ಬೆಂಗಳೂರು: ಮಹಿಳೆಯರು, ಹೆಣ್ಣು ಮಕ್ಕಳ ರಕ್ಷಣೆಗಾಗಿ (Laws Related to Women) ಸರ್ಕಾರಗಳು (Government) ಎಷ್ಟೇ ಕಠಿಣ ಕಾನೂನುಗಳನ್ನು ಜಾರಿ ಮಾಡುತ್ತಿದ್ದರು, ಸ್ತ್ರೀಯರ ಮೇಲಿನ ದಬ್ಬಾಳಿಕೆ ಮಾತ್ರ ಕಡಿಮೆಯಾಗುತ್ತಿಲ್ಲ. ದೇಶದಲ್ಲಿ ಪ್ರತಿನಿತ್ಯ ಯಾವುದೇ ಒಂದು ಸ್ಥಳದಲ್ಲಿ ಮಹಿಳೆಯರು ಶೋಕ್ಷಣೆಗೆ ಒಳಗಾಗುತ್ತಿರುತ್ತಾರೆ. ಯಾವುದೇ ಒಂದು ಸಣ್ಣ ಅವಕಾಶ ಸಿಕ್ಕರೂ ಆದನ್ನೇ ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡು ಶೋಷಣೆ, ಬ್ಲ್ಯಾಕ್ ಮೇಲ್ (Blackmail) ಮಾಡುತ್ತಿದ್ದಾರೆ. ಇಂತಹ ಘಟನೆಯೊಂದು ಬೆಂಗಳೂರು (Bengaluru) ನಗರದಲ್ಲಿ ನಡೆದಿದ್ದು, ಯುವತಿಯೊಬ್ಬಳ ಖಾಸಗಿ ಫೋಟೋ (Private Photos) ಗಳನ್ನು ಇಟ್ಟುಕೊಂಡು ಆರೋಪಿಯೊಬ್ಬ ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು (Bengaluru Police) ಆರೋಪಿ ಶೋಯೆಬ್ ಮಹಮದ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಏನಿದು ಪ್ರಕರಣ?
ನಗರ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಗರದಲ್ಲಿ ವಾಸಿಸುತ್ತಿದ್ದ ಯುವತಿಯೊಬ್ಬರು ತಮ್ಮ ವೈಯುಕ್ತಿಕ ವಿಚಾರಗಳಿಗೆ ಬಳಕೆ ಮಾಡುತ್ತಿದ್ದ ಪೆನ್ ಡ್ರೈವ್ ಒಂದನ್ನು ಕಳೆದುಕೊಂಡಿದ್ದರು. ಕಳೆದೋದ ಪೆನ್ ಡ್ರೈವ್ನಲ್ಲಿ ಯುವತಿ ತಮ್ಮ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸೇವ್ ಮಾಡಿದ್ದರಂತೆ. ಈ ಪೆನ್ ಡ್ರೈವ್ ಅದು ಹೇಗೋ ಆರೋಪಿಯ ಕೈ ಸೇರಿತ್ತು. ಪೆನ್ ಡ್ರೈವ್ ಪರಿಶೀಲನೆ ನಡೆಸಿದ ವೇಳೆ ವಿಡಿಯೋ, ಫೋಟೋಗಳನ್ನು ನೋಡಿದ್ದು, ಇದನ್ನೇ ಮುಂದಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣ ಪಡೆದುಕೊಳ್ಳಲು ಸಂಚು ರೂಪಿಸಿದ್ದನಂತೆ.
ಇದನ್ನೂ ಓದಿ: Cyber Crime: ಹುಡುಗರೇ ಎಚ್ಚರ! ಸುಂದರವಾದ ಹುಡುಗಿಯ ಫೋಟೋ ನೋಡಿ ಮೆಸೇಜ್ ಮಾಡಿದ್ರೆ ಬ್ಯಾಂಕ್ನಲ್ಲಿದ್ದ ಹಣ ಗುಳುಂ
70 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಆರೋಪಿ
ಕೆಲ ಸಮಯದ ಬಳಿಕ ಯುವತಿ ಮೊಬೈಲ್ ನಂಬರ್ ಪತ್ತೆ ಮಾಡಿದ್ದ ಆರೋಪಿ, ಯುವತಿ ವಾಟ್ಸಾಪ್ಗೆ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿದ್ದಾನೆ. ಅಲ್ಲದೇ 70 ಸಾವಿರ ರೂಪಾಯಿ ನೀಡುವಂತೆ ಒತ್ತಡ ಹಾಕಿದ್ದಾನೆ. ಇಲ್ಲ ಎಂದರೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡೋದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಸಹಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದು, ನಗರ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಂತೆ.
ಕಳೆದು ಹಣ ಕೊಡ್ಬೇಕು ಅಂತ ಬೆದರಿಕೆ
ಕೇಳಿದಷ್ಟು ಹಣ ಕೊಟ್ಟರೆ ಮಾತ್ರ ಫೋಟೋ ಮತ್ತು ವಿಡಿಯೋ ಇರುವ ಪೆನ್ ಡ್ರೈವ್ ವಾಪಸ್ ಕೊಡೋದಾಗಿ ಆರೋಪಿ ಷರತ್ತು ವಿಧಿಸಿದ್ದನಂತೆ. ಯುವತಿ ದೂರು ನೀಡುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಟೆಕ್ನಿಕಲ್ ಅಂಶಗಳ ಆಧಾರವಾಗಿಟ್ಟುಕೊಂಡು ಆರೋಪಿಯನ್ನು ಪತ್ತೆ ಮಾಡಿ ಬಂಧನ ಮಾಡಿದ್ದಾರೆ.
ಇದನ್ನೂ ಓದಿ: Koppal: 8ನೇ ತರಗತಿ ವಿದ್ಯಾರ್ಥಿನಿ 6 ತಿಂಗಳ ಗರ್ಭಿಣಿ; ಮೂವರಿಂದ ಅತ್ಯಾಚಾರ ಶಂಕೆ
ಮನೆಗಳ್ಳ ಅರೆಸ್ಟ್, ಚಿನ್ನಾಭರಣ ಜಪ್ತಿ
ವಿಜಯನಗರ ಜಿಲ್ಲೆಯ ಗುಡೇಕೋಟೆ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಮನೆ ಕಳ್ಳತನ ಮಾಡಿದ ಆರೋಪಿಯ ಬಂಧನ ಮಾಡಲಾಗಿದೆ. 24 ವರ್ಷದ ಸದ್ದಾಂ ಹುಸೇನ್ ಬಂಧಿತ ಆರೋಪಿಯಾಗಿದ್ದಾನೆ. ಆತನಿಂದ 5 ಲಕ್ಷದ 17 ಸಾವಿರದ 500 ರೂಪಾಯಿ ಮೌಲ್ಯದ 115 ಗ್ರಾಂ ಬಂಗಾರ ವಶಕ್ಕೆ ಪಡೆಯಲಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ