Actor Chetan: ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಬಗ್ಗೆ ಹೀಗೆ ಹೇಳಿದ್ದೇಕೆ ಚೇತನ್? ಮತ್ತೆ ವಿವಾದ ಮೈಮೇಲೆ ಎಳೆದುಕೊಂಡ್ರಾ ನಟ?

ಟಿಪ್ಪು ಸುಲ್ತಾನ್‌ ಕುರಿತಾದ ಪಾಠಗಳನ್ನು ಶಾಲಾ ಮಕ್ಕಳ ಪಠ್ಯ ಪುಸ್ತಕದಿಂದ ತೆಗೆಯ ಬೇಕು ಎಂಬ ವಿಚಾರ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ಚಿತ್ರನಟ ಚೇತನ್ ಇದೇ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ ಎನ್ನಲಾಗ್ತಿದೆ.

ನಟ ಚೇತನ್

ನಟ ಚೇತನ್

  • Share this:
    ಬೆಂಗಳೂರು: ಟಿಪ್ಪು ಸುಲ್ತಾನ್‌ (Tipu Sultan) ಕುರಿತಾದ ಪಾಠಗಳನ್ನು (Lesson) ಶಾಲಾ ಮಕ್ಕಳ (School Students) ಪಠ್ಯ ಪುಸ್ತಕದಿಂದ (Text Book) ತೆಗೆಯ ಬೇಕು ಎಂಬ ವಿಚಾರ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ಟಿಪ್ಪು ಸುಲ್ತಾನ್ ಮತಾಂಧ, ಆತನ ಪಾಠವನ್ನು ವಿದ್ಯಾರ್ಥಿಗಳು ಕಲಿಯುವ ಅಗತ್ಯವಿಲ್ಲ ಅಂತ ಕೆಲ ಹಿಂದೂಪರ ಸಂಘಟನೆಗಳು, ಹಿಂದೂ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಆತನ ಶೌರ್ಯ, ಪರಾಕ್ರಮವೆಲ್ಲ ಇಂದಿನ ಮಕ್ಕಳಿಗೆ ಗೊತ್ತಾಗಬೇಕು ಅಂತ ಇನ್ನೂ ಕೆಲವರು ವಾದಿಸುತ್ತಿದ್ದಾರೆ. ಈ ನಡುವೆ ಚಿತ್ರನಟ (Actor) ಚೇತನ್ (Chetan) ಇದೇ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಮತ್ತೊಂದು ವಿವಾದ (Controversy) ಮೈಮೇಲೆ ಎಳೆದುಕೊಂಡಿದ್ದಾರೆ ಎನ್ನಲಾಗ್ತಿದೆ.

    “ಟಿಪ್ಪು ಸುಲ್ತಾನ ಸ್ವಾತಂತ್ರ್ಯ ಹೋರಾಟಗಾರನಲ್ಲವೇ?”

    ಶಾಲಾ ಮಕ್ಕಳ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಪಾಠ್ ಕೈಬಿಡುವ ವಿಚಾರಕ್ಕೆ ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮುಸ್ಲಿಂ ಆದ ಯಾವುದೇ ವ್ಯಕ್ತಿಯನ್ನು ಗುರಿಯಾಗಿಸುವುದರ ಮೂಲಕ ನಮ್ಮ ಇತಿಹಾಸಗಳನ್ನು ಹಿಂದುತ್ವಗೊಳಿಸುತ್ತಿದೆ. ಟಿಪ್ಪು ಇನ್ನು ಮುಂದೆ ಸ್ವಾತಂತ್ರ‍್ಯ ಹೋರಾಟಗಾರ ಎಂದು ಕರೆಯುವಂತಿಲ್ಲ ಎನ್ನುವಂತಿದೆ ಇದರ ಅಜೆಂಡಾ ಅಂತ ಚೇತನ್ ಆಕ್ರೋಶ ಹೊರಹಾಕಿದ್ದಾರೆ.

    “ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟಗಾರರಲ್ಲ!”

    ಇನ್ನು ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನೂ ಅಲ್ಲ ಎಂದು ನಟ ಚೇತನ್ ಹೇಳಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡುತ್ತ ಯುದ್ಧ ಭೂಮಿಯಲ್ಲಿ ಮಡಿದ ಟಿಪ್ಪು ಸ್ವಾತಂತ್ರ‍್ಯ ಹೋರಾಟಗಾರ ಅಲ್ಲ ಎಂದಾದರೆ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಕೂಡಾ ಸ್ವಾತಂತ್ರ‍್ಯ ಹೋರಾಟಗಾರರಲ್ಲ ಅಂತ ಚೇತನ್ ಹೇಳಿದ್ದಾರೆ.

    ಇದನ್ನೂ ಓದಿ: Kodagu: ಕೊಡವರಿಗೆ ಟಿಪ್ಪು ಮೇಲೆ ಏಕೆ ಸಿಟ್ಟು; ದೇವಟುಪರಂಬುವಿನ ಘಟನೆ ಏನು?

    ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಹಂಚಿಕೊಂಡ ನಟ

    ಈ ಬಗ್ಗೆ ನಟ ಚೇತನ್ ತಮ್ಮ ಫೇಸ್ ಬುಕ್ ಪುಟದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ಚೇತನ್ ಬೆಂಬಲಿಗರು, ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ. ಇನ್ನು ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ನಟ ಚೇತನ್ ಪೇಸ್‌ಬುಕ್ ಪೋಸ್ಟ್


    ಟಿಪ್ಪು ಸುಲ್ತಾನ್ ವೈಭವೀಕರಿಸಿರೋ ಅಂಶಗಳನ್ನ ತೆಗೆದುಹಾಕಬಹುದು

    ಶಾಲಾ ಪಠ್ಯಪುಸ್ತಕದಲ್ಲಿ (School Text Book), 18 ನೇ ಶತಮಾನದ ವಿವಾದಿತ ದೊರೆ ಟಿಪ್ಪು ಸುಲ್ತಾನ್​ ನನ್ನು (Tipu Sultana) ಅತಿಯಾಗಿ ವೈಭವೀಕರಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರಕಾರವು (Karnataka Government), ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನನನ್ನು ಚಿತ್ರಿಸಿರುವುದರ ಕುರಿತಂತೆ ಶೀಘ್ರದಲ್ಲಿಯೇ ಒಂದು ನಿರ್ಧಾರಕ್ಕೆ ಬರಲಿದೆ. ಲೇಖಕ ರೋಹಿತ್ ಚಕ್ರತೀರ್ಥ (Rohith Chakrathirtha) ಅವರ ನೇತೃತ್ವದ ಶಾಲಾ ಪಠ್ಯ ಪುಸ್ತಕ ಸಮಿತಿಗೆ, ರಾಜ್ಯದಲ್ಲಿ ಶಾಲಾ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವ ಕಾರ್ಯವನ್ನು ವಹಿಸಲಾಗಿದೆ.

    ಸರ್ಕಾರಕ್ಕೆ ವರದಿ ಸಲ್ಲಿಕೆ

    ವರದಿಗಳು ತಿಳಿಸಿರುವ ಪ್ರಕಾರ, ಈ ಸಮಿತಿಯು ತನ್ನ ವರದಿಯನ್ನು ಕರ್ನಾಟಕ ಸರಕಾರಕ್ಕೆ ಈಗಾಗಲೇ ಸಲ್ಲಿಸಿದ್ದು, ಅದರಲ್ಲಿ ಮಾಡಲಾಗಿರುವ ಕೆಲವು ಶಿಫಾರಸ್ಸುಗಳಲ್ಲಿ, ಟಿಪ್ಪುವಿಗೆ ಸಂಬಂಧಿಸಿದ ಅಧ್ಯಾಯಗಳಲ್ಲಿ ಕೆಲವು ಸಂಗತಿಗಳನ್ನು ತೆಗೆದು ಹಾಕುವುದು ಕೂಡ ಒಂದಾಗಿದೆ. ಈ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ಶಿಫಾರಸ್ಸು ಮಾಡಿರುವ ಬದಲಾವಣೆಗಳನ್ನು, 2022-23 ನೇ ಶೈಕ್ಷಣಿಕ ವರ್ಷದಿಂದ 6 ರಿಂದ 10 ನೇ ತರಗತಿಗಳ ವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಅಳವಡಿಸಲಾಗುವುದು ಎಂದು ಕರ್ನಾಟಕ ಸರಕಾರ ತಿಳಿಸಿದೆ.'

    ಬಿಜೆಪಿಯಿಂದ ನಿನ್ನೆ ಸರಣಿ ಟ್ವೀಟ್

    ಕರ್ನಾಟಕ ಬಿಜೆಪಿ ತನ್ನ ಟ್ವಿಟರ್ ಖಾತೆಯಲ್ಲಿ ಸಾಲು ಸಾಲು ಟ್ವೀಟ್​ ಗಳನ್ನು ಮಾಡಿದೆ. ಟ್ವೀಟ್ ನಲ್ಲಿ ಟಿಪ್ಪು ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ರ್ಪೇಕ್ಷೆ ಹಾಗೂ ತಿರುಚಿದ ಸತ್ಯ. ಶಾಲಾ- ಪಠ್ಯ ಕ್ರಮದಲ್ಲಿ ಇಂಥ ಸುಳ್ಳುಗಳೇಕೆ ಇರಬೇಕು? ವಿದ್ಯಾರ್ಥಿಗಳಿಗೆ ಮತಾಂಧರ ತಿರುಚಿದ ಇತಿಹಾಸ ಕಲಿಸುವುದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

    ಇದನ್ನೂ ಓದಿ: Tipu Sultan: ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ: ಬಿಜೆಪಿ

     ಟಿಪ್ಪು ನಡೆಸಿದ ನರಮೇಧ ಮರೆಯಲು ಸಾಧ್ಯವೇ?

    ಉತ್ತರ ಭಾರತದಲ್ಲಿ ಔರಂಗಜೇಬ್, ದಕ್ಷಿಣದಲ್ಲಿ ಟಿಪ್ಪು ಸುಲ್ತಾನ್ ಮತಾಂಧ "ರಾಜಸತ್ತೆ"ಯ ಸೃಷ್ಟಿಕರ್ತರು. ಕತ್ತಿಯ ಮೊನೆಯಿಂದ ಅಮಾಯಕರ ಬದುಕು ಕಸಿದುಕೊಂಡ ಮತಾಂಧರಿವರು. ಇಂಥ ಮತೀಯ ಸುಳ್ಳು ಇತಿಹಾಸವನ್ನು ನಮ್ಮ ಮಕ್ಕಳು ಓದಬೇಕೇ? ನೆತ್ತರಕೆರೆ, ಮಡಿಕೇರಿಯಲ್ಲಿ ಟಿಪ್ಪು ನಡೆಸಿದ ನರಮೇಧ ಮರೆಯಲು ಸಾಧ್ಯವೇ? ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ ಅಂತ ಟೀಕಿಸಲಾಗಿದೆ.
    Published by:Annappa Achari
    First published: