ಸಾಧನೆಯ ಶಿಖರದತ್ತ ಸಬಿಯಾ ಓಟ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸುತ್ತಿರುವ ಕನ್ನಡದ ಕುವರಿ

news18
Updated:August 4, 2018, 11:28 AM IST
ಸಾಧನೆಯ ಶಿಖರದತ್ತ ಸಬಿಯಾ ಓಟ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸುತ್ತಿರುವ ಕನ್ನಡದ ಕುವರಿ
news18
Updated: August 4, 2018, 11:28 AM IST
ವಿನಯ್ ಭಟ್, ನ್ಯೂಸ್ 18 ಕನ್ನಡ

ಬೆಂಗಳೂರು (ಆ. 04): ಈಕೆ ಬಡ ಕುಟುಂಬದ ಬಂದ ಪ್ರತಿಭೆ. ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಕನಸು ಕಂಡ ಪ್ರತಿಭಾನ್ವಿತ ಕ್ರೀಡಾಪಟು. ಸತತ ಅಭ್ಯಾಸದಿಂದ ಸದ್ಯ ಈಕೆ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾಳೆ. ಅದರಲ್ಲೂ ಈಕೆ ನಮ್ಮ ಕನ್ನಡದ ಕುವರಿ ಎಂಬುದು ಹೆಮ್ಮಯ ವಿಚಾರ. ಅವರೇ ಥ್ರೋ ಬಾಲ್​​ನಲ್ಲಿ ನಮ್ಮ ರಾಜ್ಯದ ಕೀರ್ತಿ ಪತಾಕೆ ಹಾರಿಸಿರುವ ಬೆಂಗಳೂರಿನ ತಾರೆ ಸಬಿಯಾ ಎಸ್.

19 ವರ್ಷ ವಯಸ್ಸಿನ ಈಕೆ ತಾನು 13 ವರ್ಷ ಇರುವಾಗ ಥ್ರೋ ಬಾಲ್ ಆಟಗಾರ್ತಿ ಆಗಬೇಕು, ಏನಾದರು ಸಾಧನೆ ಮಾಡಬೇಕೆಂದು ಕನಸು ಕಂಡಾಕೆ. ‘ಆರಂಭದಲ್ಲಿ ನಾನು ಥ್ರೋ ಬಾಲ್ ಆಟಗಾರ್ತಿ ಆಗುವೆ ಎಂದಾಗ ಮನೆಯಿಂದ ಅಷ್ಟೊಂದು ಪ್ರೋತ್ಸಾಹ ಸಿಕ್ಕಿಲ್ಲ. ಬಳಿಕ ನಾನು ಆಡುವುದನ್ನು ನೋಡಿದ ತಂದೆ ನನಗೆ ಬೆನ್ನೆಲುಬಾಗಿ ನಿಂತರು' ಎನ್ನುತ್ತಾರೆ ಸಬಿಯಾ. ಅದರಂತೆ ಸದ್ಯ ಥ್ರೋಬಾಲ್​​ನಲ್ಲಿ ಭಾರತೀಯ ಅಂತಾರಾಷ್ಟ್ರೀಯ ಆಟಗಾರ್ತಿಯಾಗಿ ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಇಂಟರ್​ನ್ಯಾಷನಲ್ ಥ್ರೋ ಬಾಲ್ ಚಾಂಪಿಯನ್​ಶಿಪ್ ಟೂರ್ನಮೆಂಟ್​​ನಲ್ಲಿ ಭಾರತದ ಆಟಗಾರ್ತಿಯಾಗಿ ಆಡಿದ್ದರು. ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಸಬಿಯಾ ಪ್ರಮುಖ ಪಾತ್ರ ಕೂಡ ವಹಿಸಿದ್ದರು. ಇಷ್ಟೇ ಅಲ್ಲದೆ ಏಳು ಅಂತಾರಾಷ್ಟ್ರೀಯ ಥ್ರೋ ಬಾಲ್ ಪಂದ್ಯವನ್ನು ಆಡಿರುವ ಇವರು 7ರಲ್ಲೂ ಜಯ ಸಾಧಿಸಿದ್ದಾರೆ. ಅದರಲ್ಲೂ 2013ರ ಕೊಲಂಬೋದಲ್ಲಿ ನಡೆದ ಇಂಡೋ-ಥೈಲೆಂಡ್ ಟೂರ್ನಿಯಲ್ಲಿ ಶ್ರೀಲಂಕಾ ಥ್ರೋ ಬಾಲ್​​ ಫೆಡರೇಷನ್ ಸಬಿಯಾ ಅವರಿಗೆ ಬೆಸ್ಟ್​​ ಥ್ರೋ ಬಾಲ್ ಪ್ಲೇಯರ್ ಎಂಬ ಗೌರವವನ್ನೂ ನೀಡಿತ್ತು.ನ್ಯೂಸ್​ 18 ಜತೆಗೆ ಮಾತನಾಡಿದ ಸಬಿಯಾ, "ನಾನು ಎಡಗೈ ಕ್ರೀಡಾಪಟು ಆದ್ದರಿಂದ ಥ್ರೋ ಬಾಲ್​​ನಲ್ಲಿ ತುಂಬಾನೆ ಸಹಾಯವಾಗುತ್ತದೆ. ಸ್ಪಿನ್ ಹಾಗೂ ಥ್ರೋ ಮಾಡಲು ಸುಲಭವಾಗುತ್ತದೆ. ಅಲ್ಲದೆ ಲೆಫ್ಟ್​ ಹ್ಯಾಂಡ್​ ಇಂದ ಸ್ಪಿನ್ ಮಾಡಿ ಥ್ರೋ ಮಾಡಿದರೆ ಎದುರಾಳಿಗೆ ಹಿಡಿಯಲು ತುಂಬಾನೆ ಕಷ್ಟವಾಗುತ್ತದೆ. ಇದು ನನಗೆ ತುಂಬಾ ಪ್ಲಸ್ ಪಾಯಿಂಟ್" ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಇನ್ನು ಕೇವಲ ಕ್ರೀಡೆಯಲ್ಲಷ್ಟೇ ಅಲ್ಲದೆ ಕಲಿಕೆಯಲ್ಲೂ ಮುಂದಿರುವ ಸಬಿಯಾ, ಬೆಂಗಳೂರಿನ ಸೇಂಟ್ ಜೋಸೆಫ್ ಅಟೊನಮಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ. ಕಾಂ ಕಲಿಯುತ್ತಿದ್ದಾರೆ. ಸಬಿಯಾ ಅವರು ಕೇವಲ ಥ್ರೊ ಬಾಲ್​ನಲ್ಲಿ ಮಾತ್ರವಲ್ಲದೆ ಫುಟ್ಬಾಲ್​ ಸೇರಿದಂತೆ ಕಬಡ್ಡಿ, ಬ್ಯಾಡ್ಮಿಂಟನ್, ವಾಲಿಬಾಲ್, ಲಾಂಗ್​​ಜಂಪ್, ಹೈಜಂಪ್​​ನಲ್ಲು ಸೈ ಎನಿಸಿಕೊಂಡಿದ್ದಾರೆ. ಅದರಲ್ಲು ಫುಟ್ಬಾಲ್​ನಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಸಬಿಯಾ, 'ಕರ್ನಾಟಕ ಕ್ರೀಡಾರತ್ನ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೊತೆಗೆ 6 ಅಂತಾರಾಷ್ಟ್ರೀಯ ಚಿನ್ನದ ಪದಕ ಹಾಗೂ ಒಂದು ಬೆಳ್ಳಿಪದಕ ಗೆದ್ದಿದ್ದು, 50ಕ್ಕೂ ಅಧಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಷ್ಟು ಚಿಕ್ಕವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಬೆಂಗಳೂರಿನ ಕುವರಿಯ ಈ ಸಾಧನೆಗೆ ಸಲಾಂ ಹೇಳಲೇಬೇಕು. ಕ್ರೀಡೆ ಇವರ ಬದುಕನ್ನೇ ಬದಲಾಯಿಸಿದೆಯಂತೆ. ಕೋಚ್​ಗಳು ಕೂಡ ಎಲ್ಲಾ ವಿಭಾಗದಲ್ಲಿ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರಂತೆ.
Loading...ಇಷ್ಟೆಲ್ಲಾ ಪ್ರತಿಭೆ ಹೊಂದಿರುವ ಇವರಿಗೆ ಸದ್ಯ ಹಣದ ಕೊರತೆ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ. ಮಗಳನ್ನು ದೇಶದ ಉತ್ತಮ ಕ್ರೀಡಾಪಟುವನ್ನಾಗಿಸಬೇಕು ಎಂಬುದು ತಂದೆಯ ಕನಸಾಗಿದೆ. ಆದರೆ ಸರ್ಕಾರದಿಂದ ಥ್ರೋ ಬಾಲ್ ಕ್ರೀಡೆಗೆ ಯಾವುದೇ ಸಹಕಾರ ದೊರೆಯದಿರುವುದು ಇವರ ಮುಂದಿನ ಸಾಧನೆಗೆ ಅಡ್ಡಿಯಾಗುತ್ತಿದೆ. ಸಬಿಯಾ ಅವರ ತಂದೆ ಸಿಖಂದರ್ ಅವರು ತಮ್ಮಲ್ಲಿದ್ದ ಜಾಗವನ್ನೂ ಮಾರಿ ಬಂದ ಹಣದಲ್ಲಿ ಮಗಳ ವಿದ್ಯಾಭ್ಯಾಸ ಹಾಗೂ ಕ್ರೀಡೆಗೆ ಧಾರೆ ಎರೆದಿದ್ದಾರೆ. ಜೊತೆಗೆ ಸಂಸಾರವನ್ನು ಸಾಗಿಸುತ್ತಿದ್ದಾರೆ.  ಆದರೆ ಇವರಿಗೆ ಪ್ರತೀ ಪಂದ್ಯವನ್ನಾಡಲು ಯಾವುದೇ ಕಡೆ ತೆರಳಬೇಕಾದರೆ ಸ್ವಂತ ಹಣವನ್ನೇ ಬಳಸಬೇಕಾಗಿದೆ. ಇಷ್ಟೆಲ್ಲಾ ಕಷ್ಟಗಳ ನಡುವೆಯು ಕಂಡ ಕನಸಿನಂತೆ ಸಬಿಯಾ ಅವರು ತಮ್ಮ ಕನಸನ್ನು ನನಸು ಮಾಡಿದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ.
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...