• Home
  • »
  • News
  • »
  • state
  • »
  • Actor Chetan Post: ಪಾಕಿಸ್ತಾನ್ ಜಿಂದಾಬಾದ್ ಎಂದ ವಿದ್ಯಾರ್ಥಿಗಳ ಪರ ನಿಂತ ಚೇತನ್; ನಟನ ಸಮರ್ಥನೆಗೆ ತೀವ್ರ ಆಕ್ರೋಶ

Actor Chetan Post: ಪಾಕಿಸ್ತಾನ್ ಜಿಂದಾಬಾದ್ ಎಂದ ವಿದ್ಯಾರ್ಥಿಗಳ ಪರ ನಿಂತ ಚೇತನ್; ನಟನ ಸಮರ್ಥನೆಗೆ ತೀವ್ರ ಆಕ್ರೋಶ

ನಟ ಚೇತನ

ನಟ ಚೇತನ

ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು – ನಮ್ಮ ಶತ್ರುಗಳಲ್ಲ. ವಾಕ್ ಸ್ವಾತಂತ್ರ್ಯವನ್ನು ನಾವು ಎತ್ತಿ ಹಿಡಿಯಬೇಕು ಎಂದು ಬರೆದುಕೊಳ್ಳುವ ಮೂಲಕ ನಟ ಚೇತನ್​ ಟೀಕೆಗೆ ಒಳಗಾಗುತ್ತಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ (Actor Chetan) ಇದೀಗ ಮೊತ್ತೊಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ನಟ ಚೇತನ್​ ಪಾಕ್ ಪರ ಘೋಷಣೆ ಕೂಗಿದವರ ಪರ ನಿಂತಿದ್ದಾರೆ. ನಿನ್ನೆ (ನವೆಂಬರ್​ 17) ಬೆಂಗಳೂರಿನ ನ್ಯೂ ಹೊರೈಜನ್ ಕಾಲೇಜಿನ ಇಂಜಿನಿಯರಿಂಗ್‌ (Engineering Students) ಮೊದಲ ವರ್ಷದ ಆರ್ಯನ್, ದಿನಕರ್‌, ರಿಯಾ ರವಿಚಂದ್ರ ಕಾಮೇಡ್ಕರ್‌ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು.


ಸಾಮಾಜಿಕ ಜಾಲತಾಣದಲ್ಲಿ ನಟ ಚೇತನ್​ ಪೋಸ್ಟ್


ಸದ್ಯ ಚೇತನ್ ಅಹಿಂಸಾ ಈ ವಿದ್ಯಾರ್ಥಿಗಳ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಹಾಕಿದ್ದಾರೆ. ಅದು ನಿನ್ನೆ ನಡೆದ ಕಾಲೇಜು ಫೆಸ್ಟ್‌ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ. ಈ ಕಾರಣಕ್ಕಾಗಿ ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದು ಅಸಂಬದ್ಧ ಮತ್ತು ಅಪಾಯಕಾರಿ ಎಂದು ಹೇಳಿದ್ರು.


ನಟ ಚೇತನ


ಪಾಕ್ ಜನರು ನಮ್ಮ ಸಹೋದರ-ಸಹೋದರಿಯರು


ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು – ನಮ್ಮ ಶತ್ರುಗಳಲ್ಲ. ವಾಕ್ ಸ್ವಾತಂತ್ರ್ಯವನ್ನು ನಾವು ಎತ್ತಿ ಹಿಡಿಯಬೇಕು ಎಂದು ಬರೆದುಕೊಳ್ಳುವ ಮೂಲಕ ನಟ ಚೇತನ್​ ಟೀಕೆಗೆ ಒಳಗಾಗುತ್ತಿದ್ದಾರೆ.
ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ


ಇನ್ನೂ ವಿದ್ಯಾರ್ಥಿಗಳ ವಿರುದ್ಧ ಮಾರತ್‌ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಾಷೆ ಮಾಡಲು ಹೀಗೆ ಮಾಡಿದ್ದೇವೆ ಎಂದಿದ್ದಾರೆ. ಆದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದ್ದಾರೆ.


ನಟ ಚೇತನ್ ಕುಮಾರ್ ವಿವಾದ


ಕಾಂತಾರ ಚಿತ್ರದಲ್ಲಿ ದೈವಾರಾಧನೆ ಕುರಿತಂತೆ ನಟ ಚೇತನ್ ಕುಮಾರ್ (Actor Chetan Kumar) ಆಡಿರುವ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ನಟ ಚೇತನ್ ಹೇಳಿಕೆ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ನಟ ಚೇತನ್ ವಿರುದ್ದ ಎಫ್ ಐ ಆರ್ (FIR) ದಾಖಲಾಗಿದೆ. ನಟ ಚೇತನ್​ ಜಾತಿ ಧರ್ಮಗಳ ಬಗ್ಗೆ ವಿಷಬೀಜ ಬಿತ್ತಿದ್ದಾರೆ ಎಂದು ದೂರು (Complaint) ನೀಡಲಾಗಿತ್ತು. ಶಿವಕುಮಾರ್ ಎಂಬುವರ ದೂರು ಆಧರಿಸಿ ಶೇಷಾದ್ರಿಪುರಂ ಪೊಲೀಸ್​ ಠಾಣೆಯಲ್ಲಿ (Police Station) ಎಫ್​ಐಆರ್ ದಾಖಲಾಗಿದೆ.


ನಟ ಚೇತನ್ ಹೇಳಿದ್ದೇನು?


ಕಾಂತಾರ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದ ನಟ ಚೇತನ್, ನಮ್ಮ ಕನ್ನಡದ ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ.ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ.ಇದು ನಿಜವಲ್ಲ. ನಮ್ಮ ಪಂಬದ/ನಕಲಿ/ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು.ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ,ಅದರಾಚೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ'ಎಂದು ಟ್ವೀಟ್​ ಮಾಡಿದ್ದರು.


ಚೇತನ್ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ರಿಷಬ್ ತಂದೆ ಭಾಸ್ಕರ್ ಶೆಟ್ಟಿ ಸೇರಿದಂತೆ ಕರಾವಳಿಯ ದೈವಾರಾಧಕರು, ದೈವ ನರ್ತಕರು, ರಿಷಬ್ ಶೆಟ್ಟಿ ಅಭಿಮಾನಿಗಳು ಚೇತನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳೂರಿಗೆ ಬಂದು ಈ ರೀತಿಯ ಹೇಳಿಕೆ ನೀಡಿ ಅಂತ ಸವಾಲು ಹಾಕಿದ್ದರು.

ನಿನ್ನೆ ಸ್ಫೋಟ ನಡೆದ ಸ್ಥಳದಲ್ಲಿ ಕೆಲವು ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ನೈಟ್ರೇಟ್, ಸಲ್ಫರ್‌, ಬಾಲ್​ ಬೇರಿಂಗ್​ನಂತಹ ವಸ್ತುಗಳು ಸಿಕ್ಕಿವೆ. ಕೊಯಮತ್ತೂರು ಸ್ಫೋಟ ಉಗ್ರ ಕೃತ್ಯ ಫಿದಾಯೀನ್​ಗಳಿಂದ ನಡೆದ ಕೃತ್ಯ ಪೊಟ್ಯಾಷಿಯಂ ನೈಟ್ರೇಟ್, ಸಲ್ಫರ್ ಪತ್ತೆ ಮುಬೀನ್ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ.


Published by:ಪಾವನ ಎಚ್ ಎಸ್
First published: