Breaking News: ಲಂಚ ಸ್ವೀಕರಿಸಿದ ಆರೋಪ; ಡಿಸಿ ಜೆ. ಮಂಜುನಾಥ್​ ಅರೆಸ್ಟ್​

ಜೆ ಮಂಜುನಾಥ್​

ಜೆ ಮಂಜುನಾಥ್​

ಹೈಕೋರ್ಟ್​ ಚಾಟಿ ಬೀಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಡಿಸಿ ಮಂಜುನಾಥ್ ಅವರನ್ನು ಯಶವಂತಪುರ ಫ್ಲಾಟ್​ನಲ್ಲಿ ಬಂಧಿಸಲಾಗಿದೆ.

  • Share this:

ಬೆಂಗಳೂರು (ಜು. 4): ರಾಜ್ಯದಲ್ಲಿ ಹಿಂದೆಂದೂ ನಡೆಯದ ವಿದ್ಯಮಾನ ನಡೆದಿದೆ. ಪ್ರತ್ಯೇಕ ಕೇಸ್​ನಲ್ಲಿ IAS ಹಾಗೂ IPS ಅಧಿಕಾರಿಯನ್ನು ಅರೆಸ್ಟ್ (Arrest)​ ಮಾಡಲಾಗಿದೆ. 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಂಗಳೂರು ನಗರದ ಹಿಂದಿನ ಡಿಸಿ ಮಂಜುನಾಥ್​ರನ್ನು (DC Manjunath) ಬಂಧಿಸಲಾಗಿದೆ. ಹೈಕೋರ್ಟ್ (High Court)​ ಚಾಟಿ ಬೀಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಡಿಸಿ ಮಂಜುನಾಥ್ ಅವರನ್ನು ಯಶವಂತಪುರ (Yashwanthpura) ಫ್ಲಾಟ್​ನಲ್ಲಿ ಬಂಧಿಸಲಾಗಿದೆ.


ಜಿಲ್ಲಾಧಿಕಾರಿ ಸ್ಥಾನದಿಂದ ಎತ್ತಂಗಡಿ


ಬೆಂಗಳೂರು ನಗರ ಜಿಲ್ಲಾಧಿಕಾರಿ ಸ್ಥಾನದಿಂದ ಎತ್ತಂಗಡಿ ಮಾಡಿರುವ ಜೆ ಮಂಜುನಾಥ್ ಅವರನ್ನು ಮಕ್ಕಳ ಹಕ್ಕುಗಳ ಸಂರಕ್ಷಣೆ ಯೋಜನೆಯ ನಿರ್ದೇಶಕರ ಹುದ್ದೆಗೆ ವರ್ಗಾಯಿಸಿದೆ. ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಗಪ್ಪ ಅವರಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.


ಎಸಿಬಿ ಅಧಿಕಾರಿಗಳಿಂದ ಮಂಜುನಾಥ್​ ವಿಚಾರಣೆ


ಬೆಂಗಳೂರಿನ ಎಸಿಬಿ ಕಚೇರಿಯಲ್ಲಿ ಇಬ್ಬರು ಡಿವೈಎಸ್ಪಿ ಗಳ ತಂಡವು
ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ವಿಚಾರಣೆ ನಡೆಸಿತ್ತು.  ಇಡೀ ಪುಕರಣದ  ವಿಸ್ತ್ರತ ತನಿಖೆ ನಡೆಸಿ ಜುಲೈ 4 ರಂದು ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.


ಇದನ್ನೂ ಓದಿ: Yathindra: ಅಪ್ಪನಿಗಾಗಿ ನಾನು ‘ವರುಣ’ ಬಿಟ್ಟುಕೊಡುವೆ ಎಂದ ಯತೀಂದ್ರ; ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸ್ತಾರಾ ಸಿದ್ದು ಪುತ್ರ?


ಜಿಲ್ಲಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ


ಜಮೀನು ಸ್ವಾಮ್ಯದ ವಿಷಯದಲ್ಲಿ ಬೆಂಗಳೂರು
ಜಿಲ್ಲಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಲಂಚ ಸ್ವೀಕರಿಸುವಾಗಲೇ ಎಸಿಬಿ ಅಧಿಕಾರಿಗಳು ದಾಳಿ
ನಡೆಸಿ ಉಪ ತಹಶೀಲ್ದಾರ್ ಮಹೇಶ್ ಮತ್ತು ಸಹಾಯಕ ಸಿಬ್ಬಂದಿಯನ್ನು ಬಂಧಿಸಿದ್ದರು.


5 ಲಕ್ಷ ರೂಪಾಯಿ ಲಂಚ ಪಡೆದು ಸಿಕ್ಕಿಬಿದ್ದ ಜಿಲ್ಲಾಧಿಕಾರಿ


ಕಳೆದ ಮೇ 21 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಉಪ ತಹಶೀಲ್ದಾರ್ ಮಹೇಶ್ ಎಂಬುವರು ಗುತ್ತಿಗೆ ನೌಕರ ಚೇತನ್ ಆಲಿಯಾಸ್ ಚಂದ್ರು ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆದು ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಪಾತ್ರದ ಬಗ್ಗೆ ಆರೋಪ ಕೇಳಿ ಬಂದಿತ್ತು.


ಹೀಗಾಗಿ ಎಸಿಬಿ‌ ತನಿಖಾಧಿಕಾರಿಗಳು ಡಿಸಿ ವಿಚಾರಣೆ‌ ನಡೆಸಿ ಹೇಳಿಕೆ ಪಡೆದುಕೊಂಡಿದ್ದರು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಪಾತ್ರವಿರಬಹುದೆಂದು ಸಂಶಯ ವ್ಯಕ್ತಪಡಿಸಿದ ಹೈಕೋರ್ಟ್, ಭೂ ವ್ಯಾಜ್ಯ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್ ಅವರನ್ನೂ ಆರೋಪಿಯನ್ನಾಗಿ ಸೇರಿಸುವಂತೆ ಆದೇಶಿಸಿತ್ತು. ಜಿಲ್ಲಾಧಿಕಾರಿಗಳ ಪಾತ್ರದ ಬಗ್ಗೆ ಸರಿಯಾಗಿ ತನಿಖೆ ನಡೆಸಿದ ಎಸಿಬಿಯನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.


IPS ಅಧಿಕಾರಿ ಅಮೃತ್ ಪೌಲ್ ಬಂಧನ


ಬೆಂಗಳೂರು (ಜು.4) : ಪಿಎಸ್ಐ ನೇಮಕಾತಿ ಅಕ್ರಮದಲ್ಲಿ (IPS Scam) ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ ಅಮೃತ್ ಪೌಲ್ (Amrit Paul) ಅವರನ್ನು ಸಿಐಡಿ‌ ಪೊಲೀಸರು (CID Police) ಬಂಧಿಸಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕಾಲ ಕೆಳ ಹಂತದ ಅಧಿಕಾರಿ- ಸಿಬ್ಬಂದಿಯನ್ನ ಬಂಧನ ಮಾಡುತ್ತಿದ್ದ ಪೊಲೀಸರು‌ ಇದೀಗ ಹಿರಿಯ ಐಪಿಎಸ್ ಅಧಿಕಾರಿಯನ್ನು (Senior IPS Officer) ಬಂಧಿಸಿದ್ದು, ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಗೃಹ ಇಲಾಖೆ ವರ್ಗಾವಣೆ ಮಾಡಿತ್ತು.


ಇದನ್ನೂ ಓದಿ: Bengaluru: ಬೆಂಗಳೂರು ಗಾರ್ಡನ್ ಸಿಟಿಯಿಂದ ಗಾಂಜಾ ಸಿಟಿ ಆಗಿದೆ; ಪ್ರಿಯಾಂಕ್ ಖರ್ಗೆ ವಾಗ್ದಾಳಿ


13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಎಡಿಜಿಪಿ


ವಕೀಲರು ಹಾಜರಿಲ್ಲದ ಕಾರಣ ಮತ್ತೆ 10 ನಿಮಿಷ ಮುಂದೂಡಿಕೆ ಮಾಡಿದ್ರು. ವಿಚಾರಣೆ ಮುಂದೂಡಿದ್ದ ಸಂದರ್ಭ ಅಮೃತ್ ಪಾಲ್ ಕಣ್ಣೀರು ಹಾಕಿದ್ದಾರೆ ಕೋರ್ಟ್ ಹಾಲ್ ನ ಮೂಲೆಯಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ. ಅಮೃತ್ ಪೌಲ್ ಪರ ವಕೀಲರಿಂದ ಸಿಐಡಿ ರಿಮೆಂಡ್ ಅರ್ಜಿಗೆ ಅಕ್ಷೇಪಣೆ ಸಲ್ಲಿಸಿದ್ದಾರೆ. ಕಕ್ಷಿದಾರರು ತನಿಖೆಗೆ ಸಹಕಾರ ನೀಡ್ತಾ ಇದ್ದಾರೆ. ಹೀಗಾಗಿ ಅವರನ್ನು ಬಂಧನ ಮಾಡಬಾರದು ಎಂದ್ರು . ಆದ್ರೆ ಕೋರ್ಟ್​ ಎಡಿಜಿಪಿ ಅಮೃತ ಪೌಲ್​ ಅವರನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

Published by:Pavana HS
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು