HOME » NEWS » State » ACHIEVEMENTS OF BOMMAI SHETTAR ESHWARAPPA SURESH AND ASHWATH AS MINISTERS IN BSY GOVERNMENT SNVS

BJP Government - ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ: ಬಿಜೆಪಿ ಮೂಲದ ಸಚಿವರ ಸಾಧನೆ, ವೈಫಲ್ಯಗಳೇನು?

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್ ಅಶೋಕ್, ಬೃಹತ್ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್, ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಅವರ ಕಾರ್ಯಸಾಧನೆಗಳ ಒಂದು ವಿಶ್ಲೇಷಣೆ.

news18-kannada
Updated:July 26, 2020, 2:07 PM IST
BJP Government - ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ: ಬಿಜೆಪಿ ಮೂಲದ ಸಚಿವರ ಸಾಧನೆ, ವೈಫಲ್ಯಗಳೇನು?
ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಮತ್ತಿತರರು
  • Share this:
ಬೆಂಗಳೂರು(ಜುಲೈ 26): ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗಿದೆ. ಸಿಎಂ ಸೇರಿ ಸಚಿವರು ಎಷ್ಟರಮಟ್ಟಿಗೆ ಜವಾಬ್ದಾರಿ ನಿಭಾಯಿಸಿದ್ಧಾರೆ ಎಂಬುದು ಪ್ರಶ್ನೆ. ಸರಳಗೊಳಿಸುವ ಉದ್ದೇಶದಿಂದ ಸಂಪುಟದಲ್ಲಿ ಮೂಲ ಬಿಜೆಪಿಗರು ಮತ್ತು ವಲಸಿಗರೆಂದು ವಿಭಜಿಸಿ ಇಲ್ಲಿ ಪ್ರತ್ಯೇಕವಾಗಿ ವಿಶ್ಲೇಷಣೆ ಮಾಡಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್ ಅಶೋಕ್, ಬೃಹತ್ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್, ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಅವರ ಕಾರ್ಯಸಾಧನೆಗಳನ್ನ ವಿಶ್ಲೇಷಿಸಲಾಗಿದೆ.

ಗೃಹ ಇಲಾಖೆ (ಬಸವರಾಜ ಬೊಮ್ಮಾಯಿ): 

ಪ್ರಮುಖ ಬೆಳವಣಿಗೆಗಳು:  
* ಔರಾದ್ಕರ್ ವರದಿ ಜಾರಿಯಿಂದ ಹೊಸದಾಗಿ ನೇಮಕವಾಗುವ ಪೊಲೀಸ್ ಸಿಬ್ಬಂದಿಗೆ ಅನುಕೂಲ
* ಕೋವಿಡ್ ವೇಳೆ ಪಾದರಾಯನಪುರ ಗಲಾಟೆ
* ವರ್ಷದ ಆರು ತಿಂಗಳು ಲಾಕ್ ಡೌನ್ ಬಂದೋಬಸ್ತ್ ನಲ್ಲೇ ಕಳೆಯಿತು ಸಮಯ
* ಮೈತ್ರಿ ಸರ್ಕಾರದಲ್ಲಿ ನೇಮಕವಾಗಿದ್ದ ಬೆಂಗಳೂರು‌ ಪೊಲೀಸ್ ಆಯುಕ್ತ ಅಲೋಕಕುಮಾರ ಸ್ಥಾನಕ್ಕೆ ಭಾಸ್ಕರ್ ರಾವ್  ನೇಮಕ* ಲಾಕ್ ಡೌನ್ ವೇಳೆ ಹೆಚ್ಚು ಸವಾಲಾಗಿದ್ದ ಬಂದೋಬಸ್ತ್ ವ್ಯವಸ್ಥೆಯನ್ನು ಸೂಕ್ತವಾಗಿ ನಿಭಾಯಿಸಿದ್ದು ಹೆಚ್ಚುಗಾರಿಕೆ
* ಟಾಸ್ಕ್ ಪೋರ್ಸ್ ಸಭೆಯಲ್ಲಿ ಡಿಸಿಎಂ ಅಶ್ವಥನಾರಾಯಣ ಜೊತೆ ಮಾತಿನ ಚಕಮಕಿ ವೇಳೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಣ್ಣೀರು ಹಾಕಿದ್ದು
* ಇಲಾಖೆ ನೇಮಕಾತಿಯಲ್ಲಿ ಮೀಸಲಾತಿ ಜಾರಿ

ಮೈನಸ್ ಪಾಯಿಂಟ್ಸ್:
* ಔರಾದ್ಕರ್ ವರದಿ ಜಾರಿಯಿಂದ ಸೇವೆಯಲ್ಲಿರೋ ಪೊಲೀಸ್ ಸಿಬ್ಬಂದಿಗೆ ಅನ್ಯಾಯ
* ಕಾನೂನು ಸುವವ್ಯಸ್ಥೆ ಕಾಪಾಡುವಲ್ಲಿ‌ ವಿಫಲ
* ಗೃಹ ಸಚಿವರಿಗೆ ಇಲಾಖೆಗೆ ಬೇಕಾದ ಗತ್ತು ಇಲ್ಲ ಅನ್ನೋ ಆರೋಪ
* ಕೊರೋನಾ ವೇಳೆ‌ ಪಾದರಾಯನಪುರ ಗಲಾಟೆ‌‌ ನಿಭಾಯಿಸುವಲ್ಲಿ ಗೊಂದಲ‌ ಮೂಡಿಸಿದ್ದು
* ಗಲಭೆಕೋರರನ್ನ ಎಲ್ಲಿ ಇಡಬೇಕು ಅನ್ನೋ ವಿಚಾರದಲ್ಲಿ‌ ಸಾಕಷ್ಟು ಗೊಂದಲ (ರಾಮನಗರ ಜೈಲಿನಲ್ಲಿ ಇಟ್ಟ ಘಟನೆ)
* ಖಾತೆಯನ್ನ ಸ್ವತಂತ್ರವಾಗಿ ನಿಭಾಯಿಸುವಲ್ಲಿ ಸಚಿವರು ವಿಫಲ

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ (ಸುರೇಶಕುಮಾರ್) ಮತ್ತು ಉನ್ನತ ಶಿಕ್ಷಣ (ಡಿಸಿಎಂ ಅಶ್ವತ್ಥ ನಾರಾಯಣ) ಇಲಾಖೆಗಳ ಸಾಧನೆಗಳು:

ಸಾಧನೆಗಳು:
* ಕೋವಿಡ್ ಸಮಯದಲ್ಲೂ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಸಕ್ಸಸ್ ಆಗಿ ನಡೆಸಿದ್ದು ಗರಿಮೆ
* ತಾಂತ್ರಿಕ ಹಾಗೂ ಮೆಡಿಕಲ್‌ ಫೈನಲ್ ಪದವಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದ್ದು
* ಸರ್ಕಾರಿ‌ ಕನ್ನಡ ಶಾಲೆಗಳಿಗೆ ಉತ್ತೇಜನ
* SSLC ಮತ್ತು PUC ಯಲ್ಲಿ ಉತ್ತಮ‌ ಫಲಿತಾಂಶ ದೊಡ್ಡ ಸಾಧನೆ
* ಶಾಸಕರ ಅನುದಾನದಲ್ಲಿ ಮೂರು ಶಾಲೆಗಳನ್ನ ದತ್ತು ಪಡೆದು ಅಭಿವೃದ್ಧಿ ಪಡಿಸುವ ಯೋಜನೆ

ನೆಗೆಟಿವ್ ಪಾಯಿಂಟ್ಸ್: 
* ಇದೂವರೆಗೂ ಜಾರಿಯಾಗದ ಶಾಸಕರ ಅನುದಾನದಲ್ಲಿ ಶಾಲೆಗಳ ಅಭಿವೃದ್ಧಿ ಕಾರ್ಯಕ್ರಮ
* ಆನ್ ಲೈನ್ ತರಗತಿ ವಿಚಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ‌ ಲಾಬಿ ಮಣಿದ ಸರ್ಕಾರ‌ ಅನ್ನೋ‌ ಆರೋಪ ಕೇಳಿ ಬಂದಿತ್ತು
* ಶಾಲಾ ಆರಂಭದ ಬಗ್ಗೆ ಬಗೆಹರಿಯದ ಗೊಂದಲ
* ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ ಪಠ್ಯವನ್ನ ತೆಗೆದು ಹಾಕಬೇಕನ್ನುವ ವಿಚಾರ ವಿವಾದ ಸೃಷ್ಟಿಸಿತ್ತು
* ಇಂಜಿನಿಯರಿಂಗ್‌ ಪೂರೈಸಿದ ವಿದ್ಯಾರ್ಥಿಗಳಿಗೆ ಭವಿಷ್ಯದ ಆತಂಕ, ನಿರುದ್ಯೋಗದ ಭೀತಿ
* ಐಟಿ, ಬಿಟಿ ಸಚಿವರು, ಉನ್ನತ ಶಿಕ್ಷಣ ಸಚಿವರೂ ಒಬ್ಬರೆ ಆದ್ರೆ, ಎರಡು ಇಲಾಖೆಲಿ ಸಮನ್ವಯತೆ ತಂದು ಉದ್ಯೋಗ ಸೃಷ್ಟಿಯಲ್ಲಿ ವೈಫಲ್ಯ.

ಇದನ್ನೂ ಓದಿ: ಯಡಿಯೂರಪ್ಪ ಸಿಎಂ ಆಗಿ 1 ವರ್ಷ; ಸವಾಲುಗಳೇನು? ಸಾಧನೆ, ವೈಫಲ್ಯಗಳೇನು? ಇಲ್ಲಿದೆ ಪಟ್ಟಿ

ಕಂದಾಯ ಇಲಾಖೆ (ಆರ್ ಅಶೋಕ್): 

ಸಾಧನೆಗಳು:
* ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು
* 2 ಸಾವಿರಕ್ಕೂ ಎಕರೆ ಜಮೀನು ಸರ್ಕಾರಕ್ಕೆ ನೀಡಿದ್ದು, ಆಸ್ಪತ್ರೆ, ಅಂಗನವಾಡಿ, ಶಾಲೆ, ಹಾಸ್ಟೆಲ್ ಸೇರಿ ಸರ್ಕಾರದ ಇತರೆ ಉಪಯೋಗಕ್ಕೆ ಬಳಸಿಕೊಳ್ಳಲು ನೀಡಿದ್ದು
* ಕಂದಾಯ ನಿವೇಶನಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮನೆಗಳ ಸಕ್ರಮ ಮಾಡಿದ್ದು
* ನೆರೆ ಸಂತ್ರಸ್ತರ ತಾತ್ಕಾಲಿಕ‌ ವಾಸ್ತವ್ಯಕ್ಕಾಗಿ ಶಾಶ್ವತ‌ ಭವನ ನಿರ್ಮಿಸಲು ಕ್ರಮ
* ಖಾಸಗಿ ಸಂಸ್ಥೆ, ಟ್ರಸ್ಟ್, ಕಂಪನಿಗಳಿಗೆ ನೀಡಿದ್ದ ಜಮೀನು ಲೀಸ್ ರದ್ದು
* ನೆರೆ ಪರಿಸ್ಥಿತಿಲಿ ಮನೆ ಕಳೆದುಕೊಂಡವರಿಗೆ‌ ೫ ಲಕ್ಷ ಪರಿಹಾರ ನೀಡಿದ್ದು
* ಪ್ರವಾಹದಿಂದ ಮನೆ ಕಳೆದು ಕೊಂಡವರಿಗೆ ಮನೆ ಕಟ್ಟಲು ಸರ್ಕಾರದಿಂದ 557.67 ಕೋಟಿ ಬಿಡುಗಡೆ
* 32482  ನೆರೆ ಭಾಗದಲ್ಲಿ ಮನೆಗಳನ್ನ ಕಟ್ಟಲು ಅವಕಾಶ

ನೆಗೆಟಿವ್ ಪಾಯಿಂಟ್ಸ್:
* ಸಚಿವರಿಗೆ ಇಲಾಖೆ ಬಗ್ಗೆ‌ ನಿರಾಸಕ್ತಿ ಜಾಸ್ತಿ ಅನ್ನೋ ಆರೋಪ,
* ಅಧಿಕಾರಿಗಳು ಬರೆದುಕೊಟ್ಟದ್ದನ್ನ ಮಾತ್ರ ಹೇಳುವ ಸಚಿವರು
* ನೆರೆ ಭಾಗಗಳಿಗೆ ಭೇಟಿ ನೀಡಿದ ಕಂದಾಯ‌ ಸಚಿವರು
* ವಿಪಕ್ಷಗಳು ಹಾಗೂ ರೈತ ಸಂಘಟನೆಗಳ ವಿರೋಧದ ನಡುವೆಯೂ ಭೂ ಸುಧಾರಣಾ‌ತಿದ್ದುಪಡಿ ಕಾಯ್ದೆ ಜಾರಿ. ತರಾತುರಿಯಲ್ಲಿ ಕಾಯ್ದೆ ಜಾರಿ
* ಸಚಿವರಿಗೆ ಬೆಂಗಳೂರು ವ್ಯಾಮೋಹದಿಂದ ಇಲಾಖೆ ಯೋಜನೆಗಳ ಜಾರಿಗೆ ಹಿನ್ನಡೆ

ಬೃಹತ್, ಮಧ್ಯಮ ಕೈಗಾರಿಕೆ ಇಲಾಖೆ (ಜಗದೀಶ್ ಶೆಟ್ಟರ್):

ಸಾಧನೆಗಳು:
* ಹೊಸ ಕೈಗಾರಿಕಾ ನೀತಿ ಜಾರಿ
* ರಾಜ್ಯದಲ್ಲಿ ಬಂಡವಾಳ ಆಕರ್ಷಿಸಲು‌ ಸಿಎಂ‌ ಜೊತೆ ವಿದೇಶಗಳ ಉದ್ಯಮಿಗಳ ಜೊತೆ‌ ಇನ್ ವೆಸ್ಟ್ ಮೀಟ್
* ಬೆಂಗಳೂರು ಹೊರತುಪಡಿಸಿ ಉಳಿದ ಭಾಗದಲ್ಲಿ ಉದ್ಯಮ ಸ್ಥಾಪನೆಗೆ ಉತ್ತೇಜನ
* ಮುಂದಿನ ೫ ವರ್ಷದಲ್ಲಿ ೫ ಲಕ್ಷ‌ ಕೋಟಿ ಬಂಡವಾಳ ಹೂಡಿಕೆ ಗುರಿ
* ವರ್ಷಾಂತ್ಯದಲ್ಲಿ ಬಂಡವಾಳ ಹೂಡಿಕೆಗೆ ಸಮಾವೇಶ

ನೆಗಟಿವ್ ಅಂಶಗಳು:
* ವಿವಾದಿತ ಕಾರ್ಮಿಕ ನೀತಿ ಜಾರಿ ಮಾಡಿ ಎಡವಟ್ಟು
* ಸಚಿವರು ಆಕ್ಟೀವ್ ಗಿಂತ ಡಿಆಕ್ಟೀವ್ ಆಗಿದ್ದೇ ಹೆಚ್ಚು
* ಆರ್ಥಿಕ‌ ಸಂಕಷ್ಟದಲ್ಲೂ ಉದ್ಯಮ‌ ಮತ್ತು ಉದ್ಯಮಿಗಳಲ್ಲಿ ಭರವಸೆ ಮೂಡಿಸದ ಸಚಿವರು
* ಹುಬ್ಬಳ್ಳಿ ಎಂದರೆ ಕರ್ನಾಟಕ ಎಂದು‌ಕೊಂಡಿರೋ‌ ಸಚಿವ ಜಗದೀಶ ಶೆಟ್ಟರ್
* ಬಂಡವಾಳ ಹೂಡಿಕೆಗೆ ಬಂಡವಾಳ ಹೂಡಿಕೆ ಸಮಾವೇಶ ಮಾಡದ ಇಲಾಖೆ

ಗ್ರಾಮೀಣಾಭಿವೃದ್ಧಿ ಇಲಾಖೆ (ಕೆಎಸ್ ಈಶ್ವರಪ್ಪ):

ಸಾಧನೆಗಳು:
* ಪ್ರಧಾನ ಮಂತ್ರಿ ಗ್ರಾಮ‌ ಸಡಕ್ ಯೋಜನೆ ಮೂಲಕ ೫೬೧೨ ಕಿಮೀ‌ ರಸ್ತೆ‌ ನಿರ್ಮಾಣಕ್ಕೆ ಚಾಲನೆ
* ಉದ್ಯೋಗ ಖಾತರಿ ಯೋಜನೆಯಡಿ ದಿನದ ಕೂಲಿ ೨೭೫ ಕ್ಕೆ ಏರಿಕೆ
* ಮನೆ ಮನೆಗೆ ಗಂಗೆ ಯೋಜನೆಯಡಿ ೧೫.೮೮ ಲಕ್ಷ‌ ಮನೆಗಳಿಗೆ ನಲ್ಲಿ‌ ಸಂಪರ್ಕ
* ಕೊರೋನಾ‌ ವೇಳೆ‌ ನಗರಗಳಿಂದ ಗ್ರಾಮಗಳಿಗೆ ವಾಪಸ್ಸಾದವರಿಗೆ‌ ಕೊವಿಡ್‌ ನಿಯಮ ಪಾಲನೆಗೆ‌ ಧಕ್ಕೆ ಬರದಂತೆ ಉದ್ಯೋಗ ಖಾತರಿ
* ಗ್ರಾಮ‌ ಪಂಚಾಯತಿ‌ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಯೋಜನೆ

ನೆಗೆಟಿವ್ ಅಂಶಗಳು: 
* ಕೇಳಿದ್ದ ಯೋಜನೆಗಳನ್ನೂ ಬಜೆಟ್ ನಲ್ಲಿ ಘೋಷಣೆ ಮಾಡಲಿಲ್ಲ ಅನ್ನೋ ಕೋಪ ಇಲಾಖೆ ಕಾರ್ಯಕ್ರಮಗಳ ವೇಗಕ್ಕೆ ಅಡ್ಡಿ
* ಇಲಾಖೆಯಲ್ಲಿ ಕುಟುಂಬಸ್ಥರ ಹಸ್ತಕ್ಷೇಪದ ಆರೋಪ
* ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸದೇ ಆಡಳಿತಾಧಿಕಾರಿ ನೇಮಿಸಿದ್ದಕ್ಕೆ ವಿರೋಧ
* ಮುಖ್ಯಮಂತ್ರಿ ಹಾಗೂ ಈಶ್ವರಪ್ಪ ನಡುವೆ ಇರೋ ಮನಸ್ತಾಪ ಇಲಾಖೆ‌ ಅಭಿವೃದ್ಧಿಗೆ ಹಿನ್ನಡೆ
* ಕೊರೋನಾ‌ ಸಮಯದಲ್ಲಿ ಗ್ರಾಮೀಣ ಭಾಗಗಳನ್ನು ಮರೆತ ಗ್ರಾಮೀಣಾಭಿವೃದ್ಧಿ ಇಲಾಖೆ

ವರದಿ: ಚಿದಾನಂದ ಪಟೇಲ್
Published by: Vijayasarthy SN
First published: July 26, 2020, 2:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories