ಪ್ರಜ್ವಲ್​​​ ನನ್ನ ಸ್ನೇಹಿತ, ಹಾಸನದಲ್ಲಿ ಬೇಕಾದ್ರೆ ಜೆಡಿಎಸ್​​ಗೆ ಪ್ರಚಾರ ಮಾಡ್ತೀನಿ; ದರ್ಶನ್​​!

ಇನ್ನು ಯಶ್​​ ಬಳಿಕ ಮಾತನಾಡಿದ ನಟ ದರ್ಶನ್​​ ಅವರು ಅಪಾಜಿ ಕನಸುಗಳನ್ನು ಈಡೇರಸಲಿಕ್ಕಾಗಿ ಇಲ್ಲಿ ಸೇರಿದ್ದೇವೆ. ಓರ್ವ ಸ್ಟಾರ್​​ ನಟನಾಗಿ ನಾವು ಬಂದಿಲ್ಲ. ಬದಲಿಗೆ ಅಮ್ಮನ ಮಕ್ಕಳ್ಳಾಗಿ ನಾನು ಮತ್ತು ನಮ್ಮ ಹೀರೋ ಯಶ್​​ ಬಂದಿದ್ದೇವೆ ಎಂದರು.

Ganesh Nachikethu | news18
Updated:March 18, 2019, 2:48 PM IST
ಪ್ರಜ್ವಲ್​​​ ನನ್ನ ಸ್ನೇಹಿತ, ಹಾಸನದಲ್ಲಿ ಬೇಕಾದ್ರೆ ಜೆಡಿಎಸ್​​ಗೆ ಪ್ರಚಾರ ಮಾಡ್ತೀನಿ; ದರ್ಶನ್​​!
ದರ್ಶನ್​​ ಮತ್ತು ಪ್ರಜ್ವಲ್​​
Ganesh Nachikethu | news18
Updated: March 18, 2019, 2:48 PM IST
ಬೆಂಗಳೂರು(ಮಾ.16): ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಈಗಾಗಲೇ ಸುಮಲತಾ ಅಂಬರೀಶ್​​ ಅವರು ಘೋಷಿಸಿದ್ಧಾರೆ. ಈ ಮೂಲಕ ತಾವು ಸಿಎಂ ಪುತ್ರ ನಿಖಿಲ್​​ ಕುಮಾರಸ್ವಾಮಿ ಎದುರು ಎದುರಾಳಿಯಾಗಿ ಅಖಾಡಕ್ಕಿಳಿಯುತ್ತಿದ್ದೇನೆ ಎಂದು ಖಾತ್ರಿ ಪಡಿಸಿದ್ದಾರೆ. ಅಲ್ಲದೇ ಅಂಬರೀಶ್​​ ಅವರ ಪತ್ನಿ ಬೆಂಬಲಕ್ಕೆ ನಟ ದರ್ಶನ್​​ ಮತ್ತು ಯಶ್​​​ ಮೈಮನಸ್ಸು ಮರೆತು ಒಂದಾಗಿದ್ದಾರೆ.

ತಮ್ಮ ಅಂತಿಮ ನಿರ್ಧಾರ ತಿಳಿಸಲು ಇಂದು ಸುಮಲತಾ ಅಂಬರೀಶ್​​ ಅವರು ಸುದ್ದಿಗೋಷ್ಠಿ ಕರೆದಿದ್ದರು. ಈ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ರಾಕ್​​ಲೈನ್​​​ ವೆಂಕಟೇಶ್​​, ನಟ ಯಶ್​​, ದರ್ಶನ್​​, ದೊಡ್ಡಣ್ಣ ಮತ್ತು ಪುತ್ರ ಅಭಿಶೇಕ್​​ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸುಮಲತಾ ಅವರು, ನನ್ನ ಹಿತೈಷಿಗಳ ಬೆಂಬಲದೊಂದಿಗೆ ಮಾ.20ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.

ಇನ್ನು ಯಶ್​​ ಬಳಿಕ ಮಾತನಾಡಿದ ನಟ ದರ್ಶನ್​​ ಅವರು ಅಪ್ಪಾಜಿ ಕನಸುಗಳನ್ನು ಈಡೇರಿಸಲಿಕ್ಕಾಗಿ ಇಲ್ಲಿ ಸೇರಿದ್ದೇವೆ. ಓರ್ವ ಸ್ಟಾರ್​​ ನಟನಾಗಿ ನಾವು ಬಂದಿಲ್ಲ. ಬದಲಿಗೆ ಅಮ್ಮನ ಮಕ್ಕಳ್ಳಾಗಿ ನಾನು ಮತ್ತು ನಮ್ಮ ಹೀರೋ ಯಶ್​​ ಬಂದಿದ್ದೇವೆ ಎಂದರು.

ಇದನ್ನೂ ಓದಿ: ಸುಮಲತಾರಿಗಾಗಿ ಒಂದಾದ 'ಗಜ ಕೇಸರಿ': ಮನಸ್ತಾಪ ಮರೆತು ವೇದಿಕೆ ಹಂಚಿಕೊಂಡ ದರ್ಶನ್​-ಯಶ್​..!

ಬಳಿಕ ನೀವು ನಿಖಿಲ್​​ ಕುಮಾರಸ್ವಾಮಿ ವಿರುದ್ಧವಾಗಿ ಪ್ರಚಾರ ಮಾಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ದರ್ಶನ್, "ಒಂದು ಕ್ಷೇತ್ರದಲ್ಲಿ ಇಬ್ಬರ ಪರವಾಗಿ ಪ್ರಚಾರ ಮಾಡಲಿಕ್ಕೆ ಆಗುವುದಿಲ್ಲ. ನನಗೆ ಪ್ರಜ್ವಲ್​​ ಒಳ್ಳೆಯ ಸ್ನೇಹಿತ, ಹಾಸನದಲ್ಲಿ ಬೇಕಾದರೇ ಜೆಡಿಎಸ್​​ ಪರವಾಗಿ ಪ್ರಚಾರ ಮಾಡುತ್ತೇನೆ. ಮಂಡ್ಯದಲ್ಲಿ ಮಾತ್ರ ಫುಲ್​​ ಸಿನಿಮಾ ಮಾಡ್ತೀವಿ ಎಂದು ಖಡಕ್​​ ಆಗಿಯೇ ಹೇಳಿದರು.

ಇದನ್ನೂ ಓದಿ: ಗೌಡರ ಕುಡಿ ಪ್ರಜ್ವಲ್ ಸೋಲಿಸಲು ರಣತಂತ್ರ ; ಬಿಜೆಪಿಯಿಂದ ಎ.ಮಂಜು ಸ್ಪರ್ಧೆ..!ಈ ಮುನ್ನ ಮಾತನಾಡಿದ್ದ ಸುಮಲತಾ ಅಂಬರೀಶ್​​ ಅವರು, ​​ನನ್ನ ವಿರುದ್ಧ ಯಾರು ಕಣಕ್ಕಿಳಿದಿದ್ದಾರೆ ಎಂಬುದು ಗೊತ್ತು. ಮುಖ್ಯಮಂತ್ರಿ ಅವರ ಪುತ್ರರೇ ಸ್ಪರ್ಧಿಸುತ್ತಿದ್ದಾರೆ. ಮಂಡ್ಯದಲ್ಲಿ 7 ಮಂದಿ ಜೆಡಿಎಸ್​​​ ಶಾಸಕರು, ಇಬ್ಬರು ಸಚಿವರು ಇದ್ದಾರೆ. ಅಲ್ಲದೇ ವಿಧಾನಪರಿಷತ್ ಸದಸ್ಯರು ಕೂಡ ಇದ್ದು, ಎಲ್ಲರನ್ನೂ ಎದುರಿಸುವುದು ಸುಲಭದ ಮಾತಲ್ಲ. ಆದರೀಗ, ಮಂಡ್ಯದ ಜನತೆಯ ಸಂಪೂರ್ಣ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ನನಗಿದೆ. ಹೀಗಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದು ತಿಳಿಸಿದರು.
-------------
First published:March 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ