ಕನ್ನಡ ಬಾವುಟ ಸುಟ್ಟ MES ನಿಷೇಧ ಸರಿಯಲ್ಲ, ಕರ್ನಾಟಕ ಬಂದ್ ಕೂಡ ಬೇಕಿಲ್ಲ: Actor Chetan ವಾದ

ಪುಸ್ತಕ ನಿಷೇಧ ಮಾಡಿದರೆ ಜನರ ಕುತೂಹಲಕ್ಕೆ ಈಡಾಗಿ ಪುಸ್ತಕದ ಡಿಮ್ಯಾಂಡ್ ಹೆಚ್ಚಾಗುತ್ತೆ. ರಾಜ್ಯದಲ್ಲಿ ಎಂಇಎಸ್ ನಿಷೇಧ ಮಾಡಿದರೆ ಜನರ ಕುತೂಹಲ ಜಾಸ್ತಿಯಾಗುತ್ತದೆ . ನಮಗೆ ಎಂಇಎಸ್ ಲೆಕ್ಕಕಿಲ್ಲ ಎಂದು ಚೇತನ್​ ಹೇಳಿಕೆ ನೀಡಿದ್ದಾರೆ.

ನಟ ಚೇತನ್​

ನಟ ಚೇತನ್​

  • Share this:
ಯಾದಗಿರಿ: ರಾಜ್ಯದಲ್ಲಿ ಎಂಇಎಸ್ (MES) ಪುಂಡಾಟಿಕೆ ಮೆರೆದಿದಕ್ಕೆ ಸಂಘಟನೆಯನ್ನೇ ನಿಷೇಧ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಬಂದ್​ ಗೆ (Karnataka Bandh) ಕರೆ ನೀಡಲಾಗಿದೆ. ಆದರೆ ರಾಜ್ಯದಲ್ಲಿ ಎಂಇಎಸ್ ನಿಷೇಧ ಮಾಡುವುದು ಸರಿಯಲ್ಲ ಎನ್ನುವ ಮೂಲಕ ಸಿನಿಮಾ ನಟ ಚೇತನ್​ (actor Chetan Kumar) ಎಲ್ಲರ ಹುಬ್ಬೇರಿಸಿದ್ದಾರೆ.  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪುಸ್ತಕ ನಿಷೇಧ ಮಾಡಿದರೆ ಪುಸ್ತಕದ ಡಿಮ್ಯಾಂಡ್ ಹೆಚ್ಚಾಗಿ ಜನರ ಕುತೂಹಲಕ್ಕೆ ಈಡಾಗುವಂತೆ ರಾಜ್ಯದಲ್ಲಿ ಎಂಇಎಸ್ ನಿಷೇಧ ಮಾಡಿದರೆ ಜನರ ಕುತೂಹಲ ಜಾಸ್ತಿಯಾಗುತ್ತದೆ . ನಮಗೆ ಎಂಇಎಸ್ ಲೆಕ್ಕಕಿಲ್ಲ. ಎಂಇಎಸ್ ನಿಷೇಧ ಮಾಡುವುದನ್ನು ಬಿಟ್ಟು ಸರ್ಕಾರ ಬೆಳಗಾವಿ ಭಾಗದ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಬೇಕು. ಆ ಭಾಗದ ಯುವಕರಿಗೆ ಉದ್ಯೋಗ ಅವಕಾಶ ನೀಡಬೇಕು ಎಲ್ಲಾ ಜನಾಂಗದವರ ಅಭಿವೃದ್ಧಿ ಮಾಡಬೇಕು. ಅಭಿವೃದ್ಧಿಯಾದರೆ ಜನರು ತಾವಾಗಿಯೇ ಕನ್ನಡನಾಡಿನಲ್ಲಿ ಇರುತ್ತಾರೆ ಮೊದಲು ಸರ್ಕಾರ ತಾರತಮ್ಯ ಮಾಡದೇ ಅಭಿವೃದ್ಧಿ ಕಾರ್ಯ ಮಾಡಲಿ ಎಂದರು.

ಬಂದ್ ಅರ್ಥ ಪೂರ್ಣ ಹೋರಾಟವಲ್ಲ...!

ಡಿಸೆಂಬರ್ 31 ರಂದು ಕನ್ನಡ ಪರ ಸಂಘಟನೆಗಳು ರಾಜ್ಯದಲ್ಲಿ ಎಂಇಎಸ್ ನಿಷೇಧ ಮಾಡುವಂತೆ ಒತ್ತಾಯಿಸಿ ಕರೆ ನೀಡಿರುವ ಬಂದ್ ಅರ್ಥ ಪೂರ್ಣವಲ್ಲ.ಬಂದ್ ಕರೆ ನೀಡಿ ಎಂಇಎಸ್ ಗೆ ಮಹತ್ವ ನೀಡಬಾರದು. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ.ಕನ್ನಡಕ್ಕೆ ಧಕ್ಕೆಯಾಗುವ ಸಮಸ್ಯೆಗಳು ಬರುತ್ತಿವೆ.ಜನಪರ ಸಮಸ್ಯೆಗಳಿಗಾಗಿ ಹೋರಾಟ ಮಾಡಿ ಎಂದು ಕನ್ನಡ‌ಪರ ಸಂಘಟನೆಗಳಿಗೆ ನಟ. ಚೇತನ ಬುದ್ದಿ ಮಾತು ಹೇಳಿದ್ದಾರೆ.ರಾಜ್ಯ ಬಂದ್ ಕರೆ ನೀಡಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುತ್ತಿನಿ‌ ಎನ್ನುವ ತೋರಿಕೆ ಸರಿಯಲ್ಲ ಎಂದರು.

ಇದನ್ನೂ ಓದಿ: ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು ನಾನು, Hamsalekha ಮಾತಿನಲ್ಲೇ ತಿವಿದಿದ್ದು ಯಾರಿಗೆ?

ಕುರ್ಚಿ ಉಳಿಸಿಕೊಳ್ಳಲು ಸಿಎಂ ಮತಾಂತರ ಕಾಯ್ದೆ ಜಾರಿ...!

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಮೇಲೆ ರಾಜ್ಯದಲ್ಲಿ ಚರ್ಚ್ ಗಳ ಮೇಲೆ ದಾಳಿ ಹೆಚ್ಚಾಗಿದೆ.ಅಧಿಕಾರದ ದಾಹಕ್ಕಾಗಿ ಸಿಎಂ ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳಲು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ಸಿಎಂ ಬೊಮ್ಮಾಯಿ ಅವರು ಕ್ರೈಸ್ತರು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆಂದು ಸುಳ್ಳು ಅಪಾದನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಲವಂತ ಮತಾಂತರ ನಡೆಯುತ್ತಿದ್ದರೆ ಪೊಲೀಸರು ತಪ್ಪಿತಸ್ಥರ ಕ್ರಮಕೈಗೊಳ್ಳಲಿ ಕಾಯ್ದೆ ಜಾರಿಗೆ ತಂದು ಬೇದರಿಸುವ ಕೆಲಸ ಮಾಡಿದರೆ ಸರಿಯಲ್ಲವೆಂದರು.

ಸಮಗ್ರ ರಾಜ್ಯದ ಅಭಿವೃದ್ಧಿ ಕಾಳಜಿ ವಹಿಸಿ...!

ಮೂರು ಪಕ್ಷಗಳು ಕೇವಲ ಬೆಂಗಳೂರುಗೆ ಪ್ರಾಮುಖ್ಯತೆ ನೀಡುತ್ತಾ ಬಂದಿವೆ.ಶ್ರೀಮಂತರಿಗೆ ಅನುಕೂಲ ಮಾಡದೇ ರಾಜ್ಯದ ಎಲ್ಲಾ ಜಿಲ್ಲೆಯ ಮೂಲೆ ಮೂಲೆಯ ಅಭಿವೃದ್ಧಿ ಮಾಡಿದಾಗ ಮಾತ್ರ ಸಮಾನತೆ ಕಾಣಲು ಸಾಧ್ಯವೆಂದರು.ರಾಜ್ಯಕ್ಕೆ ನ್ಯಾಯಸಿಗಬೇಕಾದರೆ ಯಾವ ಭಾಗ ಹಿಂದುಳಿದಿದೆ ಆ ಭಾಗವನ್ನು ಹುಡುಕಿ ನ್ಯಾಯ ಒದಗಿಸಬೇಕು. ಬೆಂಗಳೂರು ಬಿಟ್ಟು ರಾಜಕಾರಣಿಗಳು ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಒದಗಿಸಬೇಕು.ಯಾದಗಿರಿ ಜಿಲ್ಲೆಯು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಯಾದಗಿರಿ ಜಿಲ್ಲೆಗೆ ನ್ಯಾಯಸಿಗಬೇಕಾದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸರಕಾರ ಸೌಲಭ್ಯ ನೀಡಿ ಅಭಿವೃದ್ಧಿ ಮಾಡಬೇಕೆಂದು ನಟ ಚೇತನ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಬಂದ್​ ಗೆ ಸಂಪೂರ್ಣ ಬೆಂಬಲ ನೀಡದ ಬಗ್ಗೆ ಫಿಲ್ಮ್​ ಚೇಂಬರ್​ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಆಕ್ರೋಶ ವ್ಯಕ್ತಪಡಿಸಿದರು. ಡಾ. ರಾಜ್ ಕುಮಾರ್ ಕರ್ನಾಟಕದ ಕನ್ನಡಿಗರಿಗೆ ಒಂದು ಶಕ್ತಿ ತುಂಬಿದ್ದಾರೆ. ಗೋಖಾಕ್ ಚಳುವಳಿ ಮೂಲಕ ನಮಗೆ ದಾರಿ ತೋರಿಸಿದ್ದಾರೆ. ಒಂದು ದಿನದ ಸುಖಕ್ಕಾಗಿ ಹೀಗೆ ಮಾಡಬೇಡಿ, ಎಲ್ಲರೂ ಬೆಂಬಲ‌ ಕೊಡಿ ಎಂದು ಕನ್ನಡ ಸಿನಿಮಾ ನಟರಿಗೆ ಮನವಿ ಮಾಡಿದರು.
Published by:Kavya V
First published: