Actor Chetan: 14 ದಿನ ನ್ಯಾಯಾಂಗ ಬಂಧನ: ನಟ ಚೇತನ್ ವಿರುದ್ಧ ದಾಖಲಾಗಿರುವ FIRನಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ

ನಟ ಚೇತನ್ ಗೆ 8ನೇ ಎಸಿಎಂಎಂ ನ್ಯಾಯಲಯ 14 ದಿನ ನ್ಯಾಯಾಂಗ ಬಂಧನ (Judicial Custody) ನೀಡಿ ಆದೇಶಿಸಿದೆ. ಚೇತನ್ ಪರ ವಕೀಲರಾದ ಕೆ.ಬಾಲನ್ (Lawyer K Balan) ಜಾಮೀನಿಗೆ (Bail) ಅರ್ಜಿ ಸಲ್ಲಿಸಿದ್ದರು. ಆದ್ರೆ ನ್ಯಾಯಾಧೀಶರು ಬುಧವಾರ ಅಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದರು.

ನಟ ಚೇತನ್ ಕುಮಾರ್

ನಟ ಚೇತನ್ ಕುಮಾರ್

  • Share this:
ನ್ಯಾಯಾಧೀಶರನ್ನು ನಿಂದಿಸಿ ಟ್ವೀಟ್ (Tweet) ಮಾಡಿದ್ದ ನಟ ಚೇತನ್ (Actor Chetan) ಅವರನ್ನು ಶೇಷಾದ್ರಿಪುರಂ ಪೊಲೀಸರು ನಿನ್ನೆ ಮಧ್ಯಾಹ್ನ ಬಂಧಿಸಿದ್ದರು. ಇದೀಗ ನಟ ಚೇತನ್ ಗೆ 8ನೇ ಎಸಿಎಂಎಂ ನ್ಯಾಯಲಯ 14 ದಿನ ನ್ಯಾಯಾಂಗ ಬಂಧನ (Judicial Custody) ನೀಡಿ ಆದೇಶಿಸಿದೆ. ಚೇತನ್ ಪರ ವಕೀಲರಾದ ಕೆ.ಬಾಲನ್ (Lawyer K Balan) ಜಾಮೀನಿಗೆ (Bail) ಅರ್ಜಿ ಸಲ್ಲಿಸಿದ್ದರು. ಆದ್ರೆ ನ್ಯಾಯಾಧೀಶರು ಬುಧವಾರ ಅಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದರು. ಇತ್ತ ಚೇತನ್ ಬಂಧನದ ಬಳಿಕ ಫೇಸ್ ಬುಕ್ ಲೈವ್ ಬಂದಿರುವ ನಟನ ಪತ್ನಿ ಮೇಘಾ(Actor Chetan Wife Megha), ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಫೆಬ್ರವರಿ 16ರಂದು ನಟ ಚೇತನ್ ನ್ಯಾಯಾಧೀಶರ ಕುರಿತು ಪ್ರಚೋದನಕಾರಿ ಟ್ವೀಟ್ ಮಾಡಿದ್ದರು.

ನಟ ಚೇತನ್ ಕುಮಾರ್ ಅಹಿಂಸಾ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿರುವ FIR ಪ್ರತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.

FIR ನಲ್ಲಿ ಏನಿದೆ?

ನಟ ಚೇತನ್ ಕುಮಾರ್ ಅಹಿಂಸಾ ಸಾಮಾನ್ಯ ಜನರಲ್ಲಿ ಮತ್ತು ಒಂದು ಕೋಮಿನ(ಮುಸ್ಲಿಂ) ಜನಾಂಗದವರಿಗೆ ಕಾನೂನು ಮತ್ತು ಸುವ್ಯವಸ್ಥೆ ಮಾನ್ಯ ನ್ಯಾಯಾಲಯ, ಸರ್ಕಾರ ಮತ್ತು ದೇಶದ ಸಂವಿಧಾನಿಕ ವ್ಯವಸ್ಥೆ ಮೇಲೆ ಅಪನಂಬಿಕೆ ಹಾಗೂ ಆಕ್ರೋಶ ಬರುವ ಹಾಗೆ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮೂಲಕ ಮುಸ್ಲಿಂ ಕೋಮಿನವರು ಮತ್ತು ಇತರೇ ಜನರು ಪ್ರತಿಭಟನೆ, ಗಲಭೆ ಹಾಗೂ ಇತ್ಯಾದಿಗಳು ಮಾಡುವಂತೆ ಪ್ರಚೋದಿಸಿದ್ದಾರೆ.

ಇದನ್ನೂ ಓದಿ:  Actor Chetan Arrest: ನಟ ಚೇತನ್ ಬಂಧನ , ಪತಿ ಕಾಣೆಯಾಗಿದ್ದಾರೆಂದು ಫೇಸ್​ಬುಕ್​ ಲೈವ್ ಬಂದ ಮೇಘಾ

ಈ ರೀತಿ ಗಲಭೆ ಉಂಟಾಗಿ ನಮ್ಮ ರಾಜ್ಯದ ಹಾಗೂ ದೇಶದ ಸಮಗ್ರತೆಯು ನಾಶವಾಗಲೆಂದು ಪ್ರಚೋದಿಸಿರುತ್ತಾರೆ. ಹೀಗೆ ಭಾರತದ ಅನೇಕ ವರ್ಗಗಳ ಮತ್ತು ಕೋಮುಗಳ ನಡುವೆ ವೈರತ್ವ, ದ್ವೇಷ ಮತ್ತು  ವೈಮನಸ್ಸು ಉಂಟು ಮಾಡಿರುತ್ತಾರೆ. ಚೇತನ್ ಕುಮಾರ್ ಅಹಿಂಸಾ ರವರು ಈ ರೀತಿಯ ಟ್ವೀಟ್ ಮಾಡಿ ಸಮಾಜದಲ್ಲಿ, ಶಾಂತಿಭಂಗವನ್ನುಂಟು ಮಾಡಿ ಜನರನ್ನು ಉದ್ರೇಖಿಸುವುದು ಇವರ ಉದ್ದೇಶವಾಗಿದೆ.

ಚೇತನ್ ಕುಮಾರ್ ಅಹಿಂಸಾ ರವರ ಈ ಟ್ವೀಟ್ ನಿಂದಾಗಿ ಗೌರಾವನ್ವಿತ ನ್ಯಾಯಮೂರ್ತಿಗಳಿಗೆ ಅವಮಾನ ಮಾಡುವ ಮತ್ತು ಸದರಿಯವರು ಮಾನ್ಯ ನ್ಯಾಯಾಲಯದಲ್ಲಿ ಹಿಜಾಬ್ ಪ್ರಕರಣ (Hijab Case) ವಿಚಾರಣೆಯನ್ನು ಕೈ ಬಿಡುವಂತೆ ಅಥವ ಅವರುಗಳು ನಿಷ್ಪಕ್ಷಪಾತ ವಿಚಾರಣೆ ಮತ್ತು  ನ್ಯಾಯನಿರ್ಣತ ಮಾಡುವದರಿಂದ ಹಿಂದೆ ಸರಿಯುವಂತೆ ಮಾಡುವುದು ಇವರ ಉದ್ದೇಶವಾಗಿರತ್ತುದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಚೇತನಾ ಪತ್ನಿ ಮೇಘಾ ಫೇಸ್ ಬುಕ್ ಲೈವ್

ನಟ ಚೇತನ್​ ಅವರನ್ನು ಪೊಲೀಸರು ಬಂಧಿಸುತ್ತಿದ್ದ ಪತ್ನಿ ಮೇಘಾ ಫೇಸ್​ಬುಕ್​ ಲೈವ್​ ಮಾಡಿದ್ದಾರೆ. ಕಾರಣವಿಲ್ಲದೆ ನನ್ನ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ ಅಂತ ನೇಹಾ ಆರೋಪಿಸುತ್ತಿದ್ದಾರೆ. ಮನೆಯಲ್ಲಿದ್ದ ಚೇತನ್ ಅವರನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ನಟ ಚೇತನ್ ಪತ್ನಿ ಮೇಘಾ ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದಾರೆ. ಮನೆಯಲ್ಲಿದ್ದವರು ಏಕಾಏಕಿ ಕಾಣಿಸದೇ ಇದ್ದಾಗ, ನಾನು ಮನೆಯಲ್ಲಾ ಹುಡುಕಿದೆ, ಚೇತನ್ ಎಲ್ಲಿ ಎಂದು ಅಲ್ಲೇ ಇದ್ದವರನ್ನು ಕೇಳಿದಾಗ ಪೊಲೀಸ್ ನವರು ಕರೆದುಕೊಂಡು ಹೋದರು ಎಂದು ಹೇಳಿದ್ದಾರೆ.

ಇದನ್ನೂ ಓದಿ:  Harsha Murder case: ಹರ್ಷ ಕೊಲೆ ಪ್ರಕರಣ, 7ನೇ ಆರೋಪಿ ಬಂಧನ, ಭಾನುವಾರ ರಾತ್ರಿ ನಡೆದಿದ್ದೇನು ಗೊತ್ತಾ?

ನಾನು ಶೇಷಾದ್ರಿಪುರಂ ಪೊಲೀಸ್ ಠಾಣೆಯನ್ನು ಸಂಪರ್ಕ ಮಾಡಿದೆ. ಅವರಿಂದ ಸಕಾರಾತ್ಮಕವಾಗಿ ಉತ್ತರ ಸಿಗುತ್ತಿಲ್ಲ. ಅವರು ಅರೆಸ್ಟ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಚೇತನ್ ಮತ್ತು ಅವರ ಅಂಗರಕ್ಷಕರ ಫೋನ್ ಕರೆ ಕೂಡ ಸಿಗುತ್ತಿಲ್ಲ. ನಿಜ ಅರ್ಥದಲ್ಲಿ ನನ್ನ ಪತಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಮೇಘಾ ಆರೋಪ ಮಾಡಿದ್ದಾರೆ.
Published by:Mahmadrafik K
First published: