ಸಂಚಾರಿ ಪೊಲೀಸರಿಗೆ ನಟಿ ಸಂಜನಾ ದಂಡ ಕಟ್ಟಿದ್ದು ಯಾಕೆ ಗೊತ್ತಾ?

ಕ್ವೀನ್ಸ್ ರಸ್ತೆಯಲ್ಲಿರುವ ಮುಖ್ಯ ಕಚೇರಿಗೆ ಹಾಜರಾಗಿ ನಟಿ ಸಂಜನಾ ಗಲ್ರಾನಿ 2000 ರೂಪಾಯಿ ದಂಡ ಕಟ್ಟಿ ಹೋಗಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಡಾ. ರವಿಕಾಂತೇಗೌಡರ ಮುಂದೆ ಸಂಜನಾ ದಂಡ ಪಾವತಿಸಿ ಕ್ಷಮೆಯಾಸಿದ್ದಾರೆ.

ನಟಿ ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ

  • Share this:
ಬೆಂಗಳೂರು(ಫೆ.03) :  ಸಂಚಾರಿ ನಿಯಮ ಉಲ್ಲಂಘನೆಯ ನೋಟಿಸ್ ಪಡೆದಿದ್ದ ನಟಿ ಸಂಜನಾ ಗಲ್ರಾನಿ ಇಂದು ದಂಡ ಕಟ್ಟಿದ್ದಾರೆ. ಕ್ವೀನ್ಸ್ ರಸ್ತೆಯಲ್ಲಿರುವ ಮುಖ್ಯ ಕಚೇರಿಗೆ ಹಾಜರಾಗಿ 2000 ರೂ. ದಂಡ ಕಟ್ಟಿ ಹೋಗಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಡಾ. ರವಿಕಾಂತೇಗೌಡರ ಮುಂದೆ ನಟಿ ಸಂಜನಾ ದಂಡ ಪಾವತಿಸಿ ಕ್ಷಮೆಯಾಸಿದ್ದಾರೆ.

ಮೆಜೆಸ್ಟಿಕ್ ರಸ್ತೆಯಲ್ಲಿ ಕಾರು ಚಾಲನೆ ಮಾಡುವಾಗ ಅದನ್ನು ಸೆಲ್ಪೀ ವಿಡಿಯೋ ಮಾಡಿ ಪೇಚಿಗೆ ಸಿಲುಕಿದ್ದ ನಟಿ ಸಂಜನಾ ಗಲ್ರಾನಿ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಿ, ವಿಚಾರಣೆಗೆ ಹಾಜರಾಗುವಂತೆ ಸಂಚಾರಿ ನಿಯಮ ಉಲ್ಲಂಘನೆ ಆರೋಪದಡಿ ಸಂಜನಾಗೆ ಬನಶಂಕರಿ ಸಂಚಾರಿ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು.

fine
ದಂಡ ಕಟ್ಟಿದ ನಟಿ ಸಂಜನಾ


ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ಅವರ ಸರಿಲೇರು ನೀಕೆವ್ವರು ಚಿತ್ರದ ವೀಕ್ಷಣೆಗೆ ನಟಿ ಸಂಜನಾ ಗಲ್ರಾನಿ ತೆರಳಿದ್ದರು. ಈ ವೇಳೆ ಕಾರ್ ಡ್ರೈವ್ ಮಾಡುವಾಗ ಸ್ವತಃ ಅವರೇ ಅದನ್ನು ಸೆಲ್ಫಿ ವಿಡಿಯೋ ಸಹ ಮಾಡಿದ್ದರು. ಅಲ್ಲದೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಪರಿಣಾಮ ಭಾನುವಾರದ ಮಟ್ಟಿಗೆ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಇದನ್ನೂ ಓದಿ : ಮೈಸೂರಿನ ಪಿರಿಯಾಪಟ್ಟಣದಲ್ಲಿ ಮಹಿಳೆ ಕೊಲೆ ಪ್ರಕರಣ; ಹಲವು ಅನುಮಾನಗಳು

ಟ್ರಾಫಿಕ್ ನಿಯಮದ ಪ್ರಕಾರ ಡ್ರೈವಿಂಗ್ ನಲ್ಲಿ ಮೊಬೈಲ್ ಬಳಸಿ ಸಿಕ್ಕಿ ಬಿದ್ದರೆ 1000 ಸಾವಿರ ದಂಡ ಕಟ್ಟಬೇಕಾಗುತ್ತದೆ.2 ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿ ಬಿದ್ದರೆ ಇದೇ ದಂಡದ ಮೊತ್ತವು 2000 ಸಾವಿರ ಹಾಗೂ ಮೂರನೇ ಬಾರಿ ಸಿಕ್ಕಿ ಬಿದ್ದರೆ ಡಿಎಲ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸ್ಸು ಮಾಡುತ್ತಾರೆ.

 
First published: