• Home
 • »
 • News
 • »
 • state
 • »
 • Actor Chetan: ಟೀಂ ಇಂಡಿಯಾದಲ್ಲೂ ಎಸ್‌ಸಿ-ಎಸ್‌ಟಿಗೆ ಮೀಸಲಾತಿ ಕೊಡಿ! ಆ ದಿನಗಳ ನಟ ಚೇತನ್ ಆಗ್ರಹ

Actor Chetan: ಟೀಂ ಇಂಡಿಯಾದಲ್ಲೂ ಎಸ್‌ಸಿ-ಎಸ್‌ಟಿಗೆ ಮೀಸಲಾತಿ ಕೊಡಿ! ಆ ದಿನಗಳ ನಟ ಚೇತನ್ ಆಗ್ರಹ

ಕ್ರಿಕೆಟ್‌ನಲ್ಲಿ ಎಸ್‌ಸಿ-ಎಸ್‌ಟಿ ಮೀಸಲಾತಿಗೆ ಚೇತನ್ ಆಗ್ರಹ

ಕ್ರಿಕೆಟ್‌ನಲ್ಲಿ ಎಸ್‌ಸಿ-ಎಸ್‌ಟಿ ಮೀಸಲಾತಿಗೆ ಚೇತನ್ ಆಗ್ರಹ

"ಭಾರತೀಯ ಕ್ರಿಕೆಟ್ ‌ನಲ್ಲಿ ಶೇಕಡಾ 70ರಷ್ಟು ಆಟಗಾರರು ಮೇಲ್ಜಾತಿಯವರೇ ಇದ್ದಾರೆ, ಹೀಗಾಗಿ ಕ್ರಿಕೆಟ್‌ನಲ್ಲೂ ಮೀಸಲಾತಿ ಜಾರಿಯಾಗಬೇಕು" ಅಂತ ನಟ ಚೇತನ್ ಆಗ್ರಹಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಎಸ್ಸಿ ಎಸ್ಟಿ ಆಟಗಾರರಿಗೆ ಮೀಸಲಾತಿ ಕೊಟ್ಟಲ್ಲಿ ಟೀಂ ಇಂಡಿಯಾ ಇನ್ನೂ ಉತ್ತಮ ಕ್ರಿಕೆಟ್ ಟೀಂ ಆಗುತ್ತೆ ಅಂತ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Chamarajanagar, India
 • Share this:

ಚಾಮರಾಜನಗರ: ಭಾರತೀಯ ಕ್ರಿಕೆಟ್‌ನಲ್ಲೂ (Indian cricket) ಮೀಸಲಾತಿ (reservation) ನೀಡಬೇಕು ಅಂತ ನಟ ಚೇತನ್ ಕುಮಾರ್ (Actor Chetan Kumar) ಆಗ್ರಹಿಸಿದ್ದಾರೆ. ಚಾಮರಾಜನಗರದಲ್ಲಿ (Chamarajanagar) ಮಾತನಾಡಿದ ಅವರು, ಭಾರತೀಯ ಕ್ರಿಕೆಟ್‌ನಲ್ಲಿ ಎಸ್‌ಸಿ ಎಸ್‌ಟಿ ಆಟಗಾರರಿಗೆ (SC ST Cricket Players) ಮೀಸಲಾತಿ ನೀಡಬೇಕು ಅಂತ ಆಗ್ರಹಿಸಿದರು. ಚಾಮರಾಜನಗರದಲ್ಲಿ ನಡೆದ ‘ಮೀಸಲಾತಿ ಪ್ರಾತಿನಿಧ್ಯವೋ? ಆರ್ಥಿಕ ಸಬಲೀಕರಣವೋ?’ ಎಂಬ ವಿಚಾರ ಸಂಕಿರಣದಲ್ಲಿ (seminar) ಭಾಗಿಯಾಗಿದ್ದ ಚೇತನ್, ಭಾರತೀಯ ಕ್ರಿಕೆಟ್‌ನಲ್ಲಿ ಶೇಕಡಾ 70ರಷ್ಟು ಮೇಲ್ಜಾತಿಯವರೇ (upper castes) ಇದ್ದಾರೆ ಅಂತ ಆರೋಪಿಸಿದ್ರು. ಇನ್ನು ಭಾರತೀಯ ಕ್ರಿಕೆಟ್ ಶ್ರೀಮಂತವಾಗಿದೆ, ಹೀಗಾಗಿ ಅದರಲ್ಲಿ ಎಸ್ಸಿ ಎಸ್ಟಿ ಆಟಗಾರರಿಗೆ ಮೀಸಲಾತಿ ಕೊಟ್ಟಲ್ಲಿ ಇನ್ನೂ ಉತ್ತಮ ಕ್ರಿಕೆಟ್ ಟೀಂ (Best Cricket Team) ಆಗುತ್ತೆ ಅಂತ ಅಭಿಪ್ರಾಯ ಪಟ್ಟರು.  


“ಕ್ರಿಕೆಟ್‌ನಲ್ಲಿ ಎಸ್‌ಸಿ ಎಸ್‌ಟಿ ಆಟಗಾರರಿಗೆ ಮೀಸಲಾತಿ ನೀಡಿ”


ಹೌದು, ಹೀಗಂತ ಆ ದಿನಗಳ ನಟ, ಅಹಿಂಸಾ ಚೇತನ್ ಆಗ್ರಹಿಸಿದ್ದಾರೆ. ಭಾರತೀಯ ಕ್ರಿಕೆಟ್ ‌ನಲ್ಲಿ ಶೇಕಡಾ 70ರಷ್ಟು ಆಟಗಾರರು ಮೇಲ್ಜಾತಿಯವರೇ ಇದ್ದಾರೆ, ಹೀಗಾಗಿ ಕ್ರಿಕೆಟ್‌ನಲ್ಲೂ ಮೀಸಲಾತಿ ಜಾರಿಯಾಗಬೇಕು ಅಂತ ಅವರು ಆಗ್ರಹಿಸಿದರು. ಚಾಮರಾಜನಗರದಲ್ಲಿ ನಡೆದ ಮೀಸಲಾತಿ ಪ್ರಾತಿನಿಧ್ಯವೋ ಆರ್ಥಿಕ ಸಬಲೀಕರಣವೋ ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದ ಚೇತನ್, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ದಕ್ಷಿಣ ಆಫ್ರಿಕಾದಂತೆ ಟೀಂ ಇಂಡಿಯಾದಲ್ಲೂ ಮೀಸಲಾತಿ ತನ್ನಿ”


ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂನಲ್ಲಿ 2016 ರಿಂದ 6 ಮಂದಿ ಕರಿಯ ಜನಾಂಗದ ಕ್ರಿಕೆಟ್ ಆಟಗಾರರಿಗೆ ಮೀಸಲಾತಿ ನೀಡಲಾಗ್ತಿದೆ. ಅದೇ ರೀತಿ ಭಾರತೀಯ ಕ್ರಿಕೆಟ್ ನಲ್ಲೂ ಎಸ್‌ಸಿ ಎಸ್‌ಟಿ ಆಟಗಾರರಿಗೆ ಮೀಸಲಾತಿ ನೀಡಬೇಕು ಅಂತ ಅವರು ಆಗ್ರಹಿಸಿದರು. ಭಾರತೀಯ ಕ್ರಿಕೆಟ್ ಶ್ರೀಮಂತವಾಗಿದೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಎಸ್ಸಿ ಎಸ್ಟಿ ಆಟಗಾರರಿಗೆ ಮೀಸಲಾತಿ ಕೊಟ್ಟಲ್ಲಿ ಟೀಂ ಇಂಡಿಯಾ ಇನ್ನೂ ಉತ್ತಮ ಕ್ರಿಕೆಟ್ ಟೀಂ ಆಗುತ್ತೆ ಅಂತ ನಟ ಚೇತನ್ ಅಹಿಂಸಾ ಅಭಿಪ್ರಾಯ ಪಟ್ಟಿದ್ದಾರೆ.


ಇದನ್ನೂ ಓದಿ: Rishab Shetty-Chetan: ರಿಷಬ್ ಶೆಟ್ಟಿ ವಿರುದ್ಧ ಚೇತನ್ ವ್ಯಂಗ್ಯ! ಅಷ್ಟಕ್ಕೂ ಆ ದಿನಗಳ ನಟ ಹೇಳಿದ್ದೇನು?


ರಿಷಬ್ ಶೆಟ್ಟಿ ವಿರುದ್ಧ ಚೇತನ್ ವ್ಯಂಗ್ಯ!


ಈ ಹಿಂದೆ ಆ ದಿನಗಳ ನಟ ಚೇತನ್ ಕುಮಾರ್, ಸಾಹಿತಿ ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ಕೆಲವರು ಕಾಂತಾರದ ಬಗ್ಗೆ ಕಿರಿಕ್ ತೆಗೆದಿದ್ದರು. ಇದೀಗ ಮತ್ತೊಮ್ಮೆ ನಟ ಚೇತನ್ ಕಾಂತಾರ ಸಿನಿಮಾ ಹಾಗೂ ಅದರ ನಟ, ನಿರ್ದೇಶಕ ರಿಷಬ್ ಶೆಟ್ಟಿ ವಿರುದ್ಧ ವ್ಯಂಗ್ಯವಾಡಿದ್ದರು.


 ರೀಲ್ಸ್ ಮಾಡಬೇಡಿ ಎಂದಿದ್ದ ರಿಷಬ್


ಇನ್ನು ಪಂಜುರ್ಲಿ ದೈವದ ಬಗ್ಗೆ ರೀಲ್ಸ್ ಮಾಡಬೇಡಿ ಅಂತ ರಿಷಬ್ ಶೆಟ್ಟಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಸಿನಿಮಾ ರಿಲೀಸ್ ಆದ ಆರಂಭದಲ್ಲಿ ನಾನೊಂದು ಮನವಿ ಮಾಡಿದ್ದೆ, ಈಗಲೂ ಅದೇ ಮನವಿಯನ್ನು ಮಾಡುತ್ತಿದ್ದೇನೆ. ದೈವಾರಾಧನೆ ವಿಚಾರವನ್ನು ಇಟ್ಟುಕೊಂಡು ರೀಲ್ಸ್ ಮಾಡೋದು, ವೇದಿಕೆ ಮೇಲೆ ಅಣಕು ಪ್ರದರ್ಶನ ಮಾಡುವುದು ಬೇಡ. ಇದೆಲ್ಲ ಬಹಳ ನೋವು ತರುವಂತಹ ವಿಚಾರಗಳು. ಯಾಕಂದ್ರೆ ಇದನ್ನು ನಂಬಿದವರಿಗೆ ಹಾಗೂ ದೈವಾರಾಧಕರಿಗೆ ಬಹಳಷ್ಟು ನೋವು ತರುತ್ತದೆ. ನಂಬಿರುವ ನಮ್ಮಂತಹ ಭಕ್ತರಿಗೂ ನೋವು ತರುತ್ತದೆ. ಹೀಗಾಗಿ ಯಾರೂ ಅದನ್ನು ಅನುಕರಿಸಬೇಡಿ ಅಂತ ಹೇಳಿದ್ದರು.


ಇದನ್ನೂ ಓದಿ: Actor Chetan Post: ಪಾಕಿಸ್ತಾನ್ ಜಿಂದಾಬಾದ್ ಎಂದ ವಿದ್ಯಾರ್ಥಿಗಳ ಪರ ನಿಂತ ಚೇತನ್; ನಟನ ಸಮರ್ಥನೆಗೆ ತೀವ್ರ ಆಕ್ರೋಶ


ರಿಷಬ್ ಹೇಳಿಕೆಗೆ ಚೇತನ್ ವ್ಯಂಗ್ಯ


ಇನ್ನು ರಿಷಬ್ ಹೇಳಿಕೆ ಬಗ್ಗೆ ನಟ ಚೇತನ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 'ಕೋಟಿಗಟ್ಟಲೇ ದುಡ್ಡು ಮತ್ತು ಆರ್ಥಿಕ ಲಾಭಕ್ಕಾಗಿ ನಮ್ಮ ಆದಿವಾಸಿ ಸಂಸ್ಕೃತಿಯನ್ನು ಹೈಜಾಕ್ ಮಾಡಿ ಉಪಯೋಗಿಸಿಕೊಂಡು, ನಮ್ಮ ಮೂಲನಿವಾಸಿಗಳನ್ನು ಯಾವುದೇ ರೀತಿಯಲ್ಲೂ ಎತ್ತಿ ಹಿಡಿಯುವ ಕೆಲಸ ಮಾಡದೇ ಇರುವವರು, ಬೇರೆಯವರು ಇತರೆ ವೈಯಕ್ತಿಕ ಕ್ಷೇತ್ರಗಳಲ್ಲಿ ಆ ರೀತಿ ತೋರಿಸಬಾರದು ಎಂದು ಆದೇಶಿಸುವುದು ವಿಪರ್ಯಾಸ. ನೀವು ಅದನ್ನು ತೋರಿಸಬಹುದಾದರೆ, ಇತರರು ಕೂಡ ತೋರಿಸಬಹುದು. ಪ್ರಜಾಪ್ರಭುತ್ವಕ್ಕೆ ಸ್ವಾಗತ..' ಎಂದು ಪೋಸ್ಟ್ ಹಾಕಿದ್ದರು.

Published by:Annappa Achari
First published: