ಕರ್ನಾಟಕ ಮತ್ತು ಮಹಾರಾಷ್ಟ್ರ (Karnataka And Maharashtra) ಗಡಿ ವಿವಾದ (Border Dispute) ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತದೆ. ಎಂಇಎಸ್ (MES) ಪುಂಡರು ಆಗಾಗ್ಗೆ ಗಡಿ ವಿವಾದದಲ್ಲಿ ಕ್ಯಾತೆ ತೆಗೆದು ಕಾಲು ಕೆದರಿ ಜಗಳಕ್ಕೆ ಇಳಿಯುತ್ತಾರೆ. ಇದೀಗ ಮತ್ತೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಭುಗಿಲೆದ್ದಿದೆ. ಕರ್ನಾಟಕದ ಬಸ್ ಗಳಿಗೆ (Buses) ಮಸಿ ಬಳಿದು ಸಂಚಾರಕ್ಕ ಅಡ್ಡಿ ಪಡಿಸಲಾಗಿತ್ತು. ಇದರ ಬೆನ್ನಲ್ಲೆ ಕನ್ನಡ ಪರ ಸಂಘಟನೆಗಳು ರಾಜ್ಯದಲ್ಲಿ ಮಹಾರಾಷ್ಟ್ರದ ಬಸ್ ಗೆ ನಿರ್ಬಂಧ ಹೇರಿದ್ದವು. ಮಹಾರಾಷ್ಟ್ರ ಆಗಾಗ್ಗೆ ಬೆಳಗಾವಿ ಗಡಿ ಭಾಗ ತಮ್ಮದು ಅಂತಾ ಕ್ಯಾತೆ ತೆಗೆಯುತ್ತಲೇ ಇರುತ್ತದೆ.
ಬೆಳಗಾವಿ ಗಡಿ ವಿವಾದ ಕುರಿತು ನಟ ಶಿವಕಾಜ್ ಕುಮಾರ್ ಪ್ರತಿಕ್ರಿಯೆ
ಇತ್ತೀಚೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಬೆಳಗಾವಿ ಗಡಿ ಭಾಗ ತಮ್ಮದು ಎಂದು ಮಹಾರಾಷ್ಟ್ರದ ಪುಂಡರು ಆಗಾಗ್ಗೆ ಕಾಲು ಕೆದರಿ ಕ್ಯಾತೆ ತೆಗೆಯುತ್ತಾರೆ. ಈ ಬಗ್ಗೆ ಈಗ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಯಾರದ್ದೋ ಬೇಳೆ ಬೇಯಿಸಿಕೊಳ್ಳುವುದಕ್ಕೋಸ್ಕರ ಸಾಮಾನ್ಯ ಜನರ ಜೀವನ ಹಾಳು ಮಾಡುವುದು ಸರಿಯಲ್ಲ ಅಂತಾ ನಟ ಶಿವರಾಜ್ ಕುಮಾರ್, ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಯಾರೇ ಆಗಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಮಾಜ್ಯ ಜನರ ಜೀವನ ಹಾಳು ಮಾಡುವುದು ತಪ್ಪು. ಯಾರದ್ದೋ ಸ್ವಾರ್ಥಕ್ಕೆ ಸಾಮಾನ್ಯ ಜನರ ಬದುಕು ಹಾಳಾಗಬಾರದು. ಮರಾಠಿಗರೇ ಆಗಲಿ, ಕನ್ನಡಿಗರೇ ಆಗಲಿ ಅಣ್ಣತಮ್ಮಂದಿರಂತೆ ಬದುಕಬೇಕು. ನಾವು ಎಷ್ಟು ಜನ ಇದ್ದೀವಿ ಅನ್ನೋದಕ್ಕಿಂತ ಎಲ್ಲಿ ಇದ್ದೀವಿ ಅನ್ನೋದು ಮುಖ್ಯ. ನಾವೆಲ್ಲೇ ಬದುಕಿದ್ರೂ ಇಂಡಿಯಾನೇ ಅಲ್ವಾ? ಯಾರೂ ತಮ್ಮ ಸ್ವಾರ್ಥಕ್ಕೆ ಸಾಮಾನ್ಯ ಜನರ ಬದುಕನ್ನು ಹಾಳು ಮಾಡ್ಬೇಡಿ ಅಂತಾ ಹೇಳಿದ್ದಾರೆ.
‘ಭಾಷೆ, ಸ್ಥಾನಮಾನಕ್ಕೆ ಸಪೋರ್ಟ್ ಇದ್ದೇ ಇರುತ್ತೆ’
ಯಾವಾಗಲೂ ಗಡಿ ಭಾಷೆ, ಸ್ಥಾನಮಾನ, ಜಲದ ವಿಷಯದಲ್ಲಿ ನಮ್ಮ ಸಪೋರ್ಟ್ ಇದೆ. ಅಲ್ಲಿಗೇ ಹೋದ್ರೆ ಮಾತ್ರ ಸಪೋರ್ಟ್ ಮಾಡ್ತಾರೆ ಅಂತೇನಿಲ್ಲ. ಎಲ್ಲೇ ಇದ್ರೂ ಸಪೋರ್ಟ್ ಮಾಡ್ತೀವಿ. ಆದ್ರೆ ರಾಜಕೀಯ ಮತ್ತು ಪೊಲೀಸರು ಒಟ್ಟಾಗಿ ಕೆಲಸ ಮಾಡಿದ್ರೆ ಯಾವುದೇ ಸಮಸ್ಯೆಯಿರಲ್ಲ ಅಂತಾ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
‘ನಾನು ಹೋಗುವಾಗ ಯಾರು ಬೇಕಾದ್ರೂ ಕಲ್ಲಲ್ಲಿ ಹೊಡೆಯಬಹುದು’
ನಾನು ಸಾಮಾನ್ಯ ಜನರಲ್ಲಿ ಒಬ್ಬ. ನಾನು ಹೋಗುವಾಗ ನನಗೂ ಸಹ ಯಾರೋ ಕಲ್ಲಲ್ಲಿ ಹೊಡೆಯಬಹುದು. ಸ್ಟಾರ್ ಡಮ್ ಇದೆ ಅನ್ನೋ ಕಾರಣಕ್ಕೆ ನಮಗೆ ಪೊಲೀಸ್ ಪ್ರೊಟೆಕ್ಷನ್ ಸಿಗುತ್ತೆ. ಆದ್ರೆ ಸಾಮಾನ್ಯ ಜನರಿಗೆ ಹಾಗೇ ಆಗಲ್ಲ. ಅವರು ಕಲ್ಲೇಟು ತಿಂತಾರೆ. ಈ ರೀತಿಯಾಗಲು ಬಿಡಬಾರದು. ಬೆಳಗಾವಿ ವಿಭಾಗಕ್ಕೆ ಸಂಬಂಧಪಟ್ಟವರು ಬುದ್ಧಿ ಉಪಯೋಗಿಸಿ ಮಾತಾಡಿ ಎಂದು ಹೇಳಿದ್ದಾರೆ.
‘ಆಯಾ ಭಾಷೆ, ರಾಜ್ಯಕ್ಕೆ ಗೌರವ ಕೊಡಬೇಕು’
ನಾವು ಎಲ್ಲಿರುತ್ತೇವೋ, ಆ ರಾಜ್ಯ ಮತ್ತು ಭಾಷೆಗೆ ಗೌರವ ಕೊಡಬೇಕು. ನಾನು ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಅಲ್ಲಿಯ ಭಾಷೆ ಓದಲೇಬೇಕಿತ್ತು. ಆಗ ನಾನು ಓದಲ್ಲಾ ಅಂದಿದ್ರೆ ಆಗ್ತಿತ್ತಾ? ಅಲ್ಲಿಯ ಮಾತೃಭಾಷೆ ಕಡ್ಡಾಯವಾಗಿ ಓದಲೇಬೇಕಿತ್ತು.
ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಬಸ್ ಬಂದ್; ರೋಗಿಗಳ ಗೋಳು ಕೇಳೋರು ಯಾರು?
ಹಾಗಾಗಿ ನಾವು ಪ್ರತಿಯೊಂದು ಭಾಷೆ ಮತ್ತು ರಾಜ್ಯವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಯಾವ ರಾಜ್ಯದಿಂದ ನಾವು ಏನು ಪಡೆದಿರ್ತೀವೋ ಅದಕ್ಕಾದ್ರೂ ಗೌರವ ಕೊಡಬೇಕು. ಇದು ಪ್ರತೀ ನಾಗರಿಕನ ಕರ್ತವ್ಯ ಅಂತ ಶಿವಣ್ಣ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ