CM Bommai: ಕನ್ನಡ ನಾಡಿನ ವೀರ ಮಹಿಳೆಯರ ಕುರಿತ ಪಾಠಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

ಕನ್ನಡ ನಾಡಿನ ಕೆಚ್ಚೆದೆಯ ವೀರ ಮಹಿಳೆಯರಾದ ಬೆಳವಡಿ ಮಲ್ಲಮ್ಮ, ಕೆಳದಿಯ ಚನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಅವರ ಕುರಿತ ಪಾಠಗಳನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಲಾಗುವುದು.

ಬೆಳವಡಿ ಮಲ್ಲಮ್ಮ, ಮರಾಠಾ ಸೈನ್ಯದ ವಿರುದ್ಧ ಜಯಗಳಿಸಿದ 374 ನೇ ವರ್ಷಾಚರಣೆ

ಬೆಳವಡಿ ಮಲ್ಲಮ್ಮ, ಮರಾಠಾ ಸೈನ್ಯದ ವಿರುದ್ಧ ಜಯಗಳಿಸಿದ 374 ನೇ ವರ್ಷಾಚರಣೆ

 • Share this:
  ಕನ್ನಡ ನಾಡಿನ (Kannada Nadu) ಕೆಚ್ಚೆದೆಯ ವೀರ ಮಹಿಳೆಯರಾದ ಬೆಳವಡಿ ಮಲ್ಲಮ್ಮ, ಕೆಳದಿಯ ಚನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಅವರ ಕುರಿತ ಪಾಠಗಳನ್ನು ಪಠ್ಯಕ್ರಮದಲ್ಲಿ (Curriculum) ಅಳವಡಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಿಳಿಸಿದ್ದಾರೆ. ಪಾಠಗಳನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನಾಡಿನ ಕೆಚ್ಚೆದೆಯ ಹೋರಾಟಗಾರರು, ವೀರ ರಾಣಿಯರ ಸಾಧನೆಯನ್ನು ತಿಳಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಮಕ್ಕಳಲ್ಲಿ (Children's) ಉತ್ತಮ ನಾಯಕತ್ವ ಬೆಳವಣಿಗೆ ಹಾಗೂ ನಾಡಿನ ಬಗ್ಗೆ ಅಪಾರ ಪ್ರೇಮ, ತ್ಯಾಗದ ಭಾವನೆ ಮೂಡಿಸಲು ಸಹಕಾರಿ. ಮಕ್ಕಳಲ್ಲಿ ನಾಯಕತ್ವದ ಬೆಳವಣಿಗೆಯನ್ನು ಕಾಣಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

  ಬೆಳವಡಿ ಮಲ್ಲಮ್ಮ ಮರಾಠಾ ಸೈನ್ಯದ ವಿರುದ್ಧ ಜಯಗಳಿಸಿದ  374 ನೇ ವರ್ಷಾಚರಣೆ

  ಹೋರಾಟಗಾರ್ತಿ ಬೆಳವಡಿ ಮಲ್ಲಮ್ಮ, ಮರಾಠಾ ಸೈನ್ಯದ ವಿರುದ್ಧ ಜಯಗಳಿಸಿದ  374 ನೇ ವರ್ಷಾಚರಣೆಗೆ ಸೋಮವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಳವಡಿಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

  ಕರ್ನಾಟಕಕ್ಕೆ ಮಹಿಳೆಯರ ಕೊಡುಗೆ ಅಪಾರ

  ನಿನ್ನೆ ಕೆಳದಿ ಚನ್ನಮ್ಮ ನ ಪಟ್ಟಾಭಿಷೇಕದ 350 ನೇ ವರ್ಷದ ಆಚರಣೆಯನ್ನೂ ಮಾಡಿದ್ದೇವೆ. ಕರ್ನಾಟಕಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಅದನ್ನು ನಾವು ಇಂದಿನ ಪೀಳಿಗೆಗೆ ತಿಳಿಸುವುದು ಮುಖ್ಯವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮನಿಂದ ಮೊದಲುಗೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಿಳೆಯರ ಪಾತ್ರವನ್ನು ಪ್ರಮುಖವಾಗಿ ಯುವ ಜನಾಂಗಕ್ಕೆ ತಿಳಿಸುವ ಕೆಲಸ ನಡೆಯಬೇಕಿದೆ. ಮುಂದಿನ ವರ್ಷ ಬೆಳವಡಿಯಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

  ಇದನ್ನೂ ಓದಿ: ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ದಸರಾ ಬಳಿಕ ಶಾಲಾ ಮಕ್ಕಳಿಗೆ ಮತ್ತೆ ಮಧ್ಯಾಹ್ನದ ಬಿಸಿಯೂಟ!

  ಈ ಸಂಸ್ಥಾನ ಬೆಳೆದು ಬಂದ ರೀತಿ, ಶಿವಾಜಿ ಮಹಾರಾಜರ ವಿರುದ್ಧ ಅವರ ಹೋರಾಟದ ಬಗ್ಗೆ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮಿಗಳಿಗೆ ಅಪಾರ ಜ್ಞಾನವಿದೆ. ಅವರ ಕಳಕಳಿ, ನಾಡಿನ ಬಗ್ಗೆ ಅವರ ಪ್ರೀತಿಯಿಂದ ಕಾರ್ಯಕ್ರಮ ಆಯೋಜನೆಗೊಂಡಿಗೆ ಎಂದು ಅಭಿನಂದಿಸಿದರು.

  ಈ ಸಂದರ್ಭದಲ್ಲಿ ಹರಿಹರದ ವೀರಶೈವ ಲಿಂಗಾಯತ  ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಶಾಸಕ ಅರುಣ್ ಶಾಹಪುರ, ಮಾಜಿ ಶಾಸಕ ಮೋಹನ್ ಲಿಂಬಿಕಾಯಿ ಮತ್ತು ಇತರರು ಉಪಸ್ಥಿತರಿದ್ದರು.

  ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಿಳೆಯರ ತ್ಯಾಗ

  ಇನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಿಳೆಯರ ತ್ಯಾಗ, ದೇಶಭಕ್ತಿ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಈ ಹತ್ತು ಮಂದಿ ಮಹಿಳೆಯರನ್ನು ನೆನಪಿಸಿಕೊಳ್ಳಬೇಕಾಗಿದೆ.

  ರಾಣಿ ಲಕ್ಷ್ಮೀಬಾಯಿ: ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ ಭಾರತದ ಸ್ವಾತಂತ್ರ್ಯ ಹೋರಾಟದ 1857ರ ಸಿಪಾಯಿ ದಂಗೆ . ಈ ಸಂದರ್ಭದಲ್ಲಿ ಝಾನ್ಸಿಯ ಆಳ್ವಿಕೆಯನ್ನು ಬ್ರಿಟಿಷರು ಲಕ್ಷ್ಮಿಬಾಯಿಗೆ ವಹಿಸಿದ್ದರು.  1858ರ ಮಾರ್ಚ್ 25ರಂದು ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ಬಗ್ಗೆ ಇದ್ದ ನಿಲುವು ಬದಲಾಯಿಸಲು ಕಾರಣವಾಯಿತು.  ಹೀಗೆ ದಿಟ್ಟತನದಿಂದ ಹೋರಾಡಿದ್ದ ಝಾನ್ಸಿ ಲಕ್ಷ್ಮೀಬಾಯಿ 1858, ಜೂನ್ 18ರಂದು ಸಾವನ್ನಪ್ಪಿದ್ದಳು.

  ಸರೋಜಿನಿ ನಾಯ್ಡು: ಉರ್ದು, ತೆಲುಗು, ಇಂಗ್ಲಿಷ್, ಬೆಂಗಾಲಿ ಮತ್ತು ಪರ್ಷಿಯನ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಸರೋಜಿನಿ ನಾಯ್ಡು ಭಾರತದ ಕೋಗಿಲೆ ಎಂದು ಹೆಸರು ಪಡೆದಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 1949ರ ಮಾರ್ಚ್ 2ರಂದು ನಿಧನರಾಗಿದ್ದರು.

  ಇದನ್ನೂ ಓದಿ: ಸಾಂಕ್ರಾಮಿಕ ರೋಗದ ಅವಧಿಯಲ್ಲಿ ರಾಜ್ಯದಲ್ಲಿ ಮಕ್ಕಳಿಗಾಗಿರುವ ಕಲಿಕೆಯ ನಷ್ಟದ ವಿವರ ಇಲ್ಲಿದೆ!

  ಬೇಗಂ ಹಝರತ್ ಮಹಲ್: 1857ರ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಬೇಗಂ ಹಝರತ್ ಬೇಗಂ ಮಹಲ್ ಅವರ ಹೋರಾಟ ಪ್ರಮುಖವಾಗಿತ್ತು. ಹಝರತ್ ಬೇಗಂ ಅವಾಧ್ ಆಡಳಿತ ನೋಡಿಕೊಳ್ಳುವುದರ ಜೊತೆಗೆ ಲಕ್ನೋವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಳು. ಬ್ರಿಟಿಷರು ಹಝರತ್ ಳನ್ನು ಬಲವಂತದಿಂದ ಅಧಿಕಾರದಿಂದ ಕೆಳಗಿಳಿಸಿದ್ದರು.

  ಕಿತ್ತೂರು ರಾಣಿ ಚೆನ್ನಮ್ಮ: ಸ್ವಾತಂತ್ಯಕ್ಕಾಗಿ ಬ್ರಿಟಿಷರ ಬೃಹತ್ ಸೈನ್ಯದ ವಿರುದ್ಧ ಸೆಟೆದು ನಿಂತು ಹೋರಾಟ ನಡೆಸಿದ್ದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಆಕೆಯ ಧೈರ್ಯ, ಸಾಹಸ, ಕೆಚ್ಚು ಇಂದಿಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕ.
  Published by:renukadariyannavar
  First published: