಜೆಡಿಎಸ್ ಪ್ರಚಾರ ವಾಹನದ ಬ್ಯಾನರ್ ಹರಿಯಲಾಗಿದೆ. ಆದ್ದರಿಂದ ದೇವದುರ್ಗ ಠಾಣೆಗೆ ಜೆಡಿಎಸ್ ಕಾರ್ಯಕರ್ತರು ದೂರು ಕೊಟ್ಟಿದ್ದಾರೆ. ಉಳಿದಂತೆ ಪ್ರಚಾರದುದ್ದಕ್ಕೂ ಸುದೀಪ್ಗೆ ಅಭಿಮಾನಿಗಳ ಜೈಕಾರಗಳ ಸುರಿಮಳೆ ಸಿಕ್ತು. ಸಾವಿರಾರು ಅಭಿಮಾನಿಗಳ ಮಧ್ಯೆ ಅಭಿಮಾನಿಯೊಬ್ಬ ಕೊಟ್ಟ ಟೀಯನ್ನ ಕಿಚ್ಚ ಮೆಚ್ಚಿಕೊಂಡಾಗ ಫ್ಯಾನ್ಸ್ಗೆ ರೋಮಾಂಚನಗೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ