Bengaluru Acid Attack: ಮದುವೆಯಾಗಲು ಸಮಯಾವಕಾಶ ಕೇಳಿದ್ದಕ್ಕೆ ಆಸಿಡ್ ಹಾಕಿದ ನೀಚ

ಕಾಮಾಕ್ಷಿಪಾಳ್ಯದ ಆಸಿಡ್ ದಾಳಿ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಂದು ಬೆಂಗಳೂರಿನ ಸಾರಕ್ಕಿ ಸಿಗ್ನಲ್ ಬಳಿ ಮಹಿಳೆಯ ಮೇಲೆ ಆಸಿಡ್ ದಾಳಿ ನಡೆದಿದೆ.

ಆ್ಯಸಿಡ್‌ ಅಟ್ಯಾಕ್‌ನ ಪ್ರಾತಿನಿಧಿಕ ಚಿತ್ರ (ಕೃಪೆ: Internet)

ಆ್ಯಸಿಡ್‌ ಅಟ್ಯಾಕ್‌ನ ಪ್ರಾತಿನಿಧಿಕ ಚಿತ್ರ (ಕೃಪೆ: Internet)

  • Share this:
ಕಾಮಾಕ್ಷಿಪಾಳ್ಯದ ಆಸಿಡ್ ದಾಳಿ (Acid Attack) ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಂದು ಬೆಂಗಳೂರಿನ ಸಾರಕ್ಕಿ ಸಿಗ್ನಲ್ ಬಳಿ ಮಹಿಳೆಯ ಮೇಲೆ ಆಸಿಡ್ ದಾಳಿ ನಡೆದಿದೆ. ಬೆಂಗಳೂರಿನ ಗೋರಿಪಾಳ್ಯದ ನಿವಾಸಿ ಅಹಮದ್ ಆಸಿಡ್ ದಾಳಿ ನಡೆಸಿದ ಕಿರಾತಕ. ಅಹಮದ್ ಸಂತ್ರಸ್ತ ಮಹಿಳೆಯ (Victim) ಜೊತೆ ಕಳೆದ ಎರಡು ವರ್ಷಗಳಿಂದ ಅಕ್ರಮ ಸಂಬಂಧದಲ್ಲಿದ್ದನು (Relationship) ಎಂದು ತಿಳಿದು ಬಂದಿದೆ.  ಇಂದು ಬೆಳಗ್ಗೆ ಕೆ ಎಸ್ ಲೇಔಟ್ (KS Layout) ನಿಂದ ಜೆ ಪಿ ನಗರದ (JP Nagara) ಕಡೆ ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿದ ಅಹಮದ್, ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದನು.  ಸಂತ್ರಸ್ತೆಯ ಮುಖದ ಮೇಲೆ ಆಸಿಡ್ ಬದ್ದಿದ್ದು, ಬಲ ಕಣ್ಣಿನ ಭಾಗದಲ್ಲಿ ಗಂಭೀರ ಗಾಯವಾಗಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ಮಹಿಳೆಯನ್ನು ಮಿಂಟೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸಂತ್ರಸ್ತೆ ಮತ್ತು ಅಹಮದ್ ಇಬ್ಬರು ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ರು. ಕಳೆದ ಎರಡು ವರ್ಷಗಳಿಂದ ರಿಲೇಶನ್ ಶಿಪ್ ನಲ್ಲಿದ್ದರು. ಆದ್ರೆ ಮಹಿಳೆಗೆ ಮದುವೆಯಾಗಿ, ಮಕ್ಕಳಿದ್ದಾರೆ.  ಮಹಿಳೆಗೆ ತನ್ನನ್ನು ಮದುವೆಯಾಗುವಂತೆ ಅಹಮದ್ ಒತ್ತಡ ಹಾಕಿದ್ದನು. ಮೊದಲ ಮದುವೆಯ ಬಂಧನದಿಂದ ಹೊರ ಬರಲು ಮಹಿಳೆ ಸಮಯ ಕೇಳಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು.

ಮದುವೆಯಾಗಲು ಸಮಯ ಕೇಳಿದ್ದ ಸಂತ್ರಸ್ತೆ

ಮರು ಮದುವೆಯಾಗಲು ಸಂತ್ರಸ್ತೆ ಸಮಯ ಕೇಳಿದ್ದರು. ಆದ್ರೆ ಈಗಲೇ ತನ್ನನ್ನು ಮದುವೆಯಾಗುವಂತೆ ಅಹಮದ್ ಪಟ್ಟು ಹಿಡಿದಿದ್ದನು.  ಇದೇ ವಿಚಾರವಾಗಿ ಇಬ್ಬರ ಮಧ್ಯೆ ಪದೇ ಪದೇ ಗಲಾಟೆ ಅಗಿತ್ತು. ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:  Vijayapura: ಜಮೀನು ಮಾರಲು ಒಪ್ಪದ ಪತ್ನಿ; ಎಗ್ ರೈಸ್ ತಿನ್ನಿಸಿ 2 ವರ್ಷದ ಮಗನನ್ನ ಕೊಂದ ತಂದೆ, ಮಗಳು ಗಂಭೀರ

ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ರು

ಆರೋಪಿ ಅಹಮ್ಮದ್ ಹಾಗೂ ಸಂತ್ರಸ್ತೆ ಕೆಎಸ್ ಲೇಔಟ್ ನ ಕರ್ನಾಟಕ ಫ್ರೇಗ್ನೆನ್ಸ್ ಅಗರಬತ್ತಿ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡಿಕೊಂಡಿದ್ರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದ್ರೆ ಸಂತ್ರಸ್ತೆಗೆ ಮದ್ವೆಯಾಗಿ ಮೂವರು ಮಕ್ಕಳಿದ್ದಾರೆ. ಆರೋಪಿ ಅಹಮ್ಮದ್ ಗೂ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮದುವೆ ಆಗೋಣ ಎಂದು ಸಂತ್ರಸ್ತೆ ಮುಂದೆ ಆರೋಪಿ ಅಂಗಲಾಚಿದ್ದನು.

ಅಹಮ್ಮದ್ ನ ಟಾರ್ಚರ್ ತಡಿಯೋಕಾಗ್ದೆ ಕಳೆದ ಎರಡು ತಿಂಗಳ ಹಿಂದೆ ಸಂತ್ರಸ್ತೆ ಕೆಲಸ ಬಿಟ್ಟಿದ್ದರು. ಇತ್ತೀಚಿಗೆ ಜೆಪಿ ನಗರದ ಬಳಿಯಲ್ಲಿರುವ ಫಾರೆಸ್ಟ್ ಫ್ರೇಗ್ನೆನ್ಸ್ ಅಗರಬತ್ತಿ ಫ್ಯಾಕ್ಟರಿ ಗೆ ಕೆಲಸಕ್ಕೆ ಸೇರಿದ್ದರು. ಇವತ್ತು ಆರೋಪಿ ಸಂತ್ರಸ್ತೆ ಫ್ಯಾಕ್ಟರಿ ಬಳಿ ಬಂದು ಆಕೆಯನ್ನ ಕರೆದುಕೊಂಡು ಹೋಗಿದ್ದಾನೆ.

ಟಾಯ್ಲೆಟ್ ಗೆ ಬಳಸುವ ಆಸಿಡ್

ಕೈಯಲ್ಲಿ ಅದಾಗ್ಲೇ ಟಾಯ್ಲೆಟ್ ಗೆ ಬಳಸುವ ಆ್ಯಸಿಡನ್ನ ಹಿಡಿದು ತಂದಿದ್ದನು. ಜೆ.ಪಿ ನಗರ ಮೆಟ್ರೋ ಸ್ಟೇಷನ್ ಹತ್ತಿರ ಬರ್ತಿದ್ದಂತೆ ಮದ್ವೆಯಾಗುವಂತೆ ಪೀಡಿಸಿದ್ದಾನೆ.. ಮದ್ವೆಯಾಗೋಕೆ ಒಪ್ಪದ ಕಾರಣ ಅಹಮ್ಮದ್ ಆ್ಯಸಿಡ್ ದಾಳಿ‌ ಮಾಡಿದ್ದಾನೆ. ಸದ್ಯ ಆರೋಪಿ ಅಹಮ್ಮದ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.  ಸದ್ಯ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ:  BJP MLA Daughter: BMWನಲ್ಲಿ ಸಿಗ್ನಲ್ ಜಂಪ್ ಮಾಡಿದ ಲಿಂಬಾವಳಿ ಪುತ್ರಿ! ಪತ್ರಕರ್ತನಿಗೆ ಹಲ್ಲೆ

ಗೃಹ ಸಚಿವರ ಪ್ರತಿಕ್ರಿಯೆ

ಆಸಿಡ್ ದಾಳಿ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಮೀಡಿಯಾದಲ್ಲಿ ನೋಡಿದ್ದೇನೆ. ಈ ಬಗ್ಗೆ ಅಧಿಕಾರಿಗಳ ಬಳಿ ವರದಿ ಕೇಳಿದ್ದೇನೆ. ಆಸಿಡ್ ಹಾಕಿದವನ ಮೇಲೆ ಕ್ರಮ ಆಗುತ್ತದೆ. ಆಸಿಡ್ ಹಾಕೋದು ಅಮಾನವೀಯ ಕೃತ್ಯ. ಇದನ್ನ ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದರು. ಆಸಿಡ್ ಬ್ಯಾನ್ ಆಗಿದೆ ಅನ್ನಿಸ್ತಿಲ್ಲ. ಅದರ ಬಗ್ಗೆ ಮಾಹಿತಿ ತಗೋತೀನಿ. ಅದರ ಕಾಯ್ದೆ ಏನಿದೆ ಪರಿಶೀಲಿಸ್ತೇನೆ. ಬ್ಯಾನ್ ಮಾಡಬಹುದಾ ಅಂತ ನೋಡ್ತೀನಿ. ಆಸಿಡ್ ಬೇರೆ ಬೇರೆ ಕಾರ್ಯಕ್ಕೆ ಬಳಸ್ತಾರೆ, ಅದ್ರಿಂದ ಎಲ್ಲ ಕಡೆ ಸಿಗ್ತಿದೆ ಎಂದು ಹೇಳಿದರು.
Published by:Mahmadrafik K
First published: