HOME » NEWS » State » ACTOR LOOSE MADA YOGI SAYS I AM SHOCKED THAT CCB SENT NOTICE TO ME IN DRUGS CASE AE

Yogi: ಡ್ರಗ್ಸ್​ಗೂ ನನಗೂ ಸಂಬಂಧವಿಲ್ಲ, ಆದರೂ ವಿಚಾರಣೆಗೆ ಸಹಕರಿಸುತ್ತೇನೆ ಎಂದ ನಟ ಯೋಗಿ

Sandalwood Drug Case: ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ನನಗೆ ನೋಟಿಸ್ ಬಂದಿದ್ದು ಆಶ್ಚರ್ಯ. ನಾನು ತಪ್ಪು ಮಾಡಿಲ್ಲ. ಬಂಧಿತರಲ್ಲಿ ನನಗೆ ರಾಗಿಣಿ ಹಾಗೂ ಐಂದ್ರಿತಾ ಮಾತ್ರ ಪರಿಚಯ ಇದ್ದಾರೆ. 2011-2012ರ ನಂತರ ಹೆಚ್ಚು ಪಾರ್ಟಿಗಳಿಗೇ ಹೋಗಿಲ್ಲ. ಮದ್ಯಪಾನ ಹಾಗೂ  ಧೂಮಪಾನ ಮಾಡುತ್ತಿದ್ದೆ ಅಷ್ಟೆ. ಈಗ ಅದನ್ನೂ ಆದಷ್ಟು ಬಿಟ್ಟಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ ನಟಿ ಯೋಗಿ.

Anitha E | news18-kannada
Updated:September 22, 2020, 1:29 PM IST
Yogi: ಡ್ರಗ್ಸ್​ಗೂ ನನಗೂ ಸಂಬಂಧವಿಲ್ಲ, ಆದರೂ ವಿಚಾರಣೆಗೆ ಸಹಕರಿಸುತ್ತೇನೆ ಎಂದ ನಟ ಯೋಗಿ
ನಟ ಯೋಗಿ
  • Share this:
ಸ್ಯಾಂಡಲ್​ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಈಗಾಗಲೇ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಹಾಗೂ ಪಾರ್ಟಿ ಆಯೋಜಕರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲೆಲ್ಲಿ ಡ್ರಗ್ಸ್​ ಪಾರ್ಟಿಗಳನ್ನು ಆಯೋಜಿಸಲಾಗುತ್ತಿತ್ತು ಹಾಗೂ ಯಾರೆಲ್ಲ ಭಾಗವಹಿಸಿದ್ದರು ಎಂದು  ತನಿಖೆ ನಡೆಸಲಾಗುತ್ತಿದೆ. ಈ ವಿಷಯವಾಗಿಯೇ ಇತ್ತೀಚೆಗಷ್ಟೆ ನಟರಾದ ಅಕುಲ್ ಬಾಲಾಜಿ ಹಾಗೂ ಸಂತೋಷ್​ ಅವರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು. ಇದರ ಬೆನ್ನಲ್ಲೇ ನಟ ಯೋಗಿ ಹಾಗೂ ಕ್ರಿಕೆಟರ್​ ಅಯ್ಯಪ್ಪ ಅವರಿಗೂ ನೋಟಿಸ್​ ನೀಡಲಾಗಿತ್ತು. ಲೂಸ್​ ಮಾದ ಎಂದೇ ಖ್ಯಾತರಾಗಿರುವ ನಟ ಯೋಗಿ ತಮಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿರುವ  ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಶುಕ್ರವಾರ ನೋಟಿಸ್ ಬಂದಿತ್ತು. ತಕ್ಷಣ ಅಪ್ಪ ಬಳಿ ಹೇಳಿದೆ. ನಂತರ ವಿಚಾರಣೆಗೆ ಹಾಜರಾದೆ. ಶನಿವಾರ ಎರಡೂವರೆ ತಾಸು ವಿಚಾರಣೆ ಮಾಡಿದರು ಎಂದು ಯೋಗಿ ಮಾಹಿತಿ ನೀಡಿದ್ದಾರೆ. 

ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ನನಗೆ ನೋಟಿಸ್ ಬಂದಿದ್ದು ಆಶ್ಚರ್ಯ. ನಾನು ತಪ್ಪು ಮಾಡಿಲ್ಲ. ಬಂಧಿತರಲ್ಲಿ ನನಗೆ ರಾಗಿಣಿ ಹಾಗೂ ಐಂದ್ರಿತಾ ಮಾತ್ರ ಪರಿಚಯ ಇದ್ದಾರೆ. 2011-2012ರ ನಂತರ ಹೆಚ್ಚು ಪಾರ್ಟಿಗಳಿಗೇ ಹೋಗಿಲ್ಲ. ಮದ್ಯಪಾನ ಹಾಗೂ  ಧೂಮಪಾನ ಮಾಡುತ್ತಿದ್ದೆ ಅಷ್ಟೆ. ಈಗ ಅದನ್ನೂ ಆದಷ್ಟು ಬಿಟ್ಟಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ ನಟಿ ಯೋಗಿ.

u missed your code in url, but i added. ಅಯ್ಯೋ ಮರೆತೆ. ನಿನ್ನೆ ಮೂರುನಾಲ್ಕು ಸ್ಟೋರಿ ಹಾಗೇ ಆಗಿದೆ 🤦‍♂️ shall i takeover ? ಒಕೆ URL: Sandalwood Drug Scandal CCB inquiring Actor Loose mada Yogi and Cricketer Aiyappa Header: Sandalwood Drug Scandal: ######### Keywords: Sandalwood Drug Scandal, Loose mada yogi, Actor Yogish, Neravanda Aiyappa, Cricketer Aiyappa, Drug mafia, Sandalwood drug case, Sandalwood drug racket, Ragini dwivedi, CCB Police
ಲೂಸ್​ ಮಾದ ಯೋಗಿ- ಅಯ್ಯಪ್ಪ


ರಾಗಿಣಿ ಅವರ ಜತೆ 2013ರಲ್ಲಿ ಸಿನಿಮಾ ಮಾಡಿದ್ದು, ಆ ಬಳಿಕ ಇದುವರೆಗೂ ನಾವು ಸಂಪರ್ಕದಲ್ಲಿಲ್ಲ. ನನ್ನೊಬ್ಬನಿಗೆ ಮಾತ್ರವಲ್ಲ ಇನ್ನೂ 15-20 ಜನರಿಗೆ ನೋಟಿಸ್​ ನೀಡಿದ್ದಾರೆ ಅನ್ನೋ ಮಾಹಿತಿ ಇದೆ. ಐಪಿಎಲ್ ಶುರು ಆದಾಗ ಮ್ಯಾಚ್ ನೋಡುತ್ತಿದ್ದಾಗ ಸೌಂಡ್ ಸ್ವಲ್ಪ ಜಾಸ್ತಿ ಇತ್ತು ಅಂತ ಅಕ್ಕ ಪಕ್ಕದ ಮನೆಯವರು ಬಂದು ದೂರಿದರು. ಅದು ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

Actress Ragini Dwivedi, Sanjjana Galrani Police Custody Ends Today on Sandalwood Drug Case
ರಾಗಿಣಿ ಹಾಗೂ ಸಂಜನಾ


ವಿಚಾರಣೆಯಲ್ಲಿ ಕೇಳಿದ ಎಲ್ಲ ಮಾಹಿತಿಗಳನ್ನೂ ಕೊಟ್ಟಿದ್ದೇನೆ. ಮುಂದೆ ಕರೆದರೆ ಹೋಗುತ್ತೇನೆ. ಶ್ರೀಲಂಕಾದಲ್ಲಿ ಪಾರ್ಟಿ ಮಾಡಿದ ಬಗ್ಗೆ ನನಗೆ ಮಾಹಿತಿ ಇಲ್ಲ. 2018ರಲ್ಲೇ ನನ್ನ ಪಾಸ್ ಪೋರ್ಟ್ ಅವಧಿ ಮುಗಿದಿದೆ. ರಾಜ್ ಕಪ್​ಗೆ ಹೋಗಿದ್ದೆ, ಸೋತೆವು, ವಾಪಸ್ ಬಂದೆವು ಅಷ್ಟೆ. ಸಿನಿಮಾದವರು ಮಾತ್ರವಲ್ಲ, ವಿರೇನ್ ಖನ್ನ ಸೇರಿದಂತೆ ಹಲವಾರು ಹೊರಗಿನವರು ಬಂಧನವಾಗಿದ್ದಾರೆ. ರಾಜಕಾರಣಿಗಳ ಮಕ್ಕಳ ಹೆಸರೂ ಕೇಳಿ ಬರುತ್ತಿದೆ. ಹೀಗಾಗಿ ಸ್ಯಾಂಡಲ್​ವುಡ್​ ಡ್ರಗ್ಸ್​ ಜಾಲ ಅಂತ ಹೇಳುವುದು ಬೇಡ. ಯಾರೋ ಕೆಲವರು ಮಾಡೋ ಕೆಲಸಕ್ಕೆ ಪೂರ್ತಿ ಚಿತ್ರರಂಗವನ್ನು ಹೊಣೆ ಮಾಡೋದು ಬೇಡ ಅಂತ ಮನವಿ ಮಾಡಿದ್ದಾರೆ ಯೋಗಿ.

ಇದನ್ನೂ ಓದಿ: Nikhil Kumaraswamy: ವಿಶೇಷ ಅಭಿಮಾನಿಯನ್ನು ಮನೆಗೆ ಕರೆಸಿಕೊಂಡು ಕೆಲ ಸಮಯ ಕಳೆದ ನಿಖಿಲ್​ ಕುಮಾರಸ್ವಾಮಿ ..!ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ರಾಷ್ಟ್ರೀಯ ಮಟ್ಟದಲ್ಲಿ ಈವೆಂಟ್ಸ್ ನಡೆಸುತ್ತಿದ್ದ ವಿರೇನ್​ ಖನ್ನಾರನ್ನು ಮತ್ತೆ ಸಿಸಿಬಿ ವಶಕ್ಕೆ ಪಡೆದಿದೆ. ಹೆಚ್ಚಿನ ವಿಚಾರಣೆಗಾಗಿ ವಿರೇನ್​ ಖನ್ನರನ್ನು ಐದು ದಿನಗಳ ಪೊಲೀಸ್​ ಕಸ್ಟಡಿಗೆ ಒಪ್ಪಿಸಿ ಎನ್​ಡಿಪಿಎಸ್​ ನ್ಯಾಯಾಲಯ ಆದೇಶ ನೀಡಿದೆ.

ಇನ್ನು ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗುಲ್ರಾನಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆಪ್ಟೆಂಬರ್​​ 24ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಇನ್ನು ಮೂರು ದಿನಗಳ ಕಾಲ ನಟಿಯರಿಬ್ಬರು ಜೈಲಿನಲ್ಲಿಯೇ ಕಾಲ ಕಳೆಯಬೇಕಿದೆ.
Published by: Anitha E
First published: September 22, 2020, 1:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading