ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಚಿವೆ ಜಯಮಾಲಾ ಗಾಳಿ ಎದ್ದಿದೆ - ಪ್ರಮೋದ್ ಮಧ್ವರಾಜ್.

news18
Updated:August 29, 2018, 6:21 PM IST
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಚಿವೆ ಜಯಮಾಲಾ ಗಾಳಿ ಎದ್ದಿದೆ - ಪ್ರಮೋದ್ ಮಧ್ವರಾಜ್.
news18
Updated: August 29, 2018, 6:21 PM IST
- ಪರೀಕ್ಷಿತ್ ಶೇಟ್ ,  ನ್ಯೂಸ್ 18ಕನ್ನಡ 

ಉಡುಪಿ ( ಆಗಸ್ಟ್  29) :  ಸ್ಥಳೀಯ ಚುನಾವಣೆ ಪ್ರಚಾರದಲ್ಲಿ ಸಚಿವೆ ಜಯಮಾಲಾ ಗಾಳಿ ಎದ್ದಿದ್ದು, ಇವರಷ್ಠು ಗ್ಲಾಮರ್ ಯಾರಿಗಿದೆ ಹೇಳಿ. ಜಯಮಾಲಾ ವೆರೀ ಗ್ಲ್ಯಾಮರಸ್ ಜಿಲ್ಲಾ  ಮಿನಿಸ್ಟರ್ ಹೀಗಂತ ಹೇಳಿರೋದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್.

ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ದತೆ ಕುರಿತು ಉಡುಪಿಯಲ್ಲಿ ಮಾತನಾಡಿದ ಮಧ್ವರಾಜ್, ಚುನಾವಣೆಗೆ ಹೆಚ್ಚು ಓಡಾಟ ನಡೆಸದಿದ್ದರೂ ಉಡುಪಿಯಲ್ಲಿ ಜಯಮಾಲಾ ಗಾಳಿ ಎದ್ದಿದೆ. ಒಂದೇ ದಿನದ ಪ್ರಚಾರವೇ ಸಾಕಷ್ಟು ಪರಿಣಾಮ ಬೀರಿದೆ. ಜಯಮಾಲರಿಗೆ ನನಗಿಂತ ಹೆಚ್ಚಾಗಿ ಗ್ಲಾಮರ್ ಇದೆ ಎಂದರು.

ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಅಳಿವು ಉಳಿವಿನ ಪ್ರಶ್ನೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಧ್ವರಾಜ್, ಕಾಂಗ್ರೆಸ್ ಪಕ್ಷ ಆನೆ ಇದ್ದ ಹಾಗೆ, ಆನೆಯ ಚಿತ್ರ ಎಷ್ಟೇ ಚಿಕ್ಕದಾಗಿ ಬರೆದ್ರೂ ಅದು ಆನೆಯೇ. ಸೂರ್ಯ ಚಂದ್ರರಿರುವ ವರೆಗೂ ಕಾಂಗ್ರೆಸ್ ಪಕ್ಷ ಸದೃಢವಾಗಿರತ್ತೆ ಎಂದರು.

ಹಿಂದೂ, ಸನಾತನ ಧರ್ಮ ಹೇಗೆ ಪುರಾತನವೋ ಹಾಗೇ ಕಾಂಗ್ರೆಸ್ ಪಕ್ಷಕ್ಕೂ ಹಾಗೆ ಪ್ರಾಚೀನವಾದ ಪಕ್ಷ. ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ಅಳಿಸಲು ಸಾಧ್ಯವೇ ಇಲ್ಲ . ನಾನು ಬಿಟ್ಟರೂ ಕಾಂಗ್ರೆಸ್ ಪಕ್ಷ ಉಳಿಯುತ್ತೆ. ಯಾರು ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷವನ್ನು ಮುಕ್ತ ಮಾಡಲು ಅಸಾಧ್ಯ. ಹಾಗಂತ ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ.
ಚುನಾವಣಾ ವಾತಾವರಣ ಕಾಂಗ್ರೆಸ್ ಪರವಾಗಿದೆ. ಬಿಜೆಪಿ ಶಾಸಕರ ಹಣೆ ಬರಹ ಏನಂತ ಜನಕ್ಕೆ ಗೊತ್ತಾಗಿದೆ ಎಂದು ಲೇವಡಿ ಮಾಡಿದರು.

 
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...