Artist: ಈ ಕಲಾವಿದನಿಗೆ ದುರಸ್ಥಿಗೊಂಡ ರಸ್ತೆಗಳೇ ಕ್ಯಾನ್ವಾಸ್ ಅಂತೆ! ಎಷ್ಟು ಚೆನ್ನಾಗಿದೆ ಅಲ್ವಾ ಈ ಕಲಾಕೃತಿಗಳು

ನಾಗರೀಕರ ಸಮಸ್ಯೆಗಳನ್ನು ನಿವಾರಿಸುವಂತೆ ಆಗ್ರಹಿಸಿ ಮಾಡುವ ಪ್ರತಿಭಟನೆಗಳು ಹೊಸದೇನಲ್ಲ. ಹಿಂದೆಯೂ ಅಂತಹ ಪ್ರತಿಭಟನೆಗಳನ್ನು ಮಾಡಲಾಗುತ್ತಿತ್ತು, ಇಂದು ಕೂಡ ಅಂತಹ ಪ್ರತಿಭಟನೆಗಳು ನಡೆಯುತ್ತವೆ. ಆದರೂ ಪ್ರತಿಭಟನೆ ಮಾಡುವ ಧೈರ್ಯ ಎಲ್ಲರಿಗೂ ಇರುವುದಿಲ್ಲ ಬಿಡಿ. ಅದರಲ್ಲೂ ತಮ್ಮ ಕಲೆಯ ಮೂಲಕ ತಮ್ಮ ಅಳಲನ್ನು ವ್ಯಕ್ತಪಡಿಸುವಂತಹ ತಾಕತ್ತು ಮತ್ತು ಪ್ರತಿಭೆಯುಳ್ಳವರಂತೂ ತೀರಾ ಅಪರೂಪ.

ಚಿತ್ರಕಾರ ಬಾದಲ್ ನಂಜುಂಡಸ್ವಾಮಿ

ಚಿತ್ರಕಾರ ಬಾದಲ್ ನಂಜುಂಡಸ್ವಾಮಿ

  • Share this:
ನಾಗರೀಕರ ಸಮಸ್ಯೆಗಳನ್ನು ನಿವಾರಿಸುವಂತೆ ಆಗ್ರಹಿಸಿ ಮಾಡುವ ಪ್ರತಿಭಟನೆಗಳು (Protest) ಹೊಸದೇನಲ್ಲ. ಹಿಂದೆಯೂ ಅಂತಹ ಪ್ರತಿಭಟನೆಗಳನ್ನು ಮಾಡಲಾಗುತ್ತಿತ್ತು, ಇಂದು ಕೂಡ ಅಂತಹ ಪ್ರತಿಭಟನೆಗಳು ನಡೆಯುತ್ತವೆ. ಆದರೂ ಪ್ರತಿಭಟನೆ ಮಾಡುವ ಧೈರ್ಯ ಎಲ್ಲರಿಗೂ ಇರುವುದಿಲ್ಲ ಬಿಡಿ. ಅದರಲ್ಲೂ ತಮ್ಮ ಕಲೆಯ (Art) ಮೂಲಕ ತಮ್ಮ ಅಳಲನ್ನು ವ್ಯಕ್ತಪಡಿಸುವಂತಹ ತಾಕತ್ತು ಮತ್ತು ಪ್ರತಿಭೆಯುಳ್ಳವರಂತೂ ತೀರಾ ಅಪರೂಪ. ಅಂತಹ ಅಪರೂಪದ ವ್ಯಕ್ತಿಗಳಲ್ಲಿ (Person) ಕರ್ನಾಟಕ ಮೂಲದ ಚಿತ್ರಕಾರ (Artist) ಬಾದಲ್ ನಂಜುಂಡಸ್ವಾಮಿ (Baadal Nanjundaswamy) (42) ಕೂಡ ಒಬ್ಬರು. ನಂಜುಂಡ ಸ್ವಾಮಿ ಅವರನ್ನು ಸ್ನೇಹಿತರು ಪ್ರೀತಿಯಿಂದ ಬಾದಲ್ ಎನ್ನುತ್ತಾರೆ. ಆದರೆ ಅಸಲಿಗೆ ‘ಬಾದಲ್’ ಎನ್ನುವುದು ಅವರ ಕುಂಚದ ಹೆಸರು.

ಯಾರಿದು ನಂಜುಂಡಯ್ಯ?
ನಂಜುಂಡ ಸ್ವಾಮಿ ಅವರಿಗೆ ಬಾಲ್ಯದಿಂದಲೂ ಅವರಿವರಿಗೆ ಸಲಹೆ ಕೊಡುವ ಅಭ್ಯಾಸವಿತ್ತಂತೆ. ಆ ಕಾರಣಕ್ಕಾಗಿ ಬಹಳಷ್ಟು ಮಂದಿ ಅವರನ್ನು ಪಾಗಲ್ ಎಂದು ಕರೆಯಲು ಆರಂಭಿಸಿದರಂತೆ. ಕಾಲಕಳೆದಂತೆ ಪಾಗಲ್, ಬಾದಲ್ ಆಗಿ ಬದಲಾಯ್ತು ಮತ್ತು ನಂಜುಂಡ ಸ್ವಾಮಿ ಆ ಹೆಸರನ್ನು ಕುಂಚಕ್ಕೆ ಇಟ್ಟರು.ವೃತ್ತಿಯಲ್ಲಿ ನಾಟಿ ವೈದ್ಯರಾಗಿದ್ದ ನಂಜಯ್ಯ ಎಂಬವರ ಐದು ಮಕ್ಕಳಲ್ಲಿ ನಂಜುಂಡಯ್ಯ ಕೊನೆಯ ಪುತ್ರ. ತಮ್ಮ ಒಡಹುಟ್ಟಿದವರಲ್ಲಿ ಪದವಿ ಪಡೆದ ಏಕೈಕ ವ್ಯಕ್ತಿ ನಂಜುಡಯ್ಯ. ಚಾಮರಾಜೇಂದ್ರ ಆಕಾಡೆಮಿ ಆಫ್ ವಿಶುವಲ್ ಆರ್ಟ್ಸ್ ನಲ್ಲಿ ಓದಿದ ಅವರು 2004 ರಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದರು.

ನಗರದ ರಸ್ತೆಗಳ ದುಸ್ಥಿತಿಯನ್ನು ಬಿಂಬಿಸುವ ಚಿತ್ರ ಬಿಡಿಸುವ ಮೂಲಕ ಪ್ರತಿಭಟನೆ
ಬಾದಲ್ ಅವರು ಸುಮಾರು 12-13 ವರ್ಷಗಳ ಹಿಂದೆ, ಮೈಸೂರು ಅರಮನೆಯ ಸಮೀಪ, ನಗರದ ರಸ್ತೆಗಳ ದುಸ್ಥಿತಿಯನ್ನು ಬಿಂಬಿಸುವ ಉದ್ದೇಶದಿಂದ ಈಜುಕೊಳದ ಚಿತ್ರ ಬಿಡಿಸುವ ಮೂಲಕ ಜನಪ್ರಿಯತೆ ಪಡೆದರು. “ರಸ್ತೆಗಳು ನಿಜಕ್ಕೂ ಕೆಟ್ಟ ಸ್ಥಿತಿಯಲ್ಲಿ ಇವೆ ಮತ್ತು ನನ್ನ ಚಿತ್ರಗಳು, ಮಾಧ್ಯಮಗಳು ಮತ್ತು ಸಾರ್ವಜನಿಕರ ಗಮನವನ್ನು ತುಂಬಾ ಸೆಳೆದಿವೆ. ಎಲ್ಲದಕ್ಕಿಂತ ಮುಖ್ಯವಾಗಿ, ಆ ಸಮಸ್ಯೆಗಳನ್ನು ನಾಗರೀಕ ಏಜೆನ್ಸಿಗಳು ಶೀಘ್ರವಾಗಿ ಪರಿಹರಿಸಿದವು” ಎಂದು ಹೇಳುತ್ತಾರೆ ಅವರು.ಇದನ್ನೂ ಓದಿ: New Car: ಬರೀ 10 ರೂಪಾಯಿ ನಾಣ್ಯಗಳಿಂದ ಲಕ್ಷ ರೂಪಾಯಿ ಸೇರಿಸಿ ಕಾರು ಖರೀದಿ ಮಾಡಿದ ವ್ಯಕ್ತಿ!

ಅವರು ಹಿಂದೆ ಕೂಡ ನಾಗರೀಕರ ಸಮಸ್ಯೆಗಳ ನಿರಾಸಕ್ತಿ ವಿರುದ್ಧ ಪ್ರತಿಭಟನೆ ಮಾಡಲು ಕಲೆಯನ್ನು ಬಳಸಿಕೊಂಡಿದ್ದರು. ಅವರು ತಮ್ಮ ಪೇಟಿಂಗ್ ಅಂಗಡಿಯಲ್ಲು ಕೂಡ ಅಧಿಕಾರದಲ್ಲಿ ಇರುವವರನ್ನು ಪ್ರಶ್ನಿಸುವ ಹೋರ್ಡಿಂಗ್‍ಗಳನ್ನು ಹಾಕುತ್ತಿದ್ದರು. ಇದೇ ರೀತಿ ಚಾಮಲಾಪುರದಲ್ಲಿ ಥರ್ಮಲ್ ಸ್ಥಾವರ ಸ್ಥಾಪಿಸುವುದರ ಬಗ್ಗೆ ಪ್ರತಿಭಟಿಸಿ, ಸರಕಾರ ಆ ಯೋಜನೆಯನ್ನು ಹಿಂದೆ ತೆಗೆದುಕೊಳ್ಳುವುದಕ್ಕೆ ಒತ್ತಾಯಿಸಿದ್ದರು ಕೂಡ.

'ಚಂದ್ರನ ಮೇಲೆ ನಡಿಗೆ' ವೀಡಿಯೋ ವೈರಲ್
ಬೆಂಗಳೂರಿಗೆ ವಾಸ್ತವ್ಯವನ್ನು ಬದಲಾಯಿಸಿದ ಬಳಿಕ ಕೂಡ, ನಾಗರೀಕರ ಸಮಸ್ಯೆಗಳ ಕುರಿತು ತಮ್ಮ ಕಲಾಕೃತಿಗಳ ಮೂಲಕ ಪ್ರತಿಭಟಿಸುವುದನ್ನು ಬಿಡಲಿಲ್ಲ. ತುಂಗಾನಗರ ಮುಖ್ಯ ರಸ್ತೆಯಲ್ಲಿ ಅಂತರಿಕ್ಷಯಾನಿಯಂತೆ ಪೋಷಾಕು ಧರಿಸಿ, ಚಂದ್ರನ ಮೇಲಿನ ಕುಳಿಗಳನ್ನು ಹೋಲುವ ಹಾಳಾದ ರಸ್ತೆಯ ಮೂಲಕ ನಡೆದುಕೊಂಡು ಹೋಗುತ್ತಿದ್ದ ಅವರ ವಿಡಿಯೋ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಚಂದ್ರಯಾನ -2 ಅನ್ನು ಚಂದ್ರನ ಮೇಲೆ ಲ್ಯಾಂಡಿಂಗ್ ಮಾಡಿಸಲು ಯೋಜಿಸಲಾಗಿದ್ದ ಸಮಯದಲ್ಲೇ, ವಿಡಿಯೋ ಕೂಡ ಸುದ್ದಿ ಮಾಡಿತ್ತು.ಥಿಯೇಟರ್ ಆರ್ಟಿಸ್ಟ್ ಆಗಿ ಬಾದಲ್ ನಂಜುಂಡ ಸ್ವಾಮಿ
ಥಿಯೇಟರ್ ಆರ್ಟಿಸ್ಟ್ ಕೂಡ ಆಗಿರುವ ಬಾದಲ್ ನಂಜುಂಡ ಸ್ವಾಮಿ ಅವರು, ಹಲವಾರು ಸಣ್ಣ ಕಥೆಗಳನ್ನು, ಮುಖ್ಯವಾಗಿ ಕಾಮಿಕ್ಸ್ ಗಳನ್ನು ಬರೆದಿದ್ದಾರೆ. “ಸ್ವಲ್ಪ ಸಮಯದ ವರೆಗೆ ನಾನು, ಮೊಬೈಲ್ ಲೈಬ್ರೆರಿಗಳಲ್ಲಿ ಕೆಲಸ ಮಾಡಿದ್ದೆ, ಅಲ್ಲಿ ನಾನು ಈ ಎಲ್ಲಾ ಕಾಮಿಕ್ಸ್ ಗಳನ್ನು ಓದುತ್ತಿದ್ದೆ, ಅದರಿಂದ ನನಗೆ ಕಾಮಿಕ್ಸ್ ಗಳನ್ನು ಬರೆಯಲು ಪ್ರೋತ್ಸಾಹ ಸಿಕ್ಕಿತು. ನಾನು ಬಿಡುವು ಸಿಕ್ಕಾಗಲೆಲ್ಲಾ ಅದರಲ್ಲಿ ತೊಡಗಿಸಿಕೊಳ್ಳುತ್ತೇನೆ” ಎಂದು ಹೇಳುತ್ತಾರೆ ಅವರು.ಇದನ್ನೂ ಓದಿ: Resignation Letter: ಕೆಲಸದಲ್ಲಿ ಮಜಾ ಬರ್ತಿಲ್ಲಾ ಅಂತ ರಿಸೈನ್ ಮಾಡಿದ ವ್ಯಕ್ತಿ! ವೈರಲ್ ಆಯ್ತು ರಾಜೀನಾಮೆ ಪತ್ರ

ಬಾದಲ್ ಅವರ ಕಲಾಕೃತಿಗಳು ಬಹಳ ಜನಪ್ರಿಯತೆಯನ್ನು ಪಡೆದಿವೆ. ಸಚಿನ್ ತೆಂಡುಲ್ಕರ್ ಅವರು ಪೋಟ್ರೇಟ್ ಸೇರಿದಂತೆ, ಹಲವಾರು ಪೋಟ್ರೇಟ್‍ಗಳನ್ನು ಬಿಡಿಸಲು, ಅವರನ್ನು ಐಐಟಿ ಬಾಂಬೆಯ ಸ್ಟೂಡೆಂಟ್ ಆ್ಯಕ್ಟಿವಿಟಿ ಸೆಂಟರ್‍ಗೆ ಆಹ್ವಾನಿಸಲಾಗಿತ್ತು. ನಂಜುಂಡ ಸ್ವಾಮಿ ಅವರು ಕನ್ನಡ ಸಿನಿಮಾ ರಂಗದಲ್ಲಿ ಕಲಾ ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದಾರೆ.
Published by:Ashwini Prabhu
First published: