ರಾಮನಗರ: ಪ್ರೀತಿ ನಿರಾಕರಿಸಿದಳು ಅಂತ ಕೆರಳಿದ ಯುವಕನೊಬ್ಬ (Youth) ಅಪ್ರಾಪ್ತೆ ಮೇಲೆ ಆಸಿಡ್ ದಾಳಿ (Acid Attack) ನಡೆಸಿದ ಕ್ರೂರ ಘಟನೆ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದಿದೆ. ಮೆಕ್ಯಾನಿಕ್ (Mechanic) ಆಗಿ ಕೆಲಸ ಮಾಡುತ್ತಿದ್ದ ಸುಮಂತ್ (22) ಆಸಿಡ್ ಎರಚಿ, ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಗಾಯಾಳು ಬಾಲಕಿಯನ್ನು ಕೂಡಲೇ ಕನಕಪುರ (Kanakapur) ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ (Minto Hospital, Bengaluru) ದಾಖಲಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿ ಹಾಲಪ್ಪ ಆಚಾರ್, ಸಂತ್ರಸ್ಥ ಬಾಲಕಿ ಆರೋಗ್ಯ ವಿಚಾರಿಸಿದ್ದಾರೆ.
ಆರೋಪಿ ಸುಮಂತ್ ಕುರುಪೇಟೆಯ ನಿವಾಸಿಯಾಗಿದ್ದು, ಕಳೆದ ಒಂದು ವರ್ಷದಿಂದ ಅಪ್ರಾಪ್ತೆಯ ಹಿಂದೆ ಬಿದ್ದಿದ್ದನು. ಸಂತ್ರಸ್ತೆಯ ಎಡಗಣ್ಣಿನ ಭಾಗಕ್ಕೆ ಗಾಯವಾಗಿದೆ. ಇತ್ತ ಮಹಿಳಾ ಆಯೋಗ ರಾಮನಗರ ಎಸ್‌ಪಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಸರ್ಕಾರದಿಂದಲೇ ಚಿಕಿತ್ಸೆ
ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಹಾಲಪ್ಪ ಆಚಾರ್, ಕನಕಪುರ ಟೌನ್ನಲ್ಲಿ ಬಾಲಕಿ ಮೇಲೆ ಕಿಡಿಗೇಡಿಯೊಬ್ಬ ರಾಸಾಯನಿಕ ಎರಚಿದ್ದಾನೆ. ಬಾಲಕಿಯ ಕಣ್ಣಿಗೆ ಗಾಯ ಆಗಿದೆ. ಇವತ್ತು ಬೆಳಗ್ಗೆ ನಾನೂ ಕೂಡ ಬಾಲಕಿ ಆರೋಗ್ಯ ವಿಚಾರಿಸಿದೆ. ಬಾಲಕಿಗೆ ಸಂಪೂರ್ಣ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಹೇಳಿದರು.
ಕುಟುಂಬಕ್ಕೆ ಭದ್ರತೆ
ಆರೋಪಿ ಬಂಧನ ಆಗಿದೆ. ಸರ್ಕಾರದಿಂದ ಆರೋಪಿಗೆ ಕಠಿಣ ಕ್ರಮ ಕೊಡಿಸಲಾಗುತ್ತದೆ. ಘಟನೆ ಸಂಬಂಧ ರಾಮನಗರ ಎಸ್‌ಪಿ ಜತೆಗೂ ನಾನು ಮಾತಾಡಿದ್ದೇನೆ. ಬಾಲಕಿಗೆ ಕುಟುಂಬಕ್ಕೆ ಆರೋಪಿ ಕಡೆಯಿಂದ ಬೆದರಿಕೆ ಇದೆಯಾ ಅಂತ ಪರಿಶೀಲಿಸಲು ತಿಳಿಸಿದ್ದೇನೆ. ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲು ಎಸ್‌ಪಿ ಅವರಿಗೆ ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಕಿರಿಕ್, ಇಬ್ಬರ ಹತ್ಯೆ
ಕ್ರಿಕೆಟ್ ಆಡುವಾಗ ಶುರುವಾದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳವಂಗಲದಲ್ಲಿ ನಡೆದಿದೆ. ದೊಡ್ಡಬೆಳವಂಗಲದಲ್ಲಿ ಕ್ರಿಕೆಟ್ ಆಡುವಾಗ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಭರತ್, ಪ್ರತೀಕ್ಗೆ ಚಾಕುವಿನಿಂದ ಇರಿಯಲಾಗಿದೆ. ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.
ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಜೆಪಿ ಮುಖಂಡ ಧೀರಜ್ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿದ್ದರು. ಆಗ ಮೈದಾನದಲ್ಲಿ ಕಾರು ನಿಲ್ಲಿಸಿದ್ದನ್ನು ಭರತ್ ಹಾಗೂ ಪ್ರತೀಕ್ ಪ್ರಶ್ನಿಸಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು 2 ಗುಂಪುಗಳ ನಡುವೆ ಮಾರಾಮಾರಿಯಾಗಿದೆ.
ಗ್ರಾಮಸ್ಥರು, ಇತರೆ ಆಟಗಾರರು ಜಗಳ ಬಿಡಿಸಿ ಕಳಿಸಿದ್ರು. ಇನ್ನೇನು ಎಲ್ಲಾ ಮುಗಿತು ಎನ್ನುವಷ್ಟರಲ್ಲೇ ಭರತ್, ಪ್ರತೀಕ್ ಬಸ್ ಸ್ಟ್ಯಾಂಡ್ಗೆ ಬಂದಾಗ ಅಟ್ಟಾಡಿಸಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಘಟನೆ ಖಂಡಿಸಿ ಪ್ರತಿಭಟನೆ ಮಾಡಲಾಯ್ತು, ಸಚಿವ ಎಂಟಿಬಿ ನಾಗರಾಜ್ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ರು.
ಪ್ರೇಮಿಗಳ ಆತ್ಮಹತ್ಯೆ
ಯಾದಗಿರಿ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಬೆಳ್ಳಂಬೆಳಗ್ಗೆ ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಹಾಪುರ ತಾಲೂಕಿನ ಹುರಸಗುಂಡಗಿಯ ಸುವರ್ಣ ಹಾಗೂ ಈಶಪ್ಪ ಎಂಬ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Karnataka Politics: ಬಿಜೆಪಿ ಪೋಸ್ಟರ್ ಮೇಲೆಯೇ ಕಾಂಗ್ರೆಸ್ ಕಿವಿ ಮೇಲೆ ಹೂವಿನ ಅಭಿಯಾನ
ಸುವರ್ಣ ಹಾಗೂ ಈಶಪ್ಪ ಕಳೆದ 5-6 ವರ್ಷಗಳಿಂದ ಪ್ರೀತಿಸುತ್ತಿದ್ದರು. 2 ವರ್ಷದ ಹಿಂದೆ ಸುವರ್ಣಳನ್ನು ಬೇರೆ ಯುವಕನ ಜೊತೆಗೆ ವಿವಾಹ ಮಾಡಿದ್ದರು. ಬಳಿಕ ತನ್ನ ಪತಿಯೊಂದಿಗೆ ಬೆಂಗಳೂರಿನಲ್ಲಿದ್ದ ಸುವರ್ಣ ನಿನ್ನೆ ಹುರಸಗುಂಡಗಿ ಗ್ರಾಮಕ್ಕೆ ಬಂದಿದ್ದಳು. ಇಂದು ಬೆಳಗ್ಗೆ ವಿಷ ಸೇವಿಸಿ ಸುವರ್ಣ, ಈಶಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ