• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Actor Chetan: ಸ್ಮಶಾನ ಕಾರ್ಮಿಕರ ತಕ್ಷಣದ ಅಗತ್ಯಗಳು, ಶಾಶ್ವತ ಪರಿಹಾರಗಳಿಗೆ ಒತ್ತಾಯಿಸಿ ಸಿಎಂ ಬಿಎಸ್​ವೈಗೆ ನಟ ಚೇತನ್ ಪತ್ರ

Actor Chetan: ಸ್ಮಶಾನ ಕಾರ್ಮಿಕರ ತಕ್ಷಣದ ಅಗತ್ಯಗಳು, ಶಾಶ್ವತ ಪರಿಹಾರಗಳಿಗೆ ಒತ್ತಾಯಿಸಿ ಸಿಎಂ ಬಿಎಸ್​ವೈಗೆ ನಟ ಚೇತನ್ ಪತ್ರ

ನಟ ಚೇತನ್.

ನಟ ಚೇತನ್.

ಸಾಂಕ್ರಾಮಿಕ ರೋಗ ಹರಡುತ್ತಿರುವ ಸಮಯದಲ್ಲಿ ಅಸಾಧಾರಣ ವೈದ್ಯಕೀಯ ಅಪಾಯಗಳನ್ನು ಎದುರಿಸುತ್ತಿದ್ದಾರೆ. ದುರದೃಷ್ಟವಶಾತ್, ಅವರ ತಕ್ಷಣದ ಮತ್ತು ದೀರ್ಘಕಾಲ್ ಅಗತ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರ್ಕಾರಗಳು ಸತತವಾಗಿ ನಿರ್ಲಕ್ಷಿಸಿವೆ. ನಮ್ಮ ಸ್ಮಶಾನ ಕಾರ್ಮಿಕರಿಗೆ ಹೆಚ್ಚು ಅಗತ್ಯವಿರುವ ಬೇಡಿಕೆಗಳನ್ನು ನೀವು ಈಡೇರಿಸಬೇಕು ಎಂದು ನಾವು ಕೇಳುತ್ತೇವೆ ಎಂದು ನಟ ಚೇತನ್ ಮನವಿ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: ಸ್ಮಶಾನ ಮತ್ತು ಶವಾಗಾರ ಕಾರ್ಮಿಕರು ಅಗತ್ಯಗಳು ಹಾಗೂ ಶಾಶ್ವತ ಬೇಡಿಕೆಗಳ ಪರಿಹಾರದ ವಿಚಾರವಾಗಿ ನಟ ಚೇತನ್ ಅವರು ದನಿ ಎತ್ತಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಸ್ಮಶಾನ ಕಾರ್ಮಿಕರ ಅಗತ್ಯಗಳನ್ನು ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಚೇತನ್ ಮನವಿ ಮಾಡಿದ್ದಾರೆ. ರಾಜ್ಯಾದ್ಯಂತ ಸಾವಿರಾರು ಸ್ಮಶಾನ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸಿಗಬೇಕಾದ ಕನಿಷ್ಠ ಮೂಲಸೌಲಭ್ಯಗಳು ಸಹ ಸಿಕ್ಕಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಚೇತನ್ ಹೇಳಿದ್ದಾರೆ.


ಕರ್ನಾಟಕದಾದ್ಯಂತ ಸ್ಮಶಾನ ಕಾರ್ಮಿಕರ ಈ ಘೋರ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ರಾಜ್ಯದ ಜನರಿಗೆ ಮುಂಚೂಣಿಯ ಕೋವಿಡ್ ಯೋಧರಾಗಿ ದಣಿವರಿಯದೆ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸ್ಮಶಾನ ಕಾರ್ಮಿಕರು ತಲೆಮಾರುಗಳಿಂದ ನಮ್ಮ ಸಮಾಜದ ಸಾಮಾಜಿಕ ಮತ್ತು ಆರ್ಥಿಕವಾಗಿ ಅಳಿವಂಚಿನಲ್ಲಿ ಇರುವ ಸದಸ್ಯರು. ಈ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಮಯದಲ್ಲಿ ಅಸಾಧಾರಣ ವೈದ್ಯಕೀಯ ಅಪಾಯಗಳನ್ನು ಎದುರಿಸುತ್ತಿದ್ದಾರೆ. ದುರದೃಷ್ಟವಶಾತ್, ಅವರ ತಕ್ಷಣದ ಮತ್ತು ದೀರ್ಘಕಾಲ್ ಅಗತ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರ್ಕಾರಗಳು ಸತತವಾಗಿ ನಿರ್ಲಕ್ಷಿಸಿವೆ. ನಮ್ಮ ಸ್ಮಶಾನ ಕಾರ್ಮಿಕರಿಗೆ ಹೆಚ್ಚು ಅಗತ್ಯವಿರುವ ಬೇಡಿಕೆಗಳನ್ನು ನೀವು ಈಡೇರಿಸಬೇಕು ಎಂದು ನಾವು ಕೇಳುತ್ತೇವೆ ಎಂದು ನಟ ಚೇತನ್ ಮನವಿ ಮಾಡಿದ್ದಾರೆ.


ಸ್ಮಶಾನ ಹಾಗೂ ಶವಾಗಾರ ಕಾರ್ಮಿಕರ ತಕ್ಷಣದ ಅಗತ್ಯಗಳು


  • ವೈದ್ಯಕೀಯ ವಿಮೆ

  • ಕೋವಿಡ್ ಸಂತ್ರಸ್ತರಿಗೆ ಆದ್ಯತೆಯ ಆಸ್ಪತ್ರೆಯ ಹಾಸಿಗೆ ಹಂಚಿಕೆ

  • ಆದ್ಯತೆಯ ವ್ಯಾಕ್ಸಿನೇಷನ್

  • ಈಗಾಗಲೇ ಒದಗಿಸಿರುವ ಪಿಪಿಇ ಕಿಟ್​ಗಳ ಜೊತೆಗೆ ಕೈಗವಸುಗಳು ಮತ್ತು ಮುಖವಾಡಗಳು

  • ತಮ್ಮ ಕೆಲಸದ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಿದರೆ ಅದಕ್ಕೆ ಅವರ ಪಾವತಿಯನ್ನು ಹೆಚ್ಚಿಸಬೇಕು

  • ಕೆಲಸದ ಹೊರೆ ಹೆಚ್ಚಿಗೆಯಾದ ಕಾರಣ ಅವರನ್ನು ಸಹಾಯ ಮಾಡಲು ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು


ಇದನ್ನು ಓದಿ: ರಾಜ್ಯದಲ್ಲಿ 97 ಮಂದಿಗೆ ಬ್ಲ್ಯಾಕ್ ಫಂಗಸ್, ನಾಲ್ವರು ಬಲಿ; ಈ ಎಲ್ಲಾ ಆಸ್ಪತ್ರೆಗಳಲ್ಲಿ ಕಪ್ಪು ಶಿಲೀಂದ್ರಿಗೆ ಚಿಕಿತ್ಸೆ


ನಟ ಚೇತನ್ ಅವರು ಸಿಎಂ ಬಿಎಸ್​ವೈ ಅವರಿಗೆ ಬರೆದಿರುವ ಪತ್ರ.


ಸ್ಮಶಾನ ಕಾರ್ಮಿಕರ ಶಾಶ್ವತ ಪರಿಹಾರಗಳು


  • 4ನೇ ದರ್ಜೆಯ ಡಿ ಗ್ರೂಪ್ ಸರ್ಕಾರಿ ನೌಕರರಾಗಿ ಶಾಶ್ವತ ಉದ್ಯೋಗ ಕಲ್ಪಿಸಬೇಕು

  • ಇಎಸ್​ಐ ಮತ್ತು ಪಿಎಫ್​ಗೆ ಅವಕಾಶ ಕಲ್ಪಿಸಕೊಡಬೇಕು

  • ಸ್ಮಶಾನ, ಶವಾಗಾರದ ಆವರಣದ ಹೊರಗೆ ವಸತಿ ಕಲ್ಪಿಸಬೇಕು

  • ಕೆಲಸದ ಸಮಯವನ್ನು 8 ಗಂಟೆಗಳ ಶೆಫ್ಟ್​ಗಳಿಗೆ ಸೀಮಿತಗೊಳಿಸಬೇಕು.

  • ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಬೇಕು

  • ಎಲ್ಲಾ ಧಾರ್ಮಿಕ ಸಮುದಾಯಗಳ (ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಇತರೆ) ಸ್ಮಶಾನ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು

  • ಸ್ಮಶಠಾನ ಕಾರ್ಮಿಕರಿಗೆ ನಿರ್ದಿಷ್ಟವಾದ ಸಾಮಾಜಿಕ- ಆರ್ಥಿಕ ಮತ್ತು ಶೈಕ್ಷಣಿಕ ಉನ್ನತಿಗಾಗಿ ಹೊಸ ನೀತಿಗಳನ್ನು ಅನುಷ್ಠಾನಗೊಳಿಸಬೇಕು

  • ಸ್ಮಶಾನ ಕಾರ್ಮಿಕರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಈ ನೀತಿಗಳನ್ನು ತಕ್ಷಣವೇ ಜಾರಿಗೆ ತರಬೇಕು

top videos
    First published: