ಬೆಂಗಳೂರು: ಟಿಪ್ಪು ಸುಲ್ತಾನ್ (Tipu Sultan) ಹೊಡೆದಾಕಿದಂತೆ ಸಿದ್ದರಾಮಯ್ಯ (Siddaramaiah) ಅವರನ್ನೂ ಹೊಡೆದಾಕಬೇಕು ಎಂದಿದ್ದ ಮಾಜಿ ಸಚಿವ ಅಶ್ವತ್ಥ ನಾರಾಯಣಗೆ (Former Minister Ashwath Narayan) ಸಂಕಷ್ಟ ಎದುರಾಗಿದೆ. ಅಶ್ವತ್ಥ ನಾರಾಯಣ ವಿರುದ್ಧ 3 ತಿಂಗಳ ಬಳಿಕ ಮೈಸೂರಿನ ದೇವರಾಜ ಠಾಣೆಯಲ್ಲಿ ದೂರು (Complaint) ದಾಖಲಾಗಿದೆ. ಇದು ದ್ವೇಷದ ರಾಜಕಾರಣ ಎಂದು ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ. ಎಫ್ಐಆರ್ (FIR) ದಾಖಲಾಗಿದ್ದಕ್ಕೆ ನಟ ಚೇತನ್ ಕುಮಾರ್ (Actor Chetan Kumar) ಸಹ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಫೇಸ್ಬುಕ್ನಲ್ಲಿ (Facebook) ಬರೆದುಕೊಂಡಿರುವ ಚೇತನ್, ಇದು ಕ್ಷುಲ್ಲಕ ಮತ್ತು ಸೇಡಿನ ರಾಜಕಾರಣದಂತೆ ತೋರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಟ ಚೇತನ್ ಹೇಳಿದ್ದೇನು?
ಫೆಬ್ರುವರಿಯಲ್ಲಿ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರು, ‘ಟಿಪ್ಪು ಸುಲ್ತಾನ್‌ನಂತೆ ಸಿದ್ದರಾಮಯ್ಯನವರನ್ನು ಮುಗಿಸಿ’ ಎಂದು ಬೆಂಕಿ ಹಚ್ಚುವ, ಸ್ವೀಕಾರಾರ್ಹವಲ್ಲದ ಹೇಳಿಕೆ ನೀಡಿದ್ದರು. ನಂತರ ಅವರು ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದರು. ಇದೀಗ ಶಾಸಕರ ಹೇಳಿಕೆಗೆ ಕಾಂಗ್ರೆಸ್ ಎಫ್ಐಆರ್ ದಾಖಲಿಸಿದೆ.
ಇದು ಕ್ಷುಲ್ಲಕ ಮತ್ತು ಸೇಡಿನ ರಾಜಕಾರಣದಂತೆ ತೋರುತ್ತಿದೆ. ಕಾಂಗ್ರೆಸ್ ಭಾರಿ ಜನಾದೇಶವನ್ನು ಗೆದ್ದಿದೆ —ಈಗ ಅದು ತನ್ನ ಸ್ವಂತ ಅಹಂಕಾರಗಳನ್ನು ಪೂರೈಸುವ ಬದಲು ಕರ್ನಾಟಕದ ಜನರ ಸೇವೆ ಮಾಡಬೇಕು ಎಂದು ಚೇತನ್ ಕುಮಾರ್ ಸಲಹೆ ನೀಡಿದ್ದಾರೆ.
ಎಂ ಲಕ್ಷ್ಮಣ್ ನಿಯೋಗದಿಂದ ದೂರು ದಾಖಲು
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಮೈಸೂರು ಜಿಲ್ಲಾ ಕಾಂಗ್ರೆಸ್ ಮುಖಂಡರ ನಿಯೋಗದೊಂದಿಗೆ ದೇವರಾಜ ಪೊಲೀಸ್ ಠಾಣೆಗೆ ತೆರಳಿ ಮಾಜಿ ಸಚಿವ, ಹಾಲಿ ಶಾಸಕ ಡಾ ಸಿಎನ್ ಅಶ್ವತ್ಥ್ ನಾರಾಯಣ್ ವಿರುದ್ಧ ದೂರು ದಾಖಲಿಸಿದೆ.
ಕಾಂಗ್ರೆಸ್ ನಾಯಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 506, 153 ರಡಿ ಅಶ್ವತ್ಥ್ ನಾರಾಯಣ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ