ಆಸ್ತಿ ವಿವಾದ: ಮೂರು ವರ್ಷದ ಮಗು, ನಾದಿನಿ ಮುಖಕ್ಕೆ ಆ್ಯಸಿಡ್​ ಎರಚಿದ ಕಿರಾತಕ

ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಅನ್ನು ಬಳಸಿ  ಸ್ವಪ್ನಾ ಜೊತೆ ಆಕೆಯ ಮೂರು ವರ್ಷದ ಹೆಣ್ಣು ಮಗುವಿನ ಮೇಲೂ ಈತ ದಾಳಿ ನಡೆಸಿದ್ದಾನೆ. ಗಾಯಗೊಂಡ ಇವರಿಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ

news18-kannada
Updated:January 24, 2020, 6:16 PM IST
ಆಸ್ತಿ ವಿವಾದ: ಮೂರು ವರ್ಷದ ಮಗು, ನಾದಿನಿ ಮುಖಕ್ಕೆ ಆ್ಯಸಿಡ್​ ಎರಚಿದ ಕಿರಾತಕ
ಆ್ಯಸಿಡ್ ದಾಳಿ
  • Share this:
ಪುತ್ತೂರು (ಜ.24): ಆಸ್ತಿ ವಿವಾದದ ಹಿನ್ನೆಲೆ ನಾದಿನಿ ಹಾಗೂ ಆಕೆಯ ಮೂರು ವರ್ಷದ ಕಂದಮ್ಮನ ಮೇಲೆ ಭಾವನೇ ಆ್ಯಸಿಡ್​ ಎರಚಿರುವ ಘಟನೆ ಇಲ್ಲಿನ ಕಡಬದ ಕೋಡಿಂಬಾಳದಲ್ಲಿ ನಡೆದಿದೆ. 

ಜಯಾನಂದ ಕೊಠಾರಿ ಈ ದುಷ್ಕೃತ್ಯ ಎಸಗಿದ ಆರೋಪಿ. ತಮ್ಮ ತೀರಿ ಹೋದ ಬಳಿಕ ಆತನ ಹೆಂಡತಿ ಸ್ವಪ್ನಾ ಜೊತೆ ಈತನಿಗೆ ವೈಮನಸ್ಸು ಮೂಡಿತು. ಹಣಕಾಸಿನ ವಿಚಾರದಲ್ಲಿ ಇವರಿಬ್ಬರ ನಡುವೆ ಮನಸ್ತಾಪವಿತ್ತು. ಅಲ್ಲದೇ ಭೂ ವಿವಾದದಲ್ಲಿಯೂ ಜಗಳವಾಗಿತ್ತು. ಈ ಹಿನ್ನಲೆ ಈ ಕೃತ್ಯವನ್ನು ಈತ ಎಸಗಿದ್ದಾನೆ.

ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಅನ್ನು ಬಳಸಿ  ಸ್ವಪ್ನಾ ಜೊತೆ ಆಕೆಯ ಮೂರು ವರ್ಷದ ಹೆಣ್ಣು ಮಗುವಿನ ಮೇಲೂ ಈತ ದಾಳಿ ನಡೆಸಿದ್ದಾನೆ. ಗಾಯಗೊಂಡ ಇವರಿಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ: ದಶಕಗಳ ಕೂಗಿಗೆ ಕಡೆಗೂ ಕಾಯಕಲ್ಪ: ಸಾಗರ ತಾಲೂಕಿನ ಸಿಂಗದೂರು ಸೇತುವೆ ಕಾಮಗಾರಿ ಆರಂಭ

ಪ್ರಕರಣ ಕುರಿತು ಪೊಲೀಸರು ದೂರು ದಾಖಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
First published:January 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ