ಬೆಂಗಳೂರು: ಪ್ರೀತಿ ನಿರಾಕರಿಸಿದ (Love Failure) ವಿದ್ಯಾರ್ಥಿನಿಯನ್ನು ಇರಿದು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಭಗ್ನಪ್ರೇಮಿ ಪವನ್ ಕಲ್ಯಾಣ್ (Pavan Kalyan) ಎಂಬಾತ ಚೇತರಿಸಿಕೊಳ್ಳುತ್ತಿದ್ದು, ಬೆಂಗಳೂರಿನ (Bengaluru) ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇತ್ತೀಚೆಗೆ ರಾಜಾನುಕುಂಟೆ ಬಳಿಯ ದಿಬ್ಬೂರು ಗ್ರಾಮದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಆವರಣಕ್ಕೆ ನುಗ್ಗಿದ ಪವನ್ ಲಯಸ್ಮಿತಾ (19) ಎಂಬ ವಿದ್ಯಾರ್ಥಿನಿಗೆ ಚಾಕುವಿನಿಂದ ಮನಸೋಇಚ್ಛೆ ಇರಿದು ಕೊಂದಿದ್ದ. ಬಳಿಕ ತನ್ನ ಎದೆ ಮತ್ತು ಹೊಟ್ಟೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು 'ಚಾಕು ಇರಿತದ ಗಾಯ ಆಳವಾಗಿಲ್ಲ. ಪವನ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ' ಎಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಹೇಳಿಕೆ ಪಡೆಯಲು ಮತ್ತು ಕಾನೂನು ಪ್ರಕಾರ ಆರೋಪಿಯ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಲು ಪವನ್ ಚೇತರಿಸಿಕೊಳ್ಳುವುದನ್ನೇ ಕಾಯುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?
ಸಂಬಂಧಿಕರಾದ ಲಯ ಸ್ಮಿತಾ ಮತ್ತು ಪವನ್ ಪರಸ್ಪರ ಸಂಪರ್ಕದಲ್ಲಿದ್ದರು. ಲಯಸ್ಮಿತಾ ಮೇಲೆ ಪವನ್‌ಗೆ ಪ್ರೇಮಾಂಕುರವಾತ್ತು. ಅಲ್ಲದೆ, ಆತ ಹಲವು ಬಾರಿ ಲಯಸ್ಮಿತಾ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ, ಲಯಸ್ಮಿತಾ ಆತನ ಪ್ರೇಮ ಪ್ರಸ್ತಾಪ ನಿರಾಕರಿಸಿದ್ದಳು. ಇದರಿಂದ ವಿಚಲಿತನಾಗಿದ್ದ ಪವನ್, ಲಯಸ್ಮಿತಾಳನ್ನು ಕೊಂದು ತನ್ನ ಜೀವನ ಅಂತ್ಯಗೊಳಿಸಿಕೊಳ್ಳಲು ನಿರ್ಧರಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
PMAY ಹಣದೊಂದಿಗೆ ಪತ್ನಿಯರು ಎಸ್ಕೇಪ್!
ಲಕ್ನೋ: ನಾಲ್ವರು ವಿವಾಹಿತ ಮಹಿಳೆಯರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣದ ಜೊತೆ ಗಂಡನನ್ನು ಬಿಟ್ಟು ಪ್ರೇಮಿಗಳ ಜೊತೆಗೆ ಓಡಿ ಹೋದ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಡತನ ರೇಖೆಗಿಂತ ಕೆಳಗಿರುವ, ಆರ್ಥಿಕವಾಗಿ ದುರ್ಬಲತೆ ಹೊಂದಿರುವ, ಕಡಿಮೆ ಮತ್ತು ಮಧ್ಯಮ ಆದಾರ ಹೊಂದಿರುವ ಕುಟುಂಬಗಳಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಗೃಹ ನಿರ್ಮಾಣಕ್ಕೆ ಹಣ ಒದಗಿಸುವ ಯೋಜನೆ PMAY ಇದಾಗಿದ್ದು, ಇದೀಗ ಸರ್ಕಾರದಿಂದ ಸಿಕ್ಕಿದ ಹಣದ ಜೊತೆಗೆ ನಾಲ್ವರು ಮಹಿಳೆಯರು ಎಸ್ಕೇಪ್ ಆಗಿರುವುದರಿಂದ ಅತ್ತ ಪತ್ನಿಯೂ ಇಲ್ಲದೆ, ಇತ್ತ ಮನೆಯೂ ಇಲ್ಲದೆ ನಾಲ್ವರ ಗಂಡಂದಿರು ಕಂಗಾಲಾಗಿದ್ದಾರೆ.
ಇನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾಗಬೇಕಾದರೆ ಆಯಾ ಕುಟುಂಬದ ಮಹಿಳಾ ಮುಖ್ಯಸ್ಥರ ಹೆಸರಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಹೀಗಾಗಿ ಆ ನಾಲ್ಕು ಕುಟುಂಬದ ಸದಸ್ಯರು ಕೂಡ ತಮ್ಮ ಪತ್ನಿಯ ಹೆಸರಲ್ಲೇ ಪಿಎಂಎವೈ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅದರನ್ವಯ ತಮ್ಮ ಬ್ಯಾಂಕ್ ಖಾತೆಗೆ 50,000 ರೂಪಾಯಿ ಜಮಾ ಆಗುತ್ತಿದ್ದಂತೆ ತಮ್ಮ ಗಂಡನನ್ನು ತೊರೆದು ಪ್ರೇಮಿಯ ಜೊತೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಅತ್ತ ಹಣವೂ ಇಲ್ಲ, ಹೆಂಡ್ತಿಯೂ ಇಲ್ಲ!
ತಮ್ಮ ಹೆಂಡ್ತಿಯರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣದೊಂದಿಗೆ ಪರಾರಿ ಆಗ್ತಿದ್ದಂತೆ ಇತ್ತ ಆ ನಾಲ್ವರು ಮಹಿಳೆಯರ ಗಂಡಂದಿರಿಗೆ ಹೊಸದೊಂದು ಸಮಸ್ಯೆ ಶುರು ಆಗಿದ್ದು, ಅದು ಸರ್ಕಾರದ ಹಣ ಆಗಿರೋದ್ರಿಂದ ಮನೆ ನಿರ್ಮಾಣ ಇನ್ನೂ ಮಾಡದೇ ಇರೋದಕ್ಕೆ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮನೆ ನಿರ್ಮಾಣ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ಗಂಡಂದಿರು ಖಾತೆಯಿಂದ ಯಾವುದೇ ಹಣ ಪಡೆಯದೇ ಇರೋದ್ರಿಂದ ಮನೆ ನಿರ್ಮಾಣ ಮಾಡೋದಕ್ಕೆ ಆಗಿಲ್ಲ. ಇದರಿಂದ ಗೊಂದಲಕ್ಕೆ ಒಳಗಾದ ಗಂಡಂದಿರಿಗೆ ಏನು ಮಾಡಬೇಕು ಅನ್ನೋದೇ ತೋಚುತ್ತಿಲ್ಲ. ಹೀಗಾಗಿ ತನ್ನನ್ನು ತೊರೆದು ಪರಾರಿ ಆದ ಪತ್ನಿಯ ಬ್ಯಾಂಕ್ ಖಾತೆಗೆ ಮುಂದಿನ ಕಂತನ್ನು ಕಳುಹಿಸದಂತೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Yogi Adityanath Interview: ಭಾರತದಲ್ಲಿ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ; ಯೋಗಿ ಆದಿತ್ಯನಾಥ್ ಅಭಯ
ಹಣ ವಸೂಲಿ ಮಾಡುವುದೇ ಚಿಂತೆ!
ಇಲ್ಲಿನ ಬೆಲ್ಹಾರ, ಬಂಕಿ, ಜೈದ್‌ಪುರ್ ಮತ್ತು ಸಿದ್ಧೌರ್ ನಗರ ಪಂಚಾಯಿತಿ ವ್ಯಾಪ್ತಿಯ ನಾಲ್ವರು ಮಹಿಳಾ ಫಲಾನುಭವಿಗಳ ಖಾತೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೊದಲ ಕಂತನ್ನು ಕಳುಹಿಸಲಾಗಿತ್ತು. ಆದರೆ ಹಣ ಕಳುಹಿಸಿ ಕೆಲವು ವಾರಗಳು ಕಳೆದರೂ ಮನೆ ನಿರ್ಮಾಣ ಕಾಮಗಾರಿ ಆರಂಭ ಮಾಡದೇ ಇದ್ದಾಗ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಮನೆ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ನೋಟಿಸ್ ನೀಡಿದರೂ ಮನೆ ಕಾಮಗಾರಿ ಆರಂಭಿಸಿರಲಿಲ್ಲ. ಹೀಗಾಗಿ ಫಲಾನುಭವಿಗಳ ಗಂಡಂದಿರು ಕೊನೆಗೆ ಸರ್ಕಾರಿ ಕಚೇರಿಗೆ ಭೇಟಿ ನೀಡಿ ತಮ್ಮ ಹೆಂಡತಿಯರು ಪ್ರಿಯಕರನೊಂದಿಗೆ ಪರಾರಿ ಆಗಿರುವ ವಿಚಾರ ಅಧಿಕಾರಿಗಳಿಗೆ ತಿಳಿಸಿ ಅವರ ಖಾತೆಗೆ ಹಣ ಜಮಾವಣೆ ಮಾಡದಂತೆ ತಿಳಿಸಿದ್ದಾರೆ. ಹೀಗಾಗಿ ಅತ್ತ ಅಧಿಕಾರಿಗಳು ಕೂಡ ಆ ಹಣವನ್ನು ವಸೂಲಿ ಮಾಡೋದು ಹೇಗೆ ಅಂತಾ ತಲೆ ಕೆಡಿಸಿಕೊಂಡಿದ್ದಾರೆ.
ಈಗಾಗಲೇ ಪರಾರಿಯಾಗಿರುವ ಮಹಿಳೆಯರ ಗಂಡಂದಿರಿಗೆ ತಮ್ಮ ಹೆಂಡತಿಯರನ್ನು ಮನವೊಲಿಸಿ ವಾಪಸ್ ಕರೆ ತರುವಂತೆ ಸೂಚಿಸಲಾಗಿದೆ. ಇದು ಸರ್ಕಾರದ ಹಣ ಆಗಿರವುದರಿಂದ ದುರುಪಯೋಗ ಮಾಡಬಾರದು. ಒಂದು ವೇಳೆ ದುರುಪಯೋಗ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮರ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೇವೆ ಎಂದು ಸೌರಭ್ ತ್ರಿಪಾಠಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ