BSY Government - ಬಿಜೆಪಿ ಸರ್ಕಾರಕ್ಕೆ 1 ವರ್ಷ: ಸಚಿವರಾಗಿ ವಲಸಿಗರ ಕಾರ್ಯಸಾಧನೆ ಮತ್ತು ವೈಫಲ್ಯಗಳೇನು?

ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ಡಾ. ಸುಧಾಕರ್, ಬಿ.ಸಿ. ಪಾಟೀಲ್, ಶ್ರೀಮಂತ ಪಾಟೀಲ್, ನಾರಾಯಣಗೌಡ, ಆನಂದ್ ಸಿಂಗ್ ಅವರ ಇಲಾಖೆಗಳ ಕಾರ್ಯಸಾಧನೆ ಮತ್ತು ವೈಫಲ್ಯಗಳ ಪಟ್ಟಿ ಇಲ್ಲಿದೆ.

news18-kannada
Updated:July 26, 2020, 2:41 PM IST
BSY Government - ಬಿಜೆಪಿ ಸರ್ಕಾರಕ್ಕೆ 1 ವರ್ಷ: ಸಚಿವರಾಗಿ ವಲಸಿಗರ ಕಾರ್ಯಸಾಧನೆ ಮತ್ತು ವೈಫಲ್ಯಗಳೇನು?
ಸಚಿವ ಡಾ.ಕೆ ಸುಧಾಕರ್​​
  • Share this:
ಬೆಂಗಳೂರು(ಜುಲೈ 26): ಮೈತ್ರಿ ಪಕ್ಷಗಳ ಶಾಸಕರು ಬಿಜೆಪಿಗೆ ಬಂದು ಮಂತ್ರಿಭಾಗ್ಯ ಪಡೆದಿದ್ದಾರೆ. ಹಲವರಿಗೆ ಇದು ಮೊದಲನೇ ಮಂತ್ರಿಗಿರಿ. ಈ ಹಿನ್ನೆಲೆಯಲ್ಲಿ ಈ ವಲಸಿಗರು ಮಂತ್ರಿಗಳಾಗಿ ಹೇಗೆ ಕಾರ್ಯನಿರ್ವಹಿಸಿದ್ದಾರೆ ಎಂಬದರ ಒಂದು ಅವಲೋಕನ ಇಲ್ಲಿದೆ. ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ಡಾ. ಸುಧಾಕರ್, ಬಿ.ಸಿ. ಪಾಟೀಲ್, ಶ್ರೀಮಂತ ಪಾಟೀಲ್, ನಾರಾಯಣಗೌಡ, ಆನಂದ್ ಸಿಂಗ್ ಅವರ ಇಲಾಖೆಗಳ ಕಾರ್ಯಸಾಧನೆ ಮತ್ತು ವೈಫಲ್ಯಗಳ ಪಟ್ಟಿ ಇಲ್ಲಿದೆ:

ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

ಸಾಧನೆಗಳು:
* ಮಹದಾಯಿ ನೀರು ಹರಿಸುವ ಪಣ ತೊಟ್ಡ ಸಚಿವ
* ಮೇಕೆದಾಟು ಯೋಜನೆ ಜಾರಿಗೆ ಹೆಚ್ಚಿದ ಉತ್ಸಾಹ
* ಉತ್ತರ ಕರ್ನಾಟಕ ಭಾಗದ ಸಚಿವನಾದರೂ ರಾಜ್ಯದ ಎಲ್ಲ ಜಲಾಶಯಗಳಿಗೆ ಭೇಟಿ
* ಕೃಷ್ಣ ಮೇಲ್ದಂಡೆ ಬಿ ಸ್ಕೀಂ ಕಾಲುವೆ ಯೋಜನೆಗೆ ಉತ್ಸುಕತೆ* ರಾಜ್ಯದ ನೀರಾವರಿ ಯೋಜನೆ ಜಾರಿಗೆ ಕೇಂದ್ರದ ಇಲಾಖೆ ಜೊತೆ ಉತ್ತಮ‌ ಬಾಂಧವ್ಯ

ನೆಗೆಟಿವ್ ಪಾಯಿಂಟ್ಸ್
* ಬೆಳಗಾವಿ ಜಿಲ್ಲೆಗೆ‌ ಹೆಚ್ಚು ಸೀಮಿತವಾಗಿದ್ದು
* ಇಲಾಖೆಗಿಂತ ಬೆಳಗಾವಿ ರಾಜಕಾರಣದತ್ತ ಹೆಚ್ಚು ಗಮನ ಕೇಂದ್ರಿಕರಿಸಿದ್ದು
* ನದಿ ವ್ಯಾಜ್ಯಗಳ ಬಗೆಗಿನ ಕಾನೂನು ಜ್ಞಾನ ಮತ್ತು ಅರಿವು ಕಡಿಮೆ
* ಇಲಾಖೆಯಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿಲ್ಲ ಅನ್ನೋ ಆರೋಪ
* ಮಹಾದಾಯಿ ನೀರನ್ನು ರಾಜ್ಯಕ್ಕೆ ತರುವಲ್ಲಿ ವಿಳಂಬ ಧೋರಣೆ ಬಗ್ಗೆ ರೈತರ ಆಕ್ರೋಶ.

ಇದನ್ನೂ ಓದಿ: BJP Government - ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ: ಬಿಜೆಪಿ ಮೂಲದ ಸಚಿವರ ಸಾಧನೆ, ವೈಫಲ್ಯಗಳೇನು?

ಡಾ. ಸುಧಾಕರ, ವೈದ್ಯಕೀಯ ಶಿಕ್ಷಣ

ಸಾಧನೆಗಳು:
* ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಒಯ್ದದ್ದು
* ಉತ್ತಮ ಭಾಷೆ, ಯಾವ ಸಂದರ್ಭದಲ್ಲಿ ಏನು ಮಾತಾಡಬೇಕು ಅನ್ನೋ ಸಮಯ ಪ್ರಜ್ಞೆಯಿಂದಲೇ ವರಿಷ್ಠರ ಗಮನ ಸೆಳೆದ ಸುಧಾಕರ್
* ಕೊರೋನಾ ಟೈಂನಲ್ಲಿ ಆರೋಗ್ಯ ಸಚಿವರನ್ನ ಮೀರಿ ಬೆಳೆದದ್ದು
* ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದು ಮೂಲ ಬಿಜೆಪಿ ಸಚಿವರನ್ನೇ ಮೀರಿ ಬೆಳೆದದ್ದು ಸುಳ್ಳಲ್ಲ
* ವಿಕ್ಟೋರಿಯಾ, ಸಿ ವಿ ರಾಮನ್ ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಗಳನ್ನ ಕೋವಿಡ್​ಗೆ ಸಿದ್ಧಗೊಳಿಸಿದ್ದು ಒಳ್ಳೆಯ ಪ್ರಯತ್ನ

ನೆಗೆಟಿವ್ ಅಂಶಗಳು
* ಬೆಂಗಳೂರು ಬಿಟ್ಟು ಉಳಿದ ಮೆಡಿಕಲ್‌ ಕಾಲೇಜಗಳಿಗೆ ಭೇಟಿ ನೀಡಲಿಲ್ಲ
* ಸರ್ಕಾರಿ‌ ಮೆಡಿಕಲ್ ಕಾಲೇಜ್ ಗಳ ಸ್ಥಿತಿಗತಿ ಅರಿಯಲಿಲ್ಲ. ಪ್ರಗತಿ ಪರಿಶೀಲನಾ ಸಭೆ ಮಾಡಲಿಲ್ಲ
* ಸಂಪುಟದಲ್ಲಿನ ಎಲ್ಲ ಸಚಿವರಿಗಿಂತ ನಾನೇ ಬುದ್ದಿವಂತ ಎಂದು ಭಾವಿಸಿರುವುದು
* ಕೆಲಸಕ್ಕಿಂತ ಕಾರ್ಯಕ್ರಮಗಳನ್ನ ಹೇಳಿಕೊಂಡಿದ್ದೇ ಜಾಸ್ತಿ
* ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜ್ ನ್ನು ಚಿಕ್ಕಬಳ್ಳಾಪುರಕ್ಕೆ ಒಯ್ದಿದ್ದು ರಾಜಕೀಯ ದ್ವೇಷಕ್ಕೆ ಕಾರಣವಾಯ್ತು.

ಇದನ್ನೂ ಓದಿ: ಯಡಿಯೂರಪ್ಪ ಸಿಎಂ ಆಗಿ 1 ವರ್ಷ; ಸವಾಲುಗಳೇನು? ಸಾಧನೆ, ವೈಫಲ್ಯಗಳೇನು? ಇಲ್ಲಿದೆ ಪಟ್ಟಿ

ಎಸ್.ಟಿ.‌ ಸೋಮಶೇಖರ್, ಸಹಕಾರ‌ ಸಚಿವ

ಸಾಧನೆಗಳು:
* ರೈತರಿಗೆ ನೀಡಿದ ಬೆಳೆ ಸಾಲದ ವಿವರ -2019.20 ರಲ್ಲಿ 22.58 ಲಕ್ಷ ರೈತರಿಗೆ 13577 ಕೋಟಿ ರೂಪ ಬೆಳೆ ಸಾಲ ವಿತರಣೆ
* 2020-2021ರಲ್ಲಿಬ 24.50 ಲಕ್ಷ ರೈತರಿಗೆ 14,500 ಕೋಟಿ  ಬೆಳೆ ಸಾಲ ನೀಡುವ ಗುರಿ
* 42608 ಆಶಾ ಕಾರ್ಯಕರ್ತೆ ರಲ್ಲಿ ಕೇವಲ ೨೮ ಸಾವಿರ ಕಾರ್ಯಕರ್ತೆಯರಿಗೆ  ೩೦೦೦ ರೂ ಪ್ರೋತ್ಸಾಹ ಧನ ವಿತರಣೆ
* ಕೊರೋನಾ‌ ಸಂಕಷ್ಟ ಪರಿಸ್ಥಿತಿಯಲ್ಲಿ ಇಲಾಖೆಯಿಂದ ಸಿಎಂ‌ ಪರಿಹಾರ ನಿಧಿಗೆ ಹೆಚ್ಚು ೫೩ ಕೋಟಿ‌ ನೀಡಿದ್ದು
* ಮೈಸೂರಿನಲ್ಲಿ ಕೊರೋನಾಗೆ ಹರಡುವಿಕೆಗೆ ಬ್ರೇಕ್ ಹಾಕುವಲ್ಲಿ ಮಹತ್ವದ ಪಾತ್ರ

ನೆಗೆಟಿವ್ ಪಾಯಿಂಟ್ಸ್
* ಕೊರೋನಾ ವಾರಿಯರ್ಸ್  ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡದೇ‌ ಕೇವಲ ೨೮ ಸಾವಿರ ಕಾರ್ಯಕರ್ತೆಯರಿಗೆ ಮಾತ್ರ ನೀಡಿದ್ದಕ್ಕೆ ವಿರೋಧ
* ಸಹಕಾರ ಇಲಾಖೆ ಅಂದ್ರೆ ಮೈಸೂರು ಎಂದು ಭಾವಿಸಿದ್ದು
* ರಾಜ್ಯ ಪ್ರವಾಸ ಮಾಡದೇ, ರೈತರಲ್ಲಿ ಭರವಸೆ ಮೂಡಿಸದ ಸಚಿವ
* ಉಸ್ತುವಾರಿ ಜಿಲ್ಲೆಗೆ ಮಾತ್ರ ಸೀಮಿತವಾದ ಸಚಿವ
* ಕೊರೋನಾ ಸಂಬಂಧ ಆರ್ ಆರ್ ನಗರ ವಲಯ ಉಸ್ತುವಾರಿ ಮಾಡಿದ್ದೇ ತಡ, ಆ ವಲಯಕ್ಕೆ ಸೀಮಿತರಾಗಿಬಿಟ್ಟ ಎಸ್ಟಿಎಸ್

ಬಿ.ಸಿ. ಪಾಟೀಲ, ಕೃಷಿ ಸಚಿವ

ಸಾಧನೆಗಳು:
* ಕೋವಿಡ್ ಸಮಯದಲ್ಲೂ ಕೃಷಿ ಕಾರ್ಯಗಳಿಗೆ‌ ಅವಕಾಶ ನೀಡಿದ್ದು
* ಮುಂಗಾರು ಹಂಗಾಮಿನಲ್ಲಿ ಬೀಜ,ಗೊಬ್ಬರದ ಸಮಸ್ಯೆ ಬರದಂತೆ ವ್ಯವಸ್ಥೆ ಮಾಡಿದ್ದು
* ಮಿಡತೆ ಸೇರಿ ಇತರೆ ಸಮಸ್ಯೆಗಳ ನಿವಾರಣೆಗೆ ತೀವ್ರತರ ಕ್ರಮದಿಂದ ನಿಯಂತ್ರಣ
* ಕೃಷಿ ಉತ್ಪನ್ನ ವಸ್ತುಗಳ ಸಂಸ್ಕರಣೆ ಸದ್ಯ ೩-೫ ಪ್ರಮಾಣವಿದ್ದು, 2025ರ ಒಳಗೆ ಶೇ 25ರಷ್ಟು ಹೆಚ್ಚಿಸುವ ಗುರಿ
* ಅಗ್ರಿ ಪಾರ್ಕ್, ಫುಡ್ ಪಾರ್ಕ್, ಸಮುದ್ರ ಆಹಾರ ಉದ್ಯಾನಗಳು, ಅಕ್ಕಿ ಮತ್ತು ಮೆಕ್ಕೆ ಜೋಳದ ತಂತ್ರಜ್ಞಾನ ಉದ್ಯಾನಗಳು, ಶೀತಲ ಶೇಖರಣಾ ಘಟಕಗಳು, ಗೋದಾಮುಗಳು, ಕೃಷಿ ಲಾಜಿಸ್ಟಿಕ್ ಹಬ್‌ಗಳು, ಲಾಜಿಸ್ಟಿಕ್ ಉದ್ಯಾನವನ ಸ್ಥಾಪನೆಗೆ ಕ್ರಮ

ನೆಗಟಿವ್ ಅಂಶಗಳು:
* ಕೋವಿಡ್ ನಿಯಂತ್ರಣಕ್ಕೆ ಕೊಟ್ಟ‌ ಮಹತ್ವವನ್ನ ಇಲಾಖೆಗೆ ಕೊಡಲು‌ ಸಮಯವಿರಲಿಲ್ಲ
* ಕೋವಿಡ್ ಸಮಯದಲ್ಲಿ ರೈತ ಬೆಳೆದ ಬೆಳೆಗಳಿಗೆ ಸೂಕ್ತ ದರ ನೀಡಲಿಲ್ಲ. ಇದರಿಂದ ರೈತ‌ನಿಗಾದ ತೊಂದರೆ ಬಹಳ
* ಕೃಷಿ ಇಲಾಖೆಯಿಂದ ಹೊಸ ಯೋಜನೆಗಳು‌ ಅನುಷ್ಠಾನ ವಾಗದಿರೋದು ಸಚಿವರ ಹಿನ್ನಡೆ
* ಕೃಷಿ ಸಲಕರಣೆಗಳು ಈ ಬಾರಿ ಅನ್ನದಾತನಿಗೆ ಸಿಗಲಿಲ್ಲ
* ಕೊರೋನಾ ಆರ್ಥಿಕ ಸಂಕಷ್ಟದಲ್ಲಿ ಸಿಎಂ ರೈತರಿಗೆ ಘೋಷಣೆ ಮಾಡಿದ್ದ ಪ್ಯಾಕೇಜ್ ಫಲಾನುಭವಿಗಳಿಗೆ ಸಿಗಲಿಲ್ಲ.

ಇದನ್ನೂ ಓದಿ: ಅಧಿಕಾರಕ್ಕೆ ಏರಿದಾಗಿಂದಲೂ ಎಲ್ಲಾ ಸವಾಲುಗಳನ್ನು ಯಡಿಯೂರಪ್ಪ ಯಶಸ್ವಿಯಾಗಿ ನಿಭಾಯಿಸಿದ್ದಾರೆ; ಆರ್‌. ಅಶೋಕ್

ಆನಂದ್ ಸಿಂಗ್, ಶ್ರೀಮಂತ ಪಾಟೀಲ, ನಾರಾಯಣಗೌಡ (ಅರಣ್ಯ, ಸಕ್ಕರೆ ಮತ್ತು ತೋಟಗಾರಿಕೆ ಸಚಿವರು)

ಸಾಧನೆಗಳು:
* ಕೋವಿಡ್‌ ಸಮಯದಲ್ಲಿ ತೋಟಗಾರಿಕೆ ಬೆಳೆಗಳಿಗೆ‌ ಆನ್​ಲೈನ್ ಮಾರುಕಟ್ಟೆ ಕಲ್ಪಿಸಿದ್ದು
* ಆನಂದ್ ಸಿಂಗ್ ಕೊರೋನಾ‌ ವೇಳೆ ತಮ್ಮ ಉಸ್ತುವಾರಿಯ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಆಹಾರ ಕಿಟ್ ನೀಡಿದ್ದು
* ಈ ಬಾರಿ ಆನೆ ಹಾವಳಿಗೆ ಫುಲ್​ಸ್ಟಾಪ್ ಹಾಕಿದ್ದು‌ ಅರಣ್ಯ ಇಲಾಖೆ ಹೆಗ್ಗಳಿಕೆ
* ಕೊರೋನಾ ಸಮಯದಲ್ಲಿ ಶ್ರೀಮಂತ ಪಾಟೀಲ್ ತಮ್ಮ‌ ಕ್ಷೇತ್ರ ಕಾಗವಾಡದಲ್ಲೇ‌ ಠಿಕಾಣಿ ಹೂಡಿ ಜನರ ನೆರವಿಗೆ ನಿಂತಿದ್ದು
* ಎಥೆನಾಲ್​ನಿಂದ ಸ್ಯಾನಿಟೈಸರ್ ಉತ್ಪಾದನೆಗೆ ಕ್ರಮ; ಹಾಗಾಗಿ ಸಕ್ಕರೆ ಕಾರ್ಖಾನೆಗಳಿಂದ ಚೇತರಿಕೆ

ನೆಗಟಿವ್ ಅಂಶಗಳು:
* ಸಕ್ಕರೆ ಸಚಿವ ಶ್ರೀಮಂತ ಪಾಟೀಲ ಇಲಾಖೆ ಬಗ್ಗೆ ಗಮನ ನೀಡಲೇ‌ ಇಲ್ಲ.‌ ಸಚಿವರಾಗಿ ಬೆಂಗಳೂರಿಗೆ ಬಂದಿದ್ದೇ ಕಡಿಮೆ. ರಾಜ್ಯ ಸುತ್ತಿದ್ದಂತೂ ಇಲ್ಲವೇ ಇಲ್ಲವೇ ಇಲ್ಲ.‌ ಕೊರೋನಾ ಭೀತಿಯಿಂದ‌ ಕ್ಷೇತ್ರ ದಲ್ಲೇ ಮೊಕ್ಕಾಂ
* ಅರಣ್ಯ ಇಲಾಖೆಯ ವ್ಯಾಪ್ತಿ ಅರಿಯಲು‌ ಹೆಣಗಾಡುತ್ತಿರೋ ಸಿಂಗ್. ಇಲಾಖೆಗಿಂತ ಅವರ ಗಣಿ ಕೇಸ್ ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತಿದೆ
* ನಾರಾಯಣಗೌಡರ ಮುಂಬೈ ಲಿಂಕ್ ಮಂಡ್ಯದಲ್ಲಿ ಕೊರೋನಾ ಹಬ್ಬಲು ಕಾರಣ ಅನ್ನೋ ಆರೋಪ ಜೋರಾಗಿ ಕೇಳಿ ಬಂತು
* ಮಾವು, ಹಲಸು, ಪೇರಲ,ಸಪೋಟಾ ಸೇರಿ ಇತರೆ ತೋಟಗಾರಿಕಾ ಬೆಳೆಗಳಿಗೆ ಕೊರೋನಾ ಕಾಲದಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಿಲ್ಲ
* ಮೂರು ಇಲಾಖೆಯಿಂದ ಕೊರೋನಾ ಪ್ಯಾಕೇಜ್ ಫಲಾನುಭವಿಗಳಿಗೆ ತಲುಪಲೇ ಇಲ್ಲ.

ವರದಿ: ಚಿದಾನಂದ ಪಟೇಲ್
Published by: Vijayasarthy SN
First published: July 26, 2020, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading