HOME » NEWS » State » ACTOR JAGGESH PRESS MEET ON DARSHAN FANS ISSUE PMTV SESR

ಪೊಲೀಸರು ಚಪ್ಪಲಿ ಇಲ್ಲದೆ ದರ್ಶನ್​ ನಿಲ್ಲಿಸಿದ್ದಾಗ ನೋಡಲು ಹೋದವರು ಯಾರು?; ಜಗ್ಗೇಶ್​​

ದೊಡ್ಡ ನಟನನ್ನು  ಸಣ್ಣ ಹೀರೋಯಿನ್ ಮನೆಯೊಳಗೆ ಚಪ್ಪಲಿ ಇಲ್ಲದೆ ನಿಲ್ಲಿಸೋದು ಸರಿಯಲ್ಲ.‌ ಕಾನೂನು ಪ್ರಕಾರ ಕ್ರಮ ಕೈಗೊಂಡು ಆತನನ್ನ ಕಳುಹಿಸಿ ಎಂದು ಪೋಲಿಸರಿಗೆ ಹೇಳಿದ್ದೆ

news18-kannada
Updated:February 24, 2021, 7:03 PM IST
ಪೊಲೀಸರು ಚಪ್ಪಲಿ ಇಲ್ಲದೆ ದರ್ಶನ್​ ನಿಲ್ಲಿಸಿದ್ದಾಗ ನೋಡಲು ಹೋದವರು ಯಾರು?; ಜಗ್ಗೇಶ್​​
ಜಗ್ಗೇಶ್​
  • Share this:
ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿಗಳ ವರ್ತನೆ ಕುರಿತು ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ ಕೂಡ ಅವರು ಒಂದು ಕರೆ ಮಾಡಿ. ಇದಕ್ಕೆ ಇತಿಶ್ರೀ ಆಡುವ ಪ್ರಯತ್ನ ನಡೆಸಿಲ್ಲ ಎಂದು ಹಿರಿಯ ನಟ ಜಗ್ಗೇಶ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರಿನ ಅತ್ತಳ್ಳಿ ಗ್ರಾಮದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಗ್ಗೇಶ್​, ದರ್ಶನ್​ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಅಂದು ಬಂದು ತಮ್ಮ ಜೊತೆಗೆ ಗಲಾಟೆ ನಡೆಸಿದವರು ದರ್ಶನ್ ಅಕ್ಕಪಕ್ಕದಲ್ಲಿಯೇ ನಿಂತುಕೊಳ್ಳುವವರೇ ಎಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನ ವಿರುದ್ಧ ಗಲಾಟೆಗೆ ಮೊದಲೇ ಯೋಜನೆ ರೂಪಿಸಿದ್ದರು. ಇದಕ್ಕಾಗಿ  ಗಲಾಟೆ ಮಾಡಿ ಹೆದ್ದಾರಿ ತಡೆಯಬೇಕು‌ ಎಂದುಕೊಂಡಿದ್ದರು. ಇದು ಆಗದಿದ್ದಾಗ ಅವರು ‌ ಶೂಟಿಂಗ್ ಸೆಟ್‌ಗೆ ಬಂದು ಗಲಾಟೆ ಮಾಡಿದ್ದಾರೆ. ಇದಕ್ಕೆ ನಮ್ಮ ಸೆಟ್‌ನಲ್ಲಿದ್ದವರೇ ನನ್ನ ಚಲನವಲನದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಯಾರೆಂದು ಶೀಘ್ರದಲ್ಲೇ ಪತ್ತೆ ಹಚ್ಚುತ್ತೇವೆ ಎಂದಿದ್ದಾರೆ. 

ದರ್ಶನ್​ ಚಪ್ಪಲಿ ಇಲ್ಲದೇ ನಿಂತಾಗ ನೆರವಾದವನು ನಾನು

ದರ್ಶನ್‌ನನ್ನು ನಾನು ಬಹಳ ಪ್ರೀತಿಸುತ್ತೇನೆ.‌ ಅವತ್ತು ಪೋಲಿಸರು ಅವನನ್ನು ಚಪ್ಪಲಿ ಇಲ್ಲದೆ ನಿಲ್ಲಸಿದ್ದಾ ಬಂದವರು ಯಾರು? ಎಂದು ಹಳೆ ಘಟನೆ ಕೆದಕಿದರು.  ಅಷ್ಟು ದೊಡ್ಡ ನಟನನ್ನು  ಸಣ್ಣ ಹೀರೋಯಿನ್ ಮನೆಯೊಳಗೆ ಚಪ್ಪಲಿ ಇಲ್ಲದೆ ನಿಲ್ಲಿಸೋದು ಸರಿಯಲ್ಲ.‌ ಕಾನೂನು ಪ್ರಕಾರ ಕ್ರಮ ಕೈಗೊಂಡು ಆತನನ್ನ ಕಳುಹಿಸಿ ಎಂದು ಪೋಲಿಸರಿಗೆ ಹೇಳಿದ್ದೆ. ಇದನ್ನ ದರ್ಶನ್ ಕೂಡ ನೆನೆಯಬೇಕು. ನಾನೇ ಕನ್ನಡದ ರಜನಿಕಾಂತ್ ದರ್ಶನ್ ಅಂತ ಹೇಳಿದ್ದೆ. ಆತ ಈ ಗ ಘಟನೆ ಬಳಿಕ ನನಗೆ ಫೋನ್ ಮಾಡಬೇಕಿತ್ತು.‌ ನನ್ನ ಹೆಂಡತಿ  ದರ್ಶನ್​ಗೆ ಅಪಘಾತವಾಗಿದೆ ಎಂದಾಗ ಕರೆ ಮಾಡಿ ವಿಚಾರಿಸಿದ್ದೆ. ಈಗ ಎಲ್ಲಿದ್ದಾರೆ ಅವರೆಲ್ಲಾ ಅಂತ ಕೇಳುತ್ತಿದ್ದಾರೆ. ಇದು ಕೃತಜ್ಞತೆ ಇಲ್ಲದ ಸಮಾಜ ನನ್ನ ಕೈಗೆಳಕೆಗೆ ಎಷ್ಟೋ ನಟ, ನಟಿಯರು ತಯಾರಾಗಿದ್ದಾರೆ. ನಾನು ಎನ್ನೋದು, ವಯಸ್ಸು ಎನ್ನೋದು ಶಾಶ್ವತ ಅಲ್ಲ. ಕಡೆವರೆಗೂ ಬರುವುದು ಗುಣ ಅಷ್ಟೇ ಎಂದು ಕಿಡಿಕಾರಿದ್ದಾರೆ.

ಅವತ್ತು ಗಲಾಟೆ ಮಾಡಲು ಬಂದಿದ್ದ ಒಂದಿಬ್ಬರು ದಿನ ಬೆಳಗಾದರೆ ದರ್ಶನ್ ಜೊತೆ ಇರುತ್ತಾರೆ. ಎಲ್ಲಾ ಕಡೆ ಅವರ ಫೋಟೋ ಇದೆ. ಇದನ್ನು ಮುಂದುವರೆಸೋಲ್ಲ, ಆದರೆ ನನಗೆ ಮಾಡಿದಂತೆ ಮತ್ಯಾರಿಗೂ ಮಾಡಬೇಡಿ ಎಂದು ಮನವಿ ಮಾಡಿದರು.

ಸಿನಿಮಾ ಓಡುವುದರ ಮೇಲೆ ಸ್ಟಾರ್ ಡಮ್ ನಿರ್ಧಾರ

ಚಿತ್ರರಂಗದ ಎಲ್ಲಾ ವಿಭಾಗದಲ್ಲೂ ನಾನು ಕೆಲಸ ಮಾಡಿದ್ದೀನಿ.‌ ಹಾಗಾಗಿ ಚಿತ್ರರಂಗದ ಹಣೆಬರಹ ನನಗೆ ಗೊತ್ತು. ಮುಂಚೆ ನೂರು ದಿನ ಸಿನೆಮಾ ಓಡುತ್ತಿದ್ದವು. ಇವತ್ತು 1-2 ದಿನ ಸಿನಿಮಾ ಓಡುವುದರ ಮೇಲೆ ಸ್ಟಾರ್ ಡಮ್ ನಿರ್ಧಾರ ಆಗುತ್ತಿದೆ. ಈ‌ ಪರಿಸ್ಥಿತಿಯಿಂದ ನಮ್ಮಂತ ಸ್ಟಾರ್‌ಗಳಿಗೆ ಸಹಾಯವಾಗುತ್ತಿದೆ. ಆದರೆ ನಿರ್ಮಾಪಕರಿಗಲ್ಲ. ನಾವು ಒಗ್ಗಟ್ಟಿನ ಮೂಲಮಂತ್ರದಲ್ಲಿ ಬೆಳೆದವರು. ಒಂದು ವಿಚಾರವನ್ನ ಅಳೆದು ತೂಗಿ ವಿಮರ್ಶೆ ಮಾಡಬೇಕು. ನಾನು ಹಳೆ ಕಥೆಯನ್ನ ಮತ್ತೆ ಮತ್ತೆ ಹೇಳಲು ಹೋಗಲ್ಲ. ಎಲ್ಲಾ ಮಾಧ್ಯಮ ಮಿತ್ರರಿಗೂ ಧನ್ಯವಾದ. ಜಾಗರೂಕತೆಯಿಂದ ನಿರ್ವಹಣೆ ಮಾಡಿದ್ದೀರಾ ಎಂದು ಕೃತಜ್ಞತೆ ಸಲ್ಲಿಸಿದರು.

ಇದನ್ನು ಓದಿ: ಜಗ್ಗೇಶ್​ ಟ್ವಿಟರ್​ ಲೈವ್​: ಯಾವೊಬ್ಬ ನಟ, ಅವರ ಅಭಿಮಾನಿಗಳು ನನ್ನ ಬಳಿ ಬರಲಾಗುವುದಿಲ್ಲ ಎಂದ ನವರಸ ನಾಯಕಜಗತ್ತು ನಶ್ವರ

ತೋತಾಪುರಿ ಸಿನಿಮಾ ಚಿತ್ರೀಕರಣದ ವೇಳೆ  20 ಹುಡುಗರು ಬಂದು ಅವತ್ತು ಗಲಾಟೆ ಮಾಡಿದರು. ಚಿತ್ರೀಕರಣ ನಿಲ್ಲಬಾರದು ಎನ್ನುವುದು ನನ್ನ ಉದ್ದೇಶವಾಗಿತ್ತು. ಬಹಳ ಶಾಂತಿಯುತವಾಗಿ ಇಲ್ಲಿ ಶೂಟಿಂಗ್ ನಡೆಯುತ್ತಿತ್ತು. ನಮ್ಮನ್ನ ಬೆಳೆಸುವವರು, ಚಪ್ಪಾಳೆ ತಟ್ಟುವವರ ದೇವರು. ನಾವೇ ದೇವರು ಅಂತ ಬೋರ್ಡ್ ಹಾಕಿಕೊಂಡವರಲ್ಲ. ಚಿರು ಸರ್ಜಾ ತೀರಿ ವರ್ಷ ಆಗಿಲ್ಲ, ಎಷ್ಟು ಜನ ಅವರ ಮನೆಗೆ ಹೋಗಿ ಮನೆಯವರನ್ನ ಸಂತೈಸಿದ್ರಿ. ಜಗ್ಗೇಶ್ ಸತ್ತರೂ ಅಷ್ಟೇ ಎಲ್ಲಾ ಮರೆತುಹೋಗುತ್ತಾರೆ. ಜಗತ್ತು ನಶ್ವರ. ನಾನು ಎನ್ನುವ ಅಹಂ ಬೇಡ. ಗಲಾಟೆ ನಡೆದ ದಿನ ನಾನು ದೊಡ್ಡದು ಮಾಡಿದ್ದರೆ ನಿರ್ಮಾಪಕನ ಬದುಕಿಗೆ ಪೆಟ್ಟು ಬಿದ್ದಿರುತ್ತಿತ್ತು.‌ ಕೆಲ ಮಾಧ್ಯಮಗಳು ಈ ವಿಚಾರವನ್ನ ತಣ್ಣಗೆ ಮಾಡಬಹುದಿತ್ತು. ಆದರೆ ಯಾಕೆ ಹೀಗೆ ಮಾಡಿದರೋ ಗೊತ್ತಿಲ್ಲ. ದಯವಿಟ್ಟು ಈ ವಿಚಾರ ಇಲ್ಲಿಗೆ ಬಿಟ್ಟು ಬಿಡಿ ಎಂದು ಎದ್ದು ಹೊದರು

ಜಾತಿ ತರಬೇಡಿ ಎಂದ ನಿರ್ಮಾಪಕ

ಈ ಗಲಾಟೆ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ನಿರ್ಮಾಪಕ ಸಂದೇಶ್ ನಾಗರಾಜ್,  ನಟ  ಜಗ್ಗೇಶ್ ದರ್ಶನ್ ಬಗ್ಗೆ ಈ ರೀತಿ ಮಾತನಾಡಬಾರದು. ಅವರು ಒಮ್ಮೊಮ್ಮೆ ಒಂದೊಂದು ತರಹದ ಹೇಳಿಕೆ ನೀಡುವುದು ತಪ್ಪು. ದರ್ಶನ್ ಈ ಬಗ್ಗೆ ಒಂದು ಪ್ರತಿಕ್ರಿಯೆ ನೀಡಿಲ್ಲ. ದರ್ಶನ್ ಗೆ ಈ ವಿಚಾರವೇ ಗೊತ್ತಿಲ್ಲ. ಸಿನಿಮಾಕ್ಕೆ ಯಾವುದೇ ಜಾತಿ ತರಬಾರದು. ನಾನು ಕೂಡ ಸೀನಿಯರ್ ಇದ್ದೀನಿ. ಒಂದು ಜಾತಿಗೆ ಸಿನಿಮಾ ತೆಗೆಯುವುದಿಲ್ಲ. ಸಿನಿಮಾಗೆ ಯಾವುದೇ ಜಾತಿ ಇರುವುದಿಲ್ಲ. ದರ್ಶನ ಹಾಗೂ ಜಗ್ಗೇಶ್ ಅಣ್ಣ ತಮ್ಮಂದಿರು ತರ ಇರಬೇಕು. ಜಗ್ಗೇಶ್‌ಗೆ ನಾನು ವಿನಂತಿ ಮಾಡುತ್ತಿದ್ದೇನೆ. ಇದನ್ನು ಇಲ್ಲಿಗೆ ನಿಲ್ಲಿಸಿ ಬಿಡಿ. ಮುಂದೆ ಇಬ್ಬರನ್ನು ಕೂರಿಸಿ ಮಾತನಾಡುತ್ತೇನೆ ಎಂದು ಮೈಸೂರಿನಲ್ಲಿ  ಪ್ರತಿಕ್ರಿಯೆ ನೀಡಿದ್ದಾರೆ.
Published by: Seema R
First published: February 24, 2021, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories