ಮಂಡ್ಯ(ನವೆಂಬರ್. 23): ಮಂಡ್ಯದ ಗಂಡು ಅಂಬರೀಶ್ ಅಂದ್ರೆ ಅಭಿಮಾನಿಗಳ ಆರಾಧ್ಯದೈವ. ಅಂಬಿಯ ಮಗ್ದ ಮನಸಿನ ಒರಟು ಮಾತಿಗೆ ತಲೆ ಬಾಗದವರೆ ಇಲ್ಲ. ಆದರೆ, ರೆಬೆಲ್ ಸ್ಟಾರ್ ನಮ್ಮನ್ನೆಲ್ಲಾ ಅಗಲಿ 2 ವರ್ಷ ತುಂಬಿದೆ. ವ್ಯಕ್ತಿ ಸತ್ತರು ಅಂಬಿ ಮೇಲಿನ ಪ್ರೀತಿ, ಅಭಿಮಾನ ಕಡಿಮೆ ಆಗಿಲ್ಲ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಲಿಯುಗ ಕರ್ಣನಿಗೆ ಅಭಿಮಾನಿಗಳು ಪ್ರೀತಿಯಿಂದ ಗುಡಿ ಕಟ್ಟಿದ್ದಾರೆ. ಅಂಬರೀಶ್ ಅವರ ವ್ಯಕ್ತಿತ್ವದ ನೆನಪನ್ನ ಮುಂದಿನ ಪೀಳಿಗೆಗೆಯೂ ತಿಳಿಯುವಂತೆ ಮಾಡುತ್ತಿದ್ದಾರೆ. ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರು 2018 ನವೆಂಬರ್ 24 ರಂದು ಇಹಲೋಕ ತ್ಯಜಿಸಿದರು. ಮೆಚ್ಚಿನ ನಟನ ಕಳೆದುಕೊಂಡ ಕೋಟ್ಯಾಂತರ ಅಭಿಮಾನಿಗಳು ದುಃಖದ ಮಡುವಿನಲ್ಲಿ ಮುಳುಗಿದರು. ಅಭಿಮಾನಿಗಳು ಅಂಬಿ ಬದುಕಿದ್ದಾಗ ತೋರಿದ್ದ ಪ್ರೀತಿ, ಅಭಿಮಾವನ್ನೇ ಅವರ ಸಾವಿನ ನಂತರವೂ ಮುಂದುವ ರೆಸಿದ್ದಾರೆ. ನಲ್ಮೆಯ ನಟನಿಗೆ ಗುಡಿಕಟ್ಟಿ ಪೂಜಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.
ಇನ್ನು ಅಂಬಿಯ ಗುಡಿ ನಿರ್ಮಾಣವಾಗಿರುವುದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆ ಗೌಡನದೊಡ್ಡಿ ಗ್ರಾಮದಲ್ಲಿ. ಈ ಗುಡಿ ಬಗ್ಗೆ ಹೇಳುವ ಮೊದಲು ನಾವು ನಿಮಗೆ ಹೊಟ್ಟೆಗೌಡನ ದೊಡ್ಡಿ ಗ್ರಾಮದ ಬಗ್ಗೆ ಹೇಳಲೆ ಬೇಕು. ಯಾಕೆಂದ್ರೆ ಇಲ್ಲಿನ ಜನರಿಗೆ ಅಂಬರೀಶ್ ಒಬ್ಬ ನಾಯಕ ನಟ ಅಲ್ಲ ಆರಾಧ್ಯ ದೈವ. ಹಾಗಾಗಿ ಈ ಜನರು ಅಂಬಿಯನ್ನ ದೇವರೆಂದೆ ಭಾವಿಸಿದ್ದಾರೆ.
ಸುಮಾರು 100 ಮನೆಗಳಿರುವ ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಒಂದಿಬ್ಬರು ಅಂಬಿ ಅಭಿಮಾನಿಗಳಿದ್ದಾರೆ. ಪ್ರತಿ ವರ್ಷ ಅಂಬರೀಶ್ ಹುಟ್ಟಿದ ದಿನ ಮೇ 29ರಂದು ಈ ಊರಲ್ಲಿ ಸಂಭ್ರಮ ಮನೆ ಮಾಡುತ್ತದೆ. ಮನೆಮನೆಗಳಲ್ಲೂ ಹಸಿರು ತೋರಣ ಕಟ್ಟಿ ಅಂಬಿ ಹುಟ್ಟುಹಬ್ಬವನ್ನ ಊರ ಹಬ್ಬದ ರೀತಿಯಲ್ಲಿ ಆಚರಿಸುವ ಇವರು. ತಮ್ಮೂರಿನ ಮೇಲಿದ್ದ ಅಂಬಿಯ ಅವಿನಾಭಾವ ಸಂಬಂಧಕ್ಕೆ ಈಗ ಅಂಬಿಗಾಗಿ ಗುಡಿಯನ್ನೇ ಕಟ್ಟಿ ಪೂಜಿಸಲು ಮುಂದಾಗಿದ್ದಾರೆ.
ಇನ್ನು ಅಂಬರೀಶ್ ಅವರು ಮರಣಹೊಂದಿದಾಗ ಅವರ ಚಿತಾಭಸ್ಮ ತಂದು ಸತತ ಒಂದು ವರ್ಷಕಾಲ ಗುಡಿ ನಿರ್ಮಾಣ ಮಾಡುವರೆಗೂ ಕಚೇರಿಯಲ್ಲಿಟ್ಟು ಪೂಜಿಸುತ್ತಿದರು. ಊರಿನ ಅಭಿಮಾನಿಗಳಿಂದಲೇ ಸುಮಾರು 8 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿ ಗುಡಿ ಕಟ್ಟಿದ್ದಾರೆ.
ಇದನ್ನೂ ಓದಿ : ಡಿಸೆಂಬರ್ವರೆಗೂ ಶಾಲೆಗಳ ಪುನಾರಂಭ ಇಲ್ಲ: ತಾಂತ್ರಿಕ ಸಮಿತಿ ಸಲಹೆ ಸ್ವೀಕರಿಸಿದ ರಾಜ್ಯ ಸರ್ಕಾರ
ಗುಡಿಯ ಒಳಭಾಗದಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ಇಡಲಾಗಿದೆ. ಈ ಗುಡಿಗಾಗಿ 7 ರಿಂದ 8 ಲಕ್ಷ ಖರ್ಚು ಮಾಡಿರುವ ಗ್ರಾಮಸ್ಥರು. ಅಂಬಿಯ ನೆನಪು ಎಂದಿಗೂ ಅಮರ ಅವರು ಬದುಕಿದ್ದ ರೀತಿ ಅವರ ವ್ಯಕ್ತಿತ್ವ ನಮ್ಮ ಮುಂದಿನ ಪೀಳಿಗೆಗೂ ತಿಳಿಯಲಿ ಎಂದು ಈ ಪುತ್ಥಳಿ ನಿರ್ಮಿಸಿದ್ದೇವೆ ಎನ್ನುತ್ತಾರೆ ಈ ಊರಿನ ಅಂಬಿ ಅಭಿಮಾನಿಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ