Prakash Raj: ಹರ್ ಘರ್ ತಿರಂಗಾ ಅಭಿಯಾನ ನಿಜವಾದ ದೇಶಪ್ರೇಮವಲ್ಲ; ಕೇಂದ್ರದ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿ

ತಿರಂಗ ಯಾತ್ರೆ ಮೂಲಕ ದೇಶ ಪ್ರೇಮ ಮೂಡಿಸುವುದು ನಿಜವಾದ ದೇಶ ಪ್ರೇಮವಲ್ಲ‌. ಇದರ ಬದಲು ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು, ಬಡತನ ನಿರ್ಮೂಲನೆ ಮಾಡಬೇಕು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಬಹುಭಾಷಾ ನಟ ಪ್ರಕಾಶ್ ರಾಜ್

ಬಹುಭಾಷಾ ನಟ ಪ್ರಕಾಶ್ ರಾಜ್

  • Share this:
ಮೈಸೂರು (ಆ.7):  ಪತ್ರಕರ್ತರ ಜೊತೆ ಸಂವಾದ ಕಾರ್ಯಕ್ರಮಕ್ಕೆ  ಆಗಮಿಸಿದ  ಬಹುಭಾಷಾ ನಟ ಪ್ರಕಾಶ್ ರಾಜ್ (Actor Prakash Raj)​ ಕೇಂದ್ರ ಸರ್ಕಾರದ (Central Government) ವಿರುದ್ಧ ಕಿಡಿಕಾರಿದ್ರು. ಪ್ರಧಾನ ಮಂತ್ರಿಗಳು (Prime Minister) ಬಂದಾಗ ಮಾತ್ರ ರಸ್ತೆ ಮಾಡಿಸ್ತಿರಾ? ನಾನು ವರ್ಷಕ್ಕೆ 38 ಲಕ್ಷ ಟ್ಯಾಕ್ಸ್ ಕಟ್ಟುತ್ತೇನೆ. ಅದು ನಮ್ಮ ದುಡ್ಡು, ಪ್ರಶ್ನಿಸುವುದು ನಮ್ಮ ಹಕ್ಕು. ಒಳ್ಳೆಯ ರಸ್ತೆಯಲ್ಲಿ ನಮ್ಮ ಮಕ್ಕಳು ಓಡಾಡಬಾರದೇ? ನಮ್ಮ ದುಡ್ಡಿನಲ್ಲಿ ಅವರು ಬದುಕೋದು, ಸಾರ್ವಜನಿಕರ ಹಣದಲ್ಲಿ ಬದುಕುವ ರಾಜಕಾರಣಿಗಳು (Politicians) ಬಂದಾಗ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡುತ್ತೀರಾ, ಸಾಮಾನ್ಯರು ಕೇಳಿದ್ರೆ ಯಾಕೆ ಮಾಡಲ್ಲ ಎಂದು ಪ್ರಕಾಶ್ ರಾಜ್ ಪ್ರಶ್ನೆ ಮಾಡಿದ್ದಾರೆ.

ಹದಗಟ್ಟಿರೋ ದೇಶದ ವ್ಯವಸ್ಥೆ ಸರಿಪಡಿಸಲು ಆಗಲ್ಲ

ಹದಗೆಟ್ಟಿರುವ ಈ ದೇಶದ ವ್ಯವಸ್ಥೆ ಸರಿಪಡಿಸಲು ಯಾವೊಬ್ಬ ನಾಯಕನಿಂದಲೂ ಸಾಧ್ಯವಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಈ ದೇಶದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಇದನ್ನು ಸರಿಪಡಿಸಲು ಯಾವೊಬ್ಬ ನಾಯಕನಿಗೂ ಸಾಧ್ಯವಿಲ್ಲ, ಜನರೇ ಮುಂದೆ ಬರಬೇಕು ಎಂದು  ಪ್ರಕಾಶ್ ರಾಜ್ ಕರೆ ಕೊಟ್ಟಿದ್ದಾರೆ.

ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿ

ತಿರಂಗ ಯಾತ್ರೆ ಮೂಲಕ ದೇಶ ಪ್ರೇಮ ಮೂಡಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ನಟ ಪ್ರಕಾಶ್ ರಾಜ್. ತಿರಂಗ ಯಾತ್ರೆ ಮೂಲಕ ದೇಶ ಪ್ರೇಮ ಮೂಡಿಸುವುದು ನಿಜವಾದ ದೇಶ ಪ್ರೇಮವಲ್ಲ‌. ಇದರ ಬದಲು ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು, ಬಡತನ ನಿರ್ಮೂಲನೆ ಮಾಡಬೇಕು. ಪಾಲಿತಿನ್ ಸಿಂಥೆಟಿಕ್ ರಾಷ್ಟ್ರ ಧ್ವಜದ ಬದಲು ಖಾದಿ ರಾಷ್ಟ್ರ ಧ್ವಜಕ್ಕೆ ಉತ್ತೇಜನ ನೀಡಬೇಕು ಅದು ದೇಶ ಪ್ರೇಮ ಎಂದು ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ರು.

ಇದನ್ನೂ ಓದಿ: Heavy Rain: ರಾಜ್ಯದಲ್ಲಿ ಇನ್ನೂ 2 ದಿನ ಭಾರೀ ಮಳೆ; ಸಾಕಪ್ಪ ಸಾಕು ನಿಲ್ಲೋ ಮಳೆರಾಯ

ಆ್ಯಂಬುಲೆನ್ಸ್ ಒಂದೇ ಆಸ್ಪತ್ರೆಗೆ ಸೀಮಿತವಲ್ಲ

ಪ್ರಕಾಶ್ ರಾಜ್ ಫೌಂಡೇಷನ್ ವತಿಯಿಂದ ಆ್ಯಂಬುಲೆನ್ಸ್ ಕೊಡುಗೆ ಒಂದು ಒಳ್ಳೆಯ ಆಶಯ. ಕೊರೋನಾ ಸಮಯದಲ್ಲಿ ಆ್ಯಂಬುಲೆನ್ಸ್ ಮಾಫಿಯಾವಾಗಿದೆ. ನಾವು ಕೊಡುವ ಆ್ಯಂಬುಲೆನ್ಸ್ ಒಂದೇ ಆಸ್ಪತ್ರೆಗೆ ಸೀಮಿತವಲ್ಲ ಯಾರೇ ಫೋನ್ ಮಾಡಿದರು ಅವರ ಸಹಾಯಕ್ಕೆ ಬರುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕೊಡಲಾಗುತ್ತದೆ. ನಾನು ಎಲ್ಲವನ್ನ ಪಡೆದಿದ್ದೇನೆ, ನಾನು ಬಡವ ಅಂಥ ಹೇಳಲ್ಲ ನಾನು ಕೂಡ ಶ್ರೀಮಂತನೆ, ನಾನು ಒಂದಷ್ಟು ಆಸ್ತಿ, ಹಣಕಾಸು ಹೊಂದಿದ್ದೇನೆ. ನನ್ನ ಜೊತೆ ಹತ್ತಾರು ಜನ ಸೇರಿ ಸಮಾಜಸೇವೆ ಮಾಡೋಣ ಎಂದ್ರು.

ಅಪ್ಪುವಿನ ಅಗಲಿಕೆ ನೋವು ಎಲ್ಲರಿಗೂ ಕಾಡಿದೆ. ಆ ಸಾವಿನ ಪ್ರೇರಣೆಯಿಂದ ಅನೇಕರು ಬಡಜನರ ನೆರವಾಗಲಿ ಬರಲಿ ಅನ್ನೋದು ನಮ್ಮ ಆಶಯ ಎಂದು ಸಂವಾದದಲ್ಲಿ ನಟ ಪ್ರಕಾಶ್ ರಾಜ್​ ಹೇಳಿದ್ದಾರೆ.

ಪ್ರಗತಿಪರ ಹೋರಾಟದಲ್ಲಿ ಸದಾ ಸಕ್ರಿಯ

ಜಸ್ಟ್ ಆಸ್ಕಿಂಗ್ ಮೂಲಕ ಸಂಚಲನ ಮೂಡಿಸಿದ್ದ ನಟ ಪ್ರಕಾಶ್ ರಾಜ್​ ಈಗ ತೆರೆ ಮರೆಗೆ ಸರಿದ್ರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಕಾಶ್​ ರಾಜ್​, ನಾನು ಎಂದೂ ಯಾವತ್ತೂ ಪ್ರಗತಿಪರರು ಹಾಗೂ ಚಿಂತಕರ ಪರವಾಗಿರುತ್ತೇನೆ. ನಾನು ಕಣ್ಣಿಗೆ ಕಾಣದೇ ನನ್ನ ಕೆಲಸಗಳನ್ನು ಮಾಡುತ್ತಿದ್ದೇನೆ. ಮೀಡಿಯಾ ಮುಂದೆ ಬಂದು ಹೇಳಬೇಕೆಂದೇನಿಲ್ಲ ಎಂದ್ರು. ನಾನು ಬೇರೆ ಬೇರೆ ರಾಜ್ಯಗಳಲ್ಲಿ ಇರುತ್ತೇನೆ. ನನ್ನ ವೃತ್ತಿಯ ಜೊತೆಗೆ ಪ್ರಗತಿಪರ ಹೋರಾಟದಲ್ಲಿ ಸದಾ ಸಕ್ರಿಯವಾಗಿರುತ್ತೇನೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಇದನ್ನೂ ಓದಿ: Heavy Rain: ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ; ನೀರಿನಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು!

ಹಿಂದಿನ ರಾಷ್ಟ್ರೀಯ ಭಾಷೆ ಅಲ್ಲ

ಹಿಂದಿನ ರಾಷ್ಟ್ರೀಯ ಭಾಷೆ ಅಲ್ಲ ಅನ್ನೋದು ಟ್ರೋತ್. ಈ ಬಗ್ಗೆ ಕೆಲವರು ನಿಜ ಹೇಳ್ತಾ ಇದ್ದಾರಾ ಅಥವಾ ಹಿಂದೆ ಯಾರೋ ಕತ್ತಿ ಇಟ್ಟು ಹೇಳಿಸ್ತಾರೋ ಗೊತ್ತಿಲ್ಲ, ಒಟ್ಟಾರೆ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ಸಂವಾದದಲ್ಲಿ ನಟ ಪ್ರಕಾಶ್  ರಾಜ್​ ಹೇಳಿದ್ದಾರೆ. ಈ ಹಿಂದೆ ಪ್ರತಾಪ್ ಸಿಂಹ ಅವರ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಿದ್ದೆ ಅವರು ಸೋತರು. ಸಾರಿ ಕೇಳಿದ್ರು, ಅದು ಸುದ್ದಿ ಆಯಿತು. ಅವರು ಸಾರಿ ಕೇಳಿದ್ದು ಸುದ್ದಿ ಆಗಲಿಲ್ಲ ಅಷ್ಟೇ ಎಂದ್ರು.
Published by:Pavana HS
First published: