Koppal Teacher: ವಿಡಿಯೋಗಳನ್ನು ಮಾಡಿದ್ದು ನಾನೇ; ತಪ್ಪೊಪ್ಪಿಕೊಂಡ ಕಾಮುಕ ಶಿಕ್ಷಕ

ಮಹ್ಮಮದ್ ಅಜರುದ್ದಿನ್ ಜು 3 ರಂದು ಕಾರಟಗಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಶಿಕ್ಷಕ

ಶಿಕ್ಷಕ

  • Share this:
ಬಂಧಿತನಾಗಿರುವ ಕೊಪ್ಪಳ ಜಿಲ್ಲೆಯ ಕಾರಟಗಿಯ (Karatagi, koppala) ಕಾಮುಕ ಶಿಕ್ಷಕ (Teacher) ಮಹಮ್ಮದ್ ಅಜರುದ್ದೀನ್ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ವಿಡಿಯೋ ವೈರಲ್ (Viral Video) ಬೆನ್ನಲ್ಲೇ ಶಿಕ್ಷಕ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡು ಗೋವಾದಲ್ಲಿ ತಲೆಮರೆಸಿಕೊಂಡಿದ್ದನು. ಸದ್ಯ ಆರೋಪಿ ಶಿಕ್ಷಕ ನ್ಯಾಯಾಂಗ ಬಂಧನದಲ್ಲಿದ್ದಾನೆ (Judicial Cutody). ಗೊರೇಬಾಳ ವಲಯ ಶಿಕ್ಷಣ ಸಂಯೋಜಕರ ವಿಚಾರಣೆಯ ವೇಳೆ ಶಿಕ್ಷಕ ಮಹಮ್ಮದ್ ಅಜರುದ್ದೀನ್ ತಪ್ಪೊಪ್ಪಿಕೊಂಡಿದ್ದಾನೆ. ಮೂರು ವರ್ಷದ ಹಿಂದೆ ನನ್ನ ಮನೆಯಲ್ಲಿ ಮಹಿಳೆಯೊಂದಿಗಿನ ವಿಡಿಯೋ ಮತ್ತು ಪಕ್ಕದ್ಮನೆ ವಿವಾಹಿತೆ ಜೊತೆಗಿನ ವಿಡಿಯೋ ಮಾಡಿಕೊಂಡಿದ್ದೆ ಎಂದು ಹೇಳಿದ್ದಾನೆ.

ಈ ವಿಡಿಯೋ ಮಾಡಿದ್ದು ತಪ್ಪಾಗಿದೆ. ನನ್ನ ಮೊಬೈಲ್ 15 ದಿನಗಳ ಹಿಂದೆ ಕಳ್ಳತನವಾಗಿದೆ. ಈ ಮೊಬೈಲ್ ನಲ್ಲಿದ್ದ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡಿದ್ದಾರೆ. ಈ ವಿಡಿಯೋಗಳನ್ನಿಟ್ಟುಕೊಂಡು ನನ್ನ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಶಿಕ್ಷಕ ಮಹಮ್ಮದ್ ಅಜರುದ್ದೀನ್ ಆರೋಪ ಮಾಡಿದ್ದಾನೆ.

ಮಹ್ಮಮದ್ ಅಜರುದ್ದಿನ್ ಜು 3 ರಂದು ಕಾರಟಗಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:   ACB Raid: ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಎಸಿಬಿ ದಾಳಿ

ಸಂಜೆ ಕ್ಲಾಸ್ ವೇಳೆ ಅಸಭ್ಯ ವರ್ತನೆ

ಪಾಠದ ನೆಪದಲ್ಲಿ ಮಕ್ಕಳನ್ನು (Children) ಸಂಜೆ ಕ್ಲಾಸ್ ಗೆ (Evening Class) ಕರೆಸಿ ಅವರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕ (Teacher) ಮಹಮ್ಮದ್ ಅಜರುದ್ಧಿನ್ ನನ್ನು ಧಾರವಾಡ (Dharwad) ಜಿಲ್ಲೆಯಲ್ಲಿ ಪೊಲೀಸರು (Police) ಬಂಧಿಸಿದ್ದರು. ಇಷ್ಟು ಮಾತ್ರ ಅಲ್ಲದೇ ಮಕ್ಕಳ ತಾಯಂದಿರಿಗೆ ಸರ್ಕಾರಿ ಸೌಲಭ್ಯ ಕೊಡಿಸೋದಾಗಿ ಹೇಳಿ ಅವರ ಜೊತೆ ದೈಹಿಕ ಸಂಪರ್ಕ (Relationship) ಹೊಂದಿದ್ದನು.

ಸಂತ್ರಸ್ತೆಯಿಂದ ದೂರು ದಾಖಲು

ಮಕ್ಕಳ ಜೊತೆಗ ಅಸಭ್ಯವಾಗಿ ವರ್ತನೆ ಮತ್ತು ಮಹಿಳೆಯರ ಜೊತೆಗಿನ ಖಾಸಗಿ ವಿಡಿಯೋಗಳು ವೈರಲ್ (Viral Video) ಆಗಿದ್ದವು. ಇತ್ತ ಸಂತ್ರಸ್ತೆ ತನಗಾದ ಮೋಸದ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ (Karatagi Police Station) ದೂರು ಸಹ ದಾಖಲಿಸಿದ್ದರು.

ಶಿಕ್ಷಕ ಅಮಾನತು

ಮಹಮ್ಮದ್ ಅಜರುದ್ದೀನ್ ಅಮಾನತುಗೊಂಡಿರುವ ಶಿಕ್ಷಕ. ಮಹಮ್ಮದ್ ಅಜರುದ್ಧೀನ್ ಸಿಂಧನೂರು (Sindhanuru) ತಾಲೂಕಿನ ಸಿಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕನಾಗಿ ಕೆಲಸ ಮಾಡಿಕೊಂಡು, ಕೊಪ್ಪಳ ಜಿಲ್ಲೆಯ ಕಾರಟಗಿಯ (Karatagi, Koppal) ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಸಂಜೆ ಕ್ಲಾಸ್ ನೆಪದಲ್ಲಿ ಮಕ್ಕಳ ಅಂಗಾಂಗ ಮುಟ್ಟಿ ಶಿಕ್ಷಕ ಅಜರುದ್ದೀನ್ ಪಾಠ ಮಾಡುತ್ತಿದ್ದನು ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಪಾಠ ಹೇಳುವ ನೆಪದಲ್ಲಿ ಮಕ್ಕಳ ತಾಯಿ ಜೊತೆ ದೈಹಿಕ ಸಂಪರ್ಕ

ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೇ ಸಂತ್ರಸ್ತೆ ಶಿಕ್ಷಕನ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿಕ್ಷಕ ನಮ್ಮ ಮನೆಯ ಪಕ್ಕದಲ್ಲಿಯೇ ವಾಸವಾಗಿದ್ದು, ನನಗೆ ಸರಕಾರಿ ಸೌಲಭ್ಯ ಕೊಡಿಸೋದಾಗಿ ಹೇಳಿದ್ದನು. ಅದೇ ಮಗಳಿಗೆ ಪಾಠ ಹೇಳುತ್ತೇನೆ ಅಂತ ನಂಬಿಸಿದ್ದನು. ಮಗಳಿಗೆ ಪಾಠ ಹೇಳಿ ಕೊಡುವ ನೆಪದಲ್ಲಿ ಮನವೊಲಿಸಿ ನನ್ನ ಸಂಭೋಗ ಮಾಡಿದ್ದಾನೆ.

ಇದನ್ನೂ ಓದಿ:  R Ashok: ಇನ್ಮುಂದೆ ಗುತ್ತಿಗೆಗೆ ಸಿಗಲಿದೆ ಸರ್ಕಾರಿ ಜಮೀನು; ಕರ್ನಾಟಕ ಭೂಕಂದಾಯ ಕಾಯ್ದೆಗೆ ತಿದ್ದುಪಡಿ

ಶಾಲೆಯ ಮುಖ್ಯ ಗುರುಗಳಿಂದ ಸ್ಫೋಟಕ ಮಾಹಿತಿ

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಹಮ್ಮದ್ ಅಜರುದ್ಧೀನ್ ಕೆಲಸ ಮಾಡುತ್ತಿದ್ದ ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ ನ್ಯೂಸ್ 18 ಜೊತೆ ಮಾತನಾಡಿದ್ದಾರೆ. ಶಿಕ್ಷಕ‌ ಅಜರುದ್ದೀನ್ ಹಿಂದೆ ಮುಸ್ಲಿಂ ಸಮುದಾಯ ಆತನ ಜೊತೆಯಲ್ಲಿದೆ. ಅಜರುದ್ದೀನ್ ಅಮಾನತು ಎಂದಾಕ್ಷಣ ಶಾಲೆಗೆ ಬಂದು ಮುಸ್ಲಿಂ ಯುವಕರು ಮುತ್ತಿಗೆ ಹಾಕಿದ್ದರು. ಗ್ರಾಮದಲ್ಲಿ ಸುಮಾರು ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದಾನೆ ಎಂಬ ಮಾಹಿತಿಯನ್ನು ಶಿಕ್ಷಕ ಶರಣಪ್ಪ ಹೇಳುತ್ತಾರೆ.
Published by:Mahmadrafik K
First published: