• Home
  • »
  • News
  • »
  • state
  • »
  • Acid Attack: ಯುವತಿ ಮೇಲೆ ಆ್ಯಸಿಡ್ ಸುರಿದಿದ್ದ ನಾಗನಿಗೆ ಗ್ಯಾಂಗ್ರಿನ್ ನೋವು! ಇದು ದೇವರೇ ನೀಡಿದ ಶಿಕ್ಷೆ ಎಂದ ಸಂತ್ರಸ್ತೆ

Acid Attack: ಯುವತಿ ಮೇಲೆ ಆ್ಯಸಿಡ್ ಸುರಿದಿದ್ದ ನಾಗನಿಗೆ ಗ್ಯಾಂಗ್ರಿನ್ ನೋವು! ಇದು ದೇವರೇ ನೀಡಿದ ಶಿಕ್ಷೆ ಎಂದ ಸಂತ್ರಸ್ತೆ

ಆ್ಯಸಿಡ್ ನಾಗ

ಆ್ಯಸಿಡ್ ನಾಗ

ಸದ್ಯ ಆ್ಯಸಿಡ್‌ ಪ್ರಕರಣದ ಆರೋಪಿ ನಾಗೇಶ ಅಲಿಯಾಸ್ ಆ್ಯಸಿಡ್ ನಾಗ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಆದರೆ 6 ತಿಂಗಳಿನಿಂದ ಆತನ ಕಾಲಿಗೆ ಆಗಿರುವ ಗಾಯ ಗ್ಯಾಂಗ್ರಿನ್ ರೂಪ ಪಡೆದಿದೆಯಂತೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಪ್ರೀತಿಸಲು ನಿರಾಕರಿಸಿದಳು (Love Reject) ಎಂಬ ಕಾರಣಕ್ಕೆ ಯುವತಿ ಮೇಲೆ ಆ್ಯಸಿಡ್ (Acid) ಎರಚಿ, ನಾಪತ್ತೆಯಾಗಿ, ಕೊನೆಗೂ ಪೊಲೀಸರ (Police) ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಆ್ಯಸಿಡ್ ನಾಗ (Acid Naga) ಇದೀಗ ಗ್ಯಾಂಗ್ರಿನ್‌ನಿಂದ (Gangrene) ಬಳಲುತ್ತಿದ್ದಾನಂತೆ. ಇದೇ ವರ್ಷ ಏಪ್ರಿಲ್ 28ರಂದು ಬೆಂಗಳೂರಿನ (Bengaluru) ಹೆಗ್ಗನಹಳ್ಳಿಯಲ್ಲಿ ಮುತ್ತೂಟ್​ ಫೈನಾನ್ಸ್​ ಕಚೇರಿ ಬಳಿ ಯುವತಿ ಮೇಲೆ ಆ್ಯಸಿಡ್ ಹಾಕಿ ನಾಗೇಶ್ ಅಲಿಯಾಸ್ ಆ್ಯಸಿಡ್ ನಾಗ ಪರಾರಿಯಾಗಿದ್ದ. ಬಳಿಕ ಬೆಂಗಳೂರು ಪೊಲೀಸರು ತಮಿಳುನಾಡಿನ ಆಶ್ರಮದಲ್ಲಿ ಬಂಧಿಸಿ ಕರೆತಂದಿದ್ದರು. ಕಳೆದ 6 ತಿಂಗಳಿನಿಂದ ಆತ ಗ್ಯಾಂಗ್ರಿನ್‌ನಿಂದ ಬಳಲುತ್ತಾ ಇದ್ದಾನಂತೆ. ಪೊಲೀಸರು ಬಂಧಿಸುವ ವೇಳೆ ಪೊಲೀಸರು ಹಾರಿಸಿದ್ದ ಗುಂಡು ನಾಗನ ಕಾಲಿಗೆ ತಗುಲಿತ್ತು. ಇದೀಗ ಅದೇ ಗಾಯ ಗ್ಯಾಂಗ್ರಿನ್‌ಗೆ ತಿರುಗಿ, ಯಮನೋವು ಆಗುತ್ತಿದೆಯಂತೆ!


ಗ್ಯಾಂಗ್ರಿನ್‌ನಿಂದ ಬಳಲುತ್ತಿರುವ ನಾಗ


ಸದ್ಯ ಆ್ಯಸಿಡ್‌ ಪ್ರಕರಣದ ಆರೋಪಿ ನಾಗೇಶ ಅಲಿಯಾಸ್ ಆ್ಯಸಿಡ್ ನಾಗ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಆದರೆ 6 ತಿಂಗಳಿನಿಂದ ಆತನ ಕಾಲಿಗೆ ಆಗಿರುವ ಗಾಯ ಗ್ಯಾಂಗ್ರಿನ್ ರೂಪ ಪಡೆದಿದೆಯಂತೆ. ಹೀಗಾಗಿ ಆ ನೋವನ್ನು ಸಹಿಸಲು ಆಗದೇ ಪ್ರತಿ ದಿನ ನಾಗ ನರಳುತ್ತಿದ್ದಾನಂತೆ.




ಜೈಲಿನ ವಾರ್ಡ್‌ನಲ್ಲೇ ನಡೆಯುತ್ತಿದ್ದ ಚಿಕಿತ್ಸೆ


ಆರೋಪಿ ನಾಗನಿಗೆ ಗುಂಡೇಟು ತಗುಲಿದ್ದ ಸ್ಥಳದಲ್ಲಿ ರಾಡ್ ಹಾಕಿ ಬ್ಯಾಂಡೇಜ್ ಹಾಕಿದ್ರೂ ನೋವು ಹೆಚ್ಚಾಗುತ್ತಿದೆಯಂತೆ. ಚಿಕಿತ್ಸೆ ಕೊಡಿಸುತ್ತಿದ್ದರೂ ಆ್ಯಸಿಡ್ ನಾಗನ ಗಾಯದ ತೀವ್ರತೆ ಕಡಿಮೆಯಾಗಿಲ್ಲ. ನಡೆದಾಡಲೂ ಆಗದೇ ವಿಕ್ಟೋರಿಯಾ ಆಸ್ಪತ್ರೆಗೆ ಜೈಲಿನ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಆರು ತಿಂಗಳಿಂದ ನಿರಂತರವಾಗಿ ಬಲಗಾಲಿನ ಗಾಯದ ಸಮಸ್ಯೆ ಕಾಡುತ್ತಿದೆ.


ಇದನ್ನೂ ಓದಿ: Explained: ಭಯಾನಕ ಆ್ಯಸಿಡ್ ದಾಳಿಗಳು ನಿಲ್ಲುವುದು ಯಾವಾಗ? ಬಾಳನ್ನೇ ಬಲಿಪಡೆದ ಪಾಪಿಗಳಿಗೆ ಶಿಕ್ಷೆಗಳೇನು?


ಸೂಕ್ತ ಚಿಕಿತ್ಸೆ ಕೊಡಿಸುವಂತೆ ಕೋರ್ಟ್ ನಿರ್ದೇಶನ


ಸದ್ಯ ಆ್ಯಸಿಡ್ ನಾಗನಿಗೆ ಸೂಕ್ತ ಚಿಕಿತ್ಸೆ ಕೊಡಿಸುಂತೆ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಹೀಗಾಗಿ ನಾಗನ ಕಾಲಲ್ಲಿ ಕಾಣಿಸಿರುವ ಗ್ಯಾಂಗ್ರಿನ್‌ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸಿದ್ದತೆ ನಡೆದಿದೆ.


ಇದು ದೇವರೇ ನೀಡಿದ ಶಿಕ್ಷೆ ಎಂದ ಸಂತ್ರಸ್ತೆ


ಗ್ಯಾಂಗ್ರಿನ್‌ನಿಂದ ಆರೋಪಿ ನಾಗ ನರಳುತ್ತಿರುವ ವಿಚಾರದ ಬಗ್ಗೆ ಆ್ಯಸಿಡ್ ಸಂತ್ರಸ್ತೆ ಪ್ರತಿಕ್ರಿಯೆ ನೀಡಿದ್ದಾಳೆ. ಈ ವಿಚಾರ ಕೇಳಿ ತುಂಬ ಖಷಿ ಆಗ್ತಿದೆ, ಆತನಿಗೆ ದೇವರೇ ಶಿಕ್ಷೆ ಕೊಟ್ಟಿದ್ದಾನೆ, ಇನ್ನೂ ಹೆಚ್ಚಿನ ಶಿಕ್ಷೆಯಾಗಬೇಕು ಅಂತ ಆಕೆ ಹೇಳಿದ್ದಾಳೆ


“ಕಾನೂನಿನ ಪ್ರಕಾರವೂ ಆತನಿಗೆ ಶಿಕ್ಷೆಯಾಗಬೇಕು”


ಯಾವ ಹುಡುಗಿಯರಿಗೂ ಹಾಗೇ ಆಗಬಾರದು ಎಂದಿರುವ ಸಂತ್ರಸ್ತೆ, ಆಸ್ಪತ್ರೆಯಲ್ಲಿ ಮೂರು ತಿಂಗಳು ನೋವಲ್ಲಿದ್ದೆ. ಇವತ್ತು ವಿಚಾರ ಗೊತ್ತಾಗಿ ಖಷಿಯಾಯಿತು. ಆತನ ಮೈಯೆಲ್ಲ ಕೊಳೆತು ಹೋಗಬೇಕು, ಬೇರೆಯವರ ನೋವು ಏನು ಅಂತ ಆತನಿಗೂ ಗೊತ್ತಾಗಬೇಕು.. ಬರೀ ಒಂದು ಕಾಲಲ್ಲ, ಕಾನೂನು ಪ್ರಕಾರ ಶಿಕ್ಷೆ ಕೊಡಬೇಕು. ನನಗೆ ದೇವರ ಮೇಲೆ ನಂಬಿಕೆ ಇದೆ, ದೇವರೇ ಶಿಕ್ಷೆ ನೀಡಿದ್ದಾನೆ.. ನನ್ನ ಮೈಯೆಲ್ಲ ಗಾಯವಾದ್ರು ಎದ್ದು ಬಂದಿದ್ದೀನಿ.. ಆತನಿಗೆ ಒಂದು ಕಾಲು ಗ್ಯಾಂಗ್ರಿನ್ ಆಗ್ತಿದ್ರು ನಡೆಯೋಕೆ ಆಗ್ತಿಲ್ಲ. ಇದು ದೇವರೇ ಕೊಟ್ಟ ಶಿಕ್ಷೆ ಅಂತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾಳೆ.


ಇದನ್ನೂ ಓದಿ: Kamakshipalya Acid Attack: ಆ್ಯಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ತೆ ಡಿಸ್ಚಾರ್ಜ್; ನ್ಯೂಸ್ 18 ಜೊತೆ ಎಕ್ಸ್​ಕ್ಲೂಸಿವ್ ಮಾತು


ನಾಗನ ವಿರುದ್ಧ 900 ಪುಟಗಳ ಚಾರ್ಜ್‌ಶೀಟ್!
ಇನ್ನು ಆರೋಪಿ ನಾಗೇಶ್‍ನ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬರೋಬ್ಬರಿ 900ಕ್ಕೂ ಹೆಚ್ಚು ಪುಟಗಳ ಚಾರ್ಜ್‍ಶೀಟ್ ಸಿದ್ಧಪಡಿಸಿರುವ ಪೊಲೀಸರು, ಆರೋಪಿ ಉಳಿದುಕೊಂಡಿದ್ದ ತಿರುವಣ್ಣಮಲೈ ಸೇರಿದಂತೆ 13 ಕಡೆಗಳಲ್ಲಿ ಮಹಜರು ಮಾಡಿದ್ದರು. ಪ್ರಾಥಮಿಕ ಆರೋಪ ಪಟ್ಟಿಯಲ್ಲಿ 60 ಸಾಕ್ಷಿಗಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಹತ್ತು ಪುಟಗಳಲ್ಲಿ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ. ಯುವತಿಗೆ ಹಾಕಿದ ಆ್ಯಸಿಡ್ ಸೆಲ್ಪೂರಿಕ್ ಆ್ಯಸಿಡ್ ಎನ್ನುವುದು ಎಫ್‍ಎಸ್‍ಎಲ್ ರಿಪೋರ್ಟ್‍ನಿಂದ ಗೊತ್ತಾಗಿದೆ.

Published by:Annappa Achari
First published: