Actor Jaggesh: ಮೈಸೂರು ಅತ್ಯಾಚಾರ ಪ್ರಕರಣ ಬೇಧಿಸಿದ ಪೊಲೀಸರಿಗೆ 1 ಲಕ್ಷ ರೂ ಚೆಕ್​​ ನೀಡಿದ ನಟ ಜಗ್ಗೇಶ್​​

ಈ ಹಿಂದೆ ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ್ದ ಹ್ಯಾಂಗ್ ಮ್ಯಾನ್​ಗೆ ಕೂಡ ನವರಸ ನಾಯಕ ಜಗ್ಗೇಶ್ 1 ಲಕ್ಷ ರೂ ಉಡುಗೊರೆ ನೀಡಿದ್ದರು

ಚೆಕ್​ ಹಸ್ತಾಂತರಿಸಿದ ನಟ ಜಗ್ಗೇಶ್​​​

ಚೆಕ್​ ಹಸ್ತಾಂತರಿಸಿದ ನಟ ಜಗ್ಗೇಶ್​​​

 • Share this:
  ಬೆಂಗಳೂರು (ಆ. 28): ಮೈಸೂರು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ (Mysore gang rape) ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಕರ್ನಾಟಕ ರಾಜ್ಯ ಪೊಲೀಸರಿಗೆ ನಟ ಜಗ್ಗೇಶ್ (Actor Jaggesh)​ ಅಭಿನಂದನೆ ತಿಳಿಸಿದ್ದಾರೆ. ಅಲ್ಲದೇ ಈ ಪ್ರಕರಣ ಬೇಧಿಸಿದ ಪೊಲೀಸ್​ ಸಿಬ್ಬಂದಿಗಳಿಗೆ ಒಂದು ಲಕ್ಷ ರೂ ಬಹುಮಾನ ನೀಡಿದ್ದಾರೆ. ಕೆಕೆ ಗೆಸ್ಟ್​ ಹೌಸ್​ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (araga jnanendra) ಅವರನ್ನು ಭೇಟಿಯಾದ ನಟ ಜಗ್ಗೇಶ್​ ಮತ್ತು ಅವರ ಹೆಂಡತಿ ಪರಿಮಳ ಜಗ್ಗೇಶ್​ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಒಂದು ಲಕ್ಷ ರೂ ಮೌಲ್ಯದ ಚೆಕ್​ ನೀಡಿದರು. ಈ ವೇಳೆ ಮಾತನಾಡಿದ ಅವರು, ಅಮಾಯಕ ಮಹಿಳೆ ಮೇಲೆ ದುಷ್ಕೃತ್ಯ ನಡೆಸಿದ ದುರುಳರನ್ನು ತನಿಖೆ ನಡೆಸಿ ಬಂಧಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಗಳ ದಕ್ಷತೆಗೆ ಮೆಚ್ಚಿ ಬಹುಮಾನ ಕೊಟ್ಟೀದ್ದೇನೆ ಎಂದು ತಿಳಿಸಿದ್ದಾರೆ.

  ಈ ಹಿಂದೆ ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ್ದ ಹ್ಯಾಂಗ್ ಮ್ಯಾನ್​ಗೆ ಕೂಡ ನವರಸ ನಾಯಕ ಜಗ್ಗೇಶ್ ಉಡುಗೊರೆ ಘೋಷಿಸಿದ್ದಾರೆ. ಹ್ಯಾಂಗ್​ ಮ್ಯಾನ್​ ಪವನ್ ಜಲ್ಲಾದ್‍ಗೆ ನಟ ಜಗ್ಗೇಶ್​ ಒಂದು ಲಕ್ಷ ಉಡುಗೊರೆಯನ್ನು ನೀಡಿದ್ದರು.

  ಆಗಸ್ಟ್ 24 ರಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಗೆಳೆಯನೊಂದಿಗೆ ಇದ್ದ ವಿದ್ಯಾರ್ಥಿ ಮೇಲೆ ಆರೋಪಿಗಳು ಕಂಠಪೂರ್ತಿ ಕುಡಿದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೆ ಸಾಕ್ಷಿಯಾಗಿ ಘಟನೆ ನಡೆದ ಸ್ಥಳದಲ್ಲಿ ಬಿಯರ್ ಬಾಟಲ್​​ಗಳು ಬಿದ್ದಿದ್ದವು. ಜೊತೆಗೆ ಕಾಮುಕರು ಕಂಠಪೂರ್ತಿ ಕುಡಿದಿದ್ದರು ಎಂದು ಸಂತ್ರಸ್ಥೆ ಹಾಗೂ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತ ಇರುವ ಬಾರ್​ ಆ್ಯಂಡ್​ ರೆಸ್ಟೋರೆಂಟ್​​ಗಳ ಸಿಸಿಟಿವಿ ದೃಶ್ಯವನ್ನು ಪಡೆದಿದ್ದರು.

  ಇದನ್ನು ಓದಿ: ಮಹಿಳೆಯ ರಕ್ಷಣೆಗೆ ಮಂಗಳೂರು ಪೊಲೀಸರ ನೂತನ ಯೋಜನೆ

  ಇಡೀ ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಕಳಂಕ ತಂದಿದ್ದ ಈ ಪ್ರಕರಣವನ್ನು ಭೇದಿಸಲು ಏಳು ತಂಡಗಳನ್ನು ರಚಿಸಲಾಗಿತ್ತು. ಸಂತ್ರಸ್ಥೆಯಿಂದ ಯಾವುದೇ ರೀತಿಯ ಪೂರಕ ಮಾಹಿತಿ ಸಿಗದ ಕಾರಣ, ಈ ಪ್ರಕರಣದ ಆರೋಪಿಗಳನ್ನು ಹಿಡಿಯುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಈ ದುರ್ಘಟನೆ ನಡೆಯುವ ವೇಳೆ ಜೊತೆಯಲ್ಲಿ ಇದ್ದ ಸ್ನೇಹಿತನಿಂದ ಸಿಕ್ಕ ಅಲ್ಪ ಮಾಹಿತಿಯನ್ನು ಪಡೆದ ಪೊಲೀಸರು ಸಾಕಷ್ಟು ಚುರುಕುತನದಿಂದ ಕೆಲಸ ಮಾಡಿ ಆರೋಪಿಗಳನ್ನು ಬಲೆಗೆ ಬೀಳಿಸಿದ್ದರು.

  ರಾಜ್ಯದಲ್ಲಿ ಕೊರೋನಾ ಹಿನ್ನಲೆ ಶಾಲೆಗಳೇ ನಡೆದಿಲ್ಲ. ಆದರೂ ಕೂಡ ನಟ ಕೋಮಲ್  ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ವಿತರಿಸುವ ಸ್ವೆಟರ್​ ಟೆಂಡರ್ (Sweater Tender)​ ಪಡೆದು ಕೊಂಡು, ಹಣ ಪಡೆದು ಕೊಂಡಿದ್ದಾರೆ. ಈ ಮೂಲಕ ಅಕ್ರಮ ವ್ಯವಹಾರ ನಡೆಸಿದ್ದಾರೆ ಎಂಬ ದಲಿತ ಸಂಘರ್ಷ ಸಮಿತಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಆಕ್ರೋಶ ವ್ಯಕ್ತ ಪಡಿಸಿದರು. ಸುಖಾ ಸುಮ್ಮನೆ ಆರೋಪ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ಧಮೆ ದಾಖಲಿಸುವ ಎಚ್ಚರಿಕೆ ನೀಡಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: