ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಸುನಿಲ್ (Bhajarangadala Activist) ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಮಂಗಳವಾರ (ಜನವರಿ 10) ಪೊಲೀಸರು ಮೂವರನ್ನು (Three Arrested) ಬಂಧಿಸಿದ್ದರು. ಸಾಗರದ (Sagara, Shivamogga) ನಿವಾಸಿ ಸಮೀರ್ ಎಂಬಾತ ಸುನಿಲ್ ಮೇಲೆ ಮಚ್ಚು ಬೀಸಿದ್ದನು. ಇದೀಗ ಸುನಿಲ್ ವಿರುದ್ಧ ಬಂಧಿತ ಸಮೀರ್ ಸೋದರಿ ಸಬಾ ಕೌಸರ್ ಭಜರಂಗದಳ ಕಾರ್ಯಕರ್ತ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ (Sagar Town Police Station) ದೂರು ದಾಖಲಿಸಿದ್ದಾರೆ. ಸಮೀರ್ ಹತ್ಯೆ ಯತ್ನದ ಎ1 ಆರೋಪಿಯಾಗಿದ್ದಾನೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಎಸ್ಪಿ ಮಿಥುನ್ ಕುಮಾರ್ (SP Mitun Kumar), ಇದೊಂದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಘಟನೆ ಎಂದು ಸ್ಪಷ್ಟಪಡಿಸಿದ್ದರು.
ಸಬಾ ಕೌಸರ್ ನೀಡಿದ ದೂರಿನಲ್ಲಿ ಏನಿದೆ?
ನಾನು ಕಾಲೇಜು ಒಂದರಲ್ಲಿ ಅಂತಿಮ ವರ್ಷದ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದೇನೆ. ಪ್ರತಿದಿನ ಕಾಲೇಜಿಗೆ ಹೋಗುವ ಮತ್ತು ಬರುವ ವೇಳೆ ಭಜರಂಗದಳ ಕಾರ್ಯಕರ್ತನಾಗಿರುವ ಸುನಿಲ್ ಚುಡಾಯಿಸುತ್ತಿದ್ದನು. ಫೋನ್ ನಂಬರ್ ಕೊಡುವಂತೆ ಚುಡಾಯಿಸುತ್ತಿದ್ದ ಎಂದು ಸಬಾ ಕೌಸರ್ ದೂರು ನೀಡಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಠಾಣೆಯಲ್ಲಿ ದೂರು ಸ್ವೀಕೃತಿ ಪತ್ರ ಪಡೆದು, ಸಬಾ ಕೌಸರ್ ತೆರಳಿದ್ದಾರೆ.
ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ
ಸುನಿಲ್ ವಿರುದ್ಧ ದೂರು ನೀಡುವ ವೇಳೆಯೂ ಠಾಣೆ ಮುಂದೆ ಹೈಡ್ರಾಮಾವೇ ನಡೆದಿದೆ. ಮಂಗಳವಾರ ಸಂಜೆ ದೂರು ನೀಡಲು ಸಬಾ ಆಗಮಿಸಿದ್ದರು. ಆದರೆ ಸಾಗರ ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ.
ಈ ಹಿನ್ನೆಲೆ ಠಾಣೆಯ ಮುಂದೆ ಮುಸ್ಲಿಂ ಯುವಕರು ಮತ್ತು ಮುಖಂಡರು ಜಮಾಯಿಸಿದ್ದರು. ಈ ವೇಳೆ ಠಾಣೆಗೆ ಠಾಣೆಗೆ ಆಗಮಿಸಿದ ಸಾಗರ ಡಿವೈಎಸ್ಪಿ ರೋಹನ್ ಜಗದೀಶ್, ಜನರೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ. ದೂರು ಸ್ವೀಕೃತಿ ಪತ್ರ ಪಡೆದು, ಸಾಕ್ಷಾಧಾರ ಒದಗಿಸುವುದಾಗಿ ಹೇಳಿ ಸಬಾ ಕೌಸರ್ ತೆರಳಿದ್ದಾರೆ.
ಎಸ್ಪಿ ಮಿಥುನ್ ಕುಮಾರ್ ಹೇಳಿಕೆ
ಸಾಗರದಲ್ಲಿ ನಡೆದಿರುವ ಸೋಮವಾರ (ಜನವರಿ 9, 2023) ಘಟನೆ ವ್ಯಯಕ್ತಿಕವಾದದ್ದು, ಭಜರಂಗದಳ ಕಾರ್ಯಕರ್ತ ಸುನಿಲ್, ಸಮೀರ್ ಸಹೋದರಿಗೆ ಚುಡಾಯಿಸುತ್ತಿರುತ್ತಾನೆ. ಕಳೆದ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿರುತ್ತಾನೆ. ಸುನಿಲ್ಗೆ ಸಮೀರ್ ಈ ಸಂಬಂಧ ವಾರ್ನ್ ಮಾಡಿರುತ್ತಾನೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ.
ಸಮೀರ್ ತಂಗಿಯ ಫೋನ್ ನಂಬರ್ ಕೂಡ ಕೇಳಿರುತ್ತಾನೆ. ಹೀಗಾಗಿ ಸಮೀರ್, ಸುನಿಲ್ ವಿರುದ್ಧ ಆಕ್ರೋಶಗೊಂಡಿರುತ್ತಾನೆ. ಎರಡ್ಮೂರು ಬಾರಿ ಸಮೀರ್ ಎಚ್ಚರಿಕೆ ಸಹ ನೀಡಿರುತ್ತಾನೆ. ನಿನ್ನೆ ಕೂಡ ದ್ವಿಚಕ್ರ ವಾಹನದಲ್ಲಿ ಬರುವ ವೇಳೆ ಸುನಿಲ್ ಮತ್ತು ಸಮೀರ್ ಬಯ್ದಾಡಿಕೊಂಡಿದ್ದಾರೆ.
ಹುಲ್ಲು ಕತ್ತರಿಸುವ ಮಚ್ಚಿನಿಂದ ದಾಳಿಗೆ ಯತ್ನ
ಸಮೀರ್ ಮೇಕೆ ಮೇಯಿಸಲು ಹುಲ್ಲು ತರಲು ಹೊರಟಿರುತ್ತಾನೆ. ಈ ಸಂಬಂಧ ಮಚ್ಚು ಇಟ್ಟುಕೊಂಡಿರುತ್ತಾನೆ. ಇದೇ ಮಚ್ಚಿನಿಂದ ಸುನಿಲ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ರೀತಿಯ ವಿಚಾರಗಳಿದ್ದರೆ, ಸಾರ್ವಜನಿಕರು ಪೊಲೀಸರ ಗಮನಕ್ಕೆ ತರಬೇಕು. ಈ ರೀತಿ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಎಸ್ಪಿ ಹೇಳಿದರು.
ಇದನ್ನೂ ಓದಿ: Shivamogga: ತಂಗಿಯನ್ನ ಚುಡಾಯಿಸಿದ್ದಕ್ಕೆ ಭಜರಂಗದಳ ಕಾರ್ಯಕರ್ತನ ಮೇಲೆ ಮಚ್ಚು ಬೀಸಿದ್ದ; ಆರೋಪಿ ಸಮೀರ್ ಅರೆಸ್ಟ್
ಕ್ರಿಕೆಟ್ ಮ್ಯಾಚ್ ಸಂಬಂಧ ಸಮೀರ್, ಇಮಿಯಾನ್, ಮನ್ಸೂರ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಕ್ರಿಕೆಟ್ ಮ್ಯಾಚ್ ಮುಗಿಸಿ ಲಾಡ್ಜ್ ನಲ್ಲಿ ಉಳಿದಿರುತ್ತಾರೆ. ಅಲ್ಲಿ ಬರುವ ವ್ಯಕ್ತಿಯ ಜೊತೆ ಸಮೀರ್ ಮಾತನಾಡುತ್ತಾನೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ