ಬೆಂಗಳೂರಿನಲ್ಲಿ ಕರ್ತವ್ಯ ನಿರತ ಟ್ರಾಫಿಕ್​ ಪೊಲೀಸ್​ಗೆ ಕಪಾಳ ಮೋಕ್ಷ ಮಾಡಿದ ಆರೋಪಿ

ವಿಚಾರಣೆ ವೇಳೆ ಜೆ.ಬಿ.ನಗರ ಠಾಣೆಯ ಮಹಿಳಾ‌ ಪಿಎಸ್ ಐ ಮೇಲೆ‌ ಅತ್ಯಾಚಾರ ನಡೆಸುವುದಾಗಿ ಆರೋಪಿ ಬೆದರಿಕೆ‌ ಹಾಕಿದ್ಧಾನೆ ಎನ್ನಲಾಗಿದೆ. ಹೀಗಾಗಿ  ಮಹಿಳಾ ಪಿಎಸ್ ಐ ಕೂಡ ಆರೋಪಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Latha CG | news18-kannada
Updated:September 13, 2019, 5:06 PM IST
ಬೆಂಗಳೂರಿನಲ್ಲಿ ಕರ್ತವ್ಯ ನಿರತ ಟ್ರಾಫಿಕ್​ ಪೊಲೀಸ್​ಗೆ ಕಪಾಳ ಮೋಕ್ಷ ಮಾಡಿದ ಆರೋಪಿ
ಎಎಸ್​ಐ ಶಿವಪ್ಪ
  • Share this:
ಬೆಂಗಳೂರು(ಸೆ.13): ಆರೋಪಿಯೊಬ್ಬ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್​ಗೆ ಕಪಾಳ ಮೋಕ್ಷ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಜೀವನ್​ ಭೀಮಾನಗರ ಸಂಚಾರಿ ಪೊಲೀಸ್​ ಠಾಣೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.  ಠಾಣೆಯ ಸಹಾಯಕ ಉಪನಿರೀಕ್ಷಕ(ಎಎಸ್​ಐ)​ ಶಿವಪ್ಪ ಎಂಬುವರಿಗೆ ರಾಜಸ್ಥಾನ ಮೂಲದ ಕೇಶವ್​ ಗುಪ್ತಾ ಎಂಬಾತ ಕಪಾಳ ಮೋಕ್ಷ ಮಾಡಿದ್ದಾನೆ.

ಆರೋಪಿ ಕೇಶವ್​ ಗುಪ್ತಾ ನಿನ್ನೆ ರಾತ್ರಿ ಅಪಘಾತ ಮಾಡಿದ್ದ ಎನ್ನಲಾಗಿದೆ. ಬಳಿಕ ಪ್ರಕರಣದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೇಶವ್​ ಅಲ್ಲಿಂದ ಎಸ್ಕೇಪ್​ ಆಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆರೋಪಿ ಕೇಶವ್​ ನನ್ನು ಹಿಡಿದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಆರೋಪಿ ಕೇಶವ್​  ವಿಚಾರಣೆ ನಡೆಸುತ್ತಿದ್ದ ಎಎಸ್​ಐ ಶಿವಪ್ಪ ಅವರ ಕಪಾಳಕ್ಕೆ ಬಾರಿಸಿದ್ದಾನೆ.

ಡಿಕೆಶಿ ವಿಚಾರಣೆ ಆರಂಭ | ಅನವಶ್ಯಕ ಉತ್ತರ ನೀಡುತ್ತಾರೆ ಎಂದು ಹೇಳುತ್ತಾರೆ, ಇವರಿಗೆ ಬೇಕಾದ ಉತ್ತರ ಯಾವುದು? ಡಿಕೆಶಿ ಪರ ವಕೀಲರ ಪ್ರಶ್ನೆ

ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಹಿನ್ನೆಲೆ, ಎಎಸ್​ಐ ಶಿವಪ್ಪ ಆರೋಪಿ ಕೇಶವ್​ ಗುಪ್ತಾ ವಿರುದ್ಧ ದೂರು ನೀಡಿದ್ದಾರೆ. ಜೆ.ಬಿ.ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಜೀವನ್​ ಭೀಮಾನಗರ ಪೊಲೀಸರು ಆರೋಪಿ ಕೇಶವ್​ ಗುಪ್ತಾನನ್ನು ವಿಚಾರಣೆ ನಡೆಸಿದ್ದಾರೆ.

ಇಷ್ಟೇ ಅಲ್ಲದೇ, ವಿಚಾರಣೆ ವೇಳೆ ಜೆ.ಬಿ.ನಗರ ಠಾಣೆಯ ಮಹಿಳಾ‌ ಪಿಎಸ್ ಐ ಮೇಲೆ‌ ಅತ್ಯಾಚಾರ ನಡೆಸುವುದಾಗಿ ಆರೋಪಿ ಬೆದರಿಕೆ‌ ಹಾಕಿದ್ಧಾನೆ ಎನ್ನಲಾಗಿದೆ. ಹೀಗಾಗಿ  ಮಹಿಳಾ ಪಿಎಸ್ ಐ ಕೂಡ ಆರೋಪಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ಘಟನೆ ಸಂಬಂಧ ಇಂದಿರಾನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading