ಮೇಕೆದಾಟು ಯೋಜನೆಯಿಂದ ಲಾಭವಿಲ್ಲ, ಪರಿಸರ ಹಾಳಾಗುತ್ತೆ ಅಷ್ಟೇ..: Actor Chetan ಆಕ್ರೋಶ

ಯೋಜನೆಯಿಂದ ಯಾರೋ ಒಂದಷ್ಟು ಜನರಿಗೆ ಅನುಕೂಲ. 9 ಸಾವಿರ ಕೋಟಿ ಖರ್ಚು ಮಾಡಿ ಯೋಜನೆ ಮಾಡ್ತೀವಿ ಅಂತ ಹೇಳುತ್ತಿದ್ದಾರೆ. ಇಷ್ಟು ಹಣ ಖರ್ಚು ಮಾಡಿ ಯೋಜನೆ ಮಾಡಿ ಯಾರಿಗೆ ಲಾಭ ಎಂದು ನಟ ಚೇತನ್​ ಪ್ರಶ್ನಿಸಿದರು.

ನಟ ಚೇತನ್​

ನಟ ಚೇತನ್​

  • Share this:
ಬೆಂಗಳೂರು: ಕಾಂಗ್ರೆಸ್(Congress)​ ಮೇಕೆದಾಟು ಯೋಜನೆ(Mekedatu Project) ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದ ಬೆನ್ನಲ್ಲೇ ಮೇಕೆದಾಟು ಯೋಜನೆಗೆ ಪರಿಸರವಾದಿಗಳು, ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೋರಾಟಗಾರ್ತಿ ಮೇದಾ ಪಾಟ್ಕರ್(Medha Patkar)​​, ನಟ ಚೇತನ್​ (Actor chetan) ಸೇರಿದಂತೆ ಹಲವು ಮುಖಂಡರು ಸುದ್ದಿಗೋಷ್ಠಿ ನಡೆಸಿ ಮೇಕೆದಾಟು ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ನಟ ಚೇತನ್​​, ಮೇಕೆದಾಟು ಯೋಜನೆಯಿಂದ ಹಾನಿಯೇ ಹೆಚ್ಚು ಎಂದರು. ಇಂದು ಮೇಕೆದಾಟು ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಮೂರು ಪಕ್ಷಗಳು ಮೇಕೆದಾಟು ಪರವಾಗಿ ನಿಂತಿವೆ. ಮೇಕೆದಾಟು ಯೋಜನೆ ಅಡಿಯಲ್ಲಿ ಅಣೆಕಟ್ಟು ನಿರ್ಮಾಣವಾದ್ರೆ, ದೊಡ್ಡ ಪ್ರಮಾಣದ ಪರಿಸರ ನಾಶವಾಗಲಿದೆ. ನಾನು ಮೇಕೆದಾಟು ನೋಡಲು ಹೋಗಿದ್ದೆ. ಆ ಮೇಕೆದಾಟು ನಿರ್ಮಾಣವಾಗಲು ಲಕ್ಷಾಂತರ ವರ್ಷ ಹಿಡಿದಿದೆ. ಈಗ ಯೋಜನೆ ಹೆಸರಲ್ಲಿ ಮೇಕೆದಾಟು ನಾಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಯೋಜನೆ ಮಾಡಿ ಯಾರಿಗೆ ಲಾಭ?

ಮೇಕೆದಾಟು ಅಣೆಕಟ್ಟು ನಿರ್ಮಾಣವಾದ್ರೆ ಸಾವಿರಾರು ಎಕರೆ ಕಾಡು ನಾಶವಾಗಲಿದೆ. ಜೊತೆಗೆ ಆ ಭಾಗದಲ್ಲಿ ವಾಸಿಸುವ ಜನರು ಬದುಕು ನಾಶವಾಗಲಿದೆ. ಕಾಡು ನಾಶವಾದ್ರೆ ಯಾವ ರೀತಿಯ ಸಮಸ್ಯೆ ಎದುರಾಗಲಿದೆ ಗೊತ್ತಿದ್ಯಾ. ಅಲ್ಲಿನ ಜನರು ಹೇಳಿದ್ದಾರೆ ನಾವು ಇಲ್ಲೇ ಇರ್ತಿವಿ ಅಂತ. ಯೋಜನೆಯಿಂದ ಯಾರೋ ಒಂದಷ್ಟು ಜನರಿಗೆ ಅನುಕೂಲ. 9 ಸಾವಿರ ಕೋಟಿ ಖರ್ಚು ಮಾಡಿ ಯೋಜನೆ ಮಾಡ್ತೀವಿ ಅಂತ ಹೇಳುತ್ತಿದ್ದಾರೆ. ಇಷ್ಟು ಹಣ ಖರ್ಚು ಮಾಡಿ ಯೋಜನೆ ಮಾಡಿ ಯಾರಿಗೆ ಲಾಭ ಎಂದು ನಟ ಚೇತನ್​ ಪ್ರಶ್ನಿಸಿದರು.

ಇದನ್ನೂ ಓದಿ: ಬಹಳ ಅಂದರೆ ನನ್ನ ಜೈಲಿಗೆ ಹಾಕಬಹುದು, ಖುಷಿ ಪಡಬಹುದು.. ಅಷ್ಟೇ ತಾನೇ..? DK Shivakumar ತಿರುಗೇಟು

ಪಾದಯಾತ್ರೆ ಅಲ್ಲ ಅದು, ಕಾರ್ ಯಾತ್ರೆ

ಬಿಜೆಪಿ-ಕಾಂಗ್ರೆಸ್ ಪಕ್ಷದವರು ಗಂಡಸ್ತನದ ಬಗ್ಗೆ ಮಾತಾಡ್ತಿದ್ದಾರೆ. ಗಂಡಸ್ತನದ ಬಗ್ಗೆ ಮಾತಾಡೋದು ಸರಿಯಲ್ಲ. ಇಂಥ ಪದಗಳನ್ನು ಮಾತನಾಡುವ ಬದಲು ಪರಿಸರ ಉಳಿಸಲು ಪ್ರಯತ್ನಿಸಿ ಎಂದು ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಾದಯಾತ್ರೆ ವಿರೋಧಿಸಿ, ಫೇಸ್‌ಬುಕ್‌ ನಲ್ಲಿ Save mekedatu ಎಂದು ಪೋಸ್ಟರ್ ಸಹ ಚೇತನ್​ ಹಾಕಿದ್ದಾರೆ. ಈ ಪಾದಯಾತ್ರೆ ಬರೀ ಜನರಿಗಷ್ಟೇ, ನೇತಾರರಿಗೆ ಇದು ಕಾರ್ ಯಾತ್ರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದಿದ್ದಾರೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ 9 ಸಾವಿರ ಕೋಟಿ ವಿನಾಶಕಾರಿ ಅಣೆಕಟ್ಟು ಯೋಜನೆಯ ಪರವಾನಗಿ ನಡೆಯುತ್ತಿದೆ. ಹಲವಾರು ಜನರು ಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು ಕಾರಿನಲ್ಲಿ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಸರವಾದಿ ಮೇದಾ ಪಾಟ್ಕರ್ ತೀವ್ರ ವಿರೋಧ

ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಸರವಾದಿ ಮೇದಾ ಪಾಟ್ಕರ್ ಹೋರಾಟ ಕೈಗೊಂಡ ನಟ ಚೇತನ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾವು ಹೋರಾಟ ಮಾಡಿ ಪರಿಸರ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗಿದೆ. ಈ ಹೋರಾಟದಲ್ಲಿ ಲಲಿತ , ದಲಿತ , ಬುಡಕಟ್ಟು ಜನರು,  ದಲಿತ ಎಲ್ಲಾ ಭಾಗಿಯಾಗಿದ್ದೀರಾ ಸಂತೋಷ ಆಗ್ತಾಯಿದೆ. ಆದಿವಾಸಿಗಳನನ್ನು ಉಳಿಸಬೇಕಾಗಿದೆ, ಈಗ ನಾವು ಎಲ್ಲಾ ಸೇರಿ ಮೇಕೆದಾಟು ಅಣೆಕಟ್ಟು  ಯೋಜನೆ  ವಿರೋಧಿಸಬೇಕಾಗಿದೆ. ಅಣೆಕಟ್ಟು ಮಾಡುವುದರಿಂದ ಯಾರಿ ಅನುಕೂಲ. ಯಾರೋ ಒಂದಷ್ಟು ರಾಜಕೀಯದವರಿಗೆ, ಕಂಟ್ರಾಕ್ಟರ್ ಗಳಿಗೆ ಅಷ್ಟೇ. ಈ ಯೋಜನೆ ಜನರಿಗೆ ಅನುಕೂಲವಲ್ಲ...ಉತ್ತಮ ಪರಿಸರ ಉಳಿದ್ರೆ  ಉಳಿದ್ರೆ ಸಾವಿರಾರು ಜನರಿಗೆ ಅನುಕೂಲ. ಅಣೆಕಟ್ಟು ಪರಿಸರ ನಾಶಕ್ಕೆ ಕಾರಣವಾಗಲಿದೆ. ಅಣೆಕಟ್ಟು ನಿರ್ಮಾಣವಾದ್ರೆ ಸಾವಿರಾರು ಎಕರೆಗಳಷ್ಟು ಕಾಡು ನಾಶವಾಗಲಿದೆ. ಕಾಡು ನಾಶಕ್ಕೆ ಮುಂದಾದ್ರೆ ನಾಳೆ ಮತ್ತಷ್ಟು ಪರಿಸರ ನಾಶವಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು.
Published by:Kavya V
First published: