ಬೆಂಗಳೂರು (ಜೂ 21): ಗೋವಾದ ಸಮುದ್ರ ತಟದಲ್ಲಿ ಪಲ್ಟಿ ಹೊಡೆಯುವಾಗ ನಟ ದಿಗಂತ್ (Actor Diganth) ಕುತ್ತಿಗೆಗೆ ತೀವ್ರ ಪೆಟ್ಟು ಬಿದ್ದಿದ್ದು, ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ (Manipal Hospital) ದಾಖಲು ಮಾಡಲಾಗಿದೆ. ನಟ ದಿಗಂತ್ ಅವರ ತಂದೆ-ತಾಯಿ ವೈದ್ಯರೊಂದಿಗೆ ಚರ್ಚೆ ನಡೆಸಿದ್ರು. ವೈದ್ಯರು ದಿಗಂತ್‌ರನ್ನು ಪರೀಕ್ಷಿಸಿ ಶಸ್ತ್ರ ಚಿಕಿತ್ಸೆಯನ್ನು (Surgery) ಮಾಡುವ ಅವಶ್ಯಕತೆಯಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಮೂರುಗಂಟೆಗಳ ಕಾಲ ಕತ್ತಿನ ಹುರಿ ಶಸ್ತ್ರಚಿಕಿತ್ಸೆ ನಡೆಯಲಿದೆ.
ನನ್ನ ಮಗನಿಗೆ ಏನು ಆಗಿಲ್ಲ- ದಿಗಂತ್
ಏನೂ ಆಗಲ್ಲ ಎಂದು ಡಾಕ್ಟರ್ ಹೇಳಿದ್ದಾರೆ. ನನ್ನ ಮಗ ಒಂದೆರಡು ದಿನಗಳಲ್ಲಿ ಎದ್ದು ಓಡಾಡ್ತಾನೆ ಅಂತ ಎಂದು ದಿಗಂತ್ ತಂದೆ ಹೇಳಿದ್ದಾರೆ. ಇನ್ಸಿಡೆಂಟ್ ಹೇಗೆ ಆಯ್ತು ಎಂದು ನಾನು ನೋಡಿಲ್ಲ. ಓಡಾಡುವಾಗ ಬೀಳೋದು ಸಹಜ, ಚೆನ್ನಾಗಿ ಮಾತನಾಡ್ತಿದ್ದಾನೆ. ಆಪರೇಷನ್ಗೆ ಕರೆದುಕೊಂಡು ಹೋಗಿದ್ದಾರೆ. ಮೈನರ್ ಇರೋದ್ರಿಂದ ಈಗಲೇ ಆಪರೇಷನ್ ಮಾಡ್ತೀವಿ ಅಂತ ಕರೆದುಕೊಂಡು ಹೋಗಿದ್ದಾರೆ. ಮುಂದೆ ಸಮಸ್ಯೆ ಆಗಬಾರದು ಅಂತ ಈಗಲೇ ಆಪರೇಷನ್ ಮಾಡ್ತಿದ್ದಾರೆ ಎಂದು ದಿಗಂತ್ ತಂದೆ ಹೇಳಿದ್ದಾರೆ.
ಕುತ್ತಿಗೆ ಬೆನ್ನಿಗೆ ಬಲವಾದ ಪೆಟ್ಟು
ನಟ ದಿಗಂತ್ ತನ್ನ ಕುಟುಂಬಸ್ಥರ ಜೊತೆೆ ಗೋವಾಕ್ಕೆ ತೆರಳಿದ್ದ ವೇಳೆ ಘಟನೆಯಾಗಿದೆ. ಈ ಘಟನೆ ಹೇಗಾಯಿತು ತಿಳಿದಿಲ್ಲ ಕುತ್ತಿಗೆ ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದೆ. ದಿಗಂತ್ ಚೇತರಿಸಿಕೊಳ್ಳುತ್ತಿದ್ದಾರೆ.' ಎಂದು ಐಂದ್ರಿತಾ ತಾಯಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Diganth: ಪ್ರಾಣವನ್ನೇ ತೆಗೆದು ಬಿಡುತ್ತೆ ಡೆಡ್ಲಿ ಸಮ್ಮರ್ ಶಾಟ್! ಅಷ್ಟೆಲ್ಲಾ ಕಲಿತಿದ್ದ ನಟ ದಿಗಂತ್ ಎಡವಿದ್ದೆಲ್ಲಿ?
ಸಮ್ಮರ್‌ಸಾಲ್ಟ್ ಮಾಡುವಾಗ ಘಟನೆ
ದಿಗಂತ್ ತಮ್ಮ ಪತ್ನಿ ಐಂದ್ರಿತಾ ರೈ ಅವರೊಂದಿಗೆ ರಜೆಗಾಗಿ ಗೋವಾಕ್ಕೆ ಬಂದಿದ್ದರು. ಫಿಟ್‌ನೆಸ್ ಫ್ರೀಕ್ ಆಗಿರುವ ಮತ್ತು ಸಾಹಸ ಕ್ರೀಡೆಗಳನ್ನು ಇಷ್ಟಪಡುವ ದಿಗಂತ್ ಸಮ್ಮರ್‌ಸಾಲ್ಟ್ ಮಾಡುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ.
ಮಣಿಪಾಲ್ ಆಸ್ಪತ್ರೆಯ ವೈದ್ಯರು ಹೇಳುವುದೇನು?
ಗೋವಾದಿಂದ ಏರ್ ಲಿಫ್ಟ್‌ನಲ್ಲಿ ಬಂದ ದಿಗಂತ್‌ನನ್ನು ಆಂಬ್ಯುಲೆನ್ಸ್‌ನಲ್ಲಿ ಕರೆತಂದು ಮಣಿಪಾಲ್ ಆಸ್ಪತ್ರೆೆಗೆ ದಾಖಲು ಮಾಡಲಾಯಿತು. ಮಣಿಪಾಲ್ ಆಸ್ಪತ್ರೆಯ ವೈದ್ಯರು ಈಗಾಗಲೇ ದಿಗಂತ್‌ರನ್ನು ಪರೀಕ್ಷಿಸಿದ್ದಾರೆ. ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಶಸ್ತ್ರ ಚಿಕಿತ್ಸೆಯನ್ನು ಮಾಡುವುದು ಅನಿವಾರ್ಯವಾಗಬಹುದು ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಏನಿದು ಸಮ್ಮರ್ ಶಾಟ್
ಸರಿಯಾಗಿ ಸಮ್ಮರ್ ಶಾಟ್ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದನ್ನು ಎಲ್ಲೆಂದೆರಲ್ಲಿ ಮಾಡುವುದು ನಿಜಕ್ಕೂ ಡೇಂಜರ್. ಅದರಲ್ಲೂ ಎಲ್ಲಾ ಚೆನ್ನಾಗಿ ಕಲಿತಿದ್ದ ದಿಗಂತ್ ಅವರು ಎಡವಿದ್ದೆಲ್ಲಿ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಗೋವಾ ಟ್ರಿಪ್ಗೆ ತೆರಳಿದ್ದು. ಇಲ್ಲಿ ಸಮುದ್ರ ತೀರದಲ್ಲಿ ಸಮ್ಮರ್ ಶಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ . ಒಂದೇ ಒಂದು ಚೂರು ಕೂಡ ಎಡವಿದರು ಅಪಾಯ ಕಟ್ಟಿಟ್ಟ ಬುತ್ತಿ. ಪ್ರಾಣಕ್ಕೆ ಕುತ್ತು ತರುತ್ತೆ ಈ ಸಮ್ಮರ್ ಶಾಟ್ ಈ ಹಿಂದೆ ಸಮ್ಮರ್ ಶಾಟ್ ಮಾಡಲು ಹೋದ ಯುವಕನೊಬ್ಬ ಮೃತಪಟ್ಟಿದ್ದ.
ಇದನ್ನೂ ಓದಿ: Actor Diganth: ದಿಗಂತ್ ಕಣ್ಣಿಗೆ ಏನಾಗಿತ್ತು? ದಿಗಂತ್‌ಗೆ ಅಪಾಯಗಳು ಬರುತ್ತಲೆ ಇವೆ ಏಕೆ?
ದಿಗಂತ್‌ಗೆ ಪ್ರಕೃತಿ ಎಂದರೆ ಬಲು ಇಷ್ಟ. ಹೆಚ್ಚು ಸೈಕ್ಲಿಂಗ್ ಮಾಡುವ ಇವರು ನಟ ಪುನೀತ್ ರಾಜ್ಕುಮಾರ್ಗೂ ಸೈಕ್ಲಿಂಗ್ ಹುಚ್ಚು ಹಿಡಿಸಿದ್ರಂತೆ. ಯುವ ರತ್ನ ಸಿನಿಮಾ ಶೂಟಿಂಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಸೈಕಲ್ನಲ್ಲೇ ಸವಾರಿ ಮಾಡುತ್ತಿದ್ದರಂತೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ