Nikhil Kumaraswamy-Revathi ದಂಪತಿಗೆ ಗಂಡು ಮಗು ಜನನ: ತಾತನಾದ ಖುಷಿಯಲ್ಲಿ ಮಾಜಿ ಸಿಎಂ ಎಚ್ಡಿಕೆ

ತಾತನಾಗಿರುವ ಖುಷಿಯಲ್ಲಿ ಟ್ವೀಟ್​ ಮಾಡಿರುವ ಕುಮಾರಸ್ವಾಮಿ ಅವರು, ತನ್ನ ಜೀವನದಲ್ಲಿ ಇನ್ನೊಂದು ಶುಭ ಘಳಿಗೆ ಬಂದಿದೆ. ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ತಾತನಾದೆ ಎಂದು ಹೇಳಲು ಅತೀವ ಸಂತಸವಾಗುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ಕಂದಮ್ಮನಿಗೆ ಇರಲಿ ಎಂದಿದ್ದಾರೆ.

ಗಂಡು ಮಗುವಿಗೆ ಜನ್ಮ ಕೊಟ್ಟ ರೇವತಿ ನಿಖಿಲ್ ಕುಮಾರ್​

ಗಂಡು ಮಗುವಿಗೆ ಜನ್ಮ ಕೊಟ್ಟ ರೇವತಿ ನಿಖಿಲ್ ಕುಮಾರ್​

  • Share this:
ಸ್ಯಾಂಡಲ್​ವುಡ್​ ಜಾಗ್ವಾರ್​ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಹಾಗೂ ಮಡದಿ ರೇವತಿ (Revathi)ಅವರಿಗೆ ಗಂಡು ಮಗುವಾಗಿದೆ. ಮಾಜಿ ಪ್ರಧಾನಿ ದೇವೇಗೌಡರ  (Devegowda) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ದೊಡ್ಡ ಗೌಡರು ಮನೆಗೆ ಮರಿ ಮೊಮ್ಮಗನನ್ನು ಬರ ಮಾಡಿಕೊಂಡಿದ್ದಾರೆ. ನಿಖಿಲ್ ಹಾಗೂ ರೇವತಿ ಅವರಿಗೆ ಗಂಡು ಮಗುವಾಗಿರುವ  (Baby Boy)ಸಂತೋಷದ ಸುದ್ದಿಯನ್ನು ಮಾಜಿ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ (H D Kumaraswamy)  ಅವರು ಟ್ವೀಟ್​ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ತಾತನಾಗಿರುವ ಖುಷಿಯಲ್ಲಿರುವ ಕುಮಾರಸ್ವಾಮಿ ಅವರು ತಾತನಾದೆ ಎಂಧು ಹೇಳಲು ತುಂಬಾ ಸಂತಸವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ತಾತನಾಗಿರುವ ಖುಷಿಯಲ್ಲಿ ಟ್ವೀಟ್​ ಮಾಡಿರುವ ಕುಮಾರಸ್ವಾಮಿ ಅವರು, ತನ್ನ ಜೀವನದಲ್ಲಿ ಇನ್ನೊಂದು ಶುಭ ಘಳಿಗೆ ಬಂದಿದೆ. ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ತಾತನಾದೆ ಎಂದು ಹೇಳಲು ಅತೀವ ಸಂತಸವಾಗುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ಕಂದಮ್ಮನಿಗೆ ಇರಲಿ ಎಂದಿದ್ದಾರೆ.



ಇತ್ತೀಚೆಗಷ್ಟೆ ರೇವತಿ ಅವರ ಸೀಮಂತ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಅಲ್ಲದೆ ರೇವತಿ ಅವರು ಗರ್ಭಿಣಿಯಾಗಿದ್ದ ವಿಷಯವನ್ನು ಅವರಿಗೆ ಐದು ತಿಂಗಳಾಗಿದ್ದಾಗ ಮಾವ ಕುಮಾರಸ್ವಾಂಮಿ ಅವರೇ ಮಾಧ್ಯಮ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.

ಇದನ್ನೂ ಓದಿ: Nikhil-Revathi: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿಖಿಲ್-ರೇವತಿ: ಗೌಡರ ಮನೆಯ ಸೊಸೆಗೆ ಈಗ 5 ತಿಂಗಳು..!

ಜೆಡಿಎಸ್ ಶಾಸಕ ಶರವಣ ಅವರೂ ಸಹ ಟ್ವೀಟ್ ಮಾಡುವ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡರ ಕುಟುಂಬಕ್ಕೆ ಮರಿ-ಮೊಮ್ಮಗ ಆಗಮನ. ಇದು ಅತ್ಯಂತ ಸಂತೋಷ ತಂದಿರುವಂತಹ ವಿಷಯ.
ಶಿರಡಿ ಸಾಯಿಬಾಬನ ಅನುಗ್ರಹ ಮಗುವಿನ ಮೇಲಿರಲೆಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.



ಕಳೆದ ವರ್ಷ ಲಾಕ್​ಡೌನ್​ ವೇಳೆ ಅಂದರೆ ಏಪ್ರಿಲ್​ನಲ್ಲಿ ಬಿಡದಿಯ ತೋಟದಲ್ಲಿ ರೇವತಿ ಹಗೂ ನಿಖಿಲ್ ಅವರ ಮದುವೆಯಾಗಿತ್ತು. ಅದ್ಧೂರಿ ಮದುವೆಯ ನಂತರ ನಿಖಿಲ್ ಹಾಗೂ ರೇವತಿ ಬಿಡದಿಯ ತೋಟದ ಮನೆಯಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಿದ್ದರು. ಅವರ ತೋಟದ ಮನೆಯ ಚಿತ್ರಗಳನ್ನು ನಿಖಿಲ್​ ಆಗಾಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದರು.

ನಿಖಿಲ್ ಕುಮಾರಸ್ವಾಮಿ ಸದ್ಯ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರಗಳೆರಡರಲ್ಲೂ ಬ್ಯುಸಿಯಾಗಿದ್ದಾರೆ. ಇವುಗಳ ಜೊತೆಗೆ ಮನೆಯತ್ತ ಸಹ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಬೇರೆ ಕೆಲಸಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ನಿಖಿಲ್​ ಮಡದಿ ರೇವತಿ ಹಾಗೂ ಕುಟುಂಬದವರಿಗೆ ಕೊಡಬೇಕಾದ ಸಮಯವನ್ನೂ ಕೊಡುತ್ತಾರೆ.

ಇದನ್ನೂ ಓದಿ: ಸೀಮಂತಕ್ಕೂ ಮೊದಲು ಫೋಟೋಶೂಟ್​ಗೆ ಪೋಸ್​ ಕೊಟ್ಟ Nikhil Kumaraswamy-Revathi

ಇನ್ನು ನಿಖಿಲ್ ಕುಮಾರಸ್ವಾಮಿ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ರೈಡರ್​ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಜೊತೆಗೆ ನಿನ್ನೆಯಷ್ಟೆ ಈ ಸಿನಿಮಾದ ಡಬ್ಬಿಂಗ್ ಸಹ ಮುಗಿದಿದೆ. ಅಲ್ಲದೆ ಸದ್ಯದಲ್ಲೇ ಈ ಸಿನಿಮಾ ತೆರೆಗಪ್ಪಳಿಸಲಿದೆ. ಈ ಸಿನಿಮಾ ಸೇರಿದಂತೆ ಇನ್ನೂ ಮೂರು ಸಿನಿಮಾಗಳು ನಿಖಿಲ್ ಅವರ ಕೈಯಲ್ಲಿವೆ.

ಬಹಳ ಹಿಂದೆಯೇ ರೈಡರ್​ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಹಾಗೂ ಪೋಸ್ಟರ್​ಗಳನ್ನು ರಿಲೀಸ್​ ಮಾಡಿತ್ತು ಚಿತ್ರತಂಡ. ಇನ್ನು ನಿಖಿಲ್ ಹುಟ್ಟುಹಬ್ಬದ ಸಮಯದಲ್ಲಿ ಅಂದರೆ ಜ.22ರಂದು ರೈಡರ್​ ಸಿನಿಮಾದ ಟೀಸರ್ ಬಿಡುಗಡೆಯಾಯಿತು. ಈ ಟೀಸರ್ ನೋಡಿದ ಮೇಲಂತೂ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಅನ್ನೋದು ಸ್ಪಷ್ಟವಾಗಿತ್ತು. ಎಂದಿನಂತೆ ನಿಖಿಲ್ ಫೈಟಿಂಗ್​ ದೃಶ್ಯಗಳಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Nikhil-Revathi: ವಿವಾಹದ ನಂತರ ಮೊದಲ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್​-ರೇವತಿ..!

ಇನ್ನು ಎರನಡೇ ಅಲೆ ಆರಂಭವಾಗುವ ಮೊದಲೂ ಈ ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ನಂತರ ಮತ್ತೆ ಲಾಕ್​ಡೌನ್​ ಆಗಿ, ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿತ್ತು. 2ನೇ ಅಲೆ ನಂತರದಲ್ಲಿ ಮತ್ತೆ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ ಚಿತ್ರೀಕರಣವನ್ನು ಪೂರ್ಣಗೊಳಿಸಿತು. ಬೆಂಗಳೂರು, ಲಡಾಖ್​ ಸೇರಿದಂತೆ ನಾನಾ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ.
Published by:Anitha E
First published: